ಪತ್ನಿಗೆ ಕೋತಿ ಎಂದು ಕರೆದ ಪತಿ: ತಮಾಷೆ ಮಾತಿಗೆ ನೊಂದು ಪ್ರಾಣ ಬಿಟ್ಟ ಮಾಡೆಲ್!
Viral News: ಯುವ ಮಾಡೆಲ್ ಒಬ್ಬಳು ತನ್ನ ಪತಿಯ ತಮಾಷೆಯ ಮಾತಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದ್ದು ಪತಿ ತಮಾಷೆಯಾಗಿ ಆಡಿದ ಒಂದು ಪದಕ್ಕೆ ಭಾವನಾತ್ಮಕವಾಗಿ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಮಾಷೆ ಮಾತಿಗೆ ನೊಂದು ಪ್ರಾಣ ಬಿಟ್ಟ ಮಾಡೆಲ್ -
ಲಕ್ನೋ,ಜ.30: ಇತ್ತೀಚೆಗೆ ಸಣ್ಣ ಪುಟ್ಟ ವಿಚಾರಕ್ಕೆ ದಾಂಪತ್ಯದಲ್ಲಿ ಬಿರುಕು ಮೂಡುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಸಣ್ಣ ಮಾತಿನಿಂದ ಜಗಳ ಉಂಟಾಗಿ ಅದು ದೊಡ್ಡ ಸಮಸ್ಯೆಯಾಗಿದ್ದು ಇದೆ. ಅಂತೆಯೇ ಯುವ ಮಾಡೆಲ್ (Lucknow Model) ಒಬ್ಬಳು ತನ್ನ ಪತಿಯ ತಮಾಷೆಯ ಮಾತಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉತ್ತರ ಪ್ರದೇಶದ ಲಕ್ನೋ ದಲ್ಲಿ ಈ ಘಟನೆ ನಡೆದಿದ್ದು ಪತಿ ತಮಾಷೆಯಾಗಿ ಆಡಿದ ಒಂದು ಪದಕ್ಕೆ ಭಾವನಾತ್ಮಕವಾಗಿ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೊಲೀಸ್ ಮೂಲಗಳ ಪ್ರಕಾರ, "ತನ್ನು ಸಿಂಗ್" ಎಂದು ಗುರುತಿಸಲ್ಪಟ್ಟ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೃತ್ತಿಯಲ್ಲಿ ಮಾಡೆಲ್ ಆಗಿದ್ದು ಆಕೆ ಸೀತಾಪುರದಲ್ಲಿರುವ ಕುಟುಂಬಸ್ಥರ ಮನೆಗೆ ಹೋಗಿ ಸಮಯ ಕಳೆದಿದ್ದರು. ಮನೆಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಮಾತನಾಡುತ್ತಿದ್ದರು. ಈ ಸಂವಾದದ ಸಮಯದಲ್ಲಿ, ತನ್ನು ಅವರ ಪತಿ ರಾಹುಲ್ ಸಿಂಗ್ "ಬಂಡಾರಿಯಾ" (ಮಂಗ) ಎಂದು ತಮಾಷೆಯಾಗಿ ಕರೆದಿದ್ದಾರೆ. ಈ ಕಾಮೆಂಟ್ ತಮಾಷೆಗಾಗಿ ಹೇಳಿದ್ದರೂ ಆಕೆ ಇದನ್ನು ಸಿರೀಯಸ್ ಆಗಿ ತೆಗೆದುಕೊಂಡಿದ್ದಾರೆ
ಕುಟುಂಬಸ್ಥರ ಸಮ್ಮುಖದಲ್ಲೇ ಪತಿ ಆಡಿದ ಈ ಮಾತು ಅವರ ಸ್ವಾಭಿಮಾನಕ್ಕೆ ದಕ್ಕೆ ತಂದಿದೆ ಎನ್ನಲಾಗಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದ ಅವರು ತಮ್ಮ ರೂಪ ಮತ್ತು ವ್ಯಕ್ತಿತ್ವದ ಬಗ್ಗೆ ಸೂಕ್ಷ್ಮ ಸ್ವಭಾವದವರಾಗಿದ್ದರು. ಪತಿಯ ಮಾತಿನಿಂದ ಬೇಸರಗೊಂಡ ಅವರು ಇದ್ದಕ್ಕಿದ್ದಂತೆ ಕೋಣೆ ಯಿಂದ ಹೊರಬಂದು ತನ್ನ ಮಲಗುವ ಕೋಣೆಗೆ ಹೋದಳು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
Viral Video: ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್ ಬುಲ್ ನಾಯಿಯ ಡೆಡ್ಲಿ ಅಟ್ಯಾಕ್! ಶಾಕಿಂಗ್ ವಿಡಿಯೊ ಇಲ್ಲಿದೆ
ಇದು ತಾತ್ಕಾಲಿಕ ಭಾವನಾತ್ಮಕ ಪ್ರತಿಕ್ರಿಯೆ ಎಂದು ಭಾವಿಸಿ, ಯಾರೂ ತಕ್ಷಣ ಮಧ್ಯಪ್ರವೇಶಿಸಲಿಲ್ಲ. ಆದಾಗ್ಯೂ, ಸುಮಾರು ಒಂದು ಗಂಟೆಯ ನಂತರ, ಊಟಕ್ಕೆ ಪದೇ ಪದೇ ಕರೆದರು ಅವಳು ಪ್ರತಿಕ್ರಿಯಿಸದಿದ್ದಾಗ, ಸಂಬಂಧಿಕರು ಆತಂಕ ಗೊಂಡಿದ್ದಾರೆ. ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ಒಡೆದು ಒಳಗೆ ಹೋದಾಗ, ತನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇಂದಿರಾನಗರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸ ಲಾಗಿದೆ. ಪ್ರಾಥಮಿಕ ಸಂಶೋಧನೆಗಳು ಭಾವನಾತ್ಮಕ ಯಾತನೆಯಿಂದ ಆತ್ಮಹತ್ಯೆ ಮಾಡಿ ಕೊಂಡಿ ದ್ದಾರೆ ಎಂದು ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ತಿವಾರಿ ಹೇಳಿದ್ದಾರೆ. ತನ್ನುವಿನ ಸಹೋದರಿ ಅಂಜಲಿ, ತನ್ನ ಸಹೋದರಿ ತುಂಬಾ ಸೂಕ್ಷ್ಮಳಾಗಿದ್ದಳು, ವಿಶೇಷವಾಗಿ ವೃತ್ತಿಜೀವನ ಮತ್ತು ಸೌಂದರ್ಯದ ಬಗ್ಗೆ ಆಕೆ ಅತೀವ ಕಾಳಜಿ ಹೊಂದಿದ್ದಳು ಎಂದು ನೋವು ವ್ಯಕ್ತಪಡಿಸಿದ್ದಾರೆ.