ಬಿಪಿಎಲ್ ಕಾರ್ಡ್ ಇಲ್ದಿದ್ರೆ ಎಂಆರ್ʼಐ ಸ್ಕ್ಯಾನ್ ಹೊರೆ
ಒಟ್ಟು 29 ಸರಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯಗಳಿವೆ, ಸರಕಾರಿ- ಖಾಸಗಿ ಮಾದರಿಯಲ್ಲಿ ಯೋಜನೆ ಜಾರಿಯಾಗಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅನ್ವಯ ರಾಜ್ಯ ಸರಕಾರ, ಜಿಲ್ಲಾ ಆಸ್ಪತ್ರೆ ಗಳಲ್ಲಿ ನಡೆಸುತ್ತಿದ್ದ ಸಿಟಿ ಹಾಗೂ ಎಂಆರ್‌ಐ ಸ್ಕ್ಯಾನ್‌ಗಳು ನ್ನು ದುಬಾರಿಯಾಗಲಿವೆ.
-
ಎಪಿಎಲ್ ಇದ್ದವರು ಸಿ.ಟಿ., ಎಂಆರ್‌ಐಗೆ ಶೇ.70 ಹಣ ಪಾವತಿಸಬೇಕು: ಇಂದಿನಿಂದಲೇ ಜಾರಿ
ಬೆಂಗಳೂರು: ಹಲವು ವರ್ಷಗಳಿಂದ ನಡೆಯುತ್ತಿದ್ದ ಉಚಿತ ಆರೋಗ್ಯ ಪತ್ತೆ ಸೇವೆ ಇನ್ನು ಮುಂದೆ ಎಪಿಎಲ್ ಕಾರ್ಡ್‌ದಾರರಿಗೆ ತುಸು ಹೊರೆಯಾಗುವ ಸಾಧ್ಯತೆಯಿದೆ. ಸಿಟಿ ಹಾಗೂ ಎಂಆರ್‌ಐ ಸ್ಕ್ಯಾನ್‌ಗಳಿಗೆ ಶೇ.70ರಷ್ಟು ಸೇವಾ ಶುಲ್ಕವನ್ನು ಮಂಗಳವಾರದಿಂದ ಪಾವತಿಸಬೇಕು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಒಟ್ಟು 29 ಸರಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯಗಳಿವೆ, ಸರಕಾರಿ- ಖಾಸಗಿ ಮಾದರಿಯಲ್ಲಿ ಯೋಜನೆ ಜಾರಿಯಾಗಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅನ್ವಯ ರಾಜ್ಯ ಸರಕಾರ, ಜಿಲ್ಲಾ ಆಸ್ಪತ್ರೆ ಗಳಲ್ಲಿ ನಡೆಸುತ್ತಿದ್ದ ಸಿಟಿ ಹಾಗೂ ಎಂಆರ್‌ಐ ಸ್ಕ್ಯಾನ್‌ಗಳು ನ್ನು ದುಬಾರಿಯಾಗಲಿವೆ. ಎಪಿಎಲ್ ಕಾರ್ಡ್‌ದಾರರು ಮಂಗಳ ವಾರದಿಂದ ಶುಲ್ಕ ಪಾವತಿ ಮಾಡಿ ಸೇವೆ ಪಡೆಯಬೇಕಾಗಿದೆ. ಈ ಸಂಬಂಧ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಹೊರಡಿಸಿರುವ ಆದೇಶ ವಿವಾದಕ್ಕೆ ಕಾರಣವಾಗಿದೆ.
ಎಪಿಎಲ್ ಕಾರ್ಡ್ ಹೊಂದಿರುವ ರೋಗಿಗಳು ಶೇ.70ರಷ್ಟು ಹಣ ಪಾವತಿ ಮಾಡುವುದನ್ನು ಕಡ್ಡಾಯಗೊಳಿಸಿ ಯೋಜನಾ ವ್ಯಾಪ್ತಿಯಲ್ಲಿರುವ ಎಲ್ಲ ಜಿಲ್ಲಾಸ್ಪತ್ರೆಗಳಿಗೆ ಸುತ್ತೋಲೆ ರವಾನೆ ಮಾಡಲಾಗಿದೆ. ಇದರೊಂದಿಗೆ ಸುವರ್ಣ ಆರೋಗ್ಯ ಟ್ರಸ್ಟ್ ಮೂಲಕ ಔಷಧ ವಿತರಣೆ ಅನುಷ್ಠಾನ ಮಾಡಬೇಕೆಂದು ಕಡ್ಡಾಯಗೊಳಿಸಿರುವುದು ಜಿಲ್ಲಾಸ್ಪತ್ರೆ ಹಾಗೂ ರೋಗಿಗಳನ್ನು ಗೊಂದಲದಲ್ಲಿ ಮುಳುಗಿಸಲಿದೆ ಎಂಬ ಮಾತು ಕೇಳಿ ಬಂದಿದೆ. ಸೆ.18ರಂದು ಈ ಆದೇಶ ಹೊರಡಿಸಲಾಗಿದ್ದು, ಸೆ.23ರಿಂದ ಕಡ್ಡಾಯವಾಗಿ ಎಪಿಎಲ್ ಕಾರ್ಡ್‌ದಾರರು ಶೇ.70/30ರ ಪ್ರಕಾರ ಆನ್ ಲೈನ್ ಹಾಗೂ ಆಫ್ ಲೈನ್ ಪಾವತಿ ಮಾಡಬೇಕಾಗುತ್ತದೆ.
ಇದನ್ನೂ ಓದಿ: Vishweshwar Bhat Column: ದುರಂತಕ್ಕೆ ಸ್ಪಂದಿಸುವ ರೀತಿ
ಸುವರ್ಣ ಆರೋಗ್ಯ ಟ್ರಸ್ಟ್ ಮೂಲಕ ಈ ಯೋಜನೆ ಜಾರಿಗೆ ಸಿಬ್ಬಂದಿ ಕೊರತೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಇದರೊಂದಿಗೆ ಬೆಳಗ್ಗೆ 10.30ರಿಂದ ಸಂಜೆ 4.30ರವರೆಗೆ ಮಾತ್ರ ಸಮಯ ನಿಗದಿಪಡಿಸಿರುವುದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ. ಇದರಿಂದ ಸಂಜೆ ವೇಳೆ ತುರ್ತು ಚಿಕಿತ್ಸೆಗೆ ಬರುವ ರೋಗಿಗಳು ಏನು ಮಾಡಬೇಕು ಎನ್ನುವುದು ಇಲ್ಲಿನ ಪ್ರಶ್ನೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ
ಆರೋಗ್ಯಅಭಿಯಾನದ ನಿರ್ದೇಶಕರು 16 ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸೆ.23ರಿಂದ ಕಡ್ಡಾಯವಾಗಿ ಈ ಸೇವೆಯನ್ನು ಆರಂಭಿಸಬೇಕು ಸ್ಪಷ್ಟ ಆದೇಶ ಹೊರಡಿಸಿದ್ದಾರೆ. ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಬಿಜಾಪುರ, ಗದಗ, ಹಾವೇರಿ, ಬಾಗಲಕೋಟೆ, ಉಡುಪಿ, ಕಾರವಾರ, ಕೋಲಾರ, ತುಮಕೂರು, ಕೊಡಗು, ಯಾದಗಿರಿ, ಧಾರವಾಡ, ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್ ಸೌಲಭ್ಯವನ್ನು ಎಪಿಎಲ್ ಕಾರ್ಡ್‌ದಾರರು ಶುಲ್ಕ ಭರಿಸ ಬೇಕಾಗುತ್ತದೆ. ಮುಂದೆ ಇತರೆ ಜಿಲ್ಲೆಗಳಿಗೂ ವಿಸ್ತರಣೆಯಾಗುವ ನಿರೀಕ್ಷೆಯಿದೆ.
ಕೇಂದ್ರ ಸರಕಾರದ ಅನುದಾನ ಇದ್ದರೂ ರಾಜ್ಯ ಸರಕಾರ ಎಪಿಎಲ್ ಕಾರ್ಡ್ ದಾರರನ್ನು ಶುಲ್ಕ ವ್ಯಾಪ್ತಿಗೆ ತಂದಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಆರೋಗ್ಯ ಇಲಾಖೆ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಈ ಹಿಂದೆ ಶುಲ್ಕ ವಿಧಿಸುವ ಪ್ರಸ್ತಾಪವಿರಲಿಲ್ಲ: ಕೇಂದ್ರ ಸರಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಲ್ಲಿ ಸಿಟಿ ಹಾಗೂ ಎಂಆರ್‌ಐ ಸ್ಕ್ಯಾನ್ ಅನ್ನು ಬಿಪಿಎಲ್ ಕಾರ್ಡ್‌ದಾರರು ಸಂಪೂರ್ಣವಾಗಿ ಉಚಿತವಾಗಿ ಮಾಡಲು ಅವಕಾಶ ನೀಡಲಾಗಿದೆ. ಆದರೆ ಎಪಿಎಲ್ ಕಾರ್ಡ್‌ದಾರರಿಗೆ ಶೇ.30ರಷ್ಟು ರಿಯಾಯಿತಿ ದರದಲ್ಲಿ ತಪಾಸಣೆ ಮಾಡಬೇಕು. 2017-18ರಲ್ಲಿ ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಪ್ರಾರಂಭವಾದಾಗ ಎಪಿಎಲ್ ಕಾರ್ಡ್‌ದಾರರಿಗೆ ಶುಲ್ಕ ವಿಧಿಸುವ ಪ್ರಸ್ತಾಪವಿರಲಿಲ್ಲ.
ತೀರ್ಮಾನ ಮುಖ್ಯಮಂತ್ರಿಗಳಿಗೇ ಗೊತ್ತಿಲ್ಲ?
ಮೂಲಗಳ ಪ್ರಕಾರ ಆರೋಗ್ಯ ಇಲಾಖೆ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿಲ್ಲ. ಕೆಲ ಅಧಿಕಾರಿಗಳು ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಶೇ.70ರಷ್ಟು ಶುಲ್ಕ ಪಾವತಿಸಿ ಕಾಯುವ ಬದಲು ಖಾಸಗಿ ಪ್ರಯೋ ಗಾಲಯಕ್ಕೆ ರೋಗಿಗಳನ್ನು ಪರೀಕ್ಷೆಗೆ ಕರೆದೊಯ್ಯುವುದಕ್ಕೆ ಇದರಿಂದ ಜನ ಮುಂದಾಗಬಹುದು ಎನ್ನುವ ಹಲವರ ಅಭಿಪ್ರಾಯವಾಗಿದೆ
ಸಿಬ್ಬಂದಿ ಕೊರತೆ, ಸ್ಕ್ಯಾನಿಂಗ್‌ಗೆ ಬೇಕು ಅನುಮತಿ!
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಆರೋಗ್ಯ ಸೌಲಭ್ಯಗಳಲ್ಲಿ ರೋಗಿಗಳು ಎದುರಿಸುತ್ತಿರುವ ತೊಂದರೆಗಳು, ಪೂರ್ವ ಅನುಮೋದನೆಯಲ್ಲಿ ವಿಳಂಬ, ಸಿಬ್ಬಂದಿ ಕೊರತೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಲ್ಲಿ ಸರಿಯಾದ ಆರೈಕೆ ಪಡೆಯುವಲ್ಲಿನ ಸವಾಲುಗಳ ಕುರಿತು ಆರೋಗ್ಯ ಇಲಾಖೆ ಪಟ್ಟಿ ಮಾಡಿತ್ತು. ಪಡಿತರ ಚೀಟಿ ಇಲ್ಲದೆ ಆಧಾರ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಪಡಿತರ ಚೀಟಿ ಕಡ್ಡಾಯ ಎಂದು ಹೇಳಲಾಗುತ್ತಿದೆ. ಇದು ವಿವಾದಗಳಿಗೆ ಕಾರಣವಾಗಿದೆ. ಪೂರ್ವ ಅಧಿಕಾರ ನಮೂನೆಗಳು ಹಲವು ಸ್ಥಳಗಳಲ್ಲಿ ಲಭ್ಯವಿಲ್ಲ. ಅಪಘಾತಕ್ಕೊಳಗಾದ ರೋಗಿಗಳು ಸಾಮಾನ್ಯವಾಗಿ ಈ ದಾಖಲೆಗಳನ್ನು ಕೊಂಡೊಯ್ಯವುದಿಲ್ಲ. ಈ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ರೋಗಿಗಳು ಎದುರಿಸುವಂತಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಕೋಲಾರ, ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಈ ಸಮಸ್ಯೆ ಎದುರಾಗಿದೆ. ಜತೆಗೆ ಡಿಎಚ್‌ಓ, ಸೂಪರಿಟೆಂಡೆಂಟ್ ಹಾಗೂ ತಜ್ಞ ವೈದ್ಯರ ಪೈಕಿ ಒಬ್ಬರು ಸ್ಕ್ಯಾನ್‌ಗೆ ಅನುಮತಿ ನೀಡಿದ ಬಳಿಕ ಅದನ್ನು ಅಪ್ ಲೋಡ್ ಮಾಡಬೇಕು. ಅದಕ್ಕೆ ಕೇಂದ್ರ ಕಚೇರಿಯಲ್ಲಿ ಅನುಮೋದನೆ ನೀಡಿದ ಬಳಿಕವೇ ಸ್ಕ್ಯಾನಿಂಗ್ ನಡೆಸಲು ಅನುಮತಿ ಸಿಗುತ್ತದೆ. ಇದರಿಂದ ಅನಗತ್ಯ ವಿಳಂಬವಾಗಲಿದೆ ಎನ್ನುವುದು ಹಲವರ ಆರೋಪವಾಗಿದೆ.