ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರು ಯುವಕರ ‘ವೈರ್‌ಲೆಸ್ ಡಿಜೆ ರನ್’: ಜೆ.ಪಿ. ನಗರದ ಫಿಟ್ ನೆಸ್ ಕ್ರೇಜ್ ಗೆ ನೆಟ್ಟಿಗರು ಫಿದಾ!

Viral Video: ಫಿಟ್ ನೆಸ್ ಕಾಪಾಡಿಕೊಳ್ಳಲು ನಗರದ ವಿವಿಧ ಕ್ಲಬ್ ಗಳು ಜೊತೆ ಸೇರಿ ಬೆಂಗಳೂರಿನ ಯುವಕ- ಯುವತಿಯರಿಗೆ ಹೆಚ್ಚಿನ ಹುಮ್ಮಸ್ಸನ್ನು ನೀಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದಕ್ಕೆ ಪೂರಕವಾಗಿ ಜೆ.ಪಿ. ನಗರದಲ್ಲಿ ನಡೆದ ವಿಭಿನ್ನ ಶೈಲಿಯ ‘ವೈರ್‌ಲೆಸ್ ಡಿಜೆ ರನ್ ನ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹರಿದಾಡುತ್ತಿದೆ...

ಜೆಪಿ ನಗರದಲ್ಲಿ ವೈರ್‌ಲೆಸ್ ಡಿಜೆ ರನ್ನಿಂಗ್: ವಿಡಿಯೊ ವೈರಲ್

ಬೆಂಗಳೂರು ಯುವಕರ ‘ವೈರ್‌ಲೆಸ್ ಡಿಜೆ ರನ್' -

Profile
Pushpa Kumari Jun 11, 2026 1:38 PM

ಬೆಂಗಳೂರು, ಜೂ.11: ಸಿಲಿಕಾನ್ ಸಿಟಿ ಅಂದಾಗ ಎಲ್ಲ ಹೊಸ ಪ್ರಯೋಗಗಳಲ್ಲಿ ಮುಂದಿರುತ್ತದೆ. ಸೈಕ್ಲಿಂಗ್ ನಿಂದ ಹಿಡಿದು ವಾರಾಂತ್ಯದ ಮ್ಯಾರಥಾನ್‌ಗಳವರೆಗೆ ವಿವಿಧ ಕಾರ್ಯಕ್ರಮ ಹಮ್ಮಿ ಕೊಂಡು ಮುಂಚುಣಿಯಲ್ಲಿರುತ್ತದೆ. ಅದರಲ್ಲೂ ಫಿಟ್ ನೆಸ್ ಕಾಪಾಡಿಕೊಳ್ಳಲು ನಗರದ ವಿವಿಧ ಕ್ಲಬ್ ಗಳು ಜೊತೆ ಸೇರಿ ಬೆಂಗಳೂರಿನ ಯುವಕ- ಯುವತಿಯರಿಗೆ ಹೆಚ್ಚಿನ ಹುಮ್ಮಸ್ಸನ್ನು ನೀಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದಕ್ಕೆ ಪೂರಕವಾಗಿ ಜೆ.ಪಿ. ನಗರದಲ್ಲಿ ನಡೆದ ವಿಭಿನ್ನ ಶೈಲಿಯ ‘ವೈರ್‌ಲೆಸ್ ಡಿಜೆ ರನ್ ನ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ (Viral News) ಹರಿದಾಡುತ್ತಿದೆ.

ಜೆಪಿ ನಗರದಲ್ಲಿ ನಡೆದ ಕಾರ್ಯಕ್ರಮವು ಈಗ ಇಂಟರ್ನೆಟ್‌ನ ಗಮನ ಸೆಳೆದಿದೆ. ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರು "ವೈರ್‌ಲೆಸ್ ಡಿಜೆ ರನ್" ಕಾರ್ಯಕ್ರಮದ ವಿಡಿಯೊವನ್ನು ಶೇರ್ ಮಾಡಿ ಕೊಂಡಿದ್ದಾರೆ. ಜೆ.ಪಿ. ನಗರದ ರಸ್ತೆಯಲ್ಲಿ ಯುವಕ-ಯುವತಿಯರ ಗುಂಪೊಂದು ಒಟ್ಟಿಗೆ ಸೇರಿ ಜಾಗಿಂಗ್ ಮಾಡುತ್ತಿರುವುದನ್ನು ಕಾಣಬಹುದು.. ಇದರ ಆಸಕ್ತಿಕರ ವಿಚಾರ ಏನಪ್ಪ ಅಂದ್ರೆ ಓಡುತ್ತಿರುವ ಹೆಚ್ಚಿನ ಯುವಕ ಯುವತಿಯರು ಹೆಡ್‌ಫೋನ್ ಧರಿಸಿದ್ದರು. ಚಲಿಸುವ ವಾಹನವೊಂದರ ಮೇಲೆ ಡಿಜೆ ಪ್ಲೇ ಮಾಡುತ್ತಿದ್ದರೆ, ಆ ಸಂಗೀತವು ರನ್ನರ್ಸ್ ಗಳ ಹೆಡ್‌ ಫೋನ್‌ಗಳಿಗೆ ವೈರ್‌ಲೆಸ್ ಆಗಿ ಕೇಳಿ ಬರುತ್ತಿತ್ತು.

ವಿಡಿಯೋ ನೋಡಿ;



ಕೆಲವು ಬಳಕೆದಾರರು ಈ ಕಲ್ಪನೆಯ ಹಿಂದಿನ ಸೃಜನ ಶೀಲತೆಯನ್ನು ಮೆಚ್ಚಿಕೊಂಡರೆ, ಇತರರು ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಿಕೇತ್ ರಾಜ್ ದ್ವಿವೇದಿ ಎಂಬುವವರು ಈ ವಿಡಿಯೊ ಶೇರ್ ಮಾಡಿಕೊಂಡಿದ್ದು "ಜೆ.ಪಿ. ನಗರದ ರನ್ ಕ್ಲಬ್ ವೈರ್‌ಲೆಸ್ ಡಿಜೆ ರನ್ ಮಾಡಿದೆ. "ಬೆಂಗಳೂರು ನಿಜಕ್ಕೂ ಕ್ರೇಜಿ ನಗರ" ಎಂದು ಬರೆದುಕೊಂಡಿದ್ದಾರೆ. ವಿಡಿಯೊದಲ್ಲಿ ಹೆಡ್‌ಫೋನ್‌ಗಳನ್ನು ಧರಿಸಿದ್ದ ಯುವಕ ಯುವತಿಯರು ಜಾಗಿಂಗ್ ಮಾಡುತ್ತಿರುವ ದೃಶ್ಯ ನೋಡಬಹುದು‌.

Viral News: ಶ್ರಾದ್ಧದ ದಿನ ಭಜನೆ ಬದಲು ರಾತ್ರಿಯಿಡೀ ನಡೆದದ್ದು ಅಶ್ಲೀಲ ನೃತ್ಯ

ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ರಸ್ತೆಯಲ್ಲಿ ಓಡುವಾಗ ಇದು ತುಂಬಾ ಅಪಾಯಕಾರಿ ಎಂದು ಬರೆದಿದ್ದಾರೆ. ಮತ್ತೊಬ್ಬರು ಇದು ಜೆನ್ ಜೀ ಯುಗ ಕೇವಲ ನೈಟ್‌ಕ್ಲಬ್‌ಗಳಲ್ಲಿ ಪಾರ್ಟಿ ಮಾಡುವುದನ್ನು ಬಿಟ್ಟು ಆರೋಗ್ಯ ಕಾಪಾಡಿಕೊಳ್ಳುವುದರಲ್ಲೂ ಹೀಗೆ ಎಂಜಾಯ್ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.