Viral News: ಐಫೋನ್ ಖರೀದಿಸಲು 20 ಬಾಯ್‌ಫ್ರೆಂಡ್ಸ್‌ಗೆ ಒತ್ತಾಯಿಸಿದ ಯುವತಿ; ಆಮೇಲೆ ಈಕೆ ಮಾಡಿದ್ದೇನು ಗೊತ್ತಾ?
Woman Convinces friends to Buy iPhones: ಐಫೋನ್ ಕೊಳ್ಳಿರಿ, ಮನೆ ಖರೀದಿಸಿ. ಇದೇನಿದು ಹೊಸ ಆಫರ್ ಅನ್ಕೊಂಡ್ರಾ? ಇಲ್ಲ, ಇದು ಚೀನಾದ ಯುವತಿಯೊಬ್ಬಳ ಮಾಸ್ಟರ್ ಪ್ಲಾನ್. 2016ರಲ್ಲಿ ತನ್ನ 20 ಮಂದಿ ಸ್ನೇಹಿತರಲ್ಲಿ ಐಫೋನ್ ಖರೀದಿಸುವಂತೆ ಒತ್ತಾಯಿಸಿ ಮನೆ ಖರೀದಿಸಿದ್ದಾಳೆ. ಅದು ಹೇಗೆ ಅಂತಾ ಶಾಕ್ ಆದ್ರಾ? ಈ ಸ್ಟೋರಿ ಓದಿ.

-

ಬೀಜಿಂಗ್: ಐಫೋನ್ 17 (iPhone-17) ಅನ್ನು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಕಳೆದ ವಾರ ಈ ಫೋನ್ ಅನ್ನು ಆಪಲ್ ಸಂಸ್ಥೆ ಬಿಡುಗಡೆ ಮಾಡಿದಾಗಿನಿಂದ ಇದು ಜಗತ್ತನ್ನೇ ಆವರಿಸಿಕೊಂಡಿದೆ. ಇದೀಗ ಈ ಮೊಬೈಲ್ (mobile) ಖರೀದಿಯ ಬಗ್ಗೆ ಕಥೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. 2016 ರಲ್ಲಿ, ಐಫೋನ್ 7 (iPhone-7) ಬಿಡುಗಡೆಯಾದಾಗ, ಚೀನಾದ (China) ಕ್ಸಿಯೋಲಿ ಎಂಬ ಯುವತಿ ಹೊಸ ಮನೆಗಾಗಿ ಹಣವನ್ನು ಸಂಗ್ರಹಿಸಲು ಒಂದು ವಿಶಿಷ್ಟ ಯೋಜನೆಯನ್ನು ರೂಪಿಸಿದಳು.
ಯುವತಿಯು ತನ್ನ 20 ಗೆಳೆಯರನ್ನು ಹೊಚ್ಚ ಹೊಸ ಐಫೋನ್ 7 ಫೋನ್‌ಗಳನ್ನು ಖರೀದಿಸಲು ಕೇಳಿಕೊಂಡಳಂತೆ. ಐಫೋನ್ 7 ಸಂಗ್ರಹಿಸಿದ ನಂತರ, ಅವಳು ಎಲ್ಲಾ ಫೋನ್‌ಗಳನ್ನು ಮೊಬೈಲ್ ಮರುಬಳಕೆ ಕಂಪನಿಯಾದ ಹುಯಿ ಶೌ ಬಾವೊಗೆ ಮಾರಾಟ ಮಾಡಿ 120,000 ಚೀನೀ ಯುವಾನ್ (ಸುಮಾರು 14 ಲಕ್ಷ ರೂ.) ಗಳಿಸಿದಳು. ಈ ಹಣವನ್ನು ಅವಳು ತನ್ನ ಮನೆಗೆ ಡೌನ್ ಪೇಮೆಂಟ್ ಆಗಿ ಬಳಸಿದಳು.
ಪ್ರೌಡ್ ಕಿಯೋಬಾ ಎಂಬ ವ್ಲಾಗರ್ ಟಿಯಾನ್ ಯಾ ಯಿ ಡು ವೇದಿಕೆಯಲ್ಲಿ ಈ ಕಥೆಯನ್ನು ಹಂಚಿಕೊಂಡರು. ಅವರ ಸಹೋದ್ಯೋಗಿಯ ಬುದ್ಧಿವಂತ ಯೋಜನೆಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದರು. ಕ್ಸಿಯೋಲಿ ತನ್ನ ಹೊಸ ಮನೆಯನ್ನು ಸ್ನೇಹಿತರಿಗೆ ತೋರಿಸಿದಾಗ, ಅವರು ಡೌನ್ ಪೇಮೆಂಟ್‌ಗೆ ಹಣವನ್ನು ಹೇಗೆ ಸಂಗ್ರಹಿಸಿದರು ಎಂಬುದರ ಬಗ್ಗೆ ಗೊಂದಲಕ್ಕೊಳಗಾಗಿದ್ದರು. ಕಚೇರಿಯಲ್ಲಿ ಎಲ್ಲರೂ ಇದರ ಬಗ್ಗೆ ಮಾತನಾಡುತ್ತಿದ್ದರು ಮತ್ತು ಆಕೆ ರೂಪಿಸಿದ ಯೋಜನೆಯಿಂದ ಎಲ್ಲರೂ ಅಚ್ಚರಿಗೊಂಡರು.
ಇದನ್ನೂ ಓದಿ: Viral Video: ಪೊಲೀಸ್ ಠಾಣೆಯ ಹೊರಗೆ ಮಹಿಳೆಯ ಹೈಡ್ರಾಮಾ! ಈ ವಿಡಿಯೊ ನೋಡಿ
ವ್ಲಾಗರ್ ಪ್ರಕಾರ, ಕ್ಸಿಯೋಲಿಯು ಶ್ರೀಮಂತ ಕುಟುಂಬದಿಂದ ಬಂದವಳಲ್ಲ. ಅವಳ ತಾಯಿ ಗೃಹಿಣಿಯಾಗಿದ್ದು, ತಂದೆ ವಲಸೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮನೆಯಲ್ಲೇ ಈಕೆಯೇ ಹಿರಿಯ ಪುತ್ರಿಯಾಗಿದ್ದು, ದುಡಿಯುವ ಅನಿವಾರ್ಯತೆ ಆಕೆಗಿತ್ತು. ಅಲ್ಲದೆ ಹೆತ್ತವರಿಗೆ ವಯಸ್ಸಾಗುತ್ತಿರುವುದರಿಂದ ಮನೆ ಖರೀದಿ ಮಾಡುವ ಹಠ ಆಕೆಯಲ್ಲಿತ್ತು. ಹೀಗಾಗಿ ಸ್ವಂತ ಮನೆಗಾಗಿ ಆಕೆ ಈ ರೀತಿ ವಿಶಿಷ್ಟ ವಿಧಾನವನ್ನು ಬಳಸಿಕೊಂಡಳು.
ಕ್ಸಿಯೋಲಿಯವರ ಕಥೆ ಹುಯಿ ಶೌ ಬಾವೊಗೆ ಇದು ಮಾರ್ಕೆಟಿಂಗ್ ಸ್ಟಂಟ್ ಆಗಿರಬಹುದು ಎಂಬ ಊಹಾಪೋಹವಿತ್ತು. ಬಿಬಿಸಿ ಕಂಪನಿಯನ್ನು ಸಂಪರ್ಕಿಸಿದಾಗ, ವಕ್ತಾರರು ಅವರು ನಿಜವಾಗಿಯೂ ಒಬ್ಬ ಕ್ಲೈಂಟ್‌ನಿಂದ 20 ಐಫೋನ್‌ಗಳನ್ನು ಖರೀದಿಸಿದ್ದಾರೆ ಮತ್ತು ಪ್ರತಿ ಫೋನ್‌ಗೆ 6000 ಚೈನೀಸ್ ಯುವಾನ್ (ಸುಮಾರು 74,000 ರೂ.) ಪಾವತಿಸಿದ್ದಾರೆ ಎಂದು ದೃಢಪಡಿಸಿದರು.
ಐಫೋನ್ 17 ಕೊಟ್ಟು ಯುವತಿಗೆ ಪ್ರಪೋಸ್; ಆದ್ರೂ ರಿಜೆಕ್ಟ್!
ಘಾನಾದ ಮತ್ತೊಂದು ಘಟನೆಯಲ್ಲಿ, ಯುವಕನೊಬ್ಬ ಗೆಳತಿಗೆ ಐಫೋನ್-17 ಕೊಡುತ್ತಾ ಪ್ರಪೋಸ್ ಮಾಡಿದ್ದಾನೆ. ಮಾಲ್‌ವೊಂದರಲ್ಲಿ ತನ್ನ ಗೆಳತಿಯನ್ನು ಮೆಚ್ಚಿಸಲು ಅವನು ಐಫೋನ್ 17 ಮತ್ತು ದುಬಾರಿ ವಿಗ್ ಖರೀದಿಸಿದ್ದನು. ಅವಳು ತನ್ನ ಪ್ರಪೋಸಲ್ ಸ್ವೀಕರಿಸಲು ನಿರಾಕರಿಸಿದಾಗ, ಅವನು ಕೋಪಗೊಂಡು ಉಡುಗೊರೆಗಳನ್ನು ಹಿಂದಿರುಗಿಸುವಂತೆ ಕೇಳಿದನು.
ಪ್ರಪೋಸಲ್ ಮಾಡುವಾಗ ಆ ವ್ಯಕ್ತಿ ಸಾರ್ವಜನಿಕವಾಗಿ ಮೊಣಕಾಲೂರಿ ಕುಳಿತಿದ್ದ. ಆದರೆ, ಗೆಳತಿಯು ಆತನ ಪ್ರಪೋಸಲ್ ಅನ್ನು ತಿರಸ್ಕರಿಸಿದ್ದಾಳೆ. ತಿರಸ್ಕರಿಸಲ್ಪಟ್ಟ ನಂತರ, ಯುವಕ ತನ್ನ ಗೆಳತಿಯ ತಲೆಯಿಂದ ವಿಗ್ ಅನ್ನು ಕಸಿದುಕೊಂಡು ತನ್ನ ಐಫೋನ್ 17 ಅನ್ನು ಹಿಂತಿರುಗಿಸಲು ಅವಳ ಹಿಂದೆ ಓಡಿದ್ದಾನೆ.