ಇವಳೆಂಥಾ ತಾಯಿ? 7 ದಿನಗಳ ಮಗುವನ್ನು 6 ಲಕ್ಷ ರೂ.ಗೆ ಸೇಲ್ ಮಾಡಿದ ಮಹಿಳೆ
ಮಕ್ಕಳ ಮಾರಾಟ ಜಾಲ ತೆಲಂಗಾಣದ ಕರಿಂನಗರದಲ್ಲಿ ಸಕ್ರಿಯವಾಗಿದೆ ಎನ್ನುವುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ಈ ಮಹಿಳೆ ಮಧ್ಯವರ್ತಿಯ ಸಹಾಯದಿಂದ ತನ್ನ ಮಗುವನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕರಿಂನಗರ ಟೌನ್ 2 ಪೊಲೀಸರು ಮಾಹಿತಿ ನೀಡಿದ್ದಾರೆ.
ಎಐ ಚಿತ್ರ -
ಹೈದರಾಬಾದ್, ನ. 22: ಎಷ್ಟೇ ಕಷ್ಟವಾದರೂ ತಾಯಿ ತನ್ನ ಮಕ್ಕಳನ್ನು ಕಾಪಾಡುತ್ತಾಳೆ ಎನ್ನುವುದು ಲೋಕರೂಢಿ. ಇದು ನಿಜ ಕೂಡ. ಆದರೆ ಇಲ್ಲೊಂದು ಅದಕ್ಕೆ ತದ್ವಿರುದ್ಧ ಘಟನೆ ನಡೆದಿದೆ. ಮದುವೆಗಿಂತ ಮೊದಲೇ ಮಗುವಿಗೆ ಜನ್ಮ ನೀಡಿದ ಮಹಿಳೆಯೊಬ್ಬಳು ಮಾಡಬಾರದ ಕೆಲಸ ಮಾಡಿ ಸಿಕ್ಕಿ ಬಿದ್ದಿದ್ದಾಳೆ. ತನ್ನ 7 ದಿನಗಳ ಗಂಡು ಮಗುವನ್ನು 6 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆ. ಈ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಕರಿಂನಗರದಲ್ಲಿ ನಡೆದಿದೆ. ಮಗುವಿನೊಂದಿಗೆ ಮಹಿಳೆ ನಗರದಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಮಕ್ಕಳ ಮಾರಾಟ ಜಾಲ ಕರಿಂನಗರದಲ್ಲಿ ಸಕ್ರಿಯವಾಗಿದೆ ಎನ್ನುವುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ಈ ಮಹಿಳೆ ಮಧ್ಯವರ್ತಿಯ ಸಹಾಯದಿಂದ ತನ್ನ ಮಗುವನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕರಿಂನಗರ ಟೌನ್ 2 ಪೊಲೀಸರು ಮಾಹಿತಿ ನೀಡಿದ್ದಾರೆ.
ಹೈದರಾಬಾದ್ ಮೂಲದ ಮಹಿಳೆ ಈ ಹಿಂದೆ ವ್ಯಕ್ತಿಯೊಬ್ಬನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಳು. ಮದುವೆಯಾಗುವುದಾಗಿ ನಂಬಿಸಿದ ಆತ ಆಕೆ ಗರ್ಭಿಣಿ ಎನ್ನುವುದು ತಿಳಿಯುತ್ತಿದ್ದಂತೆ ಕೈಕೊಟ್ಟು ಪರಾರಿಯಾಗಿದ್ದ. ಮಗು ಜನಿಸಿದ ಬಳಿಕ ಆಕೆಗೆ ಆರ್ಥಿಕ ಸಮಸ್ಯೆ ಕಾಡಿತ್ತು. ಹೀಗಾಗಿ ಮಗುವನ್ನು ಸಾಕಲು ಸಾಧ್ಯವಾಗದೆ 1 ವಾರದ ಹಸುಗೂಸನ್ನು ಮಾರಾಟ ಮಾಡಿ ಕೈತೊಳೆದುಕೊಂಡಿದ್ದಾಳೆ.
ಮಗುವನ್ನು ಮಾರಾಟ ಮಾಡಿದ ಮಹಿಳೆಯ ವೈರಲ್ ವಿಡಿಯೊ ಇಲ್ಲಿದೆ:
కరీంనగర్ జిల్లాలో చైల్డ్ ట్రాఫికింగ్ కేసు వెలుగుచూసింది. ప్రేమించిన వ్యక్తి వదిలిపెట్టడంతో ఆర్థికంగా ఇరుకులో పడిన యువతి, పుట్టిన ఏడురోజుల శిశువును ₹6 లక్షలకు అమ్మినట్లు విచారణలో బయటపడింది. సీసీడబ్ల్యూ సమాచారం ఆధారంగా పోలీసులు బిడ్డను రక్షించి మాతా-శిశు సంరక్షణ కేంద్రానికి… pic.twitter.com/mw29Wb8iI7
— TeluguPost (@telugu_post9) November 22, 2025
ಮಧ್ಯವರ್ತಿಯನ್ನು ಸಂಪರ್ಕಿಸಿದ್ದ ಮಹಿಳೆ
ಪ್ರಿಯಕರ ತನ್ನನ್ನು ತೊರೆದು ಹೋಗಿರುವುದು ತಿಳಿಯುತ್ತಿದ್ದಂತೆ ಮಹಿಳೆ ಮಧ್ಯವರ್ತಿಯನ್ನು ಸಂಪರ್ಕಿಸಿದ್ದಳು. ಈತ ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಮಾರಾಟ ಮಾಡಿದ್ದ. ಮಕ್ಕಳ ಹಕ್ಕುಗಳ ಸರಂಕ್ಷಣಾ ಸಮಿತಿ ಸದಸ್ಯರಿಗೆ ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಇಡೀ ಪ್ರಕರಣ ಬೆಳಕಿಗೆ ಬಂತು. ಅವರು ಪೊಲೀಸರಿಗೆ ದೂರು ನೀಡಿದರು. ಇದೀಗ ಕರಿಂನಗರ ಟೌನ್ 2 ಪೊಲೀಸರು ಪ್ರಕರಣ ದಾಖಲಿಸಿದ್ದು, ಕೃತ್ಯದಲ್ಲಿ 15 ಮಂದಿ ಭಾಗಿಯಾಗಿರುವುದಾಗಿ ತಿಳಿಸಿದ್ದಾರೆ.
ಆಟೋ ರಿಕ್ಷಾವನ್ನೇ ಓಯೋ ರೂಮ್ ಮಾಡಿಕೊಂಡ ಜೋಡಿ; ರಸ್ತೆ ಮಧ್ಯೆಯೇ ರೊಮ್ಯಾನ್ಸ್
ಡೀಲ್ ಕುದುರಿಸಿದ್ದ ಬ್ರೋಕರ್
ಗನ್ನೇರುವರಂ ಮಂಡಲದ ಚಕಾಲಿವಾನಿಪಳ್ಳಿಯ ದಂಪತಿಯನ್ನು ಸಂಪರ್ಕಿಸಿದ್ದ ಬ್ರೋಕರ್ 6 ಲಕ್ಷ ರೂ.ಗೆ ವ್ಯವಹಾರ ಕುದುರಿಸಿದ್ದ. ನವೆಂಬರ್ 20ರಂದು ಕರಿಂನಗರಕ್ಕೆ ಮಗುವನ್ನು ಕರೆತಂದು ಸಾಯಿ ಬಾಬಾ ದೇವಸ್ಥಾನದ ಬಳಿ ಹಸ್ತಾಂತರಿಸಲಾಗಿತ್ತು. ಸದ್ಯ ಮಗುವನ್ನು ರಕ್ಷಿಸಲಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಸಹಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.
ಮರು ಮದುವೆಯಾಗಲು ಹೊರಟ ಪತಿಗೆ ಶಾಕ್ ಕೊಟ್ಟ ಮೊದಲ ಪತ್ನಿ-ವಿಡಿಯೊ ವೈರಲ್
ನೆಟ್ಟಿಗರು ಹೇಳಿದ್ದೇನು?
ಸದ್ಯ ಘಟನೆ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼʼಇಂತಹ ತಾಯಿಯೂ ಇರುತ್ತಾರಾ?ʼʼ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ʼʼಥೂ. ನಾಚಿಕೆಯಾಗಬೇಕು. ತಾಯಿ ಎನ್ನುವ ಪದಕ್ಕೇ ಈಕೆ ಅವಮಾನʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಕೆಲವರು ಮೈ ಮರೆತು, ವಿವೇಚನೆ ಇಲ್ಲದೆ ತಮ್ಮನ್ನು ಪ್ರಿಯಕರಿಗೆ ಅರ್ಪಿಸಿಬಿಡುತ್ತಾರೆ. ಆತ ಕೈಕೊಟ್ಟು ಹೋದ ಮೇಲೆ ಪರಿತಪಿಸುತ್ತಾರೆʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಮಹಿಳೆಯ ವರ್ತನೆಯನ್ನು ಎಲ್ಲರೂ ಖಂಡಿಸಿದ್ದಾರೆ. ಆಕೆಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.