ಸಲೂನ್‌ನಲ್ಲಿ ಕೃಷ್ಣ ವಿಗ್ರಹಕ್ಕೆ ಹೇರ್ ವಾಶ್: ಇದು ಭಕ್ತಿಯಲ್ಲ, ಪ್ರಚಾರದ ಹುಚ್ಚು ಎಂದ ನೆಟ್ಟಿಗರು
Viral Video: ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಅನಾಚಾರ ಮಾಡುವಂತಹ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಿಳೆಯೊಬ್ಬರು ಕೃಷ್ಣನ ವಿಗ್ರಹವನ್ನು ಹೇರ್ ವಾಶ್‌ಗಾಗಿ ಸಲೂನ್‌ಗೆ ಕೊಂಡೊಯ್ದಿದ್ದು ನೆಟ್ಟಿಗರು ಈ ನಡೆಯನ್ನು ಟೀಕಿಸಿದ್ದಾರೆ. ಇದು ಜನರ ನಂಬಿಕೆ ಮತ್ತು ಭಕ್ತಿಗೆ ಕಳಂಕವನ್ನು ಉಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷ್ಣ ವಿಗ್ರಹದ ಹೇರ್ ವಾಶ್‌ಗೆ ಸಲೂನ್‌ಗೆ ಬಂದ ಮಹಿಳೆ -
ದೆಹಲಿ, ಏ. 20: ಇತ್ತೀಚೆಗೆ ಪ್ರಚಾರದ ಹುಚ್ಚಿನಲ್ಲಿ ಜನರು ನಾನಾ ಸಾಹಸಕ್ಕೆ ಮುಂದಾಗುತ್ತಿರುವ ಘಟನೆ (Viral News) ನಡೆಯುತ್ತಿದೆ. ಅದರಲ್ಲೂ ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಅನಾಚಾರ ಮಾಡುವಂತಹ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಿಳೆಯೊಬ್ಬಳು ಕೃಷ್ಣನ ವಿಗ್ರಹವನ್ನು ಹೇರ್ ವಾಶ್‌ಗಾಗಿ ಸಲೂನ್‌ಗೆ ಕೊಂಡೊಯ್ದಿದ್ದು ನೆಟ್ಟಿಗರು ಟೀಕಿಸಿದ್ದಾರೆ. ಇದು ಜನರ ನಂಬಿಕೆ ಮತ್ತು ಭಕ್ತಿಗೆ ಕಳಂಕವನ್ನು ಉಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಜನರು ಭಕ್ತಿಯ ಹೆಸರಿನಲ್ಲಿ ಏನೇನೊ ಕಸರತ್ತು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಭಕ್ತರ ದಂಡೊಂದು ಬರೋಬ್ಬರಿ 165 ಲೀಟರ್ ತುಪ್ಪವನ್ನು ಗಂಗಾನದಿಗೆ ಸುರಿದ ದೃಶ್ಯ ಕಂಡು ಬಂದು ಹಲವರು ಆಕ್ರೋಶ ಹೊರಹಾಕಿದ್ದರು. ಧಾರ್ಮಿಕ ಆಚರಣೆಯ ಭಾಗವಾಗಿ ನಡೆಸಲಾದ ಈ ಕೃತ್ಯವು ಪರಿಸರದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟು ಹಾಕಿತ್ತು. ಇದೀಗ ಮಹಿಳೆಯೊಬ್ಬಳು ಕೃಷ್ಣ ವಿಗ್ರಹವನ್ನು ಸೆಲೂನ್‌ಗೆ ತಂದು ಹೇರ್ ವಾಶ್ ಮಾಡಿಸಿದ್ದಾಳೆ.
ವಿಡಿಯೊ ನೋಡಿ:
Aaj Kanhaji hair wash karne salon gaye the. 😂 pic.twitter.com/UR5qiawtCV
— Manish RJ (@mrjethwani1) April 18, 2026
ವಿಡಿಯೊದಲ್ಲಿ, ಮಹಿಳೆ ಕೃಷ್ಣ ದೇವರ ವಿಗ್ರಹವನ್ನು ಸಲೂನ್‌ಗೆ ಕೊಂಡೊಯ್ಯುವುದನ್ನು ಕಾಣಬಹುದು. ಅಲ್ಲಿನ ಸಿಬ್ಬಂದಿ ವಿಗ್ರಹವನ್ನು ಬಹಳ ಎಚ್ಚರಿಕೆಯಿಂದ ಕೈಯಲ್ಲಿ ಹಿಡಿದು ಅದರ ಕೂದಲಿಗೆ ಶಾಂಪೂ ಹಚ್ಚಿ ತೊಳೆದಿದ್ದಾರೆ. ನಂತರ ನೆತ್ತಿಯ ಭಾಗಕ್ಕೆ ಮಸಾಜ್ ಮಾಡಿದ್ದು ಕೂದಲನ್ನು ಡ್ರೈ ಮಾಡಿ ಅಂತಿಮವಾಗಿ ಜಡೆ ಹಾಕಿದ್ದಾರೆ. ಈ ಕ್ಲಿಪ್ ಅನ್ನು ಮನೀಷ್ ಆರ್.ಜೆ. ಹಂಚಿಕೊಂಡಿದ್ದಾರೆ.
ಅಕ್ಷಯ್ ಖನ್ನಾ ವೈರಲ್ ಡ್ಯಾನ್ಸ್‌ಗೆ ದೆಹಲಿ ಪೊಲೀಸರು ಫಿದಾ
"ಇದು ಭಕ್ತಿ ಅಲ್ಲ, ಇದು ಮಾನಸಿಕ ಸಮಸ್ಯೆ, ಮಹಿಳೆ ಇದಕ್ಕೆ ಚಿಕಿತ್ಸೆ ಪಡೆಯಬೇಕು" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.ಮತ್ತೊಬ್ಬರು, ʼʼಹಿಂದೂಗಳಲ್ಲಿನ ಸಮಸ್ಯೆಯೆಂದರೆ, ಯಾವುದೇ ಆಚರಣೆಯಯನ್ನು ಮೀತಿ ಮೀರಿ ಮಾಡುವುದುʼʼ ಎಂದು ಬರೆದಿದ್ದಾರೆ. ಹಲವರು ಇದು ಕೇವಲ ಲೈಕ್ಸ್ ಮತ್ತು ಪ್ರಚಾರಕ್ಕಾಗಿ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.