ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೀಚ್‌ನಲ್ಲಿ ಬರಿಗಾಲಿನಲ್ಲಿ ನಡೆಯೋದೆ ಡೇಂಜರ್‌? ತಟದಲ್ಲಿ ಕಂಡು ಬಂತು ರಾಶಿ ರಾಶಿ ಗಾಜಿನ ಚೂರುಗಳು, ವಿಡಿಯೋ ನೋಡಿ

Viral News: ಗೋವಾ ಬೀಚ್ ನಲ್ಲಿ ನಡೆದ ಅಘಾತಕಾರಿ ಘಟನೆಯೊಂದನ್ನು ಯೂಟ್ಯೂಬರ್ ಒಬ್ಬರು ಬಿಚ್ಚಿಟ್ಟಿದ್ದಾರೆ. ಪ್ರಸಿದ್ಧ ತಂತ್ರಜ್ಞಾನ ಯೂಟ್ಯೂಬರ್ ಗೀಕಿ ರಂಜಿತ್ ಅವರು ವಾಕಿಂಗ್ ಮಾಡುತ್ತಿದ್ದಾಗ ಮರಳಿನಲ್ಲಿ ಹಾಗೂ ನೀರಿನ ಅಡಿಯಲ್ಲಿ ಬಿದ್ದಿದ್ದ ಹಲವಾರು ಒಡೆದ ಮದ್ಯದ ಬಾಟಲಿಗಳ ಗಾಜಿನ ಚೂರುಗಳು ಕಾಲಿಗೆ ಅಂಟಿಕೊಂಡಿವೆ. ಈ ಕಹಿ ಅನುಭವ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ...

ಗೋವಾ ಬೀಚ್‌ನಲ್ಲಿ ಗಾಜಿನ ಚೂರುಗಳ ರಾಶಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಯುವಕ

ಗೋವಾ ಬೀಚ್‌ನಲ್ಲಿ ಕಂಡು ಬಂದ ಗಾಜಿನ ಚೂರುಗಳ ರಾಶಿ -

Profile
Pushpa Kumari Jun 9, 2026 2:42 PM

ಗೋವಾ ,ಜೂ‌.9: ಇತ್ತೀಚೆಗೆ ಪ್ರವಾಸಿ ಸ್ಥಳದಲ್ಲಿ ಜನರು ನಾಗರಿಕ ಪ್ರಜ್ಞೆಯನ್ನು ಮರೆಯುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಎಸೆಯುವುದು, ಶಿಸ್ತು ಕಾಪಾಡದೇ ಇರುವುದು ಹೀಗೆ ಅನೇಕ ಘಟನೆಗಳು ವರದಿಯಾಗುತ್ತಿವೆ.. ಇದಕ್ಕೆ ಪ್ರತಿಕೂಲವಾಗಿ ಗೋವಾ ಬೀಚ್ ನಲ್ಲಿ ನಡೆದ ಅಘಾತಕಾರಿ ಘಟನೆ ಯೊಂದನ್ನು ಯೂಟ್ಯೂಬರ್ ಒಬ್ಬರು ಬಿಚ್ಚಿಟ್ಟಿದ್ದಾರೆ. ಪ್ರಸಿದ್ಧ ತಂತ್ರಜ್ಞಾನ ಯೂಟ್ಯೂಬರ್ ಗೀಕಿ ರಂಜಿತ್ ಅವರು ವಾಕಿಂಗ್ ಮಾಡುತ್ತಿದ್ದಾಗ ಮರಳಿನಲ್ಲಿ ಹಾಗೂ ನೀರಿನ ಅಡಿಯಲ್ಲಿ ಬಿದ್ದಿದ್ದ ಹಲವಾರು ಒಡೆದ ಮದ್ಯದ ಬಾಟಲಿಗಳ ಗಾಜಿನ ಚೂರುಗಳು ಕಾಲಿಗೆ ಅಂಟಿಕೊಂಡಿವೆ. ಈ ಕಹಿ ಅನುಭವ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದಾರೆ.

ಬೀಚ್ ನಲ್ಲಿ ನಡಿಗೆಯ ಸಮಯದಲ್ಲಿ ಮರಳಿನಲ್ಲಿ ಹೂತುಹಾಕಲಾದ ಹಲವಾರು ಒಡೆದ ಗಾಜಿನ ತುಂಡುಗಳನ್ನು ಕಂಡುಕೊಂಡಿದ್ದಾರೆ. ಇದು ಸಾರ್ವಜನಿಕರಲ್ಲಿ ನಾಗರಿಕ ಪ್ರಜ್ಞೆಯ ಕೊರತೆಯ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕುವಂತೆ ಮಾಡಿದೆ. ಮರಳಿನಲ್ಲಿ ಹಾಗೂ ನೀರಿನ ಅಡಿಯಲ್ಲಿ ಹಲವಾರು ಒಡೆದ ಮಧ್ಯದ ಬಾಟಲಿ ಹಾಗೂ ಗಾಜಿನ ಚೂರು ಕಂಡು ಬಂದಿವೆ.



ಇಂತಹ ಕೃತ್ಯ ಮೆರೆಯುವ ಜನರು ಯಾಕೆ ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ? ಇಷ್ಟು ಸುಂದರ ಪ್ರದೇಶವನ್ನು ಯಾಕೆ ವಿನಾಶದಾಚೆ ತಳ್ಳುತ್ತಿದ್ದಾರೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಬರಿ ಗಾಲಿನಲ್ಲಿ ನಡೆಯುವ ಪ್ರವಾಸಿಗರಿಗೆ ಹಾಗೂ ಮಕ್ಕಳಿಗೆ ಇದರಿಂದ ತೀವ್ರ ಗಾಯ ಉಂಟಾಗಬಹುದು. ಅವರು, ಅಲ್ಲಿದ್ದ ಇತರರ ಸಹಾಯದೊಂದಿಗೆ ಸುಮಾರು 8 ರಿಂದ 9 ಗಾಜಿನ ಚೂರುಗಳನ್ನು ಸ್ವತಃ ಹೆಕ್ಕಿ ತೆಗಿದಿದ್ದಾರೆ

Viral News: ಶ್ರಾದ್ಧದ ದಿನ ಭಜನೆ ಬದಲು ರಾತ್ರಿಯಿಡೀ ನಡೆದದ್ದು ಅಶ್ಲೀಲ ನೃತ್ಯ

ಇದು ಗೋವಾದಲ್ಲಿ ಕಂಡು ಬಂದ ದೃಶ್ಯ, ಮೊರ್ಜಿಮ್ ಬೀಚ್‌ನಲ್ಲಿ ಬೆಳಿಗ್ಗೆ ನಡೆಯುತ್ತಿದ್ದಾಗ ಕಡಲತೀರದಲ್ಲಿ ಹಲವಾರು ಒಡೆದ ಗಾಜಿನ ಬಾಟಲಿಗಳ ತುಂಡುಗಳು ಕಂಡುಬಂದವು, ನಾವು 8-9 ತುಂಡುಗಳನ್ನು ತೆಗೆದುಕೊಂಡೆವು, ಜನರಿಗೆ ಏನಾಗಿದೆ ಎಂದು ನನಗೆ ತಿಳಿದಿಲ್ಲ. ನಾಗರಿಕ ಪ್ರಜ್ಞೆ ಎಲ್ಲಿದೆ? ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ. ಪ್ರವಾಸಿ ತಾಣಗಳಲ್ಲಿ ಜನರು ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದಿರುವ ಸಮಸ್ಯೆಯನ್ನು ಬಗೆಹರಿಸಲು ಹೆಚ್ಚಿನವರು ಮನವಿ ಮಾಡಿದ್ದಾರೆ.

ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ಇದು ದೇಶ ಎದುರಿಸುತ್ತಿರುವ ಮೂಲಭೂತ ಸಮಸ್ಯೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಶಾಲೆಯಲ್ಲಿ ವರ್ಣಮಾಲೆ ಕಲಿಸುವ ಮೊದಲು ಈ ನಾಗರಿಕ ಪ್ರಜ್ಞೆಯನ್ನು ಕಲಿಸಬೇಕು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.