ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಹಸ್ಯವಾಗಿ ವಿಡಿಯೊ ಮಾಡಿಕೊಂಡು ರಾಪಿಡೊ ಸವಾರನ ಬಗ್ಗೆ ಗೇಲಿ; ಮಹಿಳೆಯ ವಿರುದ್ಧ ನೆಟ್ಟಿಗರು ಫುಲ್‌ ಗರಂ!

Rapido Rider: ಮಹಿಳೆಯೊಬ್ಬರು ರಾಪಿಡೋ ಸವಾರನ ವಿಡಿಯೊವನ್ನು ಚಿತ್ರೀಕರಿಸಿ ಆತನ ಬಗ್ಗೆ ಗೇಲಿ ಮಾಡಿ ವಿಡಿಯೊ ಹಂಚಿಕೊಂಡಿದ್ದಾಳೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರಾಪಿಡೋ ಸವಾರನ ವಿಡಿಯೊ ಚಿತ್ರೀಕರಿಸುವಾಗ, ಮಹಿಳೆ ಅವನನ್ನು ಅಪಹಾಸ್ಯ ಮಾಡಿದ್ದಾಳೆ. ಆತನ ದೇಹದ ಬಗ್ಗೆ ತಮಾಷೆ ಮಾಡಿದ್ದಾಳೆ. ಇದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.

ರಹಸ್ಯವಾಗಿ ವಿಡಿಯೊ ಚಿತ್ರೀಕರಿಸಿ ರಾಪಿಡೊ ಸವಾರನ ಬಗ್ಗೆ ಗೇಲಿ

Priyanka P Priyanka P Aug 5, 2025 5:30 PM

ನವದೆಹಲಿ: ಮಹಿಳೆಯೊಬ್ಬರು ರಾಪಿಡೋ ಸವಾರನ ವಿಡಿಯೊವನ್ನು ಚಿತ್ರೀಕರಿಸಿ ಆತನ ಬಗ್ಗೆ ಬಾಡಿ ಶೇಮಿಂಗ್ ಮಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾಳೆ. ಇದು ನೆಟ್ಟಿಗರಲ್ಲಿ ಭಾರಿ ಆಕ್ರೋಶವನ್ನು ಹುಟ್ಟುಹಾಕಿದೆ. ಮಹಿಳೆಯೊಬ್ಬಳು ರಾಪಿಡೊ ಬೈಕ್ ಬುಕ್ ಮಾಡಿದ್ದಳು. ತಾನು ಬುಕ್ ಮಾಡಿದ್ದ ಸ್ಥಳಕ್ಕೆ ಬೈಕ್ ಸವಾರ ಆಗಮಿಸಿದ್ದಾನೆ. ಇದರ ವಿಡಿಯೊ ಚಿತ್ರೀಕರಿಸಿದ ಮಹಿಳೆ, ಆ ಸವಾರನು ಎಲ್ಲಾ ಜಾಗವನ್ನು ಆಕ್ರಮಿಸಿಕೊಂಡಿದ್ದಾನೆ. ತಾನೆಲ್ಲಿ ಕುಳಿತುಕೊಳ್ಳಲಿ ಎಂದು ಹಾಸ್ಯ ಮಾಡಿದ್ದಾಳೆ. ಅಲ್ಲದೆ ತನಗೆ ಸ್ಥಳವಿಲ್ಲದ ಕಾರಣ ತನ್ನ ರಾಪಿಡೋ ಸವಾರಿಯನ್ನು ರದ್ದುಗೊಳಿಸಬೇಕಾಯಿತು ಎಂದು ಆಕೆ ತಿಳಿಸಿದ್ದಾಳೆ. ಸವಾರಿಯನ್ನು ರದ್ದುಗೊಳಿಸಿದ ನಂತರ, ಮಹಿಳೆ ಸವಾರನನ್ನು ರಹಸ್ಯವಾಗಿ ಚಿತ್ರೀಕರಿಸಿ ವಿಡಿಯೊದಲ್ಲಿ(Viral Video) ಅಣಕಿಸಿದ್ದಾಳೆ.

ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆ ಹಂಚಿಕೊಂಡಿದ್ದಾಳೆ. ಇದು ಸಮುದ್ರದ ಅಲೆಗಳಷ್ಟೇ ವೇಗವಾಗಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅವರು ಮಹಿಳೆಯ ವಿರುದ್ಧ ಕಿಡಿಕಾರಿದ್ದಾರೆ. ಸವಾರನ ಅನುಮತಿಯಿಲ್ಲದೆ ವಿಡಿಯೊ ಚಿತ್ರೀಕರಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಮಹಿಳೆಯನ್ನು ಟೀಕಿಸಿದ್ದಾರೆ. ರಾಪಿಡೋ ಸವಾರನ ವಿಡಿಯೊ ಚಿತ್ರೀಕರಿಸುವಾಗ, ಮಹಿಳೆ ಅವನನ್ನು ಅಪಹಾಸ್ಯ ಮಾಡಿದ್ದಾಳೆ. ಆತನ ದೇಹದ ಬಗ್ಗೆ ತಮಾಷೆ ಮಾಡಿದ್ದಾಳೆ. ಅವಳು ಸವಾರನನ್ನು ರಹಸ್ಯವಾಗಿ ರೆಕಾರ್ಡ್ ಮಾಡುತ್ತಿದ್ದಾಳೆ ಎಂದು ವಿವರಿಸಿದಳು. ಇದೀಗ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮಹಿಳೆಗೆ ಭಾರಿ ವಿರೋಧ ವ್ಯಕ್ತವಾಗಿದೆ.

ವಿಡಿಯೊ ವೀಕ್ಷಿಸಿ:



ತಮ್ಮ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿರುವ ಕಠಿಣ ಪರಿಶ್ರಮಿ ವ್ಯಕ್ತಿಗೆ ಅಪಹಾಸ್ಯ ಮಾಡುವುದು ಒಳ್ಳೆಯದಲ್ಲ. ಆಕೆಗೆ ಏನಾದರೂ ಸಮಸ್ಯೆ ಇದ್ದಿದ್ದರೆ, ಸವಾರಿಯನ್ನು ರದ್ದುಗೊಳಿಸಿದ್ದರೆ ಸಾಕಾಗಿತ್ತು. ಆದರೆ ಸಾರ್ವಜನಿಕವಾಗಿ ಅವನ ವಿಡಿಯೊ ಚಿತ್ರೀಕರಿಸಿ ಅಣಕಿಸಲು ಆಯ್ಕೆ ಮಾಡಿಕೊಂಡಿದ್ದೇಕೆ? ಅದು ಅವನ ಬಗ್ಗೆಗಿಂತ ಅವಳ ಮನಸ್ಥಿತಿಯನ್ನು ತೋರಿಸುತ್ತದೆ. ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮವನ್ನು ಎತ್ತಿ ಹಿಡಿಯಬೇಕು. ಅದನ್ನು ಎಂದಿಗೂ ಅವಮಾನಿಸಬಾರದು ಎಂದು ಬಳಕೆದಾರರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಮಹಿಳಾ ಪೊಲೀಸ್ ಮೇಲೆ ಸರ್ಪವನ್ನೆಸೆದ ಹಾವಾಡಿಗ; ವಿಡಿಯೊ ವೈರಲ್

ಮತ್ತೊಬ್ಬ ಬಳಕೆದಾರರು, ನಾಚಿಕೆಗೇಡಿನ ಸಂಗತಿ. ಈ ಗ್ರಾಹಕರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ರಾಪಿಡೊ ಸಂಸ್ಥೆಗೆ ಮನವಿ ಮಾಡಿದ್ದಾರೆ. ಸವಾರಿ ರದ್ದು ಮಾಡುವುದು ಆಕೆಗೆ ಬಿಟ್ಟ ವಿಷಯ. ಆದರೆ, ಮತ್ತೊಬ್ಬರನ್ನು ರಹಸ್ಯವಾಗಿ ಚಿತ್ರೀಕರಿಸಲು ಮತ್ತು ಸಾರ್ವಜನಿಕವಾಗಿ ಅವಮಾನಿಸಲು ಅವಳಿಗೆ ಯಾವುದೇ ಹಕ್ಕಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ವ್ಯಕ್ತಿ ತನ್ನ ಕೆಲಸ ಮಾಡುತ್ತಿದ್ದಾನೆ. ಮಹಿಳೆ ಯಾವುದೇ ಕಾರಣವಿಲ್ಲದೆ ಅವನನ್ನು ನಿಂದಿಸುತ್ತಿದ್ದಾಳೆ. ಅವಳಿಗೆ ಆರಾಮದಾಯಕವಾಗಿಲ್ಲದಿದ್ದರೆ ಸವಾರಿಯನ್ನು ರದ್ದುಗೊಳಿಸಲಿ. ಆದರೆ, ಗೇಲಿ ಮಾಡಿದ್ದು ಸರಿಯಲ್ಲ ಎಂದು ಮತ್ತೊಬ್ಬ ಬಳಕೆದಾರ ತಿಳಿಸಿದ್ದಾರೆ. ರಾಪಿಡೊದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಟ್ಯಾಗ್ ಮಾಡುವ ಮೂಲಕ ಮತ್ತು ಕಂಪನಿಯು ಮಹಿಳೆಯನ್ನು ತಮ್ಮ ಸೇವೆಗಳಿಂದ ಕಪ್ಪುಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದ್ದಾರೆ. ಈ ಮೂಲಕ ನೆಟ್ಟಿಗರು ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.