ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

N S Sridharamurthy Column: ನಮ್ಮ ಚಾಮಯ್ಯ ಮೇಷ್ಟ್ರು

ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಿಗೆ ಘನತೆ ತಂದು ಕೊಟ್ಟು, ಹಿರಿತನಕ್ಕೆ ಭಾಷ್ಯ ಬರೆದು ‘ನಾಗರ ಹಾವು’ ಚಿತ್ರದ ಚಾಮಯ್ಯ ಮೇಷ್ಟ್ರ ಪಾತ್ರದ ಮೂಲಕ ಕನ್ನಡಿಗರ ಮನದಲ್ಲಿ ಸದಾ ಹಸಿರಾಗಿರುವವರು ಕೆ.ಎಸ್.ಅಶ್ವಥ್. ಪೋಷಕ ನಟ ಪಾತ್ರಗಳಿಗೆ ಅವರು ಜೀವತುಂಬುವ ಪರಿ ಯಾವ ರೀತಿ ಇರುತ್ತಿತ್ತೆಂದರೆ, ಅವರ ಅಭಿನಯದ ಎದುರು ಕೆಲವು ಬಾರಿ ಮುಖ್ಯ ನಟನೇ ಸಪ್ಪೆ ಎನಿಸುತ್ತಿದ್ದರು! ಜತೆಗೆ, ಕೆ.ಎಸ್. ಅಶ್ವಥ್ ಅವರು ಪೋಷಕನಟ ನಾಗಿ ಅಭಿನಯಿಸಿದರು, ಎಂದರೆ, ನಾಯಕ ನಟನ ವರ್ಚಸ್ಸು ಹೆಚ್ಚು ತ್ತಿತ್ತು. ಹಲವು ಚಲನಚಿತ್ರಗಳ ಯಶಸ್ಸಿಗೆ ಪೋಷಕನಟರಾಗಿ ಕೆ.ಎಸ್.ಅಶ್ವಥ್ ಅವರ ಮನೋಜ್ಞ ಅಭಿನಯದ ಕೊಡುಗೆ ಅಪಾರ.

ನಮ್ಮ ಚಾಮಯ್ಯ ಮೇಷ್ಟ್ರು

Profile Ashok Nayak Mar 23, 2025 9:32 AM

ಎನ್.ಎಸ್.ಶ್ರೀಧರ ಮೂರ್ತಿ ಹುಟ್ಟಿದ್ದು ಹೊಳೆನರಸೀಪುರದ ಸಮೀಪವಿರುವ ಕರಗನಹಳ್ಳಿ. ತಂದೆ ಪುರೋಹಿತ ಸುಬ್ರಾಯಪ್ಪ. ಹುಟ್ಟಿದ ಎರಡೇ ವರ್ಷಕ್ಕೆ ತಾಯಿಯನ್ನು ಕಳೆದು ಕೊಂಡರು. ಇವರು ಹುಟ್ಟಿದಾಗ ತಂದೆಗೆ ಆಗಲೇ ಐವತ್ತು ವರ್ಷ, ನಾಲ್ಕು ಹೆಣ್ಣು ಮಕ್ಕಳು ಬೆಳೆದು ದೊಡ್ಡವರಾಗಿದ್ದರು. ಒಂದು ಗಂಡು ಮಗು ಬೇಕು ಎನ್ನುವ ಹಂಬಲಕ್ಕೆ ಇವರು ಭುವಿಗೆ ಬಂದಿದ್ದರು. ಬೆಳೆದಿದ್ದು ಸ್ಕೂಲ್ ಟೀಚರ್ ಆಗಿದ್ದ ಸೋದರತ್ತೆ ತಿಪ್ಪಮ್ಮನ ಆಶ್ರಯದಲ್ಲಿ. ಆಗಲೇ ಸಿನಿಮಾ ಹುಚ್ಚು, ‘ಹಂಟರ್ ವಾಲಿ’ ನೋಡಿ ಅನುಕರಿಸಲು ಹೋಗಿ ಬೆನ್ನು ಮುರಿದು ಕೊಂಡಿದ್ದೂ ಇದೆ. ಕ್ವಿಟ್ ಇಂಡಿಯಾ ಚಳುವಳಿ ಅವರ ವಿದ್ಯಾಭ್ಯಾಸಕ್ಕೆ ವಿರಾಮ ಹಾಕಿತು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಯಲ್ಲಿ ಗುಮಾಸ್ತರಾಗಿ ಉದ್ಯೋಗ ಪಡೆದರು. ಸೋದರತ್ತೆಯ ಮಗಳು ಶಾರದಾ ಅವರ ಜೊತೆ ವಿವಾಹವೂ ಆಯಿತು.

ಅಭಿನಯ ‘ಹವ್ಯಾಸಿ ಕಲಾವಿದರ’ ತಂಡದ ಮೂಲಕ ಒಂದು ರೂಪವನ್ನು ಪಡೆಯಿತು. ಇವರ ಅಭಿನಯ ಕಂಡು ಕೆ.ಸುಬ್ರಹ್ಮಣ್ಯಂ ತಮ್ಮ ‘ಸ್ತ್ರೀ ರತ್ನ’ ಚಿತ್ರದಲ್ಲಿ ನಾಯಕನ ಪಾತ್ರ ಕೊಟ್ಟರು. ಶಿವಶರಣೆ ನಂಬಿಯಕ್ಕ, ಕೋಕಿಲ ವಾಣಿ ಎರಡು ಚಿತ್ರಗಳು ಒಟ್ಟೊಟ್ಟಿಗೇ ಸಿಕ್ಕವು. ಬಣ್ಣದ ಬದುಕು ಸೆಳೆಯಿತು. ಅವಕಾಶ ಹುಡುಕಿ ಮದ್ರಾಸಿಗೆ ಹೊರಟೇ ಬಿಟ್ಟರು. ಹೆಂಡತಿಗೆ ಹೇಳದೆ ಸರ್ಕಾರಿ ಉದ್ಯೋಗವನ್ನೂ ಬಿಟ್ಟರು. ಅಡ್ವಾನ್ಸ್ ಕೊಟ್ಟು ಇರಲು ಒಂದು ಕೋಣೆಯನ್ನು ಪಡೆದರು. ಬೆಳಗ್ಗೆ ತಿಂಡಿಗಾಗಿ ಖರೀದಿಸಿದ ಇಡ್ಲಿ ಜೊತೆ ಕೊಟ್ಟ ಸಾಂಬಾರ್ ಉಳಿಸಿ, ರಾತ್ರಿಗೆ ಅನ್ನ ಬೇಯಿಸಿಕೊಂಡು ಬೆಳಗಿನ ಸಾಂಬಾರ್ ಬಳಸಿ ಊಟ. ಕೆಲವು ಸಲ ಅದೂ ಇಲ್ಲ. ಮಧ್ಯಾಹ್ನವ ಊಟವಂತೂ ಇಲ್ಲವೇ ಇಲ್ಲ. ಅವಕಾಶಕ್ಕೆ ಮದ್ರಾಸಿನ ಬೀದಿಗಳನ್ನು ಅಲೆದು ಚಪ್ಪಲಿ ಸವೆಯಿತು. ಕಿತ್ತು ಹೋದರೆ ಇನ್ನೊಂದು ಚಪ್ಪಲಿ ಕೊಳ್ಳಲೂ ಹಣವಿಲ್ಲ.

ಇದನ್ನೂ ಓದಿ: Sandalwood News: ಕಿಚ್ಚ ಸುದೀಪ್‌ ನಿರ್ಮಾಣದ ಹೊಸ ಸಿನಿಮಾಕ್ಕೆ ಅಳಿಯ ಸಂಚಿತ್‌ ಸಂಜೀವ್‌ ನಾಯಕ!

ಹೀಗಿರುವಾಗ ಹೆಂಡತಿ ಪತ್ರ ಬರೆಯುತ್ತಲೇ ಇದ್ದರು. ಯಾವುದಕ್ಕೂ ಉತ್ತರಿಸಲು ಧೈರ್ಯವಿಲ್ಲ. ಕೊನೆಗೆ ಹುಡುಕಿ ಕೊಂಡು ಬಂದೇ ಬಿಟ್ಟರು. ಅಶ್ವತ್ಥ್ ಸ್ಥಿತಿ ಕಂಡು ಕಣ್ಣೀರು ಹಾಕಿದರು. ಆಗಿನ ಕಾಲದಲ್ಲಿ ವರ್ಷಕ್ಕೆ ಕೇವಲ ಐದಾರು ಚಿತ್ರಗಳು ಕನ್ನಡ ನಿರ್ಮಾಣವಾಗುತ್ತಿದ್ದ ಕಾಲದಲ್ಲಿ ಚಿತ್ರ ರಂಗವನ್ನೇ ನಂಬಿ ಬದುಕುವುದು ಕನ್ನಡದ ನಟರಿಗೆ ಸುಲಭವಾಗಿರಲಿಲ್ಲ. ಆದರೆ ಅಶ್ವಥ್ ಅವರ ತಪಸ್ಸೇ ಅವರನ್ನು ಗೆಲ್ಲಿಸಿತು. ಆಗೀಗ ನಾಟಕಗಳನ್ನು ಮಾಡುತ್ತಾ ಬದುಕಿನಲ್ಲಿ ಗಟ್ಟಿಯಾದರು. ನಂದಾದೀಪ, ಬೆಳ್ಳಿ ಮೋಡಗಳಲ್ಲಿ ತಂದೆಯ ಪಾತ್ರ ಸಿಕ್ಕಿತು. ಕ್ರಮೇಣ ಅಂತಹ ಪಾತ್ರಗಳೇ ಖಾಯಂ ಆದವು. ಅಶ್ವಥ್ ನಿರಾಶರಾಗಲಿಲ್ಲ. ಸಿಕ್ಕ ಅವಕಾಶಗಳಿಗೆ ಜೀವ ತುಂಬಿದರು. ನ್ಯಾಯವೇ ದೇವರು, ಉಯ್ಯಾಲೆ, ಕಸ್ತೂರಿ ನಿವಾಸ, ಸರ್ವಮಂಗಳ, ನಾಗರ ಹಾವು ಹೀಗೆ ವೈವಿದ್ಯಮಯ ಪಾತ್ರಗಳ ಮೂಲಕ ಬೆಳೆಯುತ್ತಾ ಹೋದರು.

ಮಧ್ಯಮ ವರ್ಗದ ರೀತಿ ನೀತಿಗಳನ್ನು ಅವರು ಹತ್ತಿರದಿಂದ ಬಲ್ಲವರಾಗಿದ್ದರು. ಡಾ.ರಾಜ್ ಕುಮಾರ್ ಅವರ ಜೊತೆಗೆ ವಿಶೇಷ ಸಂಬಂಧ , ಅವರ ಜೋಡಿಯ ಪಾತ್ರಗಳದ್ದೇ ಒಂದು ಪರಂಪರೆ. ಅಶ್ವತ್ಥ್ ಅವರಿಗೆ ಡಾ.ರಾಜ್ ಕುಮಾರ್ ಪ್ರಶಸ್ತಿ ಬಂದಾಗ ‘ಅಶ್ವಥ್ ಎಂದರೆ ವಿಶ್ವಕೋಶವಿದ್ದಂತೆ.. ಅವರ ಹೆಸರಿನ ಪ್ರಶಸ್ತಿ ನನಗೆ ಬರಬೇಕಿತ್ತು, ನನ್ನ ಹೆಸರಿನ ಪ್ರಶಸ್ತಿ ಅವರಿಗೆ ಬಂದಿರುವುದು ನಿಜಕ್ಕೂ ವಿಪರ್ಯಾಸ’ ಎಂದು ಸ್ವತ: ರಾಜ್ ಕುಮಾರ್ ಅವರೇ ಹೃದಯ ತುಂಬಿ ಹೇಳಿದ್ದರು.

C S Ashwath ok

ನೋವಿನ ದಿನಗಳು

ಸಜ್ಜನಿಕೆಯ ಹಿನ್ನೆಲೆಯಿಂದ ಬಂದ ಅಶ್ವಥ್ ಅವರಿಗೆ ಚಿತ್ರರಂಗ ಪಡೆದು ಕೊಂಡ ತಿರುವು ನೋವ ನ್ನು ಕೊಟ್ಟಿತು. ಯಾವುದರಲ್ಲಿಯೂ ಬದ್ಧತೆ ಇಲ್ಲದೆ, ಹಿರಿತನಕ್ಕೆ ಗೌರವವಿಲ್ಲದೆ, ಹಿರಿಯ ಕಲಾ ವಿದರನ್ನು ನಡೆಸಿಕೊಳ್ಳುವುದು ಖೇದಕರ ಎನ್ನಿಸಿತು. ಇದನ್ನು ಕಂಡು ಒಂದು ಗಟ್ಟಿ ನಿರ್ಧಾರಕ್ಕೆ ಬಂದರು. 1996ರ ಜೂನ್ 1ರಂದು ಚಿತ್ರರಂಗಕ್ಕೆ ವಿದಾಯ ಹೇಳಿದರು. ಈ ಸುದ್ದಿ ಕೇಳಿ ಇಡೀ ನಾಡು ಬೆಚ್ಚಿ ಬಿದ್ದಿತು. ಅವರನ್ನು ಸಮಾಧಾನ ಪಡಿಸಲು ಹಲವರು ಪ್ರಯತ್ನಿಸಿದರು. ಆದರೆ ಅವರ ನಿರ್ಧಾರ ದೃಢವಾಗಿತ್ತು. ತಾವು ನಂಬಿದ ಮೌಲ್ಯಗಳು ಮುಖ್ಯ, ಆತ್ಮ ಗೌರವ ದೊಡ್ಡದು ಎಂದು ಕೊಂಡರು. ಮುಂದೆ ಆರು ವರ್ಷ ಬಣ್ಣದ ಬದುಕಿನಿಂದ ದೂರವೇ ಉಳಿದರು. ಆರ್. ಎನ್. ಜಯ ಗೋಪಾಲ್ ಅವರಿಗಾಗಿ ‘ಸ್ವಾತಿಮುತ್ತು’ ಧಾರಾವಾಹಿಯಲ್ಲಿ ಮತ್ತು ರಾಜ್‌ಕುಮಾರ್ ಅವರಿ ಗಾಗಿ ‘ಶಬ್ದವೇಧಿ’ ಚಿತ್ರದಲ್ಲಿ ಅಭಿನಯಿಸಿದರು. ಆದರೆ ಚಿತ್ರರಂಗದ ಅಪಸವ್ಯಗಳೊಂದಿಗೆ ಅಂತರ ವನ್ನು ಕಾಪಾಡಿಕೊಂಡೇ ಬಂದರು. ಒಟ್ಟು 352 ಚಿತ್ರಗಳಲ್ಲಿ ಅಭಿನಯಿಸಿದ ಅವರು ರಾಜ್‌ ಕುಮಾರ್ ಅವರ ಜೊತೆಗೇ 94 ಚಿತ್ರಗಳಲ್ಲಿ ಅಭಿನಯಿಸಿದರು.

ಗೌರವಗಳು

ನಮ್ಮ ಮಕ್ಕಳು (೧೯೬೮-೬೯), ನಾಗರಹಾವು (೧೯೭೨-೭೩) ಮುತ್ತಿನ ಹಾರ (೧೯೯೦-೯೧) ಚಿತ್ರಗಳಿಗೆ ಶ್ರೇಷ್ಟ ಪೋಷಕ ನಟ ಗೌರವ ಪಡೆದ ಅವರಿಗೆ ೧೯೮೧ನೆಯ ಸಾಲಿನಲ್ಲಿ ರಾಜ್ಯೋತ್ಸವ ಗೌರವ ಲಭಿಸಿತು; ಮತ್ತು ೧೯೯೩-೯೪ನೆಯ ಸಾಲಿಗೆ ಜೀವಮಾನ ದ ಸಾಧನೆಗಾಗಿ ಡಾ.ರಾಜ್ ಕುಮಾರ್ ಪ್ರಶಸ್ತಿಗೂ ಭಾಜನರಾದರು. ಇದಲ್ಲಕ್ಕಿಂತ ಮುಖ್ಯವಾಗಿ ಅವರು ಕನ್ನಡಿಗರ ಮನದಲ್ಲಿ ನೆಲೆ ನಿಂತಿರುವ ರೀತಿ ದೊಡ್ಡದು. ೨೦೧ರ ಜನವರಿ ೧೮ರಂದು ನಮ್ಮನ್ನು ಅಗಲಿದದರು. ಕನ್ನಡ ಚಿತ್ರ ರಂಗದ ಈ ಮೇರು ಸಾಧಕನನ್ನು, ಅವರ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ಕನ್ನಡಿ ಗರು ವಿಶೇಷವಾಗಿ ಸ್ಮರಿಸಿಕೊಳ್ಳಬೇಕಾಗಿದೆ.

C S Ashwath ok F

ಇವರು ಉಳ್ಳಾಗಡ್ಡಿ

ಕಾದಂಬರಿಕಾರ ಚದುರಂಗ ಅವರ ‘ಸರ್ವಮಂಗಳ’ ಚಿತ್ರದಲ್ಲಿ ಅಶ್ವಥ್ ಅವರದು ಸುಬ್ರಾಯಿ ಎನ್ನುವ ವಿಚಿತ್ರ ಪಾತ್ರ. ಎಂ.ಆರ್.ವಿಠಲ್ ಈ ಪಾತ್ರವನ್ನು ಅಶ್ವಥ್ ಮಾಡಲಾರರು ಎಂದಿದ್ದರು. ಶೂಟಿಂಗ್ ದಿವಸ ಬಂದು ನೋಡಿದರೆ ಕುರುಚಲು ಕ್ರಾ-, ಜಗ್ಗಿ ಬಿಗಿದಿರುವ ಜುಟ್ಟು, ಒರಟು ಹುಬ್ಬು, ಪೊರಕೆ ಮೀಸೆ, ಕೊಳಕು ಪಂಚೆಯ ವಿಚಿತ್ರ ವ್ಯಕ್ತಿ ಬಂದರು. ಚದುರಂಗ ‘ನೋಡಿ ಇವರು ಉಳ್ಳಾಗಡ್ಡಿ ಎಂದು ಉತ್ತರ ಕರ್ನಾಟಕ ರಂಗಭೂಮಿಯವರು. ಸುಬ್ರಾಯಿ ಪಾತ್ರಕ್ಕೆ ಆರಿಸಿದ್ದೇನೆ’ ಎಂದರು. ವಿಠಲ್ ಬಹಳ ಸಂತೋಷದಿಂದ ‘ಇದು ಸರಿಯಾದ ಆಯ್ಕೆ, ಅಶ್ವಥ್ ಕೈಯಿಂದ ಈ ಪಾತ್ರ ಖಂಡಿತಾ ಸಾಧ್ಯವಿರಲಿಲ್ಲ’ ಎಂದರು. ಆದರೆ, ಮುಂದೆ ಅವರೇ ಅಶ್ವಥ್ ಎಂದು ತಿಳಿದಾಗ ವಿಠಲ್ ನಿಜಕ್ಕೂ ಬೆರಗಾಗಿ ಹೋಗಿದ್ದರು. ‘ಶುಭಮಂಗಳ’ ಚಿತ್ರದಲ್ಲಿ ಪುಟ್ಟಣ್ಣ, ಅಶ್ವಥ್ ಅವರಿಗೆ ‘ನಿಮಗೇ ಆಯ್ಕೆ ಕೊಡ್ತೀನಿ ನನಗೆ ರಾಜ ಹಾಸ್ಯ ಬೇಕು’ ಎಂದರು. ಅಶ್ವಥ್ ಕ್ಷಣಕಾಲದಲ್ಲಿ ದೃಶ್ಯವನ್ನು ಸಂಯೋಜಿಸಿ ವೈದ್ಯನೇ ರೋಗಿಯಾಗುವ ಅಭಿನಯ ತೋರಿಸಿ ಎಲ್ಲರನ್ನೂ ಬೆರಗಾಗಿಸಿದ್ದರು. ‘ಪರಾಜಿತ’ ಚಿತ್ರದಲ್ಲಿ ಸಿದ್ದಲಿಂಗಯ್ಯನವರು ಖಳ ಪಾತ್ರ ಎಂದಾಗ ಕೊಂಚ ಹಿಂಜರೆದರೂ ಆ ಪಾತ್ರಕ್ಕೇ ಹೊಸ ಆಯಾಮವನ್ನು ನೀಡಿದ್ದರು.

ಕ್ರಿಕೆಟ್ ಮತ್ತು ಸಂಗೀತ

ಕೆ.ಎಸ್.ಅಶ್ವಥ್ ಅವರಿಗೆ ಬಹು ಪ್ರಿಯವಾದ ಎರಡು ಸಂಗತಿಗಳು ಕ್ರಿಕೆಟ್ ಮತ್ತು ಸಂಗೀತ. ಶೂಟಿಂಗ್ ನಡುವೆ ಸಮಯ ಸಿಕ್ಕರೆ ತಮ್ಮ ಚಿಕ್ಕ ಟ್ರಾನ್ಸಿಸಿಸ್ಟರ್‌ನಲ್ಲಿ ಒಂದೋ ಕಾಮೆಂಟರಿ ಕೇಳುತ್ತಿದ್ದರು, ಇಲ್ಲವೆ ಸಂಗೀತ ಕೇಳುತ್ತಿದ್ದರು. ಜಿ.ಆರ್.ವಿಶ್ವನಾಥ್ ಬ್ಯಾಟಿಂಗ್ ಎಂದರೆ ಪಂಚ ಪ್ರಾಣ. ಪತ್ರಿಕೆ ತೆಗೆದರೂ ಮೊದಲು ನೋಡುತ್ತಿದ್ದದ್ದು ಕ್ರಿಕೆಟ್ ಸುದ್ದಿಗಳನ್ನೇ! ಸಂಗೀತದಲ್ಲಿ ಅವರಿಗೆ ಸ್ವರ ಜ್ಞಾನ ಕೂಡ ಇತ್ತು. ಹಿಂದೂಸ್ತಾನಿ ಮತ್ತು ಕರ್ನಾಟಕಿ ಎರಡೂ ಪದ್ದತಿಗಳನ್ನು ಬಲ್ಲವರಾಗಿದ್ದರು.

ತ್ಯಾಗರಾಜರ ಪಂಚರತ್ನ ಕೀರ್ತನೆಗಳನ್ನು ಬಹಳ ಇಷ್ಟ ಪಡುತ್ತಿದ್ದರು. ಆರಭಿ, ಹಿಂದೋಳ, ಮೋಹನ, ಶುದ್ಧ ಸಾವೇರಿ ಅವರಿಗೆ ಪ್ರಿಯವಾದ ರಾಗಗಳು. ‘ಸನಾದಿ ಅಪ್ಪಣ್ಣ’ ಚಿತ್ರ ಬಂದ ನಂತರ ರಾಜ್ ಕುಮಾರ್ ಹಾಕಿಕೊಂಡ ಮಾದರಿಯ 5-6 ಜುಬ್ಬಗಳನ್ನು ಹೊಲಿಸಿ ಕೊಂಡಿದ್ದರು. ಊಟದಲ್ಲಿ ಕೂಡ ಶುಚಿ ಮತ್ತು ರುಚಿ ಎರಡೂ ಇರಬೇಕು. ಬಿಸಿಬೇಳೆ ಬಾತ್, ಚಿತ್ರಾನ್ನ, ಕೊಸಂಬರಿ, ಸಜ್ಜಿಗೆ ಅವರಿಗೆ ಪ್ರಿಯವಾದ ತಿನಿಸುಗಳು. ಬೆಳಗಿನ ಜಾವ ನಾಲ್ಕೂವರೆಯೊಳಗೆ ಕಾಫಿ ಆಗ ಬೇಕು. ಆಗುಂಬೆ ಯಲ್ಲಿ ಚಿತ್ರೀಕರಣದ ಸಮಯದಲ್ಲಿ, ಅಲ್ಲಿ ಹೋಟಲ್ ಇಲ್ಲದೆ ಎಲ್ಲಾ ಕಲಾವಿದರಿಗೂ ವಾಸ್ತವ್ಯ ಕಷ್ಟವಾಗಿತ್ತು. ಅಶ್ವಥ್ ಅವರನ್ನು ಅಭಿಮಾನಿಯೊಬ್ಬರು ತಮ್ಮ ಮನೆಯಲ್ಲಿ ಉಳಿಯುವಂತೆ ಆಹ್ವಾನಿಸಿದರು.

ಬೆಳಗಿನ ಕಾಫಿ ವಿಷಯ ಹೇಳಿದಾಗ ಅವರು ವ್ಯವಸ್ಥೆ ಮಾಡುವ ಆಶ್ವಾಸನೆ ಕೊಟ್ಟರು. ಮರುದಿನ ಅಭಿಮಾನಿಗಳು ಬೆಳಗಿನ ಜಾವ ನಾಲ್ಕು ಗಂಟೆಗೆ ಅಲಾರಾಂ ಇಟ್ಟು ಕಾಫಿ ಮಾಡಲು ಅಡುಗೆ ಮನೆಗೆ ಬಂದರೆ ಕಂಡಿದ್ದೇನು. ಅಶ್ವತ್ಥ್ ಆಗಲೇ ಎದ್ದು ಕಾಫಿ ಮಾಡಿ ಅಭಿಮಾನಿಗೂ ಒಂದು ಲೋಟ ಕಾಫಿ ಸಿದ್ಧಮಾಡಿಟ್ಟಿದ್ದರು!