Smart Shopping: ಸ್ಮಾರ್ಟ್ ಆಗಿ ಶಾಪಿಂಗ್ ಮಾಡಿ, ಸುರಕ್ಷಿತವಾಗಿರಿ: ಈ ರಜಾದಿನಗಳಲ್ಲಿ ನಿಮ್ಮ ಜೇಬು ರಕ್ಷಿಸಲು ವೀಸಾ ನೀಡುವ 5 ಸಲಹೆಗಳು
Smart Shopping: ಸ್ಮಾರ್ಟ್ ಆಗಿ ಶಾಪಿಂಗ್ ಮಾಡಿ, ಸುರಕ್ಷಿತವಾಗಿರಿ: ಈ ರಜಾದಿನಗಳಲ್ಲಿ ನಿಮ್ಮ ಜೇಬು ರಕ್ಷಿಸಲು ವೀಸಾ ನೀಡುವ 5 ಸಲಹೆಗಳು

ರಜಾದಿನಗಳು ಸಮೀಪಿಸುತ್ತಿದ್ದಂತೆ, ಜನರು ಶಾಪಿಂಗ್ ಕಡೆಗೆ ಒಲವು ತೋರುವುದು ಕೂಡ ಜಾಸ್ತಿ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಗ್ರಾಹಕರಿಂದ ಹಣವನ್ನು ಕದಿಯಲು ಸೈಬರ್ ಅಪರಾಧಗಳನ್ನು ಎಸಗು ತ್ತಾರೆ. ಇಂತಹ ಕಾರಣಗಳಿಂದ ಜನರು ಮೋಸ ಹೋಗಬಾರದು ಎನ್ನುವ ಕಾರಣಕ್ಕೆ ವೀಸಾ ನಿಮಗೆ 2024ರ ರಜಾ ಸಂದರ್ಭದಲ್ಲಿ ಶಾಪಿಂಗ್ ಮಾಡಲು ಕೆಲವು ಸಲಹೆಗಳನ್ನು ನೀಡುತ್ತಿದೆ.
ನಕಲಿ ಹಾಲಿಡೇ ಇ-ಕಾರ್ಡ್‌ಗಳು ಮತ್ತು ಫಿಶಿಂಗ್ ಸ್ಕ್ಯಾಮ್‌ಗಳ ಬಗ್ಗೆ ಗಮನವಿರಲಿ: ಸೈಬರ್ ಅಪರಾಧಿಗಳು ಸಾಮಾನ್ಯವಾಗಿ ಆನ್ ಲೈನ್ ವಂಚನೆಗಳನ್ನು ಮಾಡಲು ನಕಲಿ ಇಮೇಲ್ ಗಳು ಅಥವಾ ರಜಾದಿನದ ಸಂದರ್ಭದ ಇ-ಕಾರ್ಡ್‌ಗಳನ್ನು ಬಳಸುತ್ತಾರೆ. ಹಾಗಾಗಿ ಅಪರಿಚಿತ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸಿ ಮತ್ತು ಯಾವಾಗಲೂ ರಿಟೇಲ್ ವ್ಯಾಪಾರಿಗಳ ವೆಬ್ ಸೈಟ್ ನಲ್ಲಿ ಅಂದರೆ ಸಂಬಂಧಪಟ್ಟ ಸಂಸ್ಥೆಯ ಅಧಿಕೃತ ವೆಬ್ಸೈಟ್ ನಲ್ಲಿ ನೇರವಾಗಿ ಕೊಡುಗೆಗಳನ್ನು ಪರಿಶೀಲಿಸಿ.
ವಿಶ್ವಾಸಾರ್ಹ ವೆಬ್‌ಸೈಟ್‌ಗಳಲ್ಲಿ ಮಾತ್ರ ಶಾಪಿಂಗ್ ಮಾಡಿ: ಆನ್ ಲೈನ್ ನಲ್ಲಿ ಶಾಪಿಂಗ್ ಮಾಡುವಾಗ, ವಿಶ್ವಾಸಾರ್ಹತೆ ಗಮನಿಸುವುದು ಬಹಳ ಮುಖ್ಯ. ವೆಬ್ ಸೈಟ್ ಗಳು URL 'https' ನೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಸುರಕ್ಷಿತ ಸಂಪರ್ಕವನ್ನು ಸೂಚಿಸುವ ಪ್ಯಾಡ್ ಲಾಕ್ ಐಕಾನ್ ಅನ್ನು ಪ್ರದರ್ಶಿಸುತ್ತದೆ. ಈ ಪರಿಶೀಲನೆಯು ವಹಿವಾಟಿನ ಸಮಯದಲ್ಲಿ ನಿಮ್ಮ ಮಾಹಿತಿಯನ್ನು ರಕ್ಷಿಸಲು, ಗೌಪ್ಯವಾಗಿ ಇಡಲು ಸಹಾಯ ಮಾಡುತ್ತದೆ.
ಹೆಚ್ಚಿನ ಸುರಕ್ಷತೆಗೆ ಕ್ರೆಡಿಟ್ ಕಾರ್ಡ್‌ಗಳನ್ನು ಆಯ್ಕೆ ಮಾಡಿ: ಕಾರ್ಡ್ ಪೇಮೆಂಟ್ ಸಂದರ್ಭದಲ್ಲಿ ಟೂ ಫ್ಯಾಕ್ಟರ್ ಅಥೆಂಟಿಕೇಷನ್, ಟೋಕನೈಸೇಶನ್ ಮತ್ತು ಎಸ್ ಎಸ್ ಎಲ್ ಹ್ಯಾಂಡ್ ಶೇಕ್ ತಂತ್ರಜ್ಞಾನದಂತಹ ಫೀಚರ್ ಗಳು ಲಭ್ಯವಿರುತ್ತವೆ. ಈ ಮೂಲಕ ವಂಚನೆಯಿಂದ ನಿಮಗೆ ರಕ್ಷಣೆಯನ್ನು ನೀಡುತ್ತವೆ. ಈ ಫೀಚರ್ ಗಳು ಗ್ರಾಹಕರ ವೈಯಕ್ತಿಕ ಸಾಧನಗಳು ಮತ್ತು ರಿಟೇಲ್ ವ್ಯಾಪಾರಿಗಳು ನಡುವಿನ ಡೇಟಾ ವಿನಿಮಯವನ್ನು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುತ್ತವೆ. ಉಡುಗೊರೆಗಳನ್ನು ಖರೀದಿಸುವಾಗ ಹೆಚ್ಚುವರಿ ಭದ್ರತೆಯನ್ನು ಇದು ನೀಡುತ್ತದೆ.
ನಿಮ್ಮ ವಹಿವಾಟುಗಳ ಮೇಲೆ ನಿಯಮಿತವಾಗಿ ನಿಗಾ ಇಟ್ಟಿರಿ: ಹೆಚ್ಚು ರಜೆ ಇರುವ ಸಮಯದಲ್ಲಿ ಖರೀದಿ ಮಾಹಿತಿಗಳನ್ನು ಟ್ರ್ಯಾಕಿಂಗ್ ಮಾಡುವುದು ಕಷ್ಟಕರವಾಗಿರುತ್ತದೆ. ಯಾವುದೇ ಅನಧಿಕೃತ ವಹಿವಾಟುಗಳನ್ನು ಪತ್ತೆಹಚ್ಚಲು ಪೇಮೆಂಟ್ ನೋಟಿಫಿಕೇಷನ್ ಗಳು ಬರುವಂತೆ ನೋಡಿಕೊಳ್ಳಿ ಮತ್ತು ಕಾರ್ಡ್ ಅಥವಾ ಪಾವತಿ ಅಪ್ಲಿಕೇಶನ್ ವಹಿವಾಟಿನ ಬಗ್ಗೆ ಆಗಾಗ್ಗೆ ಪರಿಶೀಲಿಸಿ. ಒಂದು ವೇಳೆ ಈ ಹಾದಿಯಲ್ಲಿ ನಿಮಗೆ ಯಾವುದಾದರೂ ಅಕ್ರಮ ಪತ್ತೆಯಾದರೆ ನೀವು ತಕ್ಷಣವೇ ರಿಪೋರ್ಟ್ ಮಾಡಿ.
ವೈಯಕ್ತಿಕ ಮತ್ತು ಆರ್ಥಿಕ ಮಾಹಿತಿಯನ್ನು ರಕ್ಷಿಸಿ: ವೈಯಕ್ತಿಕ ಮತ್ತು ಹಣಕಾಸಿನ ವಿವರಗಳನ್ನು ಎಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಹಂಚಿಕೊಳ್ಳಲಾಗುತ್ತದೆ ಎಂಬುದರ ಕುರಿತು ಜಾಗರೂಕರಾಗಿರಿ. ಅಲ್ಲದೆ, ಸಾರ್ವಜನಿಕ ವೈ-ಫೈ ಮೂಲಕ ಖರೀದಿ ಮಾಡುವುದನ್ನು ತಪ್ಪಿಸಿ, ಏಕೆಂದರೆ ಎನ್‌ಕ್ರಿಪ್ಟ್ ಮಾಡದ ನೆಟ್ ವರ್ಕ್ ಗಳು ಸೈಬರ್ ಅಪರಾಧಿಗಳಿಗೆ ಡೇಟಾವನ್ನು ದುರ್ಬಳಕೆ ಮಾಡಲು ಸುಲಭವಾಗಿಸುತ್ತದೆ.
ಜಾಗರೂಕರಾಗಿರಿ ಮತ್ತು ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಆತ್ಮವಿಶ್ವಾಸದಿಂದ ಶಾಪಿಂಗ್ ಮಾಡಬಹುದು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ನೋಡಿ- Visa.com.