ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral News: ಕದ್ದ ಹಣದೊಂದಿಗೆ ಪ್ರೇಯಸಿಯರನ್ನು ಕುಂಭಮೇಳಕ್ಕೆ ಕರೆದೊಯ್ದ ಕಳ್ಳರು! ಕೊನೆಗೆ ಆಗಿದ್ದೇನು?

ಕದ್ದ ಹಣದಿಂದ ತಮ್ಮ ಗೆಳತಿಯರನ್ನು ಮಹಾ ಕುಂಭಮೇಳಕ್ಕೆ(Kumbhamela 2025) ಕರೆದುಕೊಂಡು ಹೋದ ಇಂದೋರ್‌ನ ಇಬ್ಬರು ಪುರುಷರನ್ನು ಕುಂಭಮೇಳದಿಂದ ಹಿಂದಿರುಗಿದ ನಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 4 ಲಕ್ಷ ನಗದು, ಚಿನ್ನಾಭರಣ ಸೇರಿದಂತೆ ಕದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರ ವಿರುದ್ಧ ಇಂಧೋರ್‌ನಲ್ಲಿ 15 ಕಳ್ಳತನ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆಯಂತೆ.

ದರೋಡೆ ಮಾಡಿ ಪ್ರೇಯಸಿಯರ ಜೊತೆ ಕುಂಭಮೇಳ ಪ್ರವಾಸ! ಆಮೇಲೇನಾಯ್ತು?

Profile pavithra Feb 22, 2025 2:05 PM

ಭೋಪಾಲ್: ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ಮಹಾಕುಂಭಮೇಳ(Kumbha Mela 2025) ನಡೆಯುತ್ತಿದೆ. ಇದಕ್ಕೆ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಮೋಕ್ಷ ಪಡೆಯಲು ಕೆಲವರು ಸಾಲಸೋಲ ಮಾಡುವುದಕ್ಕೂ ಹಿಂದೆ ಮುಂದೆ ನೋಡಲ್ಲ! ಆದರೆ ಇಲ್ಲಿಬ್ಬರು ಕಿಲಾಡಿ ಕಳ್ಳರು ದರೋಡೆ ಮಾಡಿ ಆ ಹಣದಿಂದ ತಮ್ಮ ಗೆಳತಿಯರನ್ನು ಕರೆದುಕೊಂಡು ಕುಂಭಮೇಳಕ್ಕೆ ಬಂದಿದ್ದಾರೆ. ಆದರೆ ಕುಂಭಮೇಳದಿಂದ ಹಿಂತಿರುಗಿ ಇಂದೋರ್‌ಗೆ ಬಂದ ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 4 ಲಕ್ಷ ನಗದು, ಚಿನ್ನಾಭರಣ ಸೇರಿದಂತೆ ಕದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಸುದ್ದಿ ಭಾರೀ ವೈರಲ್‌(Viral Video) ಆಗುತ್ತಿದೆ.

ಬಂಧಿತರನ್ನು ಅಜಯ್ ಶುಕ್ಲಾ ಮತ್ತು ಸಂತೋಷ್ ಕೋರಿ ಎಂದು ಗುರುತಿಸಲಾಗಿದ್ದು, ಇವರ ವಿರುದ್ಧ ಇಂದೋರ್‌ನಲ್ಲಿ 15 ಕಳ್ಳತನ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಕಳೆದ 15 ದಿನಗಳಲ್ಲಿ ಇಂಧೋರ್‌ನ ದ್ವಾರಕಾಪುರಿಯಲ್ಲಿ ದರೋಡೆ ಘಟನೆಗಳು ಹೆಚ್ಚುತ್ತಿವೆ. ಈ ಪ್ರದೇಶದ ನಾಲ್ಕು ಮನೆಗಳಲ್ಲಿ ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ಆ ದೂರಿನ ಆಧಾರದ ಮೇಲೆ, ಪೊಲೀಸರು ಆರೋಪಿಗಳನ್ನು ಕಂಡುಹಿಡಿಯಲು ತನಿಖೆ ಶುರುಮಾಡಿದ್ದಾರೆ.

ಪೊಲೀಸರು ಅಪರಾಧದ ಸ್ಥಳದಲ್ಲಿ ದೊರೆತ ಬೆರಳಚ್ಚುಗಳನ್ನು ಹೋಲಿಕೆ ಮಾಡಿ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ನಂತರ ಅವರ ಮೊಬೈಲ್ ಫೋನ್‍ಗಳನ್ನು ಟ್ರ್ಯಾಕ್ ಮಾಡಿದಾಗ, ಕುಂಭಮೇಳಕ್ಕೆ ಹೋಗಿರುವುದು ತಿಳಿದುಬಂದಿದೆ. ನಂತರ ಇಂಧೋರ್‌ನ ಪೊಲೀಸ್ ತಂಡವು ಪ್ರಯಾಗ್‌ರಾಜ್‌ಗೆ ತೆರಳಿದೆಯಂತೆ. ಕಳ್ಳರು ತಮ್ಮ ಮೊಬೈಲ್ ಲೊಕೇಶನ್‌ ಅನ್ನು ಆಗಾಗ್ಗೆ ಬದಲಾಯಿಸುತ್ತಿರುವುದರಿಂದ ಮತ್ತು ನಗರದಲ್ಲಿ ಜನರ ದಟ್ಟಣೆಯಿಂದಾಗಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರಿಗೆ ಸ್ವಲ್ಪ ಸಮಸ್ಯೆಯಾಯಿತು. ಹಾಗಾಗಿ ಅವರು ಇಂಧೋರ್‌ಗೆ ಮರಳಿದ ನಂತರ ಶುಕ್ಲಾ ಮತ್ತು ಕೋರಿ ಅವರನ್ನು ಬಂಧಿಸಿದ್ದಾರೆ.

ಇಬ್ಬರ ವಿರುದ್ಧ 15 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಡಿಸಿಪಿ ರಿಷಿಕೇಶ್ ಮೀನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಐಷಾರಾಮಿ ಜೀವನಶೈಲಿಯನ್ನು ನಡೆಸಲು ಹಣದ ಅಗತ್ಯವಿರುವುದರಿಂದ ದ್ವಾರಕಾಪುರಿಯಲ್ಲಿ ಕಳ್ಳತನ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಅವರು ಕದ್ದ ಹೆಚ್ಚಿನ ಹಣವನ್ನು ಮಹಾ ಕುಂಭ ಯಾತ್ರೆ ಸೇರಿದಂತೆ ತಮ್ಮ ಗೆಳತಿಯರಿಗೆ ಖರ್ಚು ಮಾಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ನಗದು ಮತ್ತು ಆಭರಣಗಳು ಸೇರಿದಂತೆ 4 ಲಕ್ಷ ರೂ.ಗಳ ಕದ್ದ ವಸ್ತುಗಳನ್ನು ಅವರ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇವರು ದ್ವಾರಕಾಪುರಿಯ ನಾಲ್ಕು ಮನೆಗಳಿಂದ 7 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral News: ಮಹಾಕುಂಭ ಮೇಳಕ್ಕೆ ಹೋಗಲು ದರೋಡೆ ಮಾಡಿ ಪೊಲೀಸರ ಅತಿಥಿಯಾದ ಭೂಪ!

ಕೆಲವು ದಿನಗಳ ಹಿಂದೆಯಷ್ಟೇ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ವ್ಯಕ್ತಿಯೊಬ್ಬ ಮೂರು ಮನೆಗಳಿಂದ ಕಳ್ಳತನ ಮಾಡಿದ ಘಟನೆ (Theft cases) ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ವ್ಯಕ್ತಿಯನ್ನ ಬಂಧಿಸಲಾಗಿದೆ. ಆರೋಪಿ ಯನ್ನು ಅರವಿಂದ್ ಅಲಿಯಾಸ್ ಭೋಲಾ ಎಂದು ಗುರುತಿಸಲಾಗಿದ್ದು, ದಬ್ರಿಯ ರಾಜ್‌ಪುರಿ ಪ್ರದೇಶದಲ್ಲಿ ಮೂರು ಮನೆಗಳಲ್ಲಿ ಆಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ(Viral News) ಭಾರೀ ಸದ್ದು ಮಾಡುತ್ತಿದೆ.

ಈತ ತನ್ನ ಸ್ನೇಹಿತರೊಂದಿಗೆ ಉತ್ತರ ಪ್ರದೇಶದ ಪ್ರ‌ಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಲು ಹಣ ಹೊಂದಿಸಲು ಕಳ್ಳತನ ಮಾಡಿದ್ದಾನೆ. ಪೊಲೀಸರು ಪೊಲೀಸರು ವಿಚಾರಣೆ ನಡೆಸಿದಾಗ, ಈತ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಪೊಲೀಸ್ ವಿಚಾರಣೆ ವೇಳೆ ಆರೋಪಿ ತಾನು ಮಹಾಕುಂಭದಲ್ಲಿ ಪಾಲ್ಗೊಳ್ಳುವ ತಮ್ಮ ಕನಸನ್ನು ನನಸಾಗಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದೆ. ವಿಚಾರಣೆ ವೇಳೆ ಆರೋಪಿ ತಾನು ಮತ್ತು ಆತನ ಸ್ನೇಹಿತರು 45 ದಿನಗಳ ಮಹಾಕುಂಭದಲ್ಲಿ ಪಾಲ್ಗೊಳ್ಳಲು ಬಯಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ಮನೆಯಲ್ಲಿ ಆರ್ಥಿಕ ತೊಂದರೆ ಇರುವುದರಿಂದ ತಂದೆ ಕೂಲಿ, ತಾಯಿ ಮನೆಗೆಲಸ ಮಾಡುತ್ತಿದ್ದು, ಏಳು ಜನ ಒಡಹುಟ್ಟಿದವರಿದ್ದು, ಕುಟುಂಬಕ್ಕೆ ಪ್ರಯಾಣ ವೆಚ್ಚ ಭರಿಸಲು ಕಷ್ಟವಾಗುತ್ತಿದೆ ಎಂದು ಭೋಲಾ ತಿಳಿಸಿದ್ದಾನೆ. ಪೊಲೀಸರ ಪ್ರಕಾರ, ಆತನ ವಿರುದ್ಧ 16 ಕಳ್ಳತನ ಮತ್ತು ದರೋಡೆ ಪ್ರಕರಣಗಳು ದಾಖಲಾಗಿ ದಾಖಲಾಗಿವೆ.