Repo rate: ಆಗಾಗ ಕಾಡುವ ರೆಪೋ ಚಿಂತೆ
ಆರ್‌ಬಿಐ ಮತ್ತೆ ರೆಪೋ ದರವನ್ನು ಏರಿಕೆ ಮಾಡಿದೆ. ಇದರಿಂದ ಮನೆಸಾಲ, ಬ್ಯಾಂಕುಗಳಲ್ಲಿ ಖಾಸಗಿ ಸಾಲ ಸೇರಿದಂತೆ ಹಲವು ಸಾಲಗಳ ಮಾಸಿಕ ಕಂತುಗಳು ಹೆಚ್ಚಲಿವೆ. ಪ್ರತಿಬಾರಿ ಆರ್‌ಬಿಐ ಇಂತಹ ಬದಲಾವಣೆ ಮಾಡಿದಾಗಲೂ ಗ್ರಾಹಕರು ಚಿಂತಾಕ್ರಾಂತರಾಗುತ್ತಾರೆ. ಹಣದುಬ್ಬರ ನಿಯಂತ್ರಿಸಲು ಈ ವಾರ ನಿರೀಕ್ಷೆ ಯಂತೆ ರೆಪೋ ದರವನ್ನು ಏರಿಕೆ ಮಾಡಿದೆ. ಆರ್‌ಬಿಐ ಬ್ಯಾಂಕ್‌ಗಳಿಗೆ ಹಣ ನೀಡುವಾಗ ವಿಧಿಸುವ ಬಡ್ಡಿದರವನ್ನು ರೆಪೋ ಎನ್ನುತ್ತಾರೆ.
-
ರೆಪೋ ದರ ಏರಿದರೆ ಗ್ರಾಹಕರ ಸಾಲದ ಮಾಸಿಕ ಕಂತುಗಳ ಮೊತ್ತದಲ್ಲೂ ಹಠಾತ್ ಏರಿಕೆ
ಇತ್ತೀಚೆಗೆ ಆರ್‌ಬಿಐನಿಂದ ಶೇ.0.25ರಷ್ಟು ರೆಪೋ ಹೆಚ್ಚಳ, ಸಾಲದ ಕಂತುಯೇರಿಕೆ ಆತಂಕ
ಆರ್‌ಬಿಐ ಮತ್ತೆ ರೆಪೋ ದರವನ್ನು ಏರಿಕೆ ಮಾಡಿದೆ. ಇದರಿಂದ ಮನೆಸಾಲ, ಬ್ಯಾಂಕುಗಳಲ್ಲಿ ಖಾಸಗಿ ಸಾಲ ಸೇರಿದಂತೆ ಹಲವು ಸಾಲಗಳ ಮಾಸಿಕ ಕಂತುಗಳು ಹೆಚ್ಚಲಿವೆ. ಪ್ರತಿಬಾರಿ ಆರ್‌ಬಿಐ ಇಂತಹ ಬದಲಾವಣೆ ಮಾಡಿದಾಗಲೂ ಗ್ರಾಹಕರು ಚಿಂತಾಕ್ರಾಂತರಾಗುತ್ತಾರೆ. ಹಣದುಬ್ಬರ ನಿಯಂತ್ರಿಸಲು ಈ ವಾರ ನಿರೀಕ್ಷೆಯಂತೆ ರೆಪೋ ದರವನ್ನು ಏರಿಕೆ ಮಾಡಿದೆ. ಆರ್‌ಬಿಐ ಬ್ಯಾಂಕ್‌ಗಳಿಗೆ ಹಣ ನೀಡುವಾಗ ವಿಧಿಸುವ ಬಡ್ಡಿದರವನ್ನು ರೆಪೋ ಎನ್ನುತ್ತಾರೆ. ಅದರಿಂದ ದೇಶದ ಒಟ್ಟಾರೆ ಬೆಲೆಯೇರಿಕೆ ನಿಯಂತ್ರಣಕ್ಕೆ ಬರುತ್ತದೆ. ಆದರೆ ಈ ದರ ಏರಿಕೆಯಿಂದ ನಮ್ಮ ಗೃಹ ಇಲ್ಲವೇ ವಾಹನ ಸಾಲದ ಮಾಸಿಕ ಕಂತು ಯಾಕೆ ದುಬಾರಿ ಯಾಗುತ್ತವೆ? ಆರ್‌ಬಿಐನ ಒಂದು ನಿರ್ಧಾರ ನಮ್ಮ ತಿಂಗಳ ಖರ್ಚಿನ ಮೇಲೆ ಬೀರುವ ಪರಿಣಾಮಗಳೇನು? ಈ ಕುರಿತ ವಿವರ ಇಲ್ಲಿದೆ.
ಏನಿದು ರೆಪೋ ದರ?
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಉದಾಹರಣೆಗೆ ಎಸ್‌ಬಿಐ, ಕರ್ನಾಟಕ ಬ್ಯಾಂಕ್, ಎಚ್ ಡಿಎಫ್ʼಸಿ ಇತ್ಯಾದಿ ಬ್ಯಾಂಕ್‌ಗಳಿಗೆ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರವಾಗಿದೆ. ರೆಪೋ ಪದದ ಪೂರ್ಣ ರೂಪ Repurchase Option ಅಥವಾ ಮರು ಖರೀದಿ ಒಪ್ಪಂದ. ಬ್ಯಾಂಕುಗಳಲ್ಲಿ ಹಣದ ಕೊರತೆ ಎದುರಾದಾಗ ಅವು ಸರ್ಕಾರದ ಭದ್ರತಾ ಪತ್ರಗಳನ್ನು (ಬಾಂಡ್ಸ್) ಅಡಮಾನವಾಗಿ ಇಟ್ಟು ಆರ್‌ಬಿಐನಿಂದ ಸಾಲ ಪಡೆಯುತ್ತವೆ. ತದನಂತರ ಒಂದು ನಿರ್ದಿಷ್ಟ ಅವಧಿಯ ಬಳಿಕ ಆ ಹಣವನ್ನು ಬಡ್ಡಿ ಸಮೇತ ಪಾವತಿಸಿ, ತಮ್ಮ ಭದ್ರತಾ ಪತ್ರಗಳನ್ನು ಮರಳಿ ಖರೀದಿಸುವುದಾಗಿ ಒಪ್ಪಂದ ಮಾಡಿಕೊಳ್ಳುತ್ತವೆ.
ರೆಪೋ ದರ ಹೇಗೆ ಕೆಲಸ ಮಾಡುತ್ತದೆ?
ಆರ್‌ಬಿಐ ದೇಶದ ಆರ್ಥಿಕತೆ ಮತ್ತು ಹಣದುಬ್ಬರವನ್ನು (ಹಣದುಬ್ಬರ/ಬೆಲೆ ಏರಿಕೆ) ನಿಯಂತ್ರಿಸಲು ರೆಪೋ ದರವನ್ನು ಪ್ರಮುಖ ಅಸ್ತ್ರವಾಗಿ ಬಳಸುತ್ತದೆ. ರೆಪೋ ದರ ಏರಿಕೆಯಾದರೆ ಬ್ಯಾಂಕುಗಳಿಗೆ ಆರ್‌ಬಿಐನಿಂದ ಸಾಲ ಪಡೆಯುವುದು ದುಬಾರಿಯಾಗುತ್ತದೆ. ಇದರಿಂದಾಗಿ ಬ್ಯಾಂಕುಗಳು ಸಾರ್ವಜನಿಕರಿಗೆ ನೀಡುವ ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುತ್ತವೆ. ಬಡ್ಡಿ ಹೆಚ್ಚಾದಾಗ ಜನರು ಸಾಲ ಮಾಡುವುದು ಮತ್ತು ಖರ್ಚು ಮಾಡುವುದನ್ನು ಕಡಿಮೆ ಮಾಡುತ್ತಾರೆ, ಇದರಿಂದ ಮಾರುಕಟ್ಟೆಯಲ್ಲಿ ಹಣದ ಚಲಾವಣೆ ಕಡಿಮೆಯಾಗಿ ಬೆಲೆ ಏರಿಕೆ (ಹಣದುಬ್ಬರ) ನಿಯಂತ್ರಣಕ್ಕೆ ಬರುತ್ತದೆ.
ಇದನ್ನೂ ಓದಿ: Repo Rate: ಸಾಲಗಾರರಿಗೆ ರಿಲೀಫ್, ಸತತ ಐದನೇ ಸಲವೂ ರೆಪೋ ದರ ಯಥಾಸ್ಥಿತಿ 5.5% ಕಾಯ್ದುಕೊಂಡ ಆರ್‌ಬಿಐ
ರೆಪೋ ದರ ಇಳಿಕೆಯಾದರೆ ಬ್ಯಾಂಕುಗಳಿಗೆ ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ. ಇದರಿಂದ ಅವು ಗ್ರಾಹಕರಿಗೂ ಅಗ್ಗದ ದರದಲ್ಲಿ ಸಾಲ ನೀಡುತ್ತವೆ. ಮಾರುಕಟ್ಟೆಗೆ ಹಣದ ಹರಿವು ಹೆಚ್ಚಾಗಿ, ವ್ಯಾಪಾರ-ವಹಿವಾಟುಗಳು ಚುರುಕುಗೊಳ್ಳುತ್ತವೆ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ವೇಗ ಸಿಗುತ್ತದೆ. ಸರಳವಾಗಿ ಹೇಳುವುದಾದರೆ ನಮಗೆ ಬ್ಯಾಂಕುಗಳು ಹೇಗೆ ಸಾಲ ನೀಡಿ ಬಡ್ಡಿ ವಸೂಲಿ ಮಾಡುತ್ತವೆಯೋ, ಹಾಗೆಯೇ ಬ್ಯಾಂಕುಗಳಿಗೆ ಆರ್‌ಬಿಐ ಸಾಲ ನೀಡಿ ವಿಧಿಸುವ ಬಡ್ಡಿಯೇ ರೆಪೋ ದರ.
ಏನಿದು ಮಾಸಿಕ ಸಾಲದ ಕಂತುಗಳು?
ಇಎಂಐ (ಮಾಸಿಕ ಸಾಲದ ಕಂತುಗಳು) ಎಂದರೆ ನೀವು ಪಡೆದ ಸಾಲವನ್ನು ಬ್ಯಾಂಕಿಗೆ ಮರಳಿ ತೀರಿಸಲು ಪ್ರತಿ ತಿಂಗಳು ಪಾವತಿಸಬೇಕಾದ ಒಂದು ನಿಗದಿತ ಹಣದ ಮೊತ್ತ. ನೀವು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಗೃಹ ಸಾಲ, ವಾಹನ ಸಾಲ ಅಥವಾ ವೈಯಕ್ತಿಕ ಸಾಲ ಪಡೆದಾಗ, ಅದನ್ನು ಒಂದೇ ಬಾರಿ ಮರುಪಾವತಿ ಮಾಡಲು ಸಾಧ್ಯವಾಗದಿದ್ದಾಗ ಈ ಇಎಂಐ ಸೌಲಭ್ಯವನ್ನು ಬಳಸಲಾಗುತ್ತದೆ. ತಿಂಗಳ ಇಎಂಐ ಮೊತ್ತದಲ್ಲಿ ಎರಡು ಪ್ರಮುಖ ಭಾಗಗಳಿರುತ್ತವೆ ಮೊದಲನೆಯದ್ದು ಅಸಲು. ಇದು ನೀವು ಬ್ಯಾಂಕಿನಿಂದ ಪಡೆದ ಮೂಲ ಸಾಲದ ಒಂದು ಸಣ್ಣ ಭಾಗ. ಎರಡನೆಯದ್ದು ಬಡ್ಡಿ. ಆ ಸಾಲಕ್ಕೆ ಬ್ಯಾಂಕ್ ವಿಧಿಸುವ ಶುಲ್ಕದ ಒಂದು ಭಾಗ. ಸಾಲದ ಆರಂಭದ ದಿನಗಳಲ್ಲಿ ನೀವು ಪಾವತಿಸುವ ಇಎಂಐನಲ್ಲಿ ಬಡ್ಡಿಯ ಭಾಗ ಹೆಚ್ಚಿರುತ್ತದೆ ಮತ್ತು ಅಸಲಿನ ಭಾಗ ಕಡಿಮೆ ಇರುತ್ತದೆ. ಸಾಲದ ಅವಧಿ ಮುಗಿಯುತ್ತಾ ಬಂದಂತೆ ಬಡ್ಡಿಯ ಭಾಗ ಕಡಿಮೆಯಾಗಿ, ಅಸಲು ಬೇಗನೆ ಕಳೆಯುತ್ತದೆ.
ಯಾವ ರೀತಿ ಬಡ್ಡಿ ದರ ಇರುತ್ತೆ?
ಬ್ಯಾಂಕುಗಳು ಎರಡು ರೀತಿಯ ಬಡ್ಡಿ ದರದಲ್ಲಿ ಸಾಲ ನೀಡುತ್ತವೆ.
ಸ್ಥಿರ ಬಡ್ಡಿ ದರ (ಫಿಕ್ಸೆಡ್ ಇಂಟೆರೆಸ್ಟ್ ರೇಟ್): ನಿಮ್ಮ ಸಾಲದ ಸಂಪೂರ್ಣ ಅವಧಿಗೆ ಬಡ್ಡಿ ದರವು ಒಂದೇ ಸಮನಾಗಿರುತ್ತದೆ. ಮಾರುಕಟ್ಟೆಯಲ್ಲಿ ಅಥವಾ ಆರ್‌ಬಿಐ ರೆಪೋ ದರದಲ್ಲಿ ಎಷ್ಟೇ ಏರಿಳಿತಗಳಾದರೂ ಈ ಬಡ್ಡಿ ದರ ಬದಲಾಗುವುದಿಲ್ಲ.
ಫ್ಲೋಟಿಂಗ್ ಬಡ್ಡಿ ದರ: ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಬದಲಾಗುವ ಬಡ್ಡಿ ದರ. ಇದು ಆರ್‌ಬಿಐನ ರೆಪೋ ದರಕ್ಕೆ ನೇರವಾಗಿ ಲಿಂಕ್ ಆಗಿರುತ್ತದೆ.
ಇಎಂಐ ಎಷ್ಟು ಏರಿಕೆಯಾಗಬಹುದು?
ಉದಾಹರಣೆಗೆ 5 ಲಕ್ಷ ರು. ವೈಯಕ್ತಿಕ ಸಾಲವನ್ನು ಶೇ.11ರ ಬಡ್ಡಿದರದಲ್ಲಿ 5 ವರ್ಷಗಳ (60 ತಿಂಗಳು) ಅವಧಿಗೆ ಪಡೆದಿದ್ದೀರಿ ಎಂದು ಭಾವಿಸೋಣ ಬಡ್ಡಿದರ ಏರಿಕೆಗೆ ಮುನ್ನ ಪ್ರತಿ ತಿಂಗಳು 10,871 ರು. ಇಎಂಐ ಇದ್ದರೆ ಬಡ್ಡಿ ದರ ಶೇ.0.25 ಹೆಚ್ಚಾಗಿರುವುದರಿಂದ ಇಎಂಐ ಶೇ.11.25 ಹೆಚ್ಚಾಗಿ 10,934 ರು.ಗೆ ಏರಿಕೆಯಾಗಲಿದೆ. ಪ್ರತಿ ತಿಂಗಳು ಸುಮಾರು 63 ರು. ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಅಂದರೆ ಇದೇ ಬಡ್ಡಿ ದರ ಇದ್ದರೆ 5 ವರ್ಷಗಳಲ್ಲಿ ನೀವು ಪಾವತಿಸುವ ಒಟ್ಟು ಹೆಚ್ಚುವರಿ ಹಣ ಸುಮಾರು 3,747 ರು. ಆಗಬಹುದು.
ಬೇರೆ ಯಾವ ದೇಶಗಳು ಬಡ್ಡಿ ದರ ಏರಿಸಿವೆ?
ಯುದ್ಧ ಮತ್ತು ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಕಾರಣ ಯುರೋ ವಲಯ, ಜಪಾನ್, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಜಮೈಕಾ ದೇಶಗಳು ಬಡ್ಡಿ ದರವನ್ನು ಏರಿಕೆ ಮಾಡಿದೆ. ರೆಪೋ ದರ ಏರಿಕೆಯಾದಾಗ ಗಾಬರಿಯಾಗುವ ಬದಲು, ನಿಮ್ಮ ಸಾಲದ ಅವಧಿ ಮತ್ತು ಬಡ್ಡಿ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳಲು ಜಾಣ್ಮೆಯ ಹಣಕಾಸು ನಿರ್ಧಾರ ಅಗತ್ಯ. ಬಜೆಟ್ ನಲ್ಲಿ ಅನಗತ್ಯ ಖರ್ಚುಗಳಿಗೆ ಕತ್ತರಿ ಹಾಕಿ, ಸಾಧ್ಯವಾದರೆ ಸಾಲದ ಅಸಲಿಗೆ ಹೆಚ್ಚುವರಿ ಮೊತ್ತವನ್ನು ಪಾವತಿಸುವುದು ಅಥವಾ ಕಡಿಮೆ ಬಡ್ಡಿದರ ನೀಡುವ ಬ್ಯಾಂಕ್‌ಗಳಿಗೆ ಸಾಲ ವರ್ಗಾವಣೆ ಮಾಡಿಕೊಳ್ಳುವುದು ಉತ್ತಮ ಪರಿಹಾರ. ಆರ್‌ಬಿಐನ ಬಡ್ಡಿದರದ ಆಟದಲ್ಲಿ ಜಾಣತನದ ಯೋಜನೆಯೊಂದೇ ನಿಮ್ಮ ಜೇಬನ್ನು ಉಳಿಸಬಲ್ಲ ಅಸ್ತ್ರ.
ರೆಪೋ ದರ ಎಷ್ಟು ಏರಿಕೆಯಾಗಿದೆ?
ಭಾರತೀಯ ರಿಸರ್ವ್ ಬ್ಯಾಂಕ್, ಅಕ್ಟೋಬರ್ 7ರಂದು ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೋ ದರವನ್ನು ಶೇ.0.25ರಷ್ಟು (25 ಬೇಸಿಸ್ ಪಾಯಿಂಟ್ಸ್) ಏರಿಕೆ ಮಾಡಿದೆ. ಇದರಿಂದಾಗಿ ಪ್ರಸ್ತುತ ರೆಪೋ ದರವು ಶೇ.5.25ರಿಂದ ಶೇ 5.50ಕ್ಕೆ ಏರಿಕೆಯಾಗಿದೆ. ಫೆಬ್ರವರಿ 2023ರ ನಂತರ, ಅಂದರೆ ಸುಮಾರು ಮೂರೂವರೆ ವರ್ಷಗಳ ಬಳಿಕ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಜಾಗತಿಕ ವಾಗಿ ಹೆಚ್ಚುತ್ತಿರುವ ಆಹಾರ ಮತ್ತು ಇಂಧನ ಬೆಲೆಗಳ ಏರಿಕೆ ಹಾಗೂ ಮುಂಗಾರು ಮಳೆಯ ಕೊರತೆಯಿಂದಾಗಿ ಎದುರಾಗಿರುವ ಹಣದುಬ್ಬರದ ಒತ್ತಡವನ್ನು ತಡೆಯಲು ಈ ಕ್ರಮ ಕೈಗೊಳ್ಳ ಲಾಗಿದೆ. ಮಧ್ಯಪ್ರಾ ಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಪೂರೈಕೆ ಸರಪಳಿಗೆ ಅಡ್ಡಿಯಾಗು ತ್ತಿರುವುದು ಈ ನಿರ್ಧಾರಕ್ಕೆ ಕಾರಣ.
ರೆಪೋ ದರಕ್ಕೂ ಅಮೆರಿಕದ ಬಡ್ಡಿದರಕ್ಕೂ ಸಂಬಂಧ ಇದ್ಯಾ?
ಡಾಲರ್ ವಿಶ್ವದ ಕರೆನ್ಸಿಯಾಗಿರುವ ಕಾರಣ ಭಾರತದ ರೆಪೋ ದರ ಏರಿಕೆಗೂ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆಗೂ ನೇರವಾದ ಮತ್ತು ಬಲವಾದ ಸಂಬಂಧವಿದೆ. ಜಾಗತಿಕ ಆರ್ಥಿಕತೆಯಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಕೈಗೊಳ್ಳುವ ನಿರ್ಧಾರಗಳು ಭಾರತದ ಆರ್‌ಬಿಐ ಮೇಲೆ ತಕ್ಷಣ ಪ್ರಭಾವ ಬೀರುತ್ತವೆ. ಅಕ್ಟೋಬರ್ 2026ರಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ತನ್ನ ಬಡ್ಡಿದರವನ್ನು 25 ಬೇಸಿಸ್ ಪಾಯಿಂಟ್ ಹೆಚ್ಚಿಸಿದ ಬೆನ್ನಲ್ಲೇ, ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ತನ್ನ ರೆಪೋ ದರವನ್ನು ಶೇ.5. 25ರಿಂದ ಶೇ.5.50ಕ್ಕೆ ಹೆಚ್ಚಿಸಿದೆ. ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಬಡ್ಡಿದರವನ್ನು ಹೆಚ್ಚಿಸಿದಾಗ, ಅಲ್ಲಿನ ಸರ್ಕಾರಿ ಬಾಂಡ್‌ಗಳ ಮೇಲಿನ ಲಾಭ ಹೆಚ್ಚಾಗುತ್ತದೆ. ಇದರಿಂದಾಗಿ ಜಾಗತಿಕ ಹೂಡಿಕೆದಾರರು ಭಾರತದಂ ತಹ ಉದಯೋನ್ಮುಖ ಮಾರುಕಟ್ಟೆಗಳಿಂದ ತಮ್ಮ ಹಣವನ್ನು ಹಿಂತೆಗೆದುಕೊಂಡು, ಸುರಕ್ಷಿತವಾಗಿರುವ ಅಮೆರಿಕದ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಆರಂಭಿಸುತ್ತಾರೆ. ಭಾರತದಿಂದ ಈ ರೀತಿ ಡಾಲರ್ ಹೊರ ಹೋಗುವುದನ್ನು ತಡೆಯಲು ಆರ್‌ಬಿಐ ಕೂಡ ಇಲ್ಲಿ ರೆಪೋ ದರವನ್ನು ಹೆಚ್ಚಿಸಿ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಬೇಕಾಗುತ್ತದೆ. ಅಮೆರಿಕದಲ್ಲಿ ಬಡ್ಡಿದರ ಹೆಚ್ಚಾದಾಗ ಜಾಗತಿಕವಾಗಿ ಡಾಲರ್‌ಗೆ ಬೇಡಿಕೆ ಹೆಚ್ಚಾಗಿ ಅದು ಬಲಿಷ್ಠಗೊಳ್ಳುತ್ತದೆ. ಪರಿಣಾಮವಾಗಿ ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿಯಲಾರಂಭಿಸುತ್ತದೆ. ರುಪಾಯಿಯ ಈ ತೀವ್ರ ಕುಸಿತವನ್ನು ತಡೆದು, ಕರೆನ್ಸಿಯನ್ನು ಸ್ಥಿರವಾಗಿಡಲು ಆರ್‌ಬಿಐ ತನ್ನ ರೆಪೋ ದರವನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗುತ್ತದೆ.
ಮಾಸಿಕ ಕಂತು ನಿರ್ಧರಿಸುವ 3 ಪ್ರಮುಖ ಅಂಶಗಳು
ಸಾಲದ ಮೊತ್ತ: ನೀವು ಬ್ಯಾಂಕಿನಿಂದ ಎಷ್ಟು ಹಣವನ್ನು ಸಾಲವಾಗಿ ಪಡೆದಿದ್ದೀರಿ ಎನ್ನುವುದು ಮೊದಲ ಮುಖ್ಯ ಅಂಶ. ಈ ಮೊತ್ತ ಹೆಚ್ಚಾದಷ್ಟೂ ಇಎಂಐ ಕೂಡ ಹೆಚ್ಚಿರುತ್ತದೆ.
ಬಡ್ಡಿ ದರ: ಬ್ಯಾಂಕ್ ನಿಮ್ಮ ಸಾಲಕ್ಕೆ ವಿಧಿಸುವ ವಾರ್ಷಿಕ ಬಡ್ಡಿಯ ಶೇಕಡಾವಾರು ದರ ಇನ್ನೊಂದು ಪ್ರಮುಖ ಅಂಶ. ಈ ಬಡ್ಡಿ ದರ ಹೆಚ್ಚಾದರೆ ಇಎಂಐ ಕೂಡ ಸಹಜವಾಗಿ ಹೆಚ್ಚಾಗುತ್ತದೆ.
ಸಾಲದ ಅವಧಿ: ಸಾಲವನ್ನು ತೀರಿಸಲು ನೀವು ತೆಗೆದುಕೊಳ್ಳುವ ಒಟ್ಟು ತಿಂಗಳು ಅಥವಾ ವರ್ಷಗಳು. ಈ ಅವಧಿ ಹೆಚ್ಚಾದರೆ ತಿಂಗಳ ಇಎಂಐ ಕಡಿಮೆಯಾಗುತ್ತದೆ, ಆದರೆ ನೀವು ಬ್ಯಾಂಕಿಗೆ ಪಾವತಿಸುವ ಒಟ್ಟು ಬಡ್ಡಿಯ ಮೊತ್ತ ಹೆಚ್ಚಾಗುತ್ತದೆ.