ಬೆಂಗಳೂರಿನಲ್ಲಿ ಮನೆ ಬಾಡಿಗೆ ಕೇಳಿ ಸುಸ್ತೋ ಸುಸ್ತು! ಸ್ಟಾರ್ಟ್‌ಅಪ್ ಓನರ್ ರಿಯಾಕ್ಷನ್ ಹೇಗಿತ್ತು?
Viral News: ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರು ಬೆಂಗಳೂರಿನ ಬಾಡಿಗೆ ವೆಚ್ಚದ ಬಗ್ಗೆ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್ ಗಳ ಸ್ಕ್ರೀನ್‌ಶಾಟ್‌ಗಳನ್ನು ಅವರು ಹಂಚಿಕೊಂಡಿದ್ದು ತನಗೆ ನಿಜಕ್ಕೂ ಶಾಕ್ ಆಯಿತು. ತಿಂಗಳಿಗೆ 2.75 ಲಕ್ಷ ರೂ., 3.1 ಲಕ್ಷ ರೂ. ಹಾಗೂ ಅದಕ್ಕಿಂತಲೂ ಅಧಿಕ ಬಾಡಿಗೆಯನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.
ಬೆಂಗಳೂರಿನ ಬಾಡಿಗೆ ದರ ಕೇಳಿ ದಂಗಾದ ಸ್ಟಾರ್ಟ್‌ಅಪ್ ಸಂಸ್ಥಾಪಕ -
ಬೆಂಗಳೂರು,ಜೂ.13: ಸಿಲಿಕಾನ್ ಸಿಟಿ ದುಬಾರಿ ಬಾಡಿಗೆ ವೆಚ್ಚದ ಬಗ್ಗೆ ದಿನ ನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತವೆ. ಅದರಲ್ಲೂ ಸಾಮಾನ್ಯ ಜನರು ಇಲ್ಲಿ ಜೀವನ ನಿಭಾಯಿಸುವುದು ಕಷ್ಟ. ಇದೀಗ ಸ್ಟಾರ್ಟ್‌ಅಪ್ ಸಂಸ್ಥಾಪಕ ರೊಬ್ಬರು ಬೆಂಗಳೂರಿನ ಬಾಡಿಗೆ ವೆಚ್ಚದ ಬಗ್ಗೆ ಪೋಸ್ಟ್ ವೊಂದನ್ನು ಶೇರ್ (Viral News) ಮಾಡಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್ ಗಳ ಸ್ಕ್ರೀನ್‌ಶಾಟ್ ಗಳನ್ನು ಅವರು ಹಂಚಿಕೊಂಡಿದ್ದು ತನಗೆ ನಿಜಕ್ಕೂ ಶಾಕ್ ಆಯಿತು. ತಿಂಗಳಿಗೆ 2.75 ಲಕ್ಷ ರೂ., 3.1 ಲಕ್ಷ ರೂ. ಹಾಗೂ ಅದಕ್ಕಿಂತಲೂ ಅಧಿಕ ಬಾಡಿಗೆಯನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿಗೆ ಉದ್ಯೋಗ ಹರಸಿ ಬಂದವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇಲ್ಲಿ ಬದುಕು ಕಟ್ಟಿಕೊಳ್ಳಲು ಜನಸಂಖ್ಯೆ ಹೆಚ್ಚುತ್ತಿದ್ದಂತೆ ಇಲ್ಲಿನ ವೆಚ್ಚಗಳು ಕೂಡ ದುಬಾರಿಯಾಗುತ್ತಿದೆ.ಇದೀಗ ಸ್ಟಾರ್ಟ್‌ಅಪ್ ಸಂಸ್ಥಾಪಕರ ಪೋಸ್ಟ್ ಒಂದು ಭಾರಿ ಚರ್ಚೆಗೆ ಗ್ರಾಸವಾಗಿದ್ದು, ನಗರದ ಬಾಡಿಗೆ ವೆಚ್ಚಗಳನ್ನು ಕೇಳಿ ಅವರು ಆಶ್ಚರ್ಯ ಪಟ್ಟಿದ್ದಾರೆ.
A founder friend was house hunting in Bangalore recently around march, and has been complaining about rentals ever since. I didn’t believe him. So he shared screenshots. 2.75 lac per month, 3.1 lac per month and more. pic.twitter.com/CzPydGN8e9
— ujjawal (@ujjawalasthana) June 11, 2026
ಉಜ್ವಲ್ ಅಸ್ತಾನಾ ಎಂಬ ಸ್ಟಾರ್ಟ್‌ಅಪ್ ಸಂಸ್ಥಾಪಕರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಸ್ನೇಹಿತರೊಬ್ಬರು ಮಾರ್ಚ್ ನಿಂದ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದರು. ಅಂದಿನಿಂದ ಅವರು ಇಲ್ಲಿನವೆರೆಗೆ ಬಾಡಿಗೆ ದರಗಳ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಿದ್ದರು. ಆರಂಭದಲ್ಲಿ ನಾನು ಅದನ್ನು ನಂಬಲಿಲ್ಲ. ಆದರೆ ಅವರು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಾಗ ನಿಜಕ್ಕೂ ನೋಡಿ ದಂಗಾದೆ. ತಿಂಗಳಿಗೆ 2.75 ಲಕ್ಷ ರೂ., 3.1 ಲಕ್ಷ ರೂ. ಹಾಗೂ ಅದಕ್ಕಿಂತಲೂ ಅಧಿಕ ಬಾಡಿಗೆಯನ್ನು ಕೇಳಲಾಗುತ್ತಿದೆ.
ಸ್ಕ್ರೀನ್‌ಶಾಟ್‌ಗಳಲ್ಲಿ ಹೆಬ್ಬಾಳದಲ್ಲಿ 4,440 ಚದರ ಅಡಿ ವಿಸ್ತೀರ್ಣದ ಸೂಪರ್ ಬಿಲ್ಟ್-ಅಪ್ ವಿಸ್ತೀರ್ಣ ಹೊಂದಿರುವ 4 BHK ಅಪಾರ್ಟ್‌ಮೆಂಟ್ ಸೇರಿದೆ..ಇದಕ್ಕೆ ತಿಂಗಳಿಗೆ 3.10 ಲಕ್ಷ ರೂ. ಬಾಡಿಗೆ, 2,200 ಚದರ ಅಡಿ ವಿಸ್ತೀರ್ಣದ ಅಪಾರ್ಟ್ ಮೆಂಟ್‌ಗೆ ತಿಂಗಳಿಗೆ 2 ಲಕ್ಷ ರೂ. ಬಾಡಿಗೆ ಕೇಳಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಈ ದರ 2 ರಿಂದ 3 ಲಕ್ಷ ರೂಪಾಯಿಗಳವರೆಗೆ ಇದೆ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಹರಡುತ್ತಿದ್ದಂತೆ, ಬಳಕೆದಾರರು ಮಿಶ್ರ ಪ್ರತಿಕ್ರಿಯೆಗಳನ್ನು ಹಂಚಿಕೊಂಡರು. ಆದರೆ ನೆಟ್ಟಿಗರು ಈ ದರವನ್ನು ಸಮರ್ಥಿಸಿಕೊಂಡಿದ್ದು ಬೆಂಗಳೂರಿನಲ್ಲಿ ಪ್ರೀಮಿಯಂ ವಸತಿಗಳಿಗೆ ಈ ದರ ಸಮಂಜಸವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ನೀವು ಇಷ್ಟಕ್ಕೆ ದುಬಾರಿ ಹೇಳ ಬೇಡಿ ಒಮ್ಮೆ ಅಲ್ಲಿನ ಅಡ್ವಾನ್ಸ್ ಎಷ್ಟು ಅಂತ ಕೇಳಿ ನೋಡಿ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ಮುಂಬೈ ಗೆ ಹೋಲಿಕೆ ಮಾಡಿದರೆ ಈ ದರ ಕಡಿಮೆ ಎಂದು ಕಾಮೆಂಟ್ ಮಾಡಿದ್ದಾರೆ.