MLA Umesh Kotian Interview: ಜನಸೇವೆ ನನ್ನ ಧರ್ಮ, ಕ್ಷೇತ್ರ ಅಭಿವೃದ್ದಿ ನನ್ನ ಗುರಿ
ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಯಶಸ್ವಿ ಎರಡನೇ ಅವಧಿ ಪೂರೈಸುತ್ತಿರುವ ಉಮಾನಾಥ್ ಎ.ಕೋಟ್ಯಾನ್ ಅವರು ಮೂಲತಃ ತಳಮಟ್ಟದಿಂದ ಬೆಳೆದು ಬಂದ ನಾಯಕ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಸಾಮಾನ್ಯ ಹಳ್ಳಿಯ ಹಿನ್ನೆಲೆಯಿಂದ ಬಂದು, ಕಷ್ಟ-ನಷ್ಟಗಳನ್ನು ಉಂಡು, ಇಂದು ಸತತ ಎರಡನೇ ಬಾರಿಗೆ ಶಾಸಕರಾಗಿ ಕ್ಷೇತ್ರವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ.
-
“ಸುರತ್ಕಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷನಾಗಿ ರಾಜಕೀಯ ಪಯಣ ಆರಂಭಿಸಿದೆ. ತಳಮಟ್ಟದ ಬಡತನ ಮತ್ತು ಕಷ್ಟಗಳನ್ನು ಅನುಭವಿಸಿ ಬಂದಿದ್ದರಿಂದ, ಶಾಸಕನಾದ ಮೇಲೆಯೂ ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸುವುದು ನನಗೆ ಕಷ್ಟವೆನಿಸುವುದಿಲ್ಲ."
ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಯಶಸ್ವಿ ಎರಡನೇ ಅವಧಿ ಪೂರೈಸು ತ್ತಿರುವ ಉಮಾನಾಥ್ ಎ.ಕೋಟ್ಯಾನ್ ಅವರು ಮೂಲತಃ ತಳಮಟ್ಟದಿಂದ ಬೆಳೆದು ಬಂದ ನಾಯಕ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಸಾಮಾನ್ಯ ಹಳ್ಳಿಯ ಹಿನ್ನೆಲೆಯಿಂದ ಬಂದು, ಕಷ್ಟ-ನಷ್ಟಗಳನ್ನು ಉಂಡು, ಇಂದು ಸತತ ಎರಡನೇ ಬಾರಿಗೆ ಶಾಸಕರಾಗಿ ಕ್ಷೇತ್ರವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ. ‘ವಿಶ್ವವಾಣಿ ಟಿವಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಬಾಲ್ಯ, ರಾಜಕೀಯ ಪಯಣ, ಕ್ಷೇತ್ರದ ಸವಾಲುಗಳು ಮತ್ತು ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನದ ಸಾರ ಇಲ್ಲಿದೆ.
ಇದನ್ನೂ ಓದಿ: Interview with MLA Dr. Manthar Gowda: ಕೊಡಗು ಜಿಲ್ಲೆಯ ಅಭಿವೃದ್ದಿಯೇ ನನ್ನ ರಾಜಕೀಯದ ಗುರಿ !
ನಿಮ್ಮ ಬಾಲ್ಯದ ದಿನಗಳು ಹಾಗೂ ರಾಜಕೀಯ ರಂಗಪ್ರವೇಶ ಹೇಗಿತ್ತು?
ಉಮಾನಾಥ್ ಕೋಟ್ಯಾನ್: ನಾನು ಬಹಳ ಗ್ರಾಮೀಣ ಪ್ರದೇಶದಿಂದ ಬಂದವನು. ಹೊಟ್ಟೆಪಾಡಿ ಗಾಗಿ ಮಂಗಳೂರಿಗೆ ಬಂದು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ನಂತರ ಕನ್ಸ್ಟ್ರಕ್ಷನ್ ರಂಗಕ್ಕೆ ಕಾಲಿಟ್ಟೆ. ಒಬ್ಬ ಮಧ್ಯಮ ವರ್ಗದ ಗುತ್ತಿಗೆದಾರನಾಗಿದ್ದ ನನಗೆ ಭಾಷಣ ಮಾಡುವ ಹವ್ಯಾಸವಿತ್ತು. ಅದೇ ಸಂದರ್ಭದಲ್ಲಿ ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರು ನನ್ನ ಭಾಷಣ ಕೇಳಿ, ರಾಜಕೀಯಕ್ಕೆ ಕರೆ ತಂದರು. ನಾನು ಸಂಘದ ಸ್ವಯಂಸೇವಕನಾಗಿದ್ದವನು. ಸುರತ್ಕಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷನಾಗಿ ರಾಜಕೀಯ ಪಯಣ ಆರಂಭಿಸಿದೆ. ತಳಮಟ್ಟದ ಬಡತನ ಮತ್ತು ಕಷ್ಟಗಳನ್ನು ಅನುಭವಿಸಿ ಬಂದಿದ್ದರಿಂದ, ಶಾಸಕನಾದ ಮೇಲೆಯೂ ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸುವುದು ನನಗೆ ಕಷ್ಟವೆನಿಸುವುದಿಲ್ಲ.
ಶಾಸಕರಾಗಿ ನಿಮ್ಮ ಸೇವಾ ವೈಖರಿ ಹೇಗಿರುತ್ತದೆ?
ಉಮಾನಾಥ್ ಕೋಟ್ಯಾನ್: ನನ್ನ ಕಚೇರಿಗೆ ನಾನು ‘ಸೇವಕ’ ಎಂದು ಹೆಸರಿಟ್ಟಿದ್ದೇನೆ. ಚುನಾವಣೆ ಬರುವ ಆ ಒಂದು ತಿಂಗಳು ಮಾತ್ರ ನಾನು ರಾಜಕಾರಣಿ. ಗೆದ್ದ ಮೇಲೆ ನನಗೆ ಯಾವುದೇ ಪಕ್ಷ, ಜಾತಿ ಅಥವಾ ಧರ್ಮದ ಭೇದಭಾವವಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ. ಎರಡನೇ ಬಾರಿ ಚುನಾವಣೆಗೆ ಸ್ಪಽಸಿದಾಗಲೂ ನಾನು ಜನರ ಬಳಿ ನಾನು ನಿಮಗಾಗಿ ದುಡಿದಿದ್ದೇನೆ, ನನ್ನ ಕೂಲಿ ಕೊಡಿ ಎಂದೇ ಮತ ಕೇಳಿದ್ದೆ. ಜನ ಗೌರವದಿಂದ ಆಶೀರ್ವದಿಸಿದ್ದಾರೆ.
ಕ್ಷೇತ್ರದಲ್ಲಿ ನಡೆದಿರುವ ಪ್ರಮುಖ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿ?
ಉಮಾನಾಥ್ ಕೋಟ್ಯಾನ್: ಮೊದಲ ಅವಧಿಯಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಸರ್ಕಾರವಿದ್ದಾಗ ಕ್ಷೇತ್ರದಲ್ಲಿ ಬರೋಬ್ಬರಿ ರು.2600 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ.
ಆಡಳಿತ ಸೌಧ: ಮೂಡುಬಿದಿರೆ ಮತ್ತು ಮುಲ್ಕಿ ಎರಡೂ ತಾಲೂಕುಗಳಿಗೆ ತಲಾ ರು.12 ಕೋಟಿ ವೆಚ್ಚದಲ್ಲಿ ಸುಸಜ್ಜಿತ ‘ಆಡಳಿತ ಸೌಧ’ ನಿರ್ಮಿಸಲಾಗಿದೆ. ಇದಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಸ್ಪಂದಿಸಿದ್ದನ್ನು ನಾನು ಸ್ಮರಿಸುತ್ತೇನೆ.
ರಸ್ತೆ ಮತ್ತು ನೀರಾವರಿ: ಗ್ರಾಮೀಣ ಭಾಗದಲ್ಲಿ ಬಹುತೇಕ ರಸ್ತೆಗಳನ್ನು ಸಿಸಿ (ಕಾಂಕ್ರೀಟ್) ರಸ್ತೆಗಳನ್ನಾಗಿ ಮಾಡಿದ್ದೇನೆ. ಕೃಷಿಕರಿಗಾಗಿ ರು.200-300 ಕೋಟಿ ವೆಚ್ಚದಲ್ಲಿ ಕಿಂಡಿ ಆಣೆಕಟ್ಟು ಗಳನ್ನು ನಿರ್ಮಿಸಲಾಗಿದೆ.
ಧಾರ್ಮಿಕ ಕ್ಷೇತ್ರ: ಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಸುತ್ತಮುತ್ತ ರು.35 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಹಾಗೂ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಅನುದಾನದ ಕೊರತೆ ಇದೆಯೇ?
ಉಮಾನಾಥ್ ಕೋಟ್ಯಾನ್: ಖಂಡಿತವಾಗಿಯೂ ಹೌದು. ಕಳೆದ 15 ತಿಂಗಳಿಂದ ಗ್ರಾಮೀಣ ಅಭಿವೃದ್ಧಿ (ಆರ್‌ಡಿಪಿಆರ್) ಹಾಗೂ ನಗರಾಡಳಿತ ಇಲಾಖೆಯಿಂದ ಒಂದೇ ಒಂದು ರೂಪಾಯಿ ಅನುದಾನವೂ ಬಂದಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿದ್ದೇವೆ ಎಂದು ನೆಪ ಹೇಳುತ್ತಿದ್ದಾರೆ. ಆದರೆ, ಮೂಲಸೌಕರ್ಯಗಳಿಗೆ ಹಣ ನೀಡದೆ ಕರಾವಳಿಯ ಭಾಗಕ್ಕೆ ತಾರತಮ್ಯ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಪ್ರವಾಸೋದ್ಯಮ ಮತ್ತು ಶಿಕ್ಷಣದಲ್ಲಿ ಮುಂಚೂಣಿಯಲ್ಲಿವೆ. ಇಂತಹ ಜಿಲ್ಲೆಗಳನ್ನು ನಿರ್ಲಕ್ಷಿಸಬಾರದು.
ಕರಾವಳಿಯಲ್ಲಿ ಮರಳು ಹಾಗೂ ಕೆಂಪು ಕಲ್ಲಿನ ಅಭಾವದ ಬಗ್ಗೆ ನಿಲುವೇನು?
ಉಮಾನಾಥ್ ಕೋಟ್ಯಾನ್: ಮರಳು ಮತ್ತು ಲ್ಯಾಟರೈಟ್ (ಕೆಂಪು ಕಲ್ಲು) ಗಣಿಗಾರಿಕೆಯನ್ನು ಸರ್ಕಾರ ಮೈನಿಂಗ್ ನಿಯಮಾವಳಿಗೆ ಸೇರಿಸಿ ಕಠಿಣ ನಿಯಮ ಗಳನ್ನು ತಂದಿದ್ದೇ ಸಮಸ್ಯೆಗೆ ಮೂಲ ಕಾರಣ. ಇದರಿಂದ ಬಡವರಿಗೆ ರು.25ಕ್ಕೆ ಸಿಗುತ್ತಿದ್ದ ಕಲ್ಲು ಇವತ್ತು ರು.60 ಆಗಿದೆ. ಮರಳಿನ ಬೆಲೆ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ. ಸರ್ಕಾರ ಈ ನಿಯಮಗಳನ್ನು ಸರಳೀಕರಣ ಗೊಳಿಸಿ ಬಡವರಿಗೆ ಸುಲಭವಾಗಿ ಸಿಗುವಂತೆ ಮಾಡಬೇಕಿದೆ.
ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಶಾಸಕರ ಮಾತುಗಳು: 2028ರ ಸ್ಪರ್ಧೆ: ನಾನು 2028ರಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಹಿರಿಯರು ಮತ್ತು ಪಕ್ಷ ಆಜ್ಞೆ ಮಾಡಿದರೆ ಖಂಡಿತ ಸ್ಪರ್ಧಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ 120ರಿಂದ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುತ್ತೇವೆ.
![]()
ಪ್ರಧಾನಿ ನರೇಂದ್ರ ಮೋದಿ ಕುರಿತು ಹೇಳಬೇಕೆಂದರೆ, ಮೋದಿ ಅವರು ಬರಿ ವ್ಯಕ್ತಿಯಲ್ಲ, ಅದೊಂದು ಶಕ್ತಿ. 140 ಕೋಟಿ ಭಾರತೀಯರ ಹೆಮ್ಮೆಯ ಸಂಕೇತ. ಜಗತ್ತೇ ಅವರನ್ನು ಗೌರವಿಸುತ್ತದೆ.
- ಉಮಾನಾಥ್ ಕೋಟ್ಯಾನ್