Harbhajan Singh: ಅಬುಧಾಬಿ ಟಿ10 ಲೀಗ್ ವೇಳೆ ಪಾಕ್ ಆಟಗಾರನಿಗೆ ಶೇಕ್ ಹ್ಯಾಂಡ್ ನೀಡಿದ ಹರ್ಭಜನ್
Abu Dhabi T10 league: ಎರಡು ಓವರ್‌ಗಳಲ್ಲಿ 10ಕ್ಕೆ 2 ವಿಕೆಟ್ ಪಡೆದ ದಹಾನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು ಸೈಫ್ ಹಸನ್ (11 ಎಸೆತಗಳಲ್ಲಿ 15) ಮತ್ತು ಟೈಮಲ್ ಮಿಲ್ಸ್ (1 ಎಸೆತದಲ್ಲಿ 0) ವಿಕೆಟ್ ಪಡೆದರು. ಪಂದ್ಯದ ಕೊನೆಯ ಎಸೆತದಲ್ಲಿ ಹರ್ಭಜನ್ 1 ಎಸೆತದಲ್ಲಿ 1 ರನ್ ಗಳಿಸಿ ರನೌಟ್ ಆದರು.
ಹರ್ಭಜನ್ ಸಿಂಗ್ -
ದುಬೈ, ನ.22: ಅಬುಧಾಬಿ ಟಿ10 ಲೀಗ್(Abu Dhabi T10 league)ನಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್(Harbhajan Singh) ಪಾಕಿಸ್ತಾನದ ಬೌಲರ್ ಶಹನವಾಜ್ ದಹಾನಿ(Shahnawaz Dahani) ಅವರೊಂದಿಗೆ ಕೈಕುಲುಕಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾಜಿ ಕ್ರಿಕೆಟಿಗನ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಈ ವರ್ಷದ ಆರಂಭದಲ್ಲಿ ನಡೆದ ಪಹಲ್ಗಾಮ್ ದಾಳಿಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಸ್ತುತ ರಾಜಕೀಯ ಉದ್ವಿಗ್ನತೆಯ ಮಧ್ಯೆ ಹರ್ಭಜನ್ ಅವರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಯಿತು.
ಹರ್ಭಜನ್ ಮತ್ತು ಇತರ ಕೆಲವು ನಿವೃತ್ತ ಭಾರತೀಯ ಕ್ರಿಕೆಟಿಗರು ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿದ್ದರು. ಸೆಮಿಫೈನಲ್‌ನಲ್ಲಿ ಭಾರತ ವಾಕ್ ಓವರ್ ಬಿಟ್ಟುಕೊಟ್ಟ ನಂತರ ಪಾಕಿಸ್ತಾನ ಫೈನಲ್‌ಗೆ ಅರ್ಹತೆ ಪಡೆದಿತ್ತು. ಇದೀಗ ಅಂದು ಪಾಕ್ ವಿರುದ್ಧದ ಪಂದ್ಯ ಬಹಿಷ್ಕರಿಸಿ ಇಂದು ಪಾಕ್ ಆಟಗಾರನಿಗೆ ಶೇಕ್ ಹ್ಯಾಂಡ್ ಮಾಡಿದ್ದು ಸರಿಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
Harbhajan Singh shared a warm handshake with Shahnawaz Dahani after the Abu Dhabi T10 match 🇵🇰🇮🇳🤝
— Abbey 🫀 (@CrickTrack360) November 19, 2025
Dahani responded with a smile — makes you wonder why we don’t see the same energy in international fixtures. Interesting contrast. 🤐 pic.twitter.com/TAQwC47DVQ
ಏಷ್ಯಾ ಕಪ್ ಸಮಯದಲ್ಲಿ ಹ್ಯಾಂಡ್‌ಶೇಕ್‌ಗಳಲ್ಲಿ ಭಾಗವಹಿಸದಿರುವ ಪ್ರವೃತ್ತಿ ಮೊದಲು ಕಾಣಿಸಿಕೊಂಡಿತು. ಸೂರ್ಯಕುಮಾರ್ ಯಾದವ್ ಅವರ ತಂಡವು ಯುಎಇಯಲ್ಲಿ ನಡೆದ ಪಂದ್ಯಾವಳಿಯಾದ್ಯಂತ ಆಡಿದ ಮೂರು ಪಂದ್ಯಗಳಲ್ಲಿಯೂ ಪಾಕ್ ಆಟಗಾರರಿಗೆ ಶೇಕ್ ಹ್ಯಾಂಡ್ ನೀಡಿರಲಿಲ್ಲ. ಜತೆಗೆ ಆಟಗಾರರಿಂದಲೂ ಅಂತರ ಕಾಯ್ದುಕೊಂಡಿದ್ದರು. ಮಹಿಳಾ ವಿಶ್ವಕಪ್‌ನಲ್ಲಿ ಹಾಗೂ ಇತ್ತೀಚೆಗೆ ಭಾರತ ಎ ಮತ್ತು ಪಾಕಿಸ್ತಾನ ಶಾಹೀನ್ಸ್ ನಡುವಿನ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಸ್ಪರ್ಧೆಯಲ್ಲಿಯೂ ಇದೇ ರೀತಿ ನಡೆದಿತ್ತು.
ಇದನ್ನೂ ಓದಿ Naveen Sagar Column: ಪಾಕಿಸ್ತಾನ ಒಂದು ಹ್ಯಾಂಡ್ ಶೇಕ್ ಗಾಗಿ ಅಳುವಂತಾಯ್ತಲ್ಲ !
ಪಂದ್ಯದ ಬಗ್ಗೆ ಹೇಳುವುದಾದದರೆ, ಅಬುಧಾಬಿಯ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟಿ10 ಪಂದ್ಯದಲ್ಲಿ ಹರ್ಭಜನ್ ನೇತೃತ್ವದ ಸ್ಟಾಲಿಯನ್ಸ್ ತಂಡವು ನಾಲ್ಕು ರನ್‌ಗಳಿಂದ ಪಂದ್ಯವನ್ನು ಸೋತಿತು. ಮೊದಲು ಬ್ಯಾಟಿಂಗ್ ನಡೆಸಿದ ನಾರ್ದರ್ನ್ ವಾರಿಯರ್ಸ್ ಕೇವಲ ಒಂದು ವಿಕೆಟ್‌ಗೆ 114 ಗಳಿಸಿತ್ತು. ಗುರಿ ಬೆನ್ನಟ್ಟಿದ ಸ್ಟಾಲಿಯನ್ಸ್ ತಂಡ ತಮ್ಮ 10 ಓವರ್‌ಗಳ ಕೋಟಾದಲ್ಲಿ 7 ವಿಕೆಟ್‌ಗೆ 110 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಪ್ಪಿಕೊಂಡಿತು. ಹರ್ಭಜನ್ ಸಿಂಗ್ ಒಂದು ಓವರ್‌ನಲ್ಲಿ ಎಂಟು ರನ್‌ಗಳನ್ನು ಬಿಟ್ಟುಕೊಟ್ಟರು.
ಎರಡು ಓವರ್‌ಗಳಲ್ಲಿ 10ಕ್ಕೆ 2 ವಿಕೆಟ್ ಪಡೆದ ದಹಾನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು ಸೈಫ್ ಹಸನ್ (11 ಎಸೆತಗಳಲ್ಲಿ 15) ಮತ್ತು ಟೈಮಲ್ ಮಿಲ್ಸ್ (1 ಎಸೆತದಲ್ಲಿ 0) ವಿಕೆಟ್ ಪಡೆದರು. ಪಂದ್ಯದ ಕೊನೆಯ ಎಸೆತದಲ್ಲಿ ಹರ್ಭಜನ್ 1 ಎಸೆತದಲ್ಲಿ 1 ರನ್ ಗಳಿಸಿ ರನೌಟ್ ಆದರು.