ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MI vs GT: ಮುಂಬೈ ಇಂಡಿಯನ್ಸ್‌ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ದಾನಿಶ್, ಭಗತ್‌ ಯಾರು?

IPL 2026: 22 ವರ್ಷದ ದಾನಿಶ್ ಮಾಲೆವಾರ್ ಅವರನ್ನು ಮುಂಬೈ ಇಂಡಿಯನ್ಸ್ 2026 ರ ಐಪಿಎಲ್ ಹರಾಜಿನಲ್ಲಿ ಅವರ ಮೂಲ ಬೆಲೆ 30 ಲಕ್ಷ ರೂ.ಗೆ ಖರೀದಿಸಿತು. ನಾಗ್ಪುರದವರಾದ ಮಾಲೆವಾರ್, ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದಾರೆ. 2024-25ರ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಐಪಿಎಲ್‌ಗೆ ಪದಾರ್ಪಣೆ ಮಾಡಿದ ದಾನಿಶ್, ಭಗತ್‌ ಯಾರು?

Danish Malewar and Krish Bhagat -

Abhilash BC
Abhilash BC Apr 20, 2026 8:09 PM

ಅಹಮದಾಬಾದ್‌, ಎ.20: ವಿದರ್ಭದ ಬ್ಯಾಟ್ಸ್‌ಮನ್ ದಾನಿಶ್ ಮಾಲೆವರ್(Danish Malewar) ಮತ್ತು ಕ್ರಿಶ್ ಭಗತ್(Krish Bhagat) ಸೋಮವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್(GT vs MI) ವಿರುದ್ಧ ಮುಂಬೈ ಇಂಡಿಯನ್ಸ್ ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026)ಗೆ ಪದಾರ್ಪಣೆ ಮಾಡಿದರು. ಆದರೆ ಕೇವಲ 2 ರನ್‌ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

22 ವರ್ಷದ ಈ ಆಟಗಾರನನ್ನು ಮುಂಬೈ ಇಂಡಿಯನ್ಸ್ 2026 ರ ಐಪಿಎಲ್ ಹರಾಜಿನಲ್ಲಿ ಅವರ ಮೂಲ ಬೆಲೆ 30 ಲಕ್ಷ ರೂ.ಗೆ ಖರೀದಿಸಿತು. ನಾಗ್ಪುರದವರಾದ ಮಾಲೆವಾರ್, ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದಾರೆ. 2024-25ರ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅವರು ಒಂಬತ್ತು ಪಂದ್ಯಗಳಲ್ಲಿ 52 ಸರಾಸರಿಯಲ್ಲಿ 783 ರನ್ ಗಳಿಸಿದ್ದರು. ಇದರಲ್ಲಿ ಎರಡು ಶತಕಗಳು ಮತ್ತು ಆರು ಅರ್ಧ ಶತಕಗಳು ಸೇರಿವೆ.

2020 ರಲ್ಲಿ ಭಾರತದ U19 ವಿಶ್ವಕಪ್ ತಂಡದ ಭಾಗವಾಗಿದ್ದ ಭಗತ್‌, ತನ್ನ ಆಲ್‌ರೌಂಡರ್‌ ಪ್ರದರ್ಶನದ ಮೂಲಕ ಗಮನಸೆಳೆದಿದ್ದರು. 2019 ರಲ್ಲಿ ಭಾರತದ ACC U19 ಏಷ್ಯಾ ಕಪ್ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಬಾಂಗ್ಲಾದೇಶ ವಿರುದ್ಧದ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಗೌರವವನ್ನು ಗಳಿಸಿದ್ದರು.

IPL 2026: ಆರ್‌ಸಿಬಿ ತಂಡದ ಹೀಗೊಬ್ಬ ಅಭಿಮಾನಿ; ವಿಡಿಯೊ ವೈರಲ್‌

ಪಂಜಾಬ್‌ನ 21 ವರ್ಷದ ಆಲ್‌ರೌಂಡರ್ ಭಗತ್, 30 ಲಕ್ಷ ರೂ. ಮೂಲ ಬೆಲೆಗೆ ತಂಡವನ್ನು ಸೇರಿದ್ದಾರೆ. ಬಲಗೈ ಮಧ್ಯಮ ವೇಗಿಯಾಗಿರುವ ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡಬಲ್ಲರು. ಅವರು ಏಳು ಪ್ರಥಮ ದರ್ಜೆ ಪಂದ್ಯಗಳು ಮತ್ತು ಒಂಬತ್ತು ಲಿಸ್ಟ್ ಎ ಪಂದ್ಯಗಳಲ್ಲಿ ಆಡಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ ಮೂಲಕ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ.



ರೋಹಿತ್ ಶರ್ಮಾ ಇನ್ನೂ ಪೂರ್ಣ ಫಿಟ್ನೆಸ್ ಮರಳಿ ಪಡೆಯದ ಕಾರಣ ಈ ಪಂದ್ಯದಿಂದಲೂ ಹೊರಗುಳಿದರು. ಪಂದ್ಯದಲ್ಲಿ ಟಾಸ್‌ ಗೆದ್ದ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಶುಭಮನ್‌ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿ.ಕೀ.), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಶೀದ್ ಖಾನ್, ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ, ಅಶೋಕ್ ಶರ್ಮಾ.

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಡ್ಯಾನಿಶ್ ಮಾಲೆವಾರ್, ಕ್ವಿಂಟನ್ ಡಿ ಕಾಕ್(ವಿ.ಕೀ.), ನಮನ್ ಧೀರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ತಿಲಕ್ ವರ್ಮಾ, ಶೆರ್ಫೇನ್ ರುದರ್‌ಫೋರ್ಡ್, ಮಿಚೆಲ್ ಸ್ಯಾಂಟ್ನರ್, ಕ್ರಿಶ್ ಭಗತ್, ಜಸ್ಪ್ರೀತ್ ಬುಮ್ರಾ, ಎಎಮ್ ಗಜನ್‌ಫರ್.