ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಲಿಕಾನ್ ಸಿಟಿಯಲ್ಲಿ ಮಾತ್ರ ಟ್ರಾಫಿಕ್ ಸಮಸ್ಯೆಯೇ? 35 ಕಿ.ಮೀ ದೂರವನ್ನು ಗಂಟೆಗೂ ಮುನ್ನ ತಲುಪಿದ ವ್ಯಕ್ತಿ ಹೇಳಿದ್ದೇನು?

Viral News: ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ 35 ಕಿ.ಮೀ ದೂರವನ್ನು ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿಯೇ ಕ್ರಮಿಸಿದ್ದಾಗಿ ವ್ಯಕ್ತಿಯೊರ್ವರು ಹೇಳಿಕೊಂಡಿರುವುದು, ನಗರದ ಸಂಚಾರ ದಟ್ಟಣೆಯ ಸಮಸ್ಯೆ ಮತ್ತು ಇತರ ನಗರಗಳಿಗಿಂತ ಇಲ್ಲಿನ ಪರಿಸ್ಥಿತಿಯನ್ನು ಹೆಚ್ಚು ಟೀಕಿಸಲಾಗುತ್ತಿದೆಯೇ ಎಂಬ ಬಗ್ಗೆ ಚರ್ಚೆಯನ್ನು ಕೂಡ ಹುಟ್ಟುಹಾಕಿದೆ.

ಬೆಂಗಳೂರಿನಲ್ಲಿ 35 ಕಿ.ಮೀ ದೂರ ಗಂಟೆಗೂ ಮುನ್ನ ತಲುಪಿದ ವ್ಯಕ್ತಿ  ​

ಇಂಟರ್ ನೆಟ್ ಚಿತ್ರ -

Profile
Pushpa Kumari Oct 11, 2026 2:50 PM

ಬೆಂಗಳೂರು,ಅ.11: ಸಿಲಿಕಾನ್ ಸಿಟಿಯ ಜನದಟ್ಟಣೆ ಬಗ್ಗೆ ದಿನಕ್ಕೊಂದು ದೂರುಗಳು ಕೇಳಿಬರುತ್ತವೆ. ಎಷ್ಟೇ ಬೇಗ ಮನೆಯಿಂದ ಹೊರಟರೂ ಗಂಟೆ- ಘಟ್ಟಲ್ಲೇ ಟ್ರಾಫಿಕ್‌ನಲ್ಲೇ ಸಿಲುಕಬೇಕಾಗುತ್ತದೆ. ಈ ಬಗ್ಗೆ ಅನೇಕರು ಕಹಿ ಅನುಭವ ಬಿಚ್ಚಿಟ್ಟು ಆಕ್ರೋಶ ಹೊರಹಾಕಿದವರು ಇದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕೇವಲ 35 ಕಿಲೋಮೀಟರ್ ದೂರವನ್ನು ಒಂದು ಗಂಟೆಗೂ ಮೊದಲೇ ಕ್ರಮಿಸಿ ವಿಮಾನ ನಿಲ್ದಾಣ ತಲುಪಿದ್ದಾರೆ. ಭಾರತದ ಇತರ ನಗರಗಳಲ್ಲೂ ಟ್ರಾಫಿಕ್ ಸಮಸ್ಯೆಇದೆ. ಆದರೆ ಬೆಂಗಳೂರನ್ನು ಮಾತ್ರ ಅತಿಯಾಗಿ ಟೀಕಿಸಲಾಗುತ್ತಿದೆ, ತಾನು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಸಮಯಕ್ಕೂ ಮುನ್ನ ತಲುಪಿದ್ದೇನೆ ಎಂದು ವ್ಯಕ್ತಿಯೋರ್ವರು ಹೇಳಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ (Viral News) ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ 35 ಕಿ.ಮೀ ದೂರವನ್ನು ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿಯೇ ಕ್ರಮಿಸಿದ್ದಾಗಿ ವ್ಯಕ್ತಿಯೋರ್ವರು ಹೇಳಿಕೊಂಡಿರುವುದು, ನಗರದ ಸಂಚಾರ ದಟ್ಟಣೆಯ ಸಮಸ್ಯೆ ಮತ್ತು ಇತರ ನಗರಗಳಿಗಿಂತ ಇಲ್ಲಿನ ಪರಿಸ್ಥಿತಿಯನ್ನು ಹೆಚ್ಚು ಟೀಕಿಸಲಾಗುತ್ತಿದೆಯೇ ಎಂಬ ಬಗ್ಗೆ ಚರ್ಚೆಯನ್ನು ಕೂಡ ಹುಟ್ಟುಹಾಕಿದೆ.



​ನಿಹಾಲ್ ಶೆಟ್ಟಿ ಎಂಬವರು ಈ ಬಗ್ಗೆ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 8:10ಕ್ಕೆ ಹೊರಡಬೇಕಿದ್ದ ವಿಮಾನಕ್ಕಾಗಿ ಬೆಳಿಗ್ಗೆ 6:10ಕ್ಕೆ ಮನೆಯಿಂದ ಹೊರಟಿದ್ದಾಗಿ ತಿಳಿಸಿದರು. ಆದರೆ ಯಾವುದೇ ಪ್ರಮುಖ ಟ್ರಾಫಿಕ್ ದಟ್ಟಣೆಯಿಲ್ಲದೆ ಕೇವಲ 35 ಕಿ.ಮೀ ದೂರದ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ತಲುಪಿದ್ದಾರೆ. ಅಷ್ಟೇ ಅಲ್ಲದೆ, ವಿಮಾನ ಹತ್ತುವ ಮುನ್ನ ಆರಾಮವಾಗಿ ಉಪಾಹಾರವನ್ನೂ ಸೇವಿಸಿರುವುದಾಗಿ ತಿಳಿಸಿದ್ದಾರೆ.

Viral Video: 20 ಅಡಿ ಎತ್ತರದ ಫ್ಲೈಓವರ್ ನಡುವೆ ಸಿಲುಕಿದ ಕಾರ್‌! ಚಾಲಕ ಪವಾಡ ಸದೃಶ ಪಾರು

ಇತರ ನಗರಗಳಿಗಿಂತ ಹೆಚ್ಚು ಬೆಂಗಳೂರಿನ ಸಂಚಾರ ದಟ್ಟಣೆಯ ಸಮಸ್ಯೆಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದೆ. ಸಂಚಾರ ದಟ್ಟಣೆಯ ಬಗ್ಗೆ ದೂರು ನೀಡಲು ಬಯಸುವವರಿಗೆ ಇದು ನನ್ನ ಉತ್ತರ. ಬೆಂಗಳೂರನ್ನು ಮಾತ್ರ ಟ್ರಾಫಿಕ್ ದೂರುಗಳಿಗೆ 'ಪೋಸ್ಟರ್ ಚೈಲ್ಡ್ ನಂತೆ ಬಿಂಬಿಸಲಾಗುತ್ತದೆ" ಅಂದರೆ, ವಾಸ್ತವಕ್ಕಿಂತ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಅತಿ ಹೆಚ್ಚು ಟೀಕೆಗಳು ಬರುತ್ತವೇ ಎಂದಿದ್ದಾರೆ.

​ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಬಂದುಗದ. ಮುಂಜಾನೆ 6 ಗಂಟೆಗೆ ಟ್ರಾಫಿಕ್ ಇರುವುದು ವಿರಳ, ಆ ಒಂದು ಸಮಯಕ್ಕೆ ಮೀಸಲಾಗಿ ಇಡೀ ಬೆಂಗಳೂರಿನ ದೈನಂದಿನ ಟ್ರಾಫಿಕ್ ಪರಿಸ್ಥಿತಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.​ ಇನ್ನು ಕೆಲವರು ಕೇವಲ ವಾಹನ ದಟ್ಟಣೆ ಮಾತ್ರವಲ್ಲದೆ, ಕಳಪೆ ಗುಣಮಟ್ಟದ ರಸ್ತೆಗಳು, ಎಲ್ಲೆಂದರಲ್ಲಿರುವ ಗುಂಡಿಗಳ ಬಗ್ಗೆಯೂ ಬೇಸರ ಹೊರಹಾಕಿದ್ದಾರೆ.