ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಮ್ಮ ಧ್ವನಿ ಸರಕಾರಕ್ಕೆ ತಲುಪುತ್ತಿಲ್ಲ: ಸ್ಪೈಡರ್ ಮ್ಯಾನ್ ವೇಷಧರಿಸಿ ಜಾರ್ಖಂಡ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿ!

Viral Video: ಜಾರ್ಖಂಡ್ ನಲ್ಲಿ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಸಿಬ್ಬಂದಿ ನೇಮಕಾತಿ ಆಯೋಗ (JSSC) ನಡೆಸುವ ಪರೀಕ್ಷೆಯಲ್ಲಿ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆ ಸುತ್ತಿದ್ದಾರೆ. ಈ ನಡುವೆ ಸ್ಪೈಡರ್‌-ಮ್ಯಾನ್ ಮುಖವಾಡ ಧರಿಸಿ ಬಂದ ವಿದ್ಯಾರ್ಥಿಯೊಬ್ಬ ಸರ್ಕಾರವನ್ನು ವ್ಯಂಗ್ಯ ಮಾಡಿರುವ ವಿಡಿಯೊಂದು ವೈರಲ್ ಆಗುತ್ತಿದೆ.

ಜಾರ್ಖಂಡ್‌ ನಲ್ಲಿ ಸ್ಪೈಡರ್‌-ಮ್ಯಾನ್ ವೇಷ ಧರಿಸಿ ಪ್ರತಿಭಟಿಸಿದ ವಿದ್ಯಾರ್ಥಿ

ಸ್ಪೈಡರ್ ಮ್ಯಾನ್ ವೇಷಧರಿಸಿ ಜಾರ್ಖಂಡ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿ -

Profile
Pushpa Kumari Aug 11, 2026 1:34 PM

​ರಾಂಚಿ,ಆ.11: ಜಾರ್ಖಂಡ್‌ನಲ್ಲಿ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಸಿಬ್ಬಂದಿ ನೇಮಕಾತಿ ಆಯೋಗ (JSSC) ನಡೆಸುವ ಪರೀಕ್ಷೆಯಲ್ಲಿ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಗಳು ವಿಧಾನಸಭೆ ಮುತ್ತಿಗೆ ಹಾಕಲು ಯತ್ನಿಸಿದ್ದು ಪ್ರತಿ ಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿಚಾರ್ಜ್, ಜಲಫಿರಂಗಿ ಬಳಸಿದ್ದಾರೆ. ಆದರೂ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಈ ನಡುವೆ ಸ್ಪೈಡರ್‌-ಮ್ಯಾನ್ ಮುಖವಾಡ ಧರಿಸಿ ಬಂದ ವಿದ್ಯಾರ್ಥಿಯೊಬ್ಬ ಸರ್ಕಾರವನ್ನು ವ್ಯಂಗ್ಯ ಮಾಡಿರುವ ವಿಡಿಯೊಂದು ವೈರಲ್ (Viral News) ಆಗುತ್ತಿದೆ.

ನಾವು ಜೆಎನ್-ಝಡ್ ವಿದ್ಯಾರ್ಥಿಯಾಗಿರುವುದರಿಂದ ಬೇರೆ ರೀತಿಯಲ್ಲಿ ಪ್ರತಿಭಟಿಸಲು ಬಯಸಿ ದ್ದೇವೆ. ಹೀಗಾಗಿ ತಾನು ಸೂಪರ್‌ಹೀರೋ ಲುಕ್ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ವಿದ್ಯಾರ್ಥಿ ಹೇಳಿದ್ದಾನೆ.. ಈತ ಸ್ಪೈಡರ್‌-ಮ್ಯಾನ್ ಮುಖವಾಡ ಧರಿಸಿದ್ದು ಇಷ್ಟು ದಿನ ವಿದ್ಯಾರ್ಥಿಗಳಾಗಿ ನಾವು ಎತ್ತಿದ ಧ್ವನಿ ಸರ್ಕಾರಕ್ಕೆ ಕೇಳಿಸಲ್ಲ, ಬಹುಶಃ ಈ ಸ್ಪೈಡರ್‌-ಮ್ಯಾನ್ ಧ್ವನಿ ಯಾದರೂ ಸರಕಾರಕ್ಕೆ ಕೇಳಬಹುದು ಎನ್ನುವ ಭರವಸೆ ಎಂದು ವಿದ್ಯಾರ್ಥಿ ಹೇಳಿಕೊಂಡಿದ್ದಾನೆ.

ವಿಡಿಯೋ ನೋಡಿ:



ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಸಿಬ್ಬಂದಿ ನೇಮಕಾತಿ ಆಯೋಗ (JSSC) ನಡೆಸುವ ಪರೀಕ್ಷೆಗಳಲ್ಲಿ ಅಕ್ರಮ ಖಂಡಿಸಿ ವಿದ್ಯಾರ್ಥಿಗಳು 'ವಿಧಾನಸಭಾ ಘೇರಾವ್' ಚಳವಳಿ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ಈ ಆಂದೋಲನವನ್ನು ಶಾಂತಿಯುತವಾಗಿಡುವ ನಡೆಸುವ ಉದ್ದೇಶ ಹೊಂದಿದ್ದಾರೆ ಎಂದು ವಿದ್ಯಾರ್ಥಿ ಒತ್ತಿ ಹೇಳಿದ್ದಾನೆ.

Viral Video: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ

ವೈರಲ್ ಆದ ವಿಡಿಯೊದಲ್ಲಿ ವಿಧಾನಸಭೆಯ ಕಡೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸುತ್ತಿದ್ದಾಗ, ಸ್ಪೈಡರ್ ಮ್ಯಾನ್ ಮುಖವಾಡ ಧರಿಸಿದ ವಿದ್ಯಾರ್ಥಿ ನಿಂತಿರುವುದು ಕಾಣಬಹುದು. ನಾವು ಇಲ್ಲಿಯವರೆಗೆ ಶಾಂತಿಯುತವಾಗಿ ಪ್ರತಿಭಟಿಸಿದ್ದೇವೆ. ಇಲ್ಲಿಯೂ ಸಹ, ಶಾಂತಿಯುತವಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ವಿದ್ಯಾರ್ಥಿ ತಿಳಿಸಿದ್ದಾನೆ.

ಸದ್ಯ ವಿದ್ಯಾರ್ಥಿಗಳ ಪ್ರತಿಭಟನೆ ಕಾವು ಹೆಚ್ಚಾಗಿದ್ದು ರಾಂಚಿಯಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ವಾಟರ್ ಕ್ಯಾನನ್ ಬಳಸಿ, ಬಿಗಿ ಭದ್ರತೆ ಕೈಗೊಂಡಿದ್ದಾರೆ.