ಅಕ್ವೇರಿಯಂನಲ್ಲಿ ಶಾರ್ಕ್ ಮೀನುಗಳ ಸಮ್ಮುಖದಲ್ಲಿ ಪ್ರಿಯತಮೆಗೆ ಪ್ರಪೋಸ್ ಮಾಡಿದ ಯುವಕ: ವಿಡಿಯೊ ವೈರಲ್
Viral News: ಬಹುತೇಕರು ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತ ಪಡಿಸಲು ಬಯಸುತ್ತಾರೆ. ದುಬಾರಿ ಹಣ ವ್ಯಯಿಸಿ ಡೆಕೋರ್ ಮಾಡುವ ಮೂಲಕ ಅಥವಾ ಪ್ರೇಯಸಿಯ ಇಷ್ಟದ ಗಿಫ್ಟ್ ಕೊಡಿಸುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇದೀಗ ಬ್ರಿಟನ್‌ನ ಜೇಮ್ಸ್ ವಾಲ್ಷ್ ಪ್ರೇಯಸಿ ಬಳಿ ವಿಶೇಷ ರೀತಿಯಲ್ಲಿ ಮದುವೆ ಪ್ರಪೋಸಲ್ ಮಂಡಿಸಿದ್ದಾರೆ.
ಅಕ್ವೇರಿಯಂನಲ್ಲಿ ಪ್ರೇಯಸಿಗೆ ವಿಶೇಷ ರೀತಿಯಲ್ಲಿ ಪ್ರಪೋಸ್ ಮಾಡಿದ ಯುವಕ -
ಲಂಡನ್, ಸೆ. 25: ಬಹುತೇಕರು ತಮ್ಮ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತ ಪಡಿಸಲು ಬಯಸುತ್ತಾರೆ. ದುಬಾರಿ ಹಣ ವ್ಯಯಿಸಿ ಡೆಕೋರ್ ಮಾಡುವ ಮೂಲಕ ಅಥವಾ ಪ್ರೇಯಸಿಯ ಇಷ್ಟದ ಗಿಫ್ಟ್ ಕೊಡಿಸುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇದೀಗ ಬ್ರಿಟನ್‌ನ ಜೇಮ್ಸ್ ವಾಲ್ಷ್ ಎಂಬ ಯುವಕ ತನ್ನ ಗೆಳತಿಗಾಗಿ ವಿಶೇಷ ರೀತಿಯಲ್ಲಿ ಮದುವೆ ಪ್ರಪೋಸಲ್ ಸಿದ್ದಪಡಿಸಿದ್ದಾನೆ. ಸ್ಕ್ಯಾಗ್ನೆಸ್ ಅಕ್ವೇರಿಯಂನಲ್ಲಿ ಶಾರ್ಕ್ ಮೀನುಗಳ ಸಮ್ಮುಖದಲ್ಲಿ ಪ್ರಿಯತಮೆಗೆ ಪ್ರಪೋಸ್ ಮಾಡುವ ಮೂಲಕ (Viral News) ಸುದ್ದಿಯಾಗಿದ್ದಾರೆ.
ಬ್ರಿಟಿಷ್ ಯುವಕ ಜೇಮ್ಸ್ ವಾಲ್ಷ್ ತನ್ನ ಗೆಳತಿಗೆ ನೀರೊಳಗಿನಿಂದ ಪ್ರಪೋಸ್ ಮಾಡಲು ಮುಂದಾಗಿದ್ದಾನೆ. ಆತನ ಗೆಳತಿ ಪೈಜ್ ಕುಕ್ ಶಾರ್ಕ್ ಮೀನುಗಳನ್ನು ಪ್ರೀತಿಸುತ್ತಿರುವುದರಿಂದ ಜೇಮ್ಸ್ ವಾಲ್ಷ್ ಈ ಅಚ್ಚರಿಯನ್ನು ಪ್ರೇಯಸಿಗಾಗಿ ನೀಡಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
Man Proposes to Girlfriend Underwater in Shark Tank, Hides Engagement Ring in His Wetsuit https://t.co/JKCHtFyOS2
— People (@people) September 21, 2026
ಲಿಂಕನ್‌ಶೈರ್‌ನ 'ಸ್ಕ್ಯಾಗ್ನೆಸ್ ಅಕ್ವೇರಿಯಂ'ನಲ್ಲಿ ಈ ಅಪರೂಪದ ಘಟನೆ ನಡೆದಿದೆ. ಪೈಜ್ ಕುಕ್ ಅವರಿಗೆ ಶಾರ್ಕ್ ಮೀನುಗಳೆಂದರೆ ಅತ್ಯಂತ ಪ್ರೀತಿ. ಹೀಗಾಗಿ ಗ್ರ್ಯಾಂಡ್ ಡೆಕೋರ್ ಅಥವಾ ದುಬಾರಿ ಗಿಪ್ಟ್ ನೀಡುವ ಬದಲು ಅವರ ನೆಚ್ಚಿನ ಶಾರ್ಕ್‌ಗಳ ಸಮ್ಮುಖದಲ್ಲೇ ಪ್ರಪೋಸ್ ಮಾಡಲು ಜೇಮ್ಸ್ ನಿರ್ಧರಿಸಿದ್ದ. ಅಲ್ಲಿನ ಸಿಬ್ಬಂದಿ ಜತೆಗೆ ಮಾತುಕತೆ ನಡೆಸಿ ಈ ಯೋಜನೆಯನ್ನು ಗುಟ್ಟಾಗಿ ರೂಪಿಸಿದ್ದ.
ಸೆಪ್ಟೆಂಬರ್ 10ರಂದು ಅಕ್ವೇರಿಯಂನಲ್ಲಿ ಸ್ಕೂಬಾ ಡೈವಿಂಗ್ ಅನುಭವಕ್ಕಾಗಿ ಈ ಜೋಡಿ ತೆರಳಿತ್ತು. ಆದರೆ ವಾಲ್ಷ್ ಮತ್ತೊಂದು ಅಚ್ಚರಿಯ ಯೋಜನೆಯನ್ನು ರೂಪಿಸಿದ್ದಾನೆ ಎಂಬುದು ಕುಕ್‌ಗೆ ತಿಳಿದಿರಲಿಲ್ಲ. ಇಬ್ಬರೂ ಸ್ಕೂಬಾ ಡೈವಿಂಗ್ ಡ್ರೆಸ್ ಧರಿಸಿ ಶಾರ್ಕ್ ಟ್ಯಾಂಕ್‌ಗೆ ಇಳಿದಾಗ, ಸಿಬ್ಬಂದಿ ಅವರನ್ನು ಉಳಿದ ಗ್ರೂಪ್‌ನಿಂದ ಸ್ವಲ್ಪ ಪಕ್ಕಕ್ಕೆ ಕರೆದೊಯ್ದರು.
ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!
ನೀರಿನ ಅಡಿಯಲ್ಲಿ ಜೇಮ್ಸ್ ಮಂಡಿಯೂರಿ ನಿಂತಾಗ, ಅಕ್ವೇರಿಯಂ ಸಿಬ್ಬಂದಿ ನನ್ನನ್ನು ಮದುವೆಯಾಗುತ್ತೀಯಾ? ಎಂದು ಬರೆದಿದ್ದ ಬೋರ್ಡ್ ತಂದು ತೋರಿಸಿದ್ದಾರೆ. ಇದನ್ನು ಕಂಡು ತಬ್ಬಿಬ್ಬಾದ ಕುಕ್ ನೀರಿನ ಅಡಿಯಲ್ಲೇ ಓಕೆ ಎಂದು ಹ್ಯಾಂಡ್ ಸಿಗ್ನಲ್ ಮೂಲಕ ತಮ್ಮ ಸಮ್ಮತಿಯನ್ನು ಸೂಚಿಸಿದರು. ನಂತರ ಇಬ್ಬರೂ ನೀರಿನಲ್ಲೇ ಪರಸ್ಪರ ಅಪ್ಪಿಕೊಂಡಿದ್ದಾರೆ.
ಶಾರ್ಕ್‌ಗಳು ಕುಕ್‌ನ ನೆಚ್ಚಿನ ಪ್ರಾಣಿಗಳಾಗಿರುವುದರಿಂದ, ನೀರೊಳಗಿನ ಪ್ರಪೋಸಲ್ ಈ ಸಂದರ್ಭವನ್ನು ಸ್ಮರಣೀಯವಾಗಿಸಿದೆ. ಈ ವಿಶೇಷ ಕ್ಷಣದ ಬಗ್ಗೆ ಮಾತನಾಡಿದ ಕುಕ್, ʼʼಇದು ನನ್ನ ಜೀವನದ ಅತ್ಯುತ್ತಮ ದಿನ. ಈ ಪ್ರಪೋಸಲ್‌ನಿಂದಾಗಿ ನಾನು ಅಕ್ವೇರಿಯಂ ಒಳಗಿದ್ದೇನೆ ಎಂಬುದನ್ನೇ ಮರೆತುಬಿಟ್ಟಿದ್ದೆʼʼ ಎಂದು ಖುಷಿ ವ್ಯಕ್ತ ಪಡಿಸಿದ್ದಾರೆ.