ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ತಲೆಗೆ ಹಾವು ಕಚ್ಚಿಯೂ ಅಪಾಯದಿಂದ ಪಾರಾದ ಯುವಕ; ವಿಡಿಯೊ ಇಲ್ಲಿದೆ

ಫೋನಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬನ ತಲೆಗೆ ವಿಷಕಾರಿ ಹಾವೊಂದು ತಲೆಗೆ ಕಚ್ಚಿದೆ. ಆದರೆ ಟೋಪಿ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಆ ವ್ಯಕ್ತಿಯನ್ನು ಅದೃಷ್ಟಶಾಲಿ ಎಂದು ಕರೆದಿದ್ದಾರೆ.

ಫೋನ್‌ನಲ್ಲಿ ಮಾತನಾಡುತ್ತಿದ್ದವನ ತಲೆಗೆ ಕಚ್ಚಿದ ಹಾವು; ಮುಂದೆ ಆಗಿದ್ದೇನು?

snake viral video

Profile pavithra Feb 24, 2025 1:35 PM

ಹೊಸದಿಲ್ಲಿ: ಹಾವೆಂದರೆ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಅಂಗನವಾಡಿಯ ಮಗುವೊಂದು ಮೂತ್ರ ವಿಸರ್ಜನೆಗೆ ಹೋದ ವೇಳೆ ಹಾವು ಕಡಿದ ಸತ್ತ ಭೀಕರ ಘಟನೆ ಇತ್ತೀಚೆಗೆ ನಡೆದಿತ್ತು. ಇದೀಗ ಫೋನಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೋರ್ವನ ತೆಲೆಗ ವಿಷಕಾರಿ ಹಾವೊಂದು ಕಚ್ಚಿದೆ. ಆದರೆ ಟೋಪಿ ಹಾಕಿಕೊಂಡ ಕಾರಣ ಆತನ ಜೀವ ಉಳಿದಿದೆ. ಈ ದೃಶ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ (Viral Video) ಆಗಿದೆ. ನೆಟ್ಟಿಗರು ಆತನ ಟೋಪಿಗೆ ಧನ್ಯವಾದ ಹೇಳಿದ್ದಾರೆ. ಟೋಪಿಯ ಮಹತ್ವ ಈಗ ತಿಳಿಯಿತು ಎಂದು ಹಲವರು ಹೇಳಿದ್ದಾರೆ.

ವೈರಲ್ ಆಗಿರುವ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಫೋನ್‍ನಲ್ಲಿ ಮಾತನಾಡುತ್ತಿರುವಾಗ ವಿಷಕಾರಿ ಹಾವೊಂದು ಬೇಲಿಯಿಂದ ಮೇಲೆ ಹತ್ತಿ ಬಂದು ವ್ಯಕ್ತಿಯ ತಲೆಗೆ ಕಚ್ಚಿದೆ. ಆದರೆ ಆತ ತಲೆಗೆ ಟೋಪಿ ಧರಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಹಾವಿನ ಹಲ್ಲಿಗೆ ಆ ಟೋಪಿ ಸಿಲುಕಿಕೊಂಡಿದೆ. ಇದರಿಂದ ಆ ವ್ಯಕ್ತಿಗೆ ಯಾವುದೇ ಹಾನಿಯಾಗಲಿಲ್ಲ. ಟೋಪಿ ತನ್ನ ತಲೆಯಿಂದ ಹೊರಬಂದ ಕೂಡಲೇ ವ್ಯಕ್ತಿಗೆ ಪರಿಸ್ಥಿತಿಯ ಅರಿವಾಗಿದೆ. ಮೊದಲಿಗೆ ಯಾರೋ ತಮಾಷೆಯಾಗಿ ತನ್ನ ಟೋಪಿಯನ್ನು ತೆಗೆದಿರಬಹುದು ಎಂದುಕೊಂಡ ಆತ ಹಿಂತಿರುಗಿ ನೋಡಿದಾಗ ಹಾವನ್ನು ಕಂಡು ಹೌಹಾರಿದ್ದಾನೆ.



ಎಕ್ಸ್ ಬಳಕೆದಾರರೊಬ್ಬರು ಈ ತುಣುಕನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆ ನಡೆದ ಸ್ಥಳ ತಿಳಿದಿಲ್ಲ, ಆದರೆ ಎಕ್ಸ್‌ನಲ್ಲಿ ಈ ವಿಡಿಯೊ ವೈರಲ್ ಆಗಿದ್ದು, 7 ಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಭಯಗೊಂಡಿದ್ದಾರೆ ಮತ್ತು ಈ ವೈರಲ್ ವಿಡಿಯೊಗೆ ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರು ಆ ವ್ಯಕ್ತಿಯನ್ನು ಅದೃಷ್ಟಶಾಲಿ ಎಂದು ಹೊಗಳಿದ್ದಾರೆ. ಟೋಪಿ ಅವನ ಜೀವ ಉಳಿಸಿತು ಎಂದು ಹೇಳಿದ್ದಾರೆ.

"ಆ ಟೋಪಿ ಹೆಲ್ಮೆಟ್‍ಗಿಂತ ಹೆಚ್ಚು ಕೆಲಸ ಮಾಡಿದೆ!" ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ. “ಆ ಕ್ಯಾಪ್ ಪ್ರಶಸ್ತಿಗೆ ಅರ್ಹವಾಗಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ. ಆದರೆ ಕೆಲವರು ಪರಿಸ್ಥಿತಿಯ ಬಗ್ಗೆ ಹಾಸ್ಯ ಮಾಡಿದ್ದಾರೆ. "ಹೊಸ ಫ್ಯಾಷನ್ ಪ್ರವೃತ್ತಿ: ಹಾವು-ನಿರೋಧಕ ಕ್ಯಾಪ್‍ಗಳು!" ಎಂದು ಕೆಲವರು ತಮಾಷೆಯಾಗಿ ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಲೈಬ್ರೇರಿಯಲ್ಲಿ ಪುಸ್ತಕಗಳ ಮೇಲೆ ಮಲಗಿದ್ದ 8 ಅಡಿ ಉದ್ದದ ಹಾವು; ಭಯಗೊಂಡ ವಿದ್ಯಾರ್ಥಿಗಳು ಹೀಗ್‌ ಮಾಡೋದಾ?

ಇತ್ತೀಚೆಗೆ ತೆಲಂಗಾಣದ ನಲ್ಗೊಂಡದ ಮಹಾತ್ಮಗಾಂಧಿ ವಿಶ್ವವಿದ್ಯಾಲಯ ಗ್ರಂಥಾಲಯದ ಪುಸ್ತಕದ ಕಪಾಟಿನಲ್ಲಿ 8 ಅಡಿ ಉದ್ದದ ಹಾವು ಕಂಡು ಬಂದಿತ್ತು. ಇದನ್ನು ಕಂಡು ಭಯಭೀತರಾದ ವಿದ್ಯಾರ್ಥಿಗಳು ಅದರ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಗ್ರಂಥಾಲಯದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾವಿನ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿರುವುದು ಸೆರೆಯಾಗಿದೆ. ಕೋಲುಗಳಿಂದ ಕ್ರೂರವಾಗಿ ಥಳಿಸಿದ ಕಾರಣ ಹಾವು ಅಲ್ಲೇ ಸಾವನ್ನಪ್ಪಿದೆ. ನಂತರ ಸತ್ತ ಹಾವನ್ನು ಗೋಣಿ ಚೀಲದಲ್ಲಿ ಹಾಕಿ ಗ್ರಂಥಾಲಯದಿಂದ ಹೊರಗೆ ಕೊಂಡೊಯ್ಯಲಾಗಿದೆ.

ವಿದ್ಯಾರ್ಥಿಗಳು ಪುಸ್ತಕಗಳನ್ನು ಹುಡುಕುತ್ತಿದ್ದಾಗ ಹಾವನ್ನು ಗಮನಿಸಿದ್ದಾರೆ. ಸುಮಾರು 8 ಅಡಿ ಉದ್ದದ ಹಾವನ್ನು ನೋಡಿದ ಅವರು ಹೆದರಿಕೊಂಡು ಸಹಾಯಕ್ಕಾಗಿ ಕಿರುಚಿದ್ದಾರೆ. ವಿದ್ಯಾರ್ಥಿಗಳ ಕೂಗಾಟ ಕೇಳಿ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತ್ವರಿತವಾಗಿ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಾವನ್ನು ಕೊಂದು ಹಾಕಿದ್ದಾರೆ ಎನ್ನಲಾಗಿದೆ.