ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಸತ್ತು 8 ನಿಮಿಷಗಳ ನಂತ್ರ ಬದುಕಿ ಬಂದ ಯುವತಿ; ಬಿಚ್ಚಿಟ್ಟ ಸಾವಿನ ರಹಸ್ಯ ಏನು?

ಅಮೆರಿಕದ ಕೊಲೊರಾಡೋದ 33 ವರ್ಷದ ಬ್ರಿಯಾನ್ನಾ ಲಾಫರ್ಟಿ ನರವೈಜ್ಞಾನಿಕ ಸಮಸ್ಯೆಯಾದ ಮಯೋಕ್ಲೋನಸ್ ಡಿಸ್ಟೋನಿಯಾನಿಂದ ಸಾವನಪ್ಪಿದ್ದಳಂತೆ. ಆದರೆ ಸತ್ತು 8 ನಿಮಿಷಗಳ ನಂತರ ಆಕೆ ಮತ್ತೆ ಬದುಕಿ ಬಂದಿದ್ದಾಳಂತೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಸತ್ತುವಳು ಮರಳಿ ಬಂದು ಸಾವಿನ ರಹಸ್ಯ ಬಿಚ್ಚಿಟ್ಳು!

Profile pavithra Jun 10, 2025 1:50 PM

ವಾಷಿಂಗ್ಟನ್‌: ಸಾವೆಂಬುದು ಯಾರಿಗೆ, ಯಾವಾಗ ಹೇಗೆ ಬರುತ್ತೆ ಎಂದು ಹೇಳುವುದಕ್ಕೆ ಆಗುವುದಿಲ್ಲ! ಇನ್ನು ಸಾವಿನ ನಂತರ ಏನಾಗುತ್ತೆ ಎಂಬುದು ಕೂಡ ಅಷ್ಟೇ ನಿಗೂಢ! ಇತ್ತೀಚೆಗಷ್ಟೇ ಸಮಾಜಶಾಸ್ತ್ರಜ್ಞೆ ಟೆಸ್ಸಾ ರೊಮೆರೊ ಎಂಬ ಮಹಿಳೆಯ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಆಕೆ ಸತ್ತು 24 ನಿಮಿಷಗಳ ನಂತರ ಮತ್ತೆ ಜೀವಂತವಾಗಿ ಸಾವಿನ ನಂತರದ ಬದುಕಿನ ತನ್ನ ಅನುಭವವನ್ನು ಹಂಚಿಕೊಂಡಿದ್ದಳು. ಇದೀಗ ಅಮೆರಿಕದ ಕೊಲೊರಾಡೋದ ಯುವತಿಯೊಬ್ಬಳು ಸತ್ತು 8 ನಿಮಿಷಗಳ ನಂತರ ಮತ್ತೆ ಬದುಕಿ ಬಂದಿದ್ದಾಳೆ. ಹಾಗೇ ಸಾವು(Death) ಒಂದು ಭ್ರಮೆ ಎಂದು ಆಕೆ ಹೇಳಿದ್ದಾಳೆ. ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

33 ವರ್ಷದ ಬ್ರಿಯಾನ್ನಾ ಲಾಫರ್ಟಿಗೆ ಮಾರಣಾಂತಿಕ ನರವೈಜ್ಞಾನಿಕ ಸಮಸ್ಯೆಯಾದ ಮಯೋಕ್ಲೋನಸ್ ಡಿಸ್ಟೋನಿಯಾನಿಂದ ಬಳಲುತ್ತಿದ್ದಾಳಂತೆ. ಈ ಸಮಸ್ಯೆಯಿಂದಾಗಿಯೇ ಅವಳ ಜೀವಕ್ಕೆ ಕುತ್ತು ಬಂದಿತಂತೆ. ಆದರೆ ಸತ್ತು 8 ನಿಮಿಷಗಳ ನಂತರ ಮತ್ತೆ ಜೀವ ಪಡೆದು ಎಲ್ಲರಿಗೂ ಶಾಕ್‌ ನೀಡಿದ್ದಾಳೆ.ಅದು ಅಲ್ಲದೇ, ಸಾವಿನ ನಂತರದ ತನ್ನ ಅನುಭವವನ್ನು ಆಕೆ ಹಂಚಿಕೊಂಡಿದ್ದಾಳೆ.ಸಾವೆಂಬುದು ಒಂದು ಭ್ರಮೆ, ಅಲ್ಲಿ ಯಾವುದೇ ನೋವು ಇರಲಿಲ್ಲ ಎಂದೆಲ್ಲಾ ಆಕೆ ಹೇಳಿದ್ದಾಳೆ.ಆಕೆಯ ಪಿಟ್ಯುಟರಿ ಗ್ರಂಥಿಗೆ ಹಾನಿಯಾಗಿದ್ದರಿಂದ ಆಕೆಯನ್ನು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು ಹಾಗು ಅದು ಯಶಸ್ವಿಯಾಗಿದೆ ಎಂದು ಅವಳು ಹೇಳಿದ್ದಾಳೆ.

ಈ ಸುದ್ದಿಯನ್ನೂ ಓದಿ:‌Viral Video: ಚಲಿಸುತ್ತಿರುವ ಕಾರಿನ ಮೇಲೆ ಸ್ಟಂಟ್‌; ಈತನನ್ನು ಅರೆಸ್ಟ್‌ ಮಾಡಿ ಎಂದ ನೆಟ್ಟಿಗರು..ಈ ವಿಡಿಯೊ ನೋಡಿ

ಇದೇ ರೀತಿಯ ಘಟನೆ ಈ ಹಿಂದೆ ಕೂಡ ನಡೆದಿದ್ದು, ಸ್ಪೇನ್‌ನ ಆಂಡಲೂಸಿಯಾದ 50 ವರ್ಷದ ಪತ್ರಕರ್ತೆ ಮತ್ತು ಸಮಾಜಶಾಸ್ತ್ರಜ್ಞೆ ಟೆಸ್ಸಾ ರೊಮೆರೊ ಎಂಬಾಕೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಆಕೆ ಸತ್ತಿದ್ದಾಳೆಂದು ವೈದ್ಯರು ಘೋಷಿಸಿದ್ದಾರೆ. ಆದರೆ 24 ನಿಮಿಷಗಳ ನಂತರ ಮತ್ತೆ ಜೀವಂತವಾಗಿ ಎದ್ದು ಬಂದಿದ್ದಾಳಂತೆ. ಈ ವಿಚಾರವನ್ನು ಆಕೆ ಸೋಶಿಯಲ್ ಮೀಡಿಯಾಧಲ್ಲಿ ಹಂಚಿಕೊಂಡಿದ್ದು, ಈ ಸುದ್ದಿ ವೈರಲ್ ಆಗಿತ್ತು.