ಬಡತನ ಮೆಟ್ಟಿ ನಿಲ್ಲಲು ಹರಸಾಹಸ: ಹೋಮ್ ಗಾರ್ಡ್ ಹುದ್ದೆಗಾಗಿ ಸೀರೆಯುಟ್ಟು ಬರಿಗಾಲಲ್ಲಿ ಓಡಿ ಗೆದ್ದ ಮಹಿಳೆ; ವಿಡಿಯೊ ವೈರಲ್
Viral Video: ಶ್ರಮ ಪಟ್ಟರೆ ಯಾವುದನ್ನೂ ಸಾಧ್ಯವಾಗಿಸಬಹುದು ಎನ್ನುವುದನ್ನು ಜಾರ್ಖಂಡ್ ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ. ಜೀವನದ ಬಡತನ, ಕಷ್ಟಗಳನ್ನು ಲೆಕ್ಕಿಸದೆ ಹೋಮ್ ಗಾರ್ಡ್ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಸೀರೆ ಉಟ್ಟುಕೊಂಡೇ ಬರಿಗಾಲಿನಲ್ಲಿ 1,600 ಮೀಟರ್ ಓಟವನ್ನು ಕೇವಲ 6 ನಿಮಿಷಗಳಲ್ಲಿ ಪೂರ್ಣಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಾರ್ಖಂಡ್‌ನಲ್ಲಿ ಸೀರೆ ಉಟ್ಟು ಬರಿಗಾಲಿನಲ್ಲಿ ಓಡಿದ ಮಹಿಳೆ -
ರಾಂಚಿ, ಅ. 7: ಶ್ರಮಪಟ್ಟರೆ ಯಾವುದನ್ನು ಸಾಧ್ಯವಾಗಿಸಬಹುದು ಎನ್ನುವುದನ್ನು ಜಾರ್ಖಂಡ್ ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ. ಜೀವನದ ಬಡತನ, ಕಷ್ಟಗಳನ್ನು ಲೆಕ್ಕಿಸದೆ ಹೋಮ್ ಗಾರ್ಡ್ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಸೀರೆ ಉಟ್ಟುಕೊಂಡೇ ಬರಿಗಾಲಿನಲ್ಲಿ 1,600 ಮೀಟರ್ ಓಟವನ್ನು ಕೇವಲ 6 ನಿಮಿಷಗಳಲ್ಲಿ ಪೂರ್ಣಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಓಟದ ವಿಡಿಯೊವನ್ನು ಪ್ರೇಕ್ಷಕರೊಬ್ಬರು ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ (Viral News) ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.
ಜಾರ್ಖಂಡ್‌ನ ರಾಮಗಢ ಜಿಲ್ಲೆಯ ದುಲ್ಮಿ ಬ್ಲಾಕ್‌ನಲ್ಲಿರುವ ಸೊಸೊ ಗ್ರಾಮದ ವಿಧವೆ ಕವಿತಾ ಕುಮಾರಿ ಗೃಹರಕ್ಷಕ ದಳದ ನೇಮಕಾತಿ ಅಭಿಯಾನದಲ್ಲಿನ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದರು. ತನ್ನ ಬದುಕಿನಲ್ಲಿ ಕಷ್ಟ ಏರಿಳಿತಗಳಿದ್ದರೂ ಯಾವುದನ್ನು ಲೆಕ್ಕಿಸದೆ ಸದ್ಯ ಅವರು ಕನಸನ್ನು ನನಸು ಮಾಡಿಕೊಂಡಿದ್ದಾರೆ
ವಿಡಿಯೊ ನೋಡಿ:
Barefoot. In a saree. Under the scorching sun. 🇮🇳 Kavita, a widowed mother from Ramgarh, Jharkhand, ran 1,600m for a Home Guard job — without shoes, spikes or a tracksuit. And she cleared the physical test with top marks. ❤️ She wasn’t just running a race. She was running for a better future for her children. https://t.co/aWuPTKyhLP
— Megh Updates 🚨™ (@MeghUpdates) October 7, 2026
ಕವಿತಾ ಕುಮಾರಿ ಹೋಮ್ ಗಾರ್ಡ್ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಸೀರೆ ಉಟ್ಟು, ಬರಿಗಾರಿನಲ್ಲಿಯೆ 1,600 ಮೀಟರ್ ಓಟವನ್ನು ಕೇವಲ 6 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಈ ಪರೀಕ್ಷೆಗೆ 10 ನಿಮಿಷಗಳ ಸಮಯವಿತ್ತು. ಆದರೆ ಆರೇ ನಿಮಿಷದಲ್ಲಿ ಗುರಿ ತಲುಪಿದ್ದಾರೆ. ಇಬ್ಬರು ಚಿಕ್ಕ ಮಕ್ಕಳು ಮತ್ತು ವೃದ್ಧ ಅತ್ತೆಯನ್ನು ನೋಡಿಕೊಳ್ಳುತ್ತಿರುವ ಕವಿತಾ ಇಟ್ಟಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ವಾರಾಣಸಿ ಕೋರ್ಟ್‌ನಲ್ಲಿ ಮಹಿಳೆಯ ಹುಚ್ಚಾಟ
ಓಟದ ಬೂಟುಗಳು, ಟ್ರ್ಯಾಕ್‌ಸೂಟ್ ಅಥವಾ ಓಟಕ್ಕೆ ಅಗತ್ಯವಿರುವ ಇತರ ಸಲಕರಣೆಗಳನ್ನು ಖರೀದಿಸಲು ಸಾಧ್ಯವಾಗದೇ ಸೀಮಿತ ಸಂಪನ್ಮೂಲಗಳೊಂದಿಗೆ ಅವರು ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಪ್ರತಿದಿನ ಬೆಳಗ್ಗೆ 4 ಗಂಟೆಗೆ ಎದ್ದು ಸೀರೆ ಉಟ್ಟುಕೊಂಡೇ ಓಟದ ಅಭ್ಯಾಸ ಮಾಡುತ್ತಿದ್ದರು.
ರಾಮ್‌ಗಢದಲ್ಲಿ ಒಟ್ಟು 284 ಹೋಮ್ ಗಾರ್ಡ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಶೇಕಡಾ 50ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಹಾಗೂ ಶೇಕಡಾ 5ರಷ್ಟು ಹುದ್ದೆಗಳನ್ನು ವಿಧವೆಯರಿಗೆ ಮೀಸಲಿಡಲಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕವಿತಾ ಅವರ ಧೈರ್ಯ ಮತ್ತು ಛಲವನ್ನು ಜನರು ಮುಕ್ತಕಂಠದಿಂದ ಅಭಿನಂದಿಸುತ್ತಿದ್ದಾರೆ.