Karthik Mahesh: ʻಆಲ್ಫಾʼ ಚಿತ್ರತಂಡಕ್ಕೆ ಸಾಥ್ ನೀಡಿದ ನಟ ಶ್ರೀಮುರಳಿ; ಈ ಸಿನಿಮಾ ಯಾವಾಗ ರಿಲೀಸ್?
Alpha: Men love Vengeance Movie Release: ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ʻಆಲ್ಫಾʼ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಹೇಮಂತ್ ಕುಮಾರ್ ನಾಯಕನಾಗಿ ನಟಿಸಿರುವ ಈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
-
ಎಲ್ ಎ ಪ್ರೊಡಕ್ಷನ್ಸ್ ಅಡಿಯಲ್ಲಿ ಆನಂದ್ ಕುಮಾರ್ ನಿರ್ಮಿಸಿ, ವಿಜಯ್ ನಿರ್ದೇಶನ ಮಾಡಿರುವ ಹಾಗೂ ಹೇಮಂತ್ ಕುಮಾರ್ ಹೀರೋ ಆಗಿ ಕಾಣಿಸಿಕೊಂಡಿರುವ ʻಆಲ್ಫಾ: Men love Vengeanceʼ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ ಅನ್ನು ʻರೋರಿಂಗ್ ಸ್ಟಾರ್ʼ ಶ್ರೀಮುರಳಿ ಅವರು ರಿಲೀಸ್ ಮಾಡಿದ್ದು ವಿಶೇಷ. ಸದ್ಯ ಟ್ರೇಲರ್‌ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಕೂಡ ನಟಿಸಿದ್ದಾರೆ. ಈವರೆಗೂ ಮಾಡಿರದ ಪಾತ್ರದಲ್ಲಿ ಅವರು ನಟಿಸಿದ್ದಾರಂತೆ.
ಶ್ರೀಮುರಳಿ ಏನಂದ್ರು?
"ಇದು ಹೇಮಂತ್ ಕುಮಾರ್ ಅವರ ಅಭಿನಯದ ಮೊದಲ ಸಿನಿಮಾ. ಟ್ರೇಲರ್ ನೋಡಿದಾಗ ಹೇಮಂತ್ ಈ ಚಿತ್ರಕ್ಕೆ ಮಾಡಿಕೊಂಡ ತಯಾರಿ ಕಂಡು ಸಂತೋಷವಾಯಿತು. ಇಡೀ ತಂಡದ ಶ್ರಮ ಎದ್ದು ಕಾಣುತ್ತಿದೆ. ಸಿನಿಮಾ ಕೂಡ ಚೆನ್ನಾಗಿ ಮೂಡಿಬಂದಿರುವ ಭರವಸೆ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲಿ" ಎಂದು ನಟ ಶ್ರೀಮುರಳಿ ಹಾರೈಸಿದರು.
Sriimurali: 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ' ಹೀರೋ ದೀಕ್ಷಿತ್ ಶೆಟ್ಟಿಗೆ ಸಾಥ್ ನೀಡಿದ ಶ್ರೀಮುರಳಿ
ನಾನು ಹೀರೋ ಆಗಲು ಉಗ್ರಂ ಸಿನಿಮಾ ಸ್ಪೂರ್ತಿ
"ನಾನು ಶ್ರೀಮುರಳಿ ಅವರ ದೊಡ್ಡ ಅಭಿಮಾನಿ. ಇಂದು ನಟನಾಗಲು ಶ್ರೀಮುರಳಿ ಅವರ ಉಗ್ರಂ ಸೇರಿದಂತೆ ಹಲವು ಚಿತ್ರಗಳೇ ಸ್ಪೂರ್ತಿ. ತುಂಬಾ ಬಹಳ ಇಷ್ಟಪಡುವ ಶ್ರೀಮುರಳಿ ಅವರಿಂದಲೇ ನನ್ನ ಮೊದಲ ಸಿನಿಮಾದ ಟ್ರೇಲರ್ ಅನಾವರಣವಾಗಿದ್ದು ಬಹಳ ಖುಷಿಯಾಗಿದೆ. ನಾಯಕನಾಗಬೇಕೆಂಬುದು ನನಗೆ ಮೊದಲಿನಿಂದಲೂ ಆಸೆ. ಅದು ಈಗ ಈಡೇರಿದೆ. ಆದರೆ ನಾನು ನಾಯಕನಾಗಿ ನಟಿಸಲು ಬೇಕಾದ ಪೂರ್ವ ತಯಾರಿಗಳನ್ನೆಲ್ಲಾ ಮಾಡಿಕೊಂಡೆ ಅಭಿನಯಿಸಲು ಆರಂಭ ಮಾಡಿದ್ದು. ನಿರ್ದೇಶಕ ವಿಜಯ್ ಅವರು ಸೇರಿದಂತೆ ಚಿತ್ರತಂಡದ ಸಹಕಾರ ಅಪಾರ. ನಮ್ಮ ಸಿನಿಮಾ ಫೆಬ್ರವರಿ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ" ಅಂತಾರೆ ನಟ ಹೇಮಂತ್ ಕುಮಾರ್ ಹೇಳಿದರು.
Mahalaya Movie: ಮೋಹನ್ ಮಾಯಣ್ಣ ನಿರ್ದೇಶನದ ʼಮಹಾಲಯʼ ಚಿತ್ರಕ್ಕೆ ನಟ ಶ್ರೀಮುರಳಿ ಚಾಲನೆ
ಹೇಮಂತ್ ಕುಮಾರ್, ಕಾರ್ತಿಕ್ ಮಹೇಶ್ ಜೊತೆಗೆ ಅಚ್ಯುತಕುಮಾರ್, ಅವಿನಾಶ್, ವಿನಯ್ ಬಿದ್ದಪ್ಪ, ಗಿರಿರಾಜ್ ಮುಂತಾದ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಮಾಸ್ತಿ ಅವರು ಈ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ.