ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼಅಡ್ಡಕಸುಬಿʼಗಳ ಪತ್ತೆಗೆ ಪಣ

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಶಾಸಕರು ಅಡ್ಡಮತದಾನ ಮಾಡಿರುವುದು ಜಾಹೀರಾಗಿದೆ. ಅಡ್ಡ ಮತದಾನದ ಹೊಡೆತದಿಂದ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ನಾಯಕತ್ವ ಕೊರತೆ ಎದ್ದು ಕಾಣುತ್ತಿದೆ. ಕೈ ಹೂಡಿರುವ ದಾಳಕ್ಕೆ ಮೈತ್ರಿಗಳು ಮುದುಡಿ ಕುಳಿತಂತಾಗಿದೆ. ಅತ್ತ ಅಡ್ಡ ಮತದಾನ ಮಾಡಬಹುದೆಂದು ಗೊತ್ತಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸುವ ಮೂಲಕ, ಜೆಡಿಎಸ್ ತಂತ್ರಗಾರಿಕೆ ನಡೆಸಿದೆ. ಇದು ಪರೋಕ್ಷವಾಗಿ ಜೆಡಿಎಸ್, ಬಿಜೆಪಿ ಯಲ್ಲಿ ಹಿತಶತ್ರುಗಳ ಪತ್ತೆಗೆ ಕಾರಣವಾಗಿದೆ. ಕಾಂಗ್ರೆಸ್ ಅಡ್ಡಮತಕ್ಕೆ ಪ್ರೇರಣೆ ನೀಡಿದೆ ಎಂಬ ಕೂಗು ಹೆಚ್ಚಾಗಲೂ ಕಾರಣವಾಗಿದೆ.

ʼಅಡ್ಡಕಸುಬಿʼಗಳ ಪತ್ತೆಗೆ ಪಣ

-

Profile
Ashok Nayak Jun 20, 2026 6:00 AM

ಅಡ್ಡಮತಕ್ಕೆ ಸಹಾಯ ಹಸ್ತ

ಬಿಜೆಪಿ ವರಿಷ್ಠರು ಕೆಂಡ, ರಾಜ್ಯ ನಾಯಕರಿಗೆ ಬುಲಾವ್

ಬಂಡೆ ಏಟಿಗೆ ಬಿರಿದ ಕಮಲ ದಳ

ಮೀರ್‌ಸಾದಿಕ್‌ರ ಪತ್ತೆಗೆ ಶೋಧ ಸಮಿತಿ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಶಾಸಕರು ಅಡ್ಡಮತದಾನ ಮಾಡಿರುವುದು ಜಾಹೀರಾಗಿದೆ. ಅಡ್ಡ ಮತದಾನದ ಹೊಡೆತದಿಂದ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ನಾಯಕತ್ವ ಕೊರತೆ ಎದ್ದು ಕಾಣುತ್ತಿದೆ. ಕೈ ಹೂಡಿರುವ ದಾಳಕ್ಕೆ ಮೈತ್ರಿಗಳು ಮುದುಡಿ ಕುಳಿತಂತಾ ಗಿದೆ. ಅತ್ತ ಅಡ್ಡ ಮತದಾನ ಮಾಡಬಹುದೆಂದು ಗೊತ್ತಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸುವ ಮೂಲಕ, ಜೆಡಿಎಸ್ ತಂತ್ರಗಾರಿಕೆ ನಡೆಸಿದೆ. ಇದು ಪರೋಕ್ಷವಾಗಿ ಜೆಡಿಎಸ್, ಬಿಜೆಪಿ ಯಲ್ಲಿ ಹಿತಶತ್ರುಗಳ ಪತ್ತೆಗೆ ಕಾರಣವಾಗಿದೆ. ಕಾಂಗ್ರೆಸ್ ಅಡ್ಡಮತಕ್ಕೆ ಪ್ರೇರಣೆ ನೀಡಿದೆ ಎಂಬ ಕೂಗು ಹೆಚ್ಚಾಗಲೂ ಕಾರಣವಾಗಿದೆ. ಅಡ್ಡ ಮತದಾನದಿಂದ ಬಿಜೆಪಿಯ ರಾಜ್ಯ ನಾಯಕತ್ವಕ್ಕೆ ಸಂಚಕಾರ ಬಂದಿದ್ದು, ಕೇಂದ್ರ ವರಿಷ್ಠರಿಂದ ರಾಜ್ಯದ ಪ್ರಮುಖರಿಗೆ ಬುಲಾವ್ ಬಂದಿದೆ. ಅತ್ತ ಜೆಡಿಎಸ್ ಪಕ್ಷಕ್ಕೆ ಅಡ್ಡಮತದಾನದಿಂದ ತೀವ್ರ ಆಘಾತ ಎದುರಾಗಿದ್ದು ಪಕ್ಷದ ಪಾಳಯದಲ್ಲಿ ಆತಂಕಕ್ಕೆ ಕಾರಣ ವಾಗಿದೆ. ಹೀಗಿದ್ದರೂ ಕುಮಾರಸ್ವಾಮಿ ಕೇಂದ್ರ ಸಚಿವರಾದ ನಂತರ ರಾಜ್ಯ ಜೆಡಿಎಸ್ʼನಲ್ಲಿ ನಾಯಕತ್ವದ ಕೊರತೆಯೂ ಕಾಣಿಸಿಕೊಂಡಿದೆ. ಇತ್ತ ಆಡಳಿತಾರೂಢ ಕಾಂಗ್ರೆಸ್ ಗೆಲುವಿನಲ್ಲಿ ಬೀಗುತ್ತಿದ್ದರೂ ಮೈಮರೆಯುವಂತಿಲ್ಲ ಎನ್ನುವಂತಾಗಿದೆ. ರಾಜ್ಯ ರಾಜಕಾರಣದಲ್ಲಿ ಬದಲಾಗು ತ್ತಿರುವ ರಾಜಕೀಯ ಸಮೀಕರಣಗಳ ಪ್ರಭಾವ ಅಡ್ಡಮತದಾನದಿಂದ ಮೇಲೆದ್ದು ನಿಂತಿದೆ.

11 ಎನ್ಡಿಎ ಶಾಸಕರ ಅಡ್ಡಮತದಾನವನ್ನು ಕೇಂದ್ರದ ಬಿಜೆಪಿ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ನಾಯಕರಿಗೆ ದೆಹಲಿಗೆ ಬರುವಂತೆ ಕರೆ ನೀಡಲಾಗಿದೆ. ಘಟನೆಯಿಂದ ಅಸಮಾಧಾನಗೊಂಡಿರುವ ಬಿಜೆಪಿ ವರಿಷ್ಠರು ಈ ಬಗ್ಗೆ ಚರ್ಚಿಸಲು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ.

ರಾಜ್ಯ ಸರಕಾರದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಬೇಕಿದ್ದ ಬಿಜೆಪಿ, ಜೆಡಿಎಸ್ ಶಾಸಕರು ಪಕ್ಷಕ್ಕೆ ಕೈಕೊಟ್ಟಿದ್ದು, 11 ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಹಾಕಿದ್ದಾರೆ. ಇದರಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಇದೆ ಅಂತಾ ಸದಾ ದಾಳ ಉರುಳುತ್ತಿದ್ದ ದೋಸ್ತಿಗಳಿಗೆ ಮುಖಭಂಗ ವಾಗಿದೆ. ದೋಸ್ತಿಗಳ ನಡುವೆ ಅಡ್ಡ ಮತದಾನದ ಸಂಖ್ಯೆಯ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

ಈ ಸಂಖ್ಯೆಯಲ್ಲಿ ಬಿಜೆಪಿಯವರು ಎಷ್ಟು? ಜೆಡಿಎಸ್ ಶಾಸಕರು ಇನ್ನೆಷ್ಟು ಎನ್ನುವ ಪ್ರಶ್ನೆ ಎದ್ದಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ತಮ್ಮ ಪಕ್ಷದ ನಾಲ್ವರು ಶಾಸಕರು ಅಡ್ಡಮತದಾನ ಮಾಡಿರುವುದಾಗಿ ಹೇಳಿದ್ದರೂ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೆಡಿಎಸ್‌ನ ಆರೇಳು ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೈತ್ರಿ ನಾಯಕರ ನಡುವೆ ಅಂಕಿಸಂಖ್ಯೆಯ ಗೊಂದಲ ಇರುವುದು ಎದ್ದು ಕಾಣುತ್ತಿದೆ.

ಇದನ್ನೂ ಓದಿ: Karnataka MLC Election: ವಿಧಾನಪರಿಷತ್‍ ಚುನಾವಣೆ: ಅಡ್ಡ ಮತದಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಎಂದ ಛಲವಾದಿ ನಾರಾಯಣಸ್ವಾಮಿ

ಪರಿಷತ್ ಚುನಾವಣೆಯಲ್ಲಿ ಬೆಂಬಲಿಸಿದವರಿಗೆ ಮುಂದಿನ ಚುನಾವಣೆಗೆ ಟಿಕೆಟ್, ಬಿಜೆಪಿ-ಜೆಡಿಎಸ್ ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ ಎಂಬ ಮಾತುಗಳಿವೆ. ಇದು ಕೂಡ ಮುಂದಿನ ಹಂತದ ಚುನಾವಣಾ ತಯಾರಿ ಎಂದೇ ಬಿಂಬಿತವಾಗಿದೆ. ಕೇಸರಿ-ದಳ ಶಾಸಕರಿಗೆ ಸಕಲ ರೀತಿಯಲ್ಲಿ ‘ಸಹಾಯ ಹಸ್ತ’ ನೀಡುವ ಭರವಸೆಯ ಕಾರಣಕ್ಕೆ ಅಡ್ಡ ಮತದಾನ ಆಗಿರುವುದು ಎಂಬ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ.

ಶಿಸ್ತು ಕ್ರಮಕೈಗೊಳ್ಳಲ್ಲ ಜೆಡಿಎಸ್: ಜೆಡಿಎಸ್‌ನ ಒಂದಿಬ್ಬರು ಶಾಸಕರು ಅಡ್ಡಮತದಾನ ಮಾಡಬಹುದು ಎಂದು ಮೊದಲೇ ನಿರೀಕ್ಷೆ ಮಾಡಿದ್ದರು. ಆದರೆ, ನಿರೀಕ್ಷೆಗಿಂತ ಹೆಚ್ಚಿನ ಶಾಸಕರು ಅಡ್ಡಮತದಾನ ಮಾಡಿರುವುದು ಜೆಡಿಎಸ್‌ನಲ್ಲಿ ಆಕ್ರೋಶ, ಆತಂಕ ಹಾಗೂ ಬೆಸರಕ್ಕೆ ಕಾರಣ ವಾಗಿದೆ. ಹೀಗಾಗಿ ಕುಮಾರಸ್ವಾಮಿ ಅವರು ಶಾಸಕಾಂಗ ಸಭೆ ಕರೆದು ಅಡ್ಡ ಮತದಾನ ಮಾಡಿದವರ ಪತ್ತೆ ಕೆಲಸ ನಡೆಯಲಿದೆ. ಅಲ್ಲದೇ ಅಡ್ಡ ಮತದಾನ ಮಾಡಿದವರ ವಿರುದ್ಧ ಶಿಸ್ತು ಕ್ರಮದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಡ್ಡಮತದಾನಕ್ಕೆ ಹಲವು ಆಂತರಿಕ ಕಾರಣ ವಿಶ್ಲೇಷಿಸಲಾಗುತ್ತಿದೆ. ಪಕ್ಷದೊಳಗಿನ ಗುಂಪುಗಾರಿಕೆ, ನಾಯಕತ್ವದ ಕೊರತೆ, ಹಿರಿಯ ನಾಯಕರ ಮನವೊಲಿಕೆಯಲ್ಲಿನ ವಿಫಲತೆ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ಶಾಸಕರ ಅಸಮಾಧಾನ ಪ್ರಮುಖ ವಾಗಿವೆ. ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ನಂತರ ರಾಜ್ಯದಲ್ಲಿ ನಾಯಕತ್ವದ ಕೊರತೆಯೂ ಎದ್ದು ಕಾಣುತ್ತಿದೆ. ಹೀಗಿದ್ದರೂ ಜೆಡಿಎಸ್‌ನ ಕೆಲ ಶಾಸಕರ ತಲೆದಂಡ ವಾಗುವ ಸಾಧ್ಯತೆಗಳಿದ್ದರೂ ಪಕ್ಷದ ಹಿತದೃಷ್ಟಿಯಿಂದ ಹಲವು ತೊಡಕುಗಳಿವೆ. ಆದ್ದರಿಂದ ಶಿಸ್ತುಕ್ರಮ ತೆಗೆದುಕೊಳ್ಳುವುದು ಕಷ್ಟ ಎಂಬ ಅಭಿಪ್ರಾಯಗಳೂ ಇವೆ.

ಕಮಲ ತರಗೆಲೆ: ಪಕ್ಷದೊಳಗೆ ಅಸಮಾಧಾನ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಕೆಲವು ಶಾಸಕರು ವಿಪ್ ಉಲ್ಲಂಘಿಸಿ ಅಡ್ಡಮತದಾನ ನಡೆಸಿರುವುದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ ಕಾರ್ಯ ವೈಖರಿಯ ವಿರುದ್ಧ ಪಕ್ಷದೊಳಗೇ ಅಸಮಾಧಾನ ಭುಗಿಲೆದ್ದಿದೆ. ಪಕ್ಷದ ಕೆಲ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ನಾಯಕತ್ವದ ವೈಫಲ್ಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಆರ್.ಅಶೋಕ ನೇತೃತ್ವದಲ್ಲಿ ಹಲವು ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದು, ಅದರಲ್ಲೂ ಪಕ್ಷದ ಶಾಸಕರ ಅಮಾನತು ಸೇರಿದಂತೆ ಕೆಲ ವಿಷಯಗಳಲ್ಲಿ ಪಕ್ಷದ ಒಳಗೇ ಭಿನ್ನಾಭಿಪ್ರಾಯಗಳು ತೀವ್ರವಾಗಿವೆ. ಪಕ್ಷದ ಶಿಸ್ತಿನ ಗೆರೆ ದಾಟದ ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಮುಖಭಂಗ ಎದುರಿಸಿದೆ.

ದೇಶದೆಲ್ಲಡೆ ಪ್ರಾದೇಶಿಕ ಪಾರ್ಟಿಗಳಲ್ಲಿ ಬಿರುಕು ಮೂಡಲು ಬಿಜೆಪಿಯ ರಾಜಕಾರಣ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿರುವ ಹೊತ್ತಿನಲ್ಲಿ, ತಮ್ಮದೇ ಪಾರ್ಟಿಯಲ್ಲಿ ಕ್ರಾಸ್ ವೋಟಿಂಗ್ ಬಿಜೆಪಿಗೆ ತೀವ್ರ ಮುಜುಗರ ತಂದಿದೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷದ ನಾಯಕ ಆರ್.ಅಶೋಕ ಅವರ ನಾಯಕತ್ವದ ಬಗ್ಗೆ ಅವರ ಪಕ್ಷದ ಕಾರ್ಯಕರ್ತರೇ ಸಾಮಾಜಿಕ ಜಾಲತಾಣದಲ್ಲಿ ಗೇಲಿ ಮಾಡುತ್ತಿದ್ದಾರೆ. ಇದೇ ವೇಳೆ ಬಿಜೆಪಿ ವರಿಷ್ಠರೂ ಕೂಡ ತೀವ್ರ ಅಸಮಾಧಾನ ಹೊರ ಹಾಕಿದೆ. ಇದೇ ಸಮಯದಲ್ಲಿ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹೊಂದಾಣಿಕೆ ರಾಜಕಾರಣದ ಬಗ್ಗೆ ಉಲ್ಲೇಖಿಸುತ್ತಲೇ ಇದ್ದಾರೆ. ಚುನಾವಣೆಯಲ್ಲಿ ತಾನು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಇನ್ನು, ತರಬೇತಿ ನೀಡಿದ್ದರೂ, ಬಿಜೆಪಿಯ ಒಬ್ಬರ ಮತ ಅಸಿಂಧುಗೊಂಡಿದ್ದು ಹೇಗೆ ಎನ್ನುವುದು ಚರ್ಚೆಯ ವಿಷಯವಾಗಿದೆ.

ಅಡ್ಡ ಮತ ಪತ್ತೆ: ಬಿಜೆಪಿಯಿಂದ ಸತ್ಯಶೋಧನಾ ತಂಡ

ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದವರು ಎಂದು ಕೆಲವರ ಹೆಸರುಗಳನ್ನು ತೇಲಿಬಿಡುವ ಮೂಲಕ ಬಿಜೆಪಿಯಲ್ಲಿ ಬೆಂಕಿ ಹಚ್ಚುವ ಕುತಂತ್ರವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಮಶ್ವರದ ಬಿಜೆಪಿ ರಾಜ್ಯ ಕಾರ್ಯಾ ಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನ ಕುತಂತ್ರಕ್ಕೆ ನಾವು ತಲೆಕೆಡಿಸಿಕೊಳ್ಳಲ್ಲ. ಅಡ್ಡ ಮತದಾನ ಮಾಡಿದವರ ಪತ್ತೆಗೆ ಸಮಿತಿ ರಚಿಸಲಾಗಿದೆ. ಯಾರು ಅಡ್ಡ ಮತದಾನ ಮಾಡಿ ದ್ದಾರೆ ಎಂಬುದು ಮೂರ್ನಾಲ್ಕು ದಿನದಲ್ಲಿ ತಿಳಿಯಲಿದೆ. ಕಾಂಗ್ರೆಸ್ʼನವರು ಬೈರತಿ ಬಸವರಾಜು ಹೆಸರು ತೇಲಿ ಬಿಟ್ಟಿದ್ದಾರೆ. ಆದರೆ ಬೈರತಿ ಬಸವರಾಜು ಯಾವುದೇ ತಪ್ಪು ಕೆಲಸ ಮಾಡಿಲ್ಲ. ಇನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸತ್ಯಶೋಧನಾ ತಂಡ ರಚಿಸಿದ್ದು, ಬಿಜೆಪಿಯ ಶಾಸಕರಿಂದ ಅಡ್ಡಮತದಾನ ಆಗಿರುವುದರಿಂದ ಸತ್ಯಾಸತ್ಯತೆ ಮತ್ತು ವಾಸ್ತವಿಕತೆ ತಿಳಿಯಲು ಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಶಾಸಕ ಎನ್.ಮಹೇಶ್ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ಒಳಗೊಂಡ ಮೂವರು ಸದಸ್ಯರ ತಂಡ ರಚಿಸಿ ಜೂನ್ 25ರೊಳಗೆ ಸಮಗ್ರ ವರದಿ ನೀಡಲು ಸೂಚಿಸಲಾಗಿದೆ.

ಗೊತ್ತಿದ್ದರೂ ಅಭ್ಯರ್ಥಿ ನಿಲ್ಲಿಸಿ ಎಚ್‌ಡಿಕೆ ತಂತ್ರಗಾರಿಕೆ?

ಕಾಂಗ್ರೆಸ್‌ನೊಳಗೆ ಆಂತರಿಕ ಕಲಹ ಅನ್ನುತ್ತಿದ್ದ ವಿರೋಧ ಪಕ್ಷದಲ್ಲಿ ದೊಡ್ಡ ಬಿರುಕು ಇರುವುದು ಬಟಾಬಯಲಾಗಿದೆ. ಮೈತ್ರಿಯೊಳಗಿನ ಅಸಮಾಧಾನ, ಗೊಂದಲ ಹಾಗೂ ಪಕ್ಷದ ಮೇಲಿನ ಬೇಸರ ಒಂದೆಡೆಯಾದರೆ, ಪರಿಷತ್ ಪ್ರತಿಷ್ಠೆಯ ಕದನದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಹೀಗಿದ್ದರೂ ಇಡೀ ಪ್ರಕ್ರಿಯೆಯಲ್ಲಿ ಬಿಜೆಪಿಯ ಮೈತ್ರಿ ನೈಜತೆಯೇನು, ಜೆಡಿಎಸ್‌ನೊಳಗೆ ಯಾರ್ಯಾರು ಹೇಗಿದ್ದಾರೆ ಎಂದು ತಿಳಿದುಕೊಳ್ಳಲು ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ತಂತ್ರಗಾರಿಕೆ ನಡೆಸಿದ್ದಾರೆ ಎಂಬ ಮಾತುಗಳೂ ಇವೆ.

ರನೇ ಅಭ್ಯರ್ಥಿಯನ್ನು ನಿಲ್ಲಿಸಲು ನಿರ್ಧಾರ ಮಾಡಿದ್ದು ಕುಮಾರಸ್ವಾಮಿ. ಹೆಚ್ಚುವರಿ ಮತಗಳನ್ನು ನೀಡುತ್ತೇವೆಂದು ಬಿಜೆಪಿ ಭರವಸೆ ನೀಡಿದಾಗ, ಜೆಡಿಎಸ್ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಈ ಹಂತದಲ್ಲಿ ಮೈತ್ರಿಯಲ್ಲಿ ಸಮನ್ವಯ ಇರಬೇಕಿತ್ತು. ಕುಮಾರಸ್ವಾಮಿಯ ನಿರೀಕ್ಷೆಯಂತೆಯೇ ಬಿಜೆಪಿಯವರೂ ಕೈಕೊಟ್ಟಿದ್ದಲ್ಲದೇ, ತಮ್ಮ ಪಕ್ಷದೊಳಗೂ ಹೇಗೆ ರಾಜಕಾರಣ ನಡೆಯುತ್ತಿದೆ ಎಂಬ ಲೆಕ್ಕಾಚಾರವೂ ಅವರಿಗೆ ಸಿಕ್ಕಿತು.

ಹಿತಶತ್ರುಗಳ ಪತ್ತೆಗೇ ಅಭ್ಯರ್ಥಿ ಹಾಕಿದ್ದು

ಮೈಸೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಎಚ್.ಡಿ. ಜೆಡಿಎಸ್ ಶಾಸಕರ ನಿಷ್ಠೆ ಯನ್ನು ಪರೀಕ್ಷಿಸಲಿಕ್ಕಾಗಿಯೇ ನಾನು ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೆ ಎಂದು ಹೇಳಿದ್ದಾರೆ. ಪಕ್ಷದಲ್ಲಿರುವ ಹಿತ ಶತ್ರುಗಳು ಯಾರು ಎಂಬುದನ್ನು ನಾನು ಪತ್ತೆ ಮಾಡಬೇಕಿತ್ತು. ನನಗೆ ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಯಾರನ್ನು ಅತಿಯಾಗಿ ನಂಬಬಾರದು ಎಂಬ ಪಾಠವನ್ನು ಈ ಫಲಿತಾಂಶ ನನಗೆ ಕಲಿಸಿದೆ. ಅಡ್ಡ ಮತದಾನ ನನಗೆ ಆಘಾತ ತಂದಿಲ್ಲ. ಇದರ ನಿರೀಕ್ಷೆ ನನಗೆ ಇತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

image

ನಾವು ನಿಗದಿ ಮಾಡಿದ್ದ ನಾಲ್ಕ ಮತಗಳು ಜೆಡಿಎಸ್ಗೆ ಹೋಗಿವೆ. ದುರ್ಯೋಧನ ಐಹೊಳೆ, ಚಂದ್ರು ಲಮಾಣಿ, ಕೃಷ್ಣಾ ನಾಯ್ಕ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಮಾಧ್ಯಮದಲ್ಲಿ ಬರುತ್ತಿರುವ ಕಾರಣ ಅವರು ಬೇಸರಗೊಂಡಿದ್ದಾರೆ. ವರದಿ ಬರುವವರೆಗೂ ಯಾರನ್ನೂ ಅನುಮಾನಿಸಲ್ಲ.

-ಛಲವಾದಿ ನಾರಾಯಣಸ್ವಾಮಿ, ಪರಿಷತ್ ವಿಪಕ್ಷ ನಾಯಕ
image

ಕ್ಷೇತ್ರದಲ್ಲಿ ನಮಗೆ ಮುಜುಗರ ಆಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಎನ್‌ಡಿಎ ಅಭ್ಯರ್ಥಿಗೆ ಮತ ಹಾಕಲು ವಿಪ್ ಜಾರಿ ಮಾಡಿದ್ದರು. ಪಕ್ಷದ ಆದೇಶ ಪ್ರಾಮಾಣಿಕವಾಗಿ ಪಾಲಿಸಿ ಎನ್‌ಡಿಎ ಅಭ್ಯರ್ಥಿಗೆ ಮತ ಹಾಕಿದ್ದೇವೆ. ವರದಿ ಬರುವವರೆಗೂ ಯಾರ ಹೆಸರನ್ನೂ ಹೇಳುವುದು ಬೇಡ. ಮೊದಲನೇ ಬಾರಿಗೆ ನಾನು ಶಾಸಕನಾಗಿದ್ದೇನೆ.

-ಚಂದ್ರು ಲಮಾಣಿ, ಬಿಜೆಪಿ ಶಿರಹಟ್ಟಿ ಶಾಸಕ
image

ನಮ್ಮನ್ನು ಜನ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ. ಲಿಂಗರಾಜ್ ಪಾಟೀಲ್ ಅವರಿಗೆ ನಿಗದಿ ಮಾಡಿದ್ದ ಮತಗಳ ಪಟ್ಟಿಯಲ್ಲಿ ನಾವು ಇರಲಿಲ್ಲ. ನಮಗೆ ಎನ್‌ಡಿಎ ಅಭ್ಯರ್ಥಿಗೆ ಮತ ಹಾಕಲು ಪಕ್ಷದಿಂದ ವಿಪ್ ನೀಡಲಾಗಿತ್ತು

-ಕೃಷ್ಣಾ ನಾಯ್ಕ್, ಹೂವಿನ ಹಡಗಲಿ ಬಿಜೆಪಿ ಶಾಸಕ
image

ನಮ್ಮಲ್ಲಿ ಕೆಲವರು ಅಡ್ಡ ಮತದಾನ ಮಾಡಿದ್ದಾರೆ. ಇದರ ಬಗ್ಗೆ ಆರ್.ಅಶೋಕ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಅಡ್ಡ ಮತ ಹಾಕಿದವರ ಪತ್ತೆಗೆ ಸಿ.ಟಿ.ರವಿ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಜೂನ್ 25ರೊಳಗೆ ವರದಿ ಕೊಡುವಂತೆ ಹೇಳಿದ್ದೇವೆ. ನಾನೂ ಕೂಡ ಹೈಕಮಾಂಡ್ ಭೇಟಿಗೆ ಸಮಯ ಕೇಳಿದ್ದೇನೆ.

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ