ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Narayana yaji Column: ರಾಧಾಮಾಧವ ವಿಲಾಸ ವಿರಹ

ಇತ್ತೀಚಿನ ಕವನ ಸಂಕಲನ ‘ಧ್ಯಾನ’ ದ 46 ಕವನಗಳು ನವೋದಯದ ಚೌಪದಿಯನ್ನು ನೆನಪಿಗೆ ತರುತ್ತವೆ. ಕೃಷ್ಣ ಮತ್ತು ರಾಧೆ ಕಮಲಾ ಅವರನ್ನು ಸದಾ ಕಾಡುತ್ತಿರುತ್ತಾರೆ. ಕೃಷ್ಣ ಮತ್ತು ರಾಧೆ ಯ ಒಲುಮೆಯ ವಿಷಬಂದಾಗ ನೆನಪಾಗುವುದು ಪುತಿನ ಅವರ ‘ಗೋಕುಲ ನಿರ್ಗಮನ’. ಭಾಗವ ತಾದ ರಾಸಲೀಲೆ ಸಹ ಪ್ರಸಿದ್ಧವಾದುದು.

Naayana yaji Column: ರಾಧಾಮಾಧವ ವಿಲಾಸ ವಿರಹ

-

Profile
Ashok Nayak May 24, 2026 9:07 AM

ನಾರಾಯಣ ಯಾಜಿ

ರಾಧೆ ಎನ್ನುವಳು ನಿಜವಾಗಿ ಇದ್ದಳೋ ಇಲ್ಲವೋ, ಆಕೆ ಮಾಯೆಯೋ ಎನ್ನುವ ಹಲವಾರು ಜಿಜ್ಞಾಸೆಗಳ ನಡುವೆ ಮಾಯೆಯೇ ರಾಧೆ ಯಾಗಿ ನಮ್ಮನಡುವೆ ಇದ್ದಾಳೆ.

ಕಮಲಾ ಕೊಂಡದಕುಳಿ ಅವರ ಮುಕ್ತಕಗಳು ಗಮನ ಸೆಳೆಯುವುದು ಅದರೊಳಗಿನ ಸ್ತ್ರೀ ಸಂವೇದನೆಗಳಿಂದಾಗಿ. ಹೃದಯದೊಳಗಿನ ಭಾವನೆಗಳು ಉಕ್ಕೇರಿದಾಗ ಮುಕ್ತಕಗಳ ಮೂಲಕ ಅಕ್ಷರಕ್ಕೆ ಇಳಿಸುತ್ತಾರೆ. ಹಾಗೇ ಬರೆದುದೆಲ್ಲೆವೂ ಪ್ರಕಟವಾಗಬೇಕೆನ್ನುವ ಆಸೆಗೂ ಅವರು ಬಲೆಯಾಗಿಲ್ಲ. ಆದರೆ ಅವರ ಕವನಗಳನ್ನು ಓದಿದಾಗ ಅವರ ಕಲ್ಪನಾ ವಿಲಾಸಕ್ಕೆ ಬೆರೆಗಾಗುತ್ತೇವೆ.

ಇತ್ತೀಚಿನ ಕವನ ಸಂಕಲನ ‘ಧ್ಯಾನ’ ದ 46 ಕವನಗಳು ನವೋದಯದ ಚೌಪದಿಯನ್ನು ನೆನಪಿಗೆ ತರುತ್ತವೆ. ಕೃಷ್ಣ ಮತ್ತು ರಾಧೆ ಕಮಲಾ ಅವರನ್ನು ಸದಾ ಕಾಡುತ್ತಿರುತ್ತಾರೆ. ಕೃಷ್ಣ ಮತ್ತು ರಾಧೆಯ ಒಲುಮೆಯ ವಿಷಬಂದಾಗ ನೆನಪಾಗುವುದು ಪುತಿನ ಅವರ ‘ಗೋಕುಲ ನಿರ್ಗಮನ’. ಭಾಗವತಾದ ರಾಸಲೀಲೆ ಸಹ ಪ್ರಸಿದ್ಧವಾದುದು. ರಾಧೆ ಮತ್ತು ಕೃಷ್ಣನ ನಡು ವಿನ, ಕೃಷ್ಣ ಮತ್ತು ಯಶೋಧಾ ನಡುವಿನ, ಕೃಷ್ಣ ಮತ್ತು ಗೀತಾಚಾರ್ಯನ ನಡುವಿನ ಸಂಬಂಧದ ಕುರಿತು ನವನೀತದಂತೆ ಬರೆಯಬಹುದು ಎನ್ನುವುದನ್ನು ಕಮಲಾ ಕೊಂಡದ ಕುಳಿ ಈ ಕವನ ಸಂಕಲನದಲ್ಲಿ ತೋರಿಸಿಕೊಟ್ಟಿದ್ದಾರೆ.

ಇದಕ್ಕೆ ಕಾರಣ ಕಮಲಾ ಈ ಕೃತಿಯನ್ನು ‘ಕಹಿಯುಂಡೂ ಸಿಹಿ ನೀಡುವ ಸ್ತ್ರೀ ಎನ್ನುವ ಅದ್ಭುತ ಚೈತನ್ಯಕ್ಕೆ’ ಅರ್ಪಣೆ ಮಾಡಿರುವ ಸಾಲಿನಲ್ಲಿ ಕಾಣಬಹುದು. ರಾಧೆ ಎನ್ನುವುವಳು ನಿಜವಾಗಿ ಇದ್ದಳೋ ಇಲ್ಲವೋ, ಆಕೆ ಮಾಯೆಯೋ ಎನ್ನುವ ಹಲವಾರು ಜಿಜ್ಞಾಸೆಗಳ ನಡುವೆ ಮಾಯೆಯೇ ರಾಧೆಯಾಗಿ ನಮ್ಮನಡುವೆ ಇದ್ದಾಳೆ.

ಇದನ್ನೂ ಓದಿ: Narayan Yaji Column: ʼಶಂಕರ ಭಗವತ್ಫಾದʼರ ಕಾಲ ಯಾವುದು ?

ಪ್ರತಿಯೋರ್ವ ಹೆಣ್ಣೂ ಅನೇಕ ಸಲ ಸಹ ರಾಧೆಯಲ್ಲಿ ತನ್ನನ್ನು ರೂಪಿಸಿಕೊಂಡು ಆಕೆಗೆ ಮಾಯೆಯಾಗಿ ಕಾಡುವ ಕೊಳಲಿನ ಕೃಷ್ಣನನ್ನು ಹುಡುಕುತ್ತಿರುತ್ತಾಳೆ. ಏಕೆಂದರೆ ರಾಧೆಗೆ ಕೃಷ್ಣನೆಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅವಳು ಅವನನ್ನು ತನ್ನ ಆತ್ಮದ ಭಾಗವಾಗಿ ದ್ದಾಳೆ.

ಅಂತಹ ಒಂದು ಕವನವನ್ನು ಇಲ್ಲಿಕಾಣಬಹುದು. ತುಂಟಕೃಷ್ಣ ಮಲಗಿದ್ದಾನೆ. ಅಭಿಸಾರಿಕೆ ಯಾಗಿ ರಾಧೆಯೇ ಆತನನ್ನು ಹುಡುಕಿಕೊಂಡು ಬಂದಿದ್ದಾಳೆ. ಲೋಕವನ್ನು ತನ್ನಸುತ್ತಲೇ ಸೆಳೆಯುತ್ತಿರುವ ಕೃಷ್ಣ, ರಾಧೆ ಸೆಳೆದ ರಭಸಕ್ಕೆ ಬಿದ್ದಿದ್ದಾದರೂ ಎಲ್ಲಿ ಬಿರುಸಿನ ಎಳೆತಕೆ ಕನ್ನನು ಬಿದ್ದನು ರಾಧೆಯ ತೋಳಿನ ಒಳಗೆ ಹುಸಿನಗು ನಗುತಲಿ ತುಟಿಗಂಟಿತು ಒಡನೆ ಕೃಷ್ಣನ ಮೋಹದ ಮುರಳಿ ರಾಧೆಯ ತೋಳಿನ ಒಳಗೇ ಬಿದ್ದುಬಿಟಿದ್ದಾನೆ.

ಮನೆಯಿಂದ ಕೃಷ್ಣನ ಪಾಶಕ್ಕೆ ಸಿಲುಕಿ ಹಾರಿಬಂದ ರಾಧೆ ಹತ್ತಿರವಾದಂತೆ ಅಚಲ ವಾಗಿರುವ ಅಚ್ಯುತನನ್ನೇ ಸೆಳೆಯುವ ಸಾಮರ್ಥ್ಯವನ್ನು ಗಳಿಸಿಕೊಂಡಿದ್ದಾಳೆ. ಇಬ್ಬರೂ ಇಲ್ಲಿ ವಿರಹಿಗಳೇ, ಪರಸ್ಪರ ಪ್ರೇಮಿಗಳೇ. ಇಲ್ಲಿ ರಾಧೆ ಮತ್ತು ಕೃಷ್ಣನ ನಡುವಿನ ಪ್ರೇಮವು ವಿರಹದ ಮೂಲಕ ಉದಾತ್ತಗೊಳ್ಳುತ್ತದೆ. ಕೊನೆಯ ಸಾಲು ಕವನಕ್ಕೆ ಅಪೂರ್ವ ಧ್ವನಿ ಯನ್ನು ಕೊಡುತ್ತದೆ.

“ಕೃಷ್ಣಾರ್ಪಣ" ಎನ್ನುವ ಕವನದಲ್ಲಿ ರಾಧೆ ತನ್ನ ಪ್ರೇಮವನ್ನು ಹೂವಿನ ಘಮಕ್ಕೆ, ಹರಿವ ನೀರಿಗೆ ಹೋಲಿಸುತ್ತಾ ತನ್ನ ಪ್ರೇಮವನ್ನು ಹೇಳಿಕೊಳ್ಳಲು ತನಗೆ ಯಾವ ಬಂಧವೂ ಬಂಧ ವೂ ಇಲ್ಲವೆನ್ನುವೆತ್ತಾಳೆ. ಈ ಚರಣದಲ್ಲಿ ಪ್ರೇಮ ಮತ್ತು ಸಂಗೀತ ಒಂದೇ ಆಗಿವೆ. ರಾಧೆ ಇಲ್ಲದಾಗ ಕೃಷ್ಣನ ನಾದವೇ ಅಸಂಪೂರ್ಣ. ಅಂದರೆ ಪ್ರೇಮವಿಲ್ಲದ ಕಲೆ ಜೀವಹೀನ. ರಾಧೆಯೇ ಮಾಯೆ, ಮಾಯೆಯೇ ರಾಧೆಯಾಗಿ ಇಬ್ಬರೂ ಒಂದಾಗುವಾಗ ಅದುವೇ ವೇದ-ನಾದವಾಗಿ ಬೆಳಗುವ ರೀತಿಯನ್ನು ‘ರಾಧಾ ಮಾಧವ’ ಎನ್ನುವ ಕವನದಲ್ಲಿ ಕಾಣಬಹುದು. ಕಮಲಾ ಕೊಂಡದಕುಳಿಯವರಿಂದ ಇನ್ನಷ್ಟು ಇಂತಹ ಕವನಗಳನ್ನು ನಿರೀಕ್ಷಿಸಬಹುದು.