ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀವು ಆರ್‌ಸಿಬಿ ಜರ್ಸಿ ನೋಡಿರಬಹುದು; ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿರುವ ಬ್ಲೌಸ್ ಡಿಸೈನ್ ಏನದ್ರೂ ನೋಡಿದ್ದೀರಾ?

Viral Video: ಗುಜರಾತ್ ಟೈಟಾನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಎರಡನೇ ಬಾರಿಗೆ ಐಪಿಎಲ್‌ ಟ್ರೋಫಿ ಗೆದ್ದು ಫ್ಯಾನ್ಸ್‌ ಸಸಂಭ್ರಮ ಹೆಚ್ಚಿಸಿದೆ. ಆರ್‌ಸಿಬಿ ಅಭಿಮಾನಿಗಳು ಕೊಹ್ಲಿ ಅವರ ಭಾವಚಿತ್ರ‌ ಹಿಡಿದು, ನಗರದ ವಿವಿಧೆಡೆ ಪಟಾಕಿ ಸಿಡಿಸಿ, ಸಿಹಿ‌ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಐಪಿಎಲ್ ಕ್ರೇಜ್ ಮೈದಾನಕ್ಕೆ ಸೀಮಿತವಾಗಿಲ್ಲ; ಅದು ಈಗ ಫ್ಯಾಷನ್ ಲೊಕಕ್ಕೂ ಲಗ್ಗೆ ಇಟ್ಟಿದೆ.

ಆರ್‌ಸಿಬಿ ಥೀಮ್ ಬ್ಲೌಸ್ ಧರಿಸಿ ಟ್ರೆಂಡ್ ಕ್ರಿಯೇಟ್ ಮಾಡಿದ ಮಹಿಳೆ

ಆರ್‌ಸಿಬಿ ಥೀಮ್ ಬ್ಲೌಸ್ ಧರಿಸಿ ಟ್ರೆಂಡ್ ಕ್ರಿಯೇಟ್ ಮಾಡಿದ ಮಹಿಳೆ -

Profile
Pushpa Kumari Jun 1, 2026 3:54 PM

ಬೆಂಗಳೂರು, ಜೂ. 1: 2026ರ ಐಪಿಎಲ್‌ನಲ್ಲೂ (IPL 2026) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​​ಸಿಬಿ) ಗೆದ್ದು ಬೀಗಿದೆ. ಗುಜರಾತ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಆರ್​​ಸಿಬಿ (RCB) ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದು ಫ್ಯಾನ್ಸ್ ಗೆ ಸರ್‌ಪ್ರೈಸ್ ನೀಡಿದೆ. ಅಭಿಮಾನಿಗಳ ಸಂಭ್ರಮವಂತೂ ದುಪ್ಪಟ್ಟಾಗಿದ್ದು ಭರ್ಜರಿಯಾಗಿ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಆರ್‌ಸಿಬಿ ಅಭಿಮಾನಿಗಳು ಕೊಹ್ಲಿ ಅವರ ಭಾವಚಿತ್ರ‌ ಹಿಡಿದು, ನಗರದ ವಿವಿಧೆಡೆ ಪಟಾಕಿ ಸಿಡಿಸಿ, ಸಿಹಿ‌ ಹಂಚಿ ಸಂಭ್ರಮಾಚರಿಸಿದ್ದಾರೆ. ಈ ಐಪಿಎಲ್ ಕ್ರೇಜ್ ಮೈದಾನಕ್ಕೆ ಮಾತ್ರ ಸೀಮಿತವಾಗಿಲ್ಲ, ಅದು ಫ್ಯಾಷನ್ ಲೊಕಕ್ಕೂ ಲಗ್ಗೆ ಇಟ್ಟಿದೆ.

ಐಪಿಎಲ್‌ ಪಂದ್ಯ ವೀಕ್ಷಿಸಲು ಫ್ಯಾನ್ಸ್ ತಂಡದ ಜರ್ಸಿ ಧರಿಸಿ ಮೈದಾನಕ್ಕೆ ಬರುವುದು ವಾಡಿಕೆ. ಆದರೆ ಇಲ್ಲೊಬ್ಬ ಪಕ್ಕಾ ಆರ್‌ಸಿಬಿ ಅಭಿಮಾನಿ ಮಹಿಳೆ ತಂಡದ ಜರ್ಸಿ ಮಾದರಿಯ ಬ್ಲೌಸ್ ಧರಿಸಿ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಮಾಡೆಲ್ ಮತ್ತು ಡಿಸೈನರ್ ಅಂಜಲಿ ಈ ಆರ್‌ಸಿಬಿ ಥೀಮ್‌ನ ಕ್ರಿಯೇಟಿವ್ ಬ್ಲೌಸ್ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

ವಿಡಿಯೊ ನೋಡಿ:

ಆರ್‌ಸಿಬಿ ತಂಡದ ಸಾಂಪ್ರದಾಯಿಕ ಬಣ್ಣಗಳಾದ ನೀಲಿ, ಕೆಂಪು ಮತ್ತು ಗೋಲ್ಡ್ ಬಣ್ಣಗಳನ್ನು ಬಳಸಿ ಈ ಬ್ಲೌಸ್ ಸ್ಟಿಚ್‌ ಮಾಡಿದ್ದಾರೆ. ಇದಕ್ಕೆ ಸರಿಹೊಂದಿರುವ ಸೀರೆಯನ್ನು ಅವರು ಧರಿಸಿದ್ದಾರೆ. ಮಾರುಕಟ್ಟೆಯಲ್ಲಿ ಕೂಡ ಇದರ ಟ್ರೆಂಡ್ ಜೋರಾಗಿದ್ದು, ಅರ್‌ಸಿಬಿ ಗೆದ್ದ ಸಂಭ್ರಮದ ನಡುವೆ ಇದನ್ನು ಖರೀದಿಸಲು ಮಹಿಳೆಯರು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿದ್ದಾರೆ.

ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್ ಬುಲ್ ನಾಯಿಯ ಡೆಡ್ಲಿ ಅಟ್ಯಾಕ್‌

ಕೆಂಪು ಬಣ್ಣದ ಸೀರೆಗೆ ಹೊಂದಿಕೆ ಆಗುವಂತೆ ನೀಲಿ ಬಣ್ಣದ ಕೈ ತೋಳುಗಳ ಮೇಲೆ ಆರ್‌ಸಿಬಿ ಲೋಗೋ ಹಾಗೂ ಗೋಲ್ಡ್ ಬಣ್ಣದ ಜರಿ ವರ್ಕ್ ಮಾಡಿಸಿದ್ದಾರೆ. ಈ ಮಹಿಳೆಯ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಈಕೆ ಪಕ್ಕಾ ಆರ್‌ಸಿಬಿ ಫ್ಯಾನ್ ಎಂದು ಹಲವು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

ಆರ್‌ಸಿಬಿ ಅಭಿಮಾನಿಗಳು ಈ ಯುವತಿಯ ಕ್ರಿಯೇಟಿವ್ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಯುವತಿಯ ಬ್ಲೌಸ್ ವಿನ್ಯಾಸ ಸೂಪರ್ ಆಗಿದೆ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಕೆಲವರು ಇದು ಪ್ರಚಾರದ ಹುಚ್ಚು ಎಂದು ಕರೆದಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಂತೂ ಈ ಮಹಿಳೆಯ ಬ್ಲೌಸ್ ವಿನ್ಯಾಸ ಟ್ರೆಂಡ್ ಕ್ರಿಯೇಟ್ ಮಾಡಿದೆ.