ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದಕ್ಕಾಗಿ ಶಾಸಕರ ಸಹೋದರನಿಗೆ ದಂಡ; ಪೊಲೀಸರ ಮೇಲೆಯೇ ದರ್ಪ ತೋರಿದ ವ್ಯಕ್ತಿ
MLA’s brother fined: ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ ಪ್ರಕರಣದಲ್ಲಿ ಶಾಸಕರ ಸಹೋದರನಿಗೆ ದಂಡ ವಿಧಿಸಲಾಗಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದಂಡದ ಕುರಿತು ಹೆಡ್ ಕಾನ್‌ಸ್ಟೆಬಲ್ ಜೊತೆ ಮಾತನಾಡುವಂತೆ ಕೇಳಿದಾಗ, ಬೈಕ್ ಸವಾರ ಕೋಪಗೊಂಡರು ಎನ್ನಲಾಗಿದೆ.
ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದಕ್ಕಾಗಿ ಶಾಸಕರ ಸಹೋದರನಿಗೆ ದಂಡ -
ಇಂದೋರ್: ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಬಿಜೆಪಿ ಶಾಸಕರೊಬ್ಬರ ಸಹೋದರನಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆತ ಕರ್ತವ್ಯ ನಿರತ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಮಧ್ಯಪ್ರದೇಶದ (Madhya Pradesh) ಶಿವಪುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರೊಂದಿಗೆ ಶಾಸಕರ ಸಹೋದರ ಜಗಳವಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ (viral video) ಆಗಿದೆ.
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ನರವಾರ್ ಪೊಲೀಸ್ ಠಾಣೆಯ ಹೊರಗೆ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಹೆಲ್ಮೆಟ್ ಧರಿಸದೆ ಸರ್ಕಾರಿ ಶಾಲಾ ಶಿಕ್ಷಕರೂ ಆಗಿರುವ ಮತ್ತು ಕರೇರಾ ಶಾಸಕ ರಮೇಶ್ ಖಾಟಿಕ್ ಅವರ ಸಹೋದರ ಭಾಗಚಂದ್ರ ಖಾಟಿಕ್ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.
ಭಾಗಚಂದ್ರ ಖಾಟಿಕ್ ತನ್ನ ಸಹಚರನೊಂದಿಗೆ ದ್ವಿಚಕ್ರ ವಾಹನದಲ್ಲಿ ಚೆಕ್‌ಪಾಯಿಂಟ್ ಮೂಲಕ ಹಾದುಹೋಗುತ್ತಿದ್ದರು. ಮೊದಲು ಅವರ ಸಹಚರನ ಬೈಕನ್ನು ನಿಲ್ಲಿಸಲಾಯಿತು. ನಂತರ ಭಾಗಚಂದ್ರ ಕೂಡ ನಿಲ್ಲಿಸಿದರು. ಭಾಗಚಂದ್ರ ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
MP के शिवपुरी में करैरा से BJP विधायक रमेश खटीक के भाई की सरेआम गुंडागर्दी!
— Uday Bhanu Chib (@UdayBhanuIYC) January 30, 2026
बिना हेलमेट बाइक चलाना, ऊपर से कानून का पालन कराने वाले पुलिसकर्मियों से बदसलूकी करना.. सत्ता का नशा सिर चढ़कर बोल रहा है!
क्या भाजपा नेताओं के लिए देश का संविधान और नियम कोई मायने नहीं रखते?… pic.twitter.com/DRJnzJT1As
ದಂಡದ ಕುರಿತು ಹೆಡ್ ಕಾನ್‌ಸ್ಟೆಬಲ್ ಜೊತೆ ಮಾತನಾಡುವಂತೆ ಕೇಳಿದಾಗ, ಭಾಗಚಂದ್ರ ಕೋಪಗೊಂಡರು ಎನ್ನಲಾಗಿದೆ. ವಾಗ್ವಾದ ಹೆಚ್ಚುತ್ತಿದ್ದಂತೆ, ಕಾನ್‌ಸ್ಟೇಬಲ್ ಪರ್ಮಲ್ ಕುಶ್ವಾಹ ಅವರು ಭಾಗಚಂದ್ರ ಅವರ ಬೈಕ್‍ನ ಕೀಯನ್ನು ತೆಗೆದುಕೊಂಡು ಪೊಲೀಸ್ ಠಾಣೆಯ ಕಡೆಗೆ ಚಲಿಸಲು ಪ್ರಾರಂಭಿಸಿದರು.
ಮದುವೆ ಮಂಟಪದಲ್ಲಿ ವಧು-ವರನ ರೊಮ್ಯಾನ್ಸ್; ಕ್ಲಾಸ್ ತೆಗೆದುಕೊಂಡ ಪುರೋಹಿತರು, ವಿಡಿಯೋ ನೋಡಿ
ಕೋಪಗೊಂಡ ಭಾಗಚಂದ್ರ ಕಾನ್‌ಸ್ಟೆಬಲ್ ಹಿಂದೆ ಧಾವಿಸಿ, ಕೀಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದನು. ಇದು ಜಗಳಕ್ಕೆ ಕಾರಣವಾಯಿತು. ವೈರಲ್ ಆಗಿರುವ ವಿಡಿಯೊದಲ್ಲಿ, ಭಾಗಚಂದ್ರ ಪೊಲೀಸ್ ಅಧಿಕಾರವನ್ನು ಪ್ರಶ್ನಿಸುತ್ತಾ, ನಿಮಗೆ ಕಾನೂನು ತಿಳಿದಿದೆಯೇ? ಕೀ ತೆಗೆದುಕೊಳ್ಳಲು ನಿಮಗೆ ಎಷ್ಟು ಧೈರ್ಯ? ಎಂದು ಕೂಗಿದ್ದಾನೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ.
ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಭಾಗಚಂದ್ರ, ಕಾನ್‌ಸ್ಟೇಬಲ್‌ಗೆ ನೀವು ವಾಹನವನ್ನು ನನ್ನ ಮನೆಗೆ ತರುತ್ತೀರಿ ಎಂದು ಆದೇಶಿಸಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿ, ವಾಹನವನ್ನು ಬೇರೆಲ್ಲಿಗೂ ತೆಗೆದುಕೊಂಡು ಹೋಗುವುದಿಲ್ಲ, ಠಾಣೆಯೊಳಗೆ ಇಡಲಾಗುವುದು ಎಂದು ಹೇಳಿದರು.
ನಾವು ನಿಮ್ಮ ಮನೆಗೆ ವಾಹನ ತರುತ್ತಿಲ್ಲ. ನೀವು ನೇಣು ಹಾಕಿಕೊಂಡರೂ ನಾವು ತರುವುದಿಲ್ಲ. ನಾನು ನನ್ನ ಸಮವಸ್ತ್ರವನ್ನು ಇಲ್ಲಿಯೇ ತೆಗೆಯಬೇಕೇ? ನನ್ನ ಮೇಲೆ ಅಷ್ಟೊಂದು ಒತ್ತಡ ಹೇರಬೇಡಿ. ನಾನು ಯಾರ ಸೇವಕನಲ್ಲ. ನಾನು ಸಾರ್ವಜನಿಕರ ಸೇವಕ ಎಂದು ಕಾನ್‌ಸ್ಟೇಬಲ್ ರಾಮ್‌ವೀರ್ ಬಘೇಲ್ ಹೇಳಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಹಿರಿಯ ಸಿಬ್ಬಂದಿ ಮಧ್ಯಪ್ರವೇಶಿಸಿ ಎರಡೂ ಕಡೆಯವರನ್ನು ಪೊಲೀಸ್ ಠಾಣೆಯೊಳಗೆ ಕರೆದೊಯ್ಯಲಾಯಿತು. ಅಂತಿಮವಾಗಿ, ವಿಷಯವನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು. ಆನ್ಲೈನ್ ಮೂಲಕ ಚಲನ್ ನೀಡಲಾಯಿತು.