Viral Video: ನೂಕಾಟ-ತಳ್ಳಾಟದ ನಡುವೆಯೇ ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಬ್ಬಿಕೊಂಡ ಕಿಡಿಗೇಡಿ- ಶಾಕಿಂಗ್ ವಿಡಿಯೊ ವೈರಲ್
Viral Video: ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಅನುಚಿತವಾಗಿ ತಬ್ಬಿ ಹಿಡಿದಿರುವ ಘಟನೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ನಾಗ್ಪುರದಲ್ಲಿ ನಡೆದಿದೆ. ಈ ಕುರಿತು ಗಣೇಶಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.


ನಾಗ್ಪುರ: ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು (Police officer) ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಅನುಚಿತವಾಗಿ ತಬ್ಬಿ ಹಿಡಿದಿರುವ ಘಟನೆಯ ವಿಡಿಯೊವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಈ ಘಟನೆ ನಾಗ್ಪುರದಲ್ಲಿ ನಡೆದಿದೆ. ಈ ಕುರಿತು ಗಣೇಶಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ. ಮಹಿಳೆ ಪೊಲೀಸ್ ಅಧಿಕಾರಿಯಾಗಿದ್ದರೂ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವಂತ ವಿಡಿಯೊ ಇದಾಗಿದೆ ಎಂಬುದಾಗಿ ಅನೇಕರು ಕಾಮೆಂಟ್ ಮಾಡಿದ್ದಾರೆ.
ಪೊಲೀಸರ ತಂಡವು ಪ್ರತಿಭಟನೆಯಲ್ಲಿ ತೊಡಗಿದ್ದವರನ್ನು ಬಂಧಿಸಲು ಮುಂದಾದಾಗ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಒಬ್ಬ ವ್ಯಕ್ತಿ ಹಿಂದಿನಿಂದ ಅನುಚಿತವಾಗಿ ಹಿಡಿದಿದ್ದಾನೆ. ಕೂಡಲೇ ಇದನ್ನು ವಿರೋಧಿಸಿದ ಮಹಿಳಾ ಅಧಿಕಾರಿ ಆತನಿಗೆ ಬಾರಿಸಿ ಪೊಲೀಸ್ ವ್ಯಾನ್ ಕಡೆಗೆ ಎಳೆದೊಯ್ಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆ ವೇಳೆ ಒಬ್ಬ ವ್ಯಕ್ತಿ ಪೊಲೀಸ್ ಅಧಿಕಾರಿಗಳನ್ನು ವಿರೋಧಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಬ್ಬ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ವಿಡಿಯೊದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯು ತನ್ನನ್ನು ಅನುಚಿತವಾಗಿ ಹಿಡಿದ ವ್ಯಕ್ತಿ ವಿರುದ್ಧ ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಯು ಅವನ ಕೈಯನ್ನು ಬಲವಾಗಿ ಹಿಡಿದು ವ್ಯಾನ್ ಒಳಗೆ ಎಳೆದೊಯ್ದರು.
ಕಿಡಿಗೇಡಿಯ ಹೀನ ಕೃತ್ಯದ ವಿಡಿಯೊ ಇಲ್ಲಿದೆ
ಬಿಜೆಪಿ ಕಾಮುಕರ ಪಾರ್ಟಿ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?
— Sikandar - ಸಿಕಂದರ್ 🇮🇳 (@SikkuTweets) April 8, 2025
ಮಹಿಳಾ ಪೊಲೀಸ್ ಸಿಬ್ಬಂದಿಯ ಸೊಂಟಕ್ಕೆ ಕೈ ಹಾಕುವ ಈ ಬಿಜೆಪಿಗನನ್ನು ಒಮ್ಮೆ ನೋಡಿ.
ಬಿಜೆಪಿಗರ ಕೆಟ್ಟ ದೃಷ್ಟಿಯಿಂದ ಹೆಣ್ಣುಮಕ್ಕಳನ್ನು ಕಾಪಾಡಲು ಇರುವ ಒಂದೇ ಮಾರ್ಗ ಅಂದ್ರೆ ಎಲ್ಲಾ ಹೆಣ್ಣು ಮಕ್ಕಳು ತಮ್ಮ ತಮ್ಮ ಬ್ಯಾಗ್ನಲ್ಲಿ ತ್ರಿಶೂಲ ಇಟ್ಕೊಬೇಕು.#ಕಾಮುಕಬಿಜೆಪಿ pic.twitter.com/81vsnJt7SP
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ ಅನೇಕ ಬಳಕೆದಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮತ್ತು ನಡವಳಿಕೆಯನ್ನು ಖಂಡಿಸಿದರು. ಒಬ್ಬರು ಕಾಮೆಂಟ್ ನಲ್ಲಿ "ಏನು ನರಕ….!!! ಇದು ಹೇಗೆ ಸಾಧ್ಯ ???" ಎಂದು ಹೇಳಿದ್ದರೆ ಇನ್ನೊಬ್ಬರು, "ಮಹಿಳಾ ಪೊಲೀಸರು ಸಹ ದೌರ್ಜನ್ಯದಿಂದ ಸುರಕ್ಷಿತವಾಗಿಲ್ಲ!" ಎಂದು ಹೇಳಿದ್ದಾರೆ.
ಮತ್ತೊಬ್ಬ, ಇದು ಉದ್ದೇಶಪೂರ್ವಕವಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಮತ್ತೊಬ್ಬರು, ಅಲ್ಲಿ ಒಂದು ಕ್ಯಾಮರಾ ಇದೆ. ಅವನು ಅವಳನ್ನು ಪುರುಷ ಪೊಲೀಸ್ ಅಧಿಕಾರಿ ಎಂದು ಭಾವಿಸಿರಬಹುದು. ಒಂದು ವೇಳೆ ಅವನಿಗೆ ತಿಳಿದಿದ್ದರೂ ಸಹ ಅವನು ಯಾವುದೇ ಆಕ್ಷೇಪಾರ್ಹ ಪ್ರದೇಶದಲ್ಲಿ ತನ್ನ ಕೈಗಳನ್ನು ಇಡಲಿಲ್ಲ. ಅವನು ಮಾಧ್ಯಮಗಳಿಗೆ ಪೋಸ್ ನೀಡಲು ಸಂಪೂರ್ಣ ತಂತ್ರವನ್ನು ಮಾಡಿರಬಹುದು. ಪೊಲೀಸರನ್ನು ಹಿಡಿದಿಟ್ಟು ತಮ್ಮವರನ್ನು ಉಳಿಸಲು ಅವನು ಪ್ರಯತ್ನಿಸಿದ್ದಾನೆ. ಅವನ ಮುಖ್ಯ ಉದ್ದೇಶ ಮಾಧ್ಯಮಗಳಿಗೆ ಪೋಸ್ ನೀಡುವುದು. ಆದರೆ ಅವನ ಅದೃಷ್ಟಕ್ಕೆ ಬೇರೆ ವಿಷಯಗಳತ್ತ ಹೋಗಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Seema Haider: ಪಾಕಿಸ್ತಾನದಿಂದ ಭಾರತಕ್ಕೆ ಓಡಿಬಂದಿದ್ದ ಸೀಮಾ ಹೈದರ್ ಮಗಳಿಗೆ 'ಭಾರತಿ ಮೀನಾ' ಎಂದು ನಾಮಕರಣ
ಈ ಘಟನೆ ನಾಗ್ಪುರದಲ್ಲಿ ಸಂಭವಿಸಿದೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ನಾಗ್ಪುರದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಸಮಯದಲ್ಲಿ ಗಲಭೆಕೋರರ ಗುಂಪೊಂದು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದೆ ಎಂದು ಗಣೇಶಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಆರೋಪಿಯು ಮಹಿಳಾ ಅಧಿಕಾರಿಯ ಬಟ್ಟೆಗಳನ್ನು ಎಳೆದು ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸಿರುವುದು ಎಫ್‌ಐಆರ್ ನಲ್ಲಿ ದಾಖಲಿಸಲಾಗಿದೆ. ಮಹಿಳಾ ಅಧಿಕಾರಿಯ ಆರೋಪದ ಬಳಿಕ ಪ್ರಕರಣ ದಾಖಲಿಸಲಾಗಿದೆ.