ಬೇಡ್ತಿ ನದಿ: ತಿರುವು ಎಂಬ ವ್ಯರ್ಥ ಕಸರತ್ತು !
ಬತ್ತಿ ಹೋದ ಬಾವಿಗಳು, ನೀರಿನ ಕುರುಹೇ ಇಲ್ಲದ ಹೊಳೆಗಳು, ಒಣಗಿ ಹೋದ ಅಡಿಕೆ-ತೆಂಗಿನ ಮರಗಳು, ಮನೆಯ ಗೇಟಿನ ಮುಂದೆ ಗ್ರಾಮ ಪಂಚಾಯಿತಿ ನೀರಿಗಾಗಿ ಕಾದಿರುವ ಖಾಲಿ ಕೊಡಗಳ ಸಾಲು... ಇದು ಉತ್ತರ ಕರ್ನಾಟಕ ಅಥವಾ ಬಯಲು ಸೀಮೆಯ ದೃಶ್ಯವಲ್ಲ. ಪಶ್ಚಿಮ ಘಟ್ಟದ ಸಾಲು ಮತ್ತು ಹಲವಾರು ನದಿಗಳ ಬೀಡಾಗಿರುವ ಉತ್ತರ ಕನ್ನಡದ ಹಲವು ಪ್ರದೇಶಗಳ ಸ್ಥಿತಿ!