Vishweshwar Bhat Column: ಲೇಪಿಸ್‌ ಲಜುಲಿ ಕಥೆ

ಕರಾಚಿಯಲ್ಲಿರುವ ದಂತವೈದ್ಯರ ಮೂಲಕ, ಬಹಳ ಪ್ರಯಾಸಪಟ್ಟು, ನುಸ್ರತ್ ಭುಟ್ಟೋರನ್ನು ಸಿಂಗ್ ಅಧಿಕೃತವಾಗಿ ಭೇಟಿ ಮಾಡಿದರಂತೆ. “ನುಸ್ರತ್ ಭುಟ್ಟೋ ಮನೆಯ ಜಗುಲಿಯನ್ನು ಪ್ರವೇಶಿಸು ತ್ತಿದ್ದಂತೆ, ‘ಲೇಪಿಸ್ ಲಜುಲಿ’ ಕಲ್ಲಿನಲ್ಲಿ ಕೊರೆದ ಫ್ರೇಮಿನಲ್ಲಿ ಪತಿ ಝುಲಿಕರ್-ಅಲಿ-ಭುಟ್ಟೋ ಅವರ ಭಾವಚಿತ್ರ ಥಟ್ಟನೆ ವಿಶೇಷವಾಗಿ ಆಕರ್ಷಿಸಿತು

Natwar singh Book
Profile Ashok Nayak January 21, 2025

Source : Vishwavani Daily News Paper

ಸಂಪಾದಕರ ಸದ್ಯಶೋಧನೆ

Vishweshwar Bhat (ರೆಗ್ಯುಲರ್)

ವಿಶ್ವೇಶ್ವರ ಭಟ್

ದಿವಂಗತ ರಾಜತಾಂತ್ರಿಕ ಮತ್ತು ರಾಜಕಾರಣಿ ಕೆ.ನಟವರ ಸಿಂಗ್ ತಾವು ಬರೆದ Walking With Lions: Tales from a Diplomatic Past ಎಂಬ ಪುಸ್ತಕದ ಒಂದು ಅಧ್ಯಾಯವನ್ನು ಪಾಕಿಸ್ತಾನದ ದಿವಂಗತ ಪ್ರಧಾನಿ ಝುಲಿಕರ್-ಅಲಿ-ಭುಟ್ಟೋ ಅವರ ಪತ್ನಿ ನುಸ್ರತ್ ಭುಟ್ಟೋ ಅವರ ಭೇಟಿಗಾಗಿ ಮೀಸಲಿ ಟ್ಟಿದ್ದಾರೆ.

ಕರಾಚಿಯಲ್ಲಿರುವ ದಂತವೈದ್ಯರ ಮೂಲಕ, ಬಹಳ ಪ್ರಯಾಸಪಟ್ಟು, ನುಸ್ರತ್ ಭುಟ್ಟೋರನ್ನು ಸಿಂಗ್ ಅಧಿಕೃತವಾಗಿ ಭೇಟಿ ಮಾಡಿದರಂತೆ. “ನುಸ್ರತ್ ಭುಟ್ಟೋ ಮನೆಯ ಜಗುಲಿಯನ್ನು ಪ್ರವೇಶಿಸು ತ್ತಿದ್ದಂತೆ, ‘ಲೇಪಿಸ್ ಲಜುಲಿ’ ಕಲ್ಲಿನಲ್ಲಿ ಕೊರೆದ ಫ್ರೇಮಿನಲ್ಲಿ ಪತಿ ಝುಲಿಕರ್-ಅಲಿ-ಭುಟ್ಟೋ ಅವರ ಭಾವಚಿತ್ರ ಥಟ್ಟನೆ ವಿಶೇಷವಾಗಿ ಆಕರ್ಷಿಸಿತು. ಆ ಭಾವಚಿತ್ರ ಮತ್ತು ಅದರ ಫ್ರೇಮ್‌ನ ಮೇಲೆ ನೆಟ್ಟ ದೃಷ್ಟಿಯನ್ನು ಬೇರೆಡೆಗೆ ಹೊರಳಿಸಲು ಸಾಧ್ಯವಾಗಲಿಲ್ಲ. ಝುಲ್ಫಿಕರ್ -ಅಲಿ-ಭುಟ್ಟೋಗೆ ಅಪರೂಪದ ಅಭಿರುಚಿ ಇತ್ತು" ಎಂದು ನಟವರ ಸಿಂಗ್ ಬರೆಯುತ್ತಾರೆ.

ನನಗೆ ಈ ಸಾಲುಗಳನ್ನು ಓದುತ್ತಿದ್ದಂತೆ, ಆಕರ್ಷಿಸಿದ್ದು ಲೇಪಿಸ್ ಲಜುಲಿ (Lapis lazuli ) ಪದ. ರಷ್ಯಾದ ರಾಜಧಾನಿ ಮಾಸ್ಕೋದ ಕ್ರೆಮ್ಲಿನ್‌ನಲ್ಲಿರುವ ಅರಮನೆಯಲ್ಲಿ, ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿದ್ದರು. ಡಾ.ಕಲಾಂ ನಿಯೋಗ ದಲ್ಲಿ ನಾನೂ ಇದ್ದೆ.

ಭಾರತದ ರಾಷ್ಟ್ರಪತಿಯವರ ಗೌರವಾರ್ಥ ರಷ್ಯಾದ ಅಧ್ಯಕ್ಷರು ಔತಣಕೂಟ ಏರ್ಪಡಿಸಿದ್ದರು. ಇಬ್ಬರೂ ನಾಯಕರು ಔತಣಕೂಟಕ್ಕೆ ಆಗಮಿಸಿ ಆಸೀನರಾದರು. ಅವರ ಹಿಂದೆ ಲೆನಿನ್ ಅವರ ದೊಡ್ಡದಾದ ಭಾವಚಿತ್ರವಿತ್ತು. ಅದಕ್ಕೆ ಲೇಪಿಸ್ ಲಜುಲಿ ಕಲ್ಲಿನ ಫ್ರೇಮ್ ಅನ್ನು ತೊಡಿಸಲಾಗಿತ್ತು. ಸಹಜವಾಗಿ ಲೆನಿನ್ ಬಗ್ಗೆ ಗೊತ್ತಿದ್ದ ಡಾ.ಕಲಾಂ, ಆ ಫ್ರೇಮ್ ಬಗ್ಗೆ ಕೇಳಿದರು.

ಆಗ ಪುಟಿನ್ ಪಕ್ಕದಲ್ಲಿದ್ದ ಅಧಿಕಾರಿ ಲೇಪಿಸ್ ಲಜುಲಿ ಕಲ್ಲಿನ ಬಗ್ಗೆ ಡಾ.ಕಲಾಂ ಅವರಿಗೆ ವಿವರಿಸಿ ದರು. ಈ ಕಲ್ಲಿನ ಬಗ್ಗೆ ಖ್ಯಾತ ಪತ್ರಕರ್ತ ಮತ್ತು ಅಂಕಣಕಾರ ಸೈಮನ್ ಜಂಕಿ ಸಹ ತಮ್ಮ ಬರಹ ದಲ್ಲಿ ಪ್ರಸ್ತಾಪಿಸಿದ್ದರು. “ಬಕಿಂಗ್ ಹ್ಯಾಮ್ ಅರಮನೆಯ ಪಡಸಾಲೆಯಲ್ಲಿ ಎಲಿಜಬೆತ್ ರಾಣಿ ಗಂಭೀರವಾಗಿ ಆಸೀನರಾಗಿದ್ದರು. ಅವರ ಹಿಂದಿದ್ದ ಟೇಬಲ್ ಮೇಲಿಟ್ಟ ಲೇಪಿಸ್ ಲಜುಲಿ ಕಲ್ಲು ಅವರ ಗಾಂಭೀರ್ಯಕ್ಕೆ ಪುಟವಿಟ್ಟಂತಿತ್ತು" ಎಂದು ಜಂಕಿ ಬರೆದಿದ್ದರು.

ಲೇಪಿಸ್ ಲಜುಲಿ ಕಲ್ಲಿನ ಆಕರ್ಷಣೆಗೆ ಅದರ ಆಕರ್ಷಕ, ಕೋರೈಸುವ ಬಣ್ಣವೇ ಕಾರಣ. ದಟ್ಟ ನೀಲಿ ಬಣ್ಣದ ಲೇಪಿಸ್ ಲಜುಲಿ ಭಾಗಶಃ ಸ್ಪರ್ಶಮಣಿ ( semi-precious ). ಇದು ಮೂಲತಃ ಆಳವಾದ ನೀಲಿ ಬಣ್ಣ ಮತ್ತು ಬಂಗಾರದ ಬಣ್ಣದ ಪೈರೈಟ್ ಸೇರ್ಪಡೆಗಳಿಂದ ಜನಪ್ರಿಯವಾಗಿದೆ. ಈ ಕಲ್ಲನ್ನು ಶತಮಾನಗಳ ಹಿಂದಿನಿಂದಲೂ ಅಲಂಕಾರ ಮತ್ತು ಆಭರಣಗಳಲ್ಲಿ ಬಳಸಲಾಗುತ್ತಿದೆ.

ಲೇಪಿಸ್ ಲಜುಲಿ ಸಾಮಾನ್ಯವಾಗಿ ಅಫ್ಘಾನಿಸ್ತಾನ, ಚಿಲಿ ಮತ್ತು ರಷ್ಯಾದಂಥ ದೇಶಗಳಲ್ಲಿ ಕಂಡು ಬರುತ್ತದೆ. ಈ ಕಲ್ಲಿನ ನಿಕ್ಷೇಪ ಮೊದಲು ಇಂಡಸ್ ಕಣಿವೆ ನಾಗರಿಕತೆಯ ಭೀರ್ರಾನದಲ್ಲಿ ಕಂಡು ಬಂದಿತೆಂದು ಹೇಳುತ್ತಾರೆ.

ಈ ಕಲ್ಲನ್ನು ಆಭರಣಗಳಲ್ಲಿ, ಮೂರ್ತಿಗಳನ್ನು ಮಾಡಲು ಮತ್ತು ಕಟ್ಟಡಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ಪ್ರಾಚೀನ ಈಜಿಪ್ಟ್ ನಲ್ಲಿ ಇದನ್ನು ರಾಜರ ಸಮಾಧಿಗಳನ್ನು ಅಲಂಕರಿಸಲು ವ್ಯಾಪಕವಾಗಿ ಬಳಸಲಾಗುತ್ತಿತ್ತು. ವಿವಿಧ ಸಂಸ್ಕೃತಿಗಳಲ್ಲಿ ಲೇಪಿಸ್ ಲಜುಲಿಗೆ ವಿವಿಧ ಅರ್ಥಗಳನ್ನು ನೀಡಲಾಗಿದೆ. ಇದನ್ನು ಸತ್ಯ, ಜ್ಞಾನ ಮತ್ತು ಆಕಾಶದೊಂದಿಗೆ ಸಂಬಂಧಿಸಲಾಗಿದೆ.

ಹೀಗಾಗಿ ಗಣ್ಯರ ಮನೆಗಳಲ್ಲಿ ಇದಕ್ಕೆ ಅಲಂಕಾರಿಕ ಮಹತ್ವ ಪ್ರಾಪ್ತವಾಗಿದೆ. ಇದನ್ನು ಷೋಪೀಸ್ ಆಗಿಯೂ ಟೇಬಲ್ಲಿನ ಮೇಲೆ ಇಡುವುದುಂಟು. ಇದರ ಬೆಲೆಯನ್ನು ನಿಗದಿಪಡಿಸುವುದು ಕಷ್ಟ. ಬಹುತೇಕ ಸಂದರ್ಭಗಳಲ್ಲಿ ಹೇಳಿದ ಬೆಲೆಗೆ ಖರೀದಿಸುವುದುಂಟು. ಲೇಪಿಸ್ ಲಜುಲಿ ಗಟ್ಟಿಯಾದ ಕದರೂ ಅದರ ವೈಶಿಷ್ಟ್ಯವೆಂದರೆ ಕೆತ್ತನೆಗೆ ಸುಲಭ. ಇಂದಿನ ದಿನಗಳಲ್ಲಿ ಲೇಪಿಸ್ ಲಜುಲಿಗೆ ಭಾರಿ ಬೇಡಿಕೆ. ವಿವಿಧ ರೀತಿಯ ಆಭರಣಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ. ಕಡಗ, ಕಿವಿಯೋಲೆ ಮತ್ತು ಗೊಂಚಲುಗಳಂಥ ಆಭರಣಗಳಲ್ಲಿ ಲೇಪಿಸ್ ಲಜುಲಿಯನ್ನು ಕಾಣಬಹುದು.

ಇದನ್ನೂ ಓದಿ: Vishweshwar Bhat Column: ಸೀತಾಪತಿ ಮನೋಭಾವದವರು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ