Viral Video: ವರಮಾಲೆ ಹಾಕುವಾಗ ಅಡ್ಡಿಪಡಿಸಿದ ಸ್ನೇಹಿತನಿಗೆ ವಧು ಮಾಡಿದ್ದೇನು? ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ
ವರಮಾಲೆ ಹಾಕುವ ಸಂದರ್ಭದಲ್ಲಿ ವರನ ಸ್ನೇಹಿತನ ಮೇಲೆ ಕೋಪಗೊಂಡ ವಧು ಅವನಿಗೆ ಹೊಡೆದಿದ್ದಾಳೆ. ಅಲ್ಲದೆ ಮದುವೆಯ ಆಚರಣೆಗೆ ಅಡ್ಡಿಪಡಿಸಿದ್ದಕ್ಕಾಗಿ ಅವಳು ಸ್ನೇಹಿತನನ್ನು ಗದರಿಸಿದ್ದಾಳೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


ಮದುವೆ ಮನೆಗಳಲ್ಲಿ ಊಟದ ವಿಚಾರಕ್ಕೆ, ವರ ಡ್ಯಾನ್ಸ್ ಮಾಡಿದ ವಿಚಾರಕ್ಕೆ ಜಗಳ ನಡೆದು ಮದುವೆಯೇ ರದ್ದಾದ ಹಲವಾರು ಘಟನೆಗಳು ಈ ಹಿಂದೆ ವರದಿಯಾಗಿದ್ದವು. ಅದರ ವಿಡಿಯೊಗಳು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಇದೀಗ ಮತ್ತೊಂದು ಅಂಥದ್ದೇ ಘಟನೆ ನಡೆದಿದೆ. ವರಮಾಲೆ ಹಾಕುವ ಸಂದರ್ಭದಲ್ಲಿ ವರನ ಸ್ನೇಹಿತನ ಮೇಲೆ ಕೋಪಗೊಂಡ ವಧು ಅವನಿಗೆ ಹೊಡೆದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಇಂಡಿಯನ್ ಸೇಸ್ ಎಂಬ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ವರ ಮತ್ತು ವಧು ವೇದಿಕೆಯ ಮೇಲೆ ವರಮಾಲೆ ಆಚರಣೆಗೆ ತಯಾರಿ ನಡೆಸುವುದು ಸೆರೆಯಾಗಿದೆ. ವಧು ವರನ ಕುತ್ತಿಗೆಗೆ ಹಾರವನ್ನು ಹಾಕಲು ಪ್ರಯತ್ನಿಸಿದಾಗ, ಅವನನ್ನು ಅವನ ಸ್ನೇಹಿತ ಹಿಂದಕ್ಕೆ ಎಳೆದಿದ್ದಾನೆ. ಇದು ಮದುವೆಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಮಾಡುವಂತಹ ತಮಾಷೆ. ಆದರೆ ಇದರಿಂದ ಕೋಪಗೊಂಡ ವಧು ವರನ ಸ್ನೇಹಿತನ ಕೂದಲನ್ನು ಹಿಡಿದು ತನ್ನ ಮೊಣಕೈಯಿಂದ ಬೆನ್ನಿಗೆ ಹೊಡೆದಿದ್ದಾಳೆ. ಮದುವೆ ಆಚರಣೆಗೆ ಅಡ್ಡಿಪಡಿಸಿದ್ದಕ್ಕಾಗಿ ಅವಳು ವರನ ಸ್ನೇಹಿತನನ್ನು ಗದರಿಸುತ್ತಿರುವುದು ಸಹ ಸೆರೆಯಾಗಿದೆ. ಇದನ್ನು ನೋಡಿ ಅತಿಥಿಗಳು ಶಾಕ್‌ಗೆ ಒಳಗಾಗಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. "ಮೊದಲ ಅನಿಸಿಕೆಗಳು ಕೊನೆಯ ಅನಿಸಿಕೆಗಳು" ಎಂದು ಒಬ್ಬರು ಬರೆದರೆ, ಇನ್ನೊಬ್ಬರು "ನಟನೆಯು ಉತ್ತಮವಾಗಿಲ್ಲ" ಎಂದು ಹೇಳಿದ್ದಾರೆ. ಅನೇಕ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ನಗುವ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ದೆಹಲಿಯಲ್ಲಿ ಡಿಜೆ ಹಾಡಿನಿಂದಾಗಿ ಮದುವೆ ರದ್ದಾಗಿರುವ ಘಟನೆ ನಡೆದಿತ್ತು. ಕಾರಣ ಇಷ್ಟೇ. ಡಿಜೆಯಲ್ಲಿ ನುಡಿಸಿದ ಹಾಡು ವರನಿಗೆ ತನ್ನ ಮಾಜಿ ಗೆಳತಿಯ ನೆನಪನ್ನು ತಂದಿದೆ. ಹೀಗಾಗಿ ಆತ ಬೇಸರಗೊಂಡು ಮದುವೆಯನ್ನೇ ರದ್ದು ಮಾಡಿದ್ದಾನೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ವರನ ಬರಾತ್ ಮದುವೆ ಸ್ಥಳಕ್ಕೆ ಬಂದಾಗ ಡಿಜೆಯಲ್ಲಿ ರಣಬೀರ್ ಕಪೂರ್ ಅವರ ಎಮೋಷನಲ್ ಟ್ರ್ಯಾಕ್ ʼಚನ್ನಾ ಮೇರಿಯಾʼವನ್ನು ಹಾಕಲಾಗಿತ್ತು. ಇದನ್ನು ಕೇಳಿದ ವರನಿಗೆ ಆತನ ಮಾಜಿ ಗೆಳತಿಯ ನೆನಪು ಕಾಡಿದೆ. ಹೀಗಾಗಿ ಮದುವೆಯನ್ನು ರದ್ದುಗೊಳಿಸಿದ್ದಾನೆ.
ಅದೇರೀತಿ ಉತ್ತರಾಖಂಡದ ಹರಿದ್ವಾರದಲ್ಲಿ ಮತ್ತೊಂದು ಮದುವೆ ರದ್ದಾಗಿದೆ. ಮದುವೆ ಮೆರವಣಿಗೆಯೊಂದಿಗೆ ವರನು ಸ್ಥಳಕ್ಕೆ ಪ್ರವೇಶಿಸಿದಾಗ, ಆತನ ಸ್ನೇಹಿತರು ವಧುವಿನ ಮಹಿಳಾ ಸಂಬಂಧಿಕರ ಬಗ್ಗೆ ಅಸಭ್ಯವಾದ ಕಾಮೆಂಟ್‍ಗಳನ್ನು ಮಾಡಿದ್ದಾರೆ. ಇದರಿಂದ ಮದುವೆ ಮನೆಯಲ್ಲಿ ಹೊಡೆದಾಟ ಶುರುವಾಗಿ ಕೊನೆಗೆ ವಧು ಮದುವೆಯನ್ನು ರದ್ದುಗೊಳಿಸಿದ್ದಾಳೆ. ಈ ಜಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಅರಶಿನ ಶಾಸ್ತ್ರದ ವೇಳೆ ಕುಸಿದುಬಿದ್ದು ವಧು ಸಾವು; ಹೃದಯ ವಿದ್ರಾವಕ ವಿಡಿಯೊ ವೈರಲ್!
ಹರಿದ್ವಾರದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಈ ಘಟನೆ ನಡೆದಿದ್ದು, ವರದಿಗಳ ಪ್ರಕಾರ, ಘಟನೆಯಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಜಗಳವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.