ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಚಿತ ಭಾಗ್ಯ ಅಂದೇ ಇತ್ತು!

ನಾವೆಲ್ಲ ತಿಳಿದಿರುವಂತೆ ಸರಕಾರದಿಂದ ಕೊಡಲ್ಪಡುವ ಉಚಿತ ಭಾಗ್ಯಗಳು ಈಗೊಂದು 2 ದಶಕಗಳಿಂದ ಶುರುವಾಯಿತು. ಅದರಲ್ಲೂ ತಮಿಳುನಾಡಿನ ಆಗಿನ ಮುಖ್ಯಮಂತ್ರಿ ದಿವಂಗತ ಜಯಲಲಿತ ಅವರೇ ಇದರ ಮೂಲ ವ್ಯಕ್ತಿ ಎಂಬುದೇ ಎಲ್ಲರ ತಿಳುವಳಿಕೆ. ಆದರೆ ಇವೆಲ್ಲಕ್ಕಿಂತ ಮುಂಚೆ (ನಾಲ್ಕು ದಶಕಗಳ ಹಿಂದೆ) 1980ರ ದ್ವಿತೀಯಾರ್ಧದಲ್ಲಿ ಬಹಳಷ್ಟು ಜನರಿಗೆ ಹಿಂಬಾಗಿಲಿನಿಂದ ಈ ಉಚಿತ ಭಾಗ್ಯ ದೊರೆಯಿತು.

ಉಚಿತ ಭಾಗ್ಯ ಅಂದೇ ಇತ್ತು!

-

Profile
Ashok Nayak Jun 29, 2026 3:51 PM

ಪ್ರಸ್ತುತ

ಮುಕುಂದ ದಾವಣಗೆರೆ

ನಾವೆಲ್ಲ ತಿಳಿದಿರುವಂತೆ ಸರಕಾರದಿಂದ ಕೊಡಲ್ಪಡುವ ಉಚಿತ ಭಾಗ್ಯಗಳು ಈಗೊಂದು 2 ದಶಕ ಗಳಿಂದ ಶುರುವಾಯಿತು. ಅದರಲ್ಲೂ ತಮಿಳುನಾಡಿನ ಆಗಿನ ಮುಖ್ಯಮಂತ್ರಿ ದಿವಂಗತ ಜಯಲಲಿತ ಅವರೇ ಇದರ ಮೂಲ ವ್ಯಕ್ತಿ ಎಂಬುದೇ ಎಲ್ಲರ ತಿಳುವಳಿಕೆ. ಆದರೆ ಇವೆಲ್ಲಕ್ಕಿಂತ ಮುಂಚೆ (ನಾಲ್ಕು ದಶಕಗಳ ಹಿಂದೆ) 1980ರ ದ್ವಿತೀಯಾರ್ಧದಲ್ಲಿ ಬಹಳಷ್ಟು ಜನರಿಗೆ ಹಿಂಬಾಗಿಲಿ ನಿಂದ ಈ ಉಚಿತ ಭಾಗ್ಯ ದೊರೆಯಿತು. ಆಗ ನಮ್ಮ ರಾಜ್ಯದವರೇ ಕೇಂದ್ರ ವಿತ್ತ ಸಚಿವಾಲಯದಲ್ಲಿ ಉಪ ಸಚಿವರಾಗಿದ್ದರು. ಅವರು ದೇಶಾದ್ಯಂತ ಸಾಲಮೇಳಗಳನ್ನು ಬ್ಯಾಂಕಿನವರು ಆಚರಿಸ ಬೇಕೆಂದು ಆದೇಶಿಸಿದ್ದರು. ಅದೂ ಅಲ್ಲದೆ ಕೆಲವು ದೊಡ್ಡ ನಗರಗಳಲ್ಲಿ ಸಾಲಮೇಳದ ಅಂಗವಾಗಿ ರೋಡ್ ಶೋ ಆ ಮಂತ್ರಿವರ್ಯರ ನೇತೃತ್ವದಲ್ಲಿ ಮಾಡಲಾಯಿತು. ವಿಪರ್ಯಾಸವೆಂದರೆ ಆ ರೋಡ್ ಶೋನಲ್ಲಿ ಆಯಾ ಬ್ಯಾಂಕಿನ ರಾಜ್ಯದ ಮುಖ್ಯಸ್ಥರು ಭಾಗವಹಿಸಲು ಆದೇಶಿಸಲಾಗಿತ್ತು. ಈ ರೀತಿ ಸುಮಾರು 4-5 ವರುಷ ಆ ಮಂತ್ರಿವರ್ಯರ ಹೆಸರಿನ ಸಾಲಮೇಳ ಎಂಬ ಹೆಸರಿನಿಂದ ದೇಶದಾದ್ಯಂತ ಆಚರಿಸಲಾಯಿತು.

ಆ ಅವಧಿಯಲ್ಲಿ ನಾನು ಬೆಂಗಳೂರಿನ ಕೇಂದ್ರ ಪ್ರದೇಶದ ಒಂದು ಪ್ರಖ್ಯಾತ ಬಡಾವಣೆಯ ನಮ್ಮ ಬ್ಯಾಂಕಿನ ಶಾಖೆಯ ಮುಖ್ಯ ಪ್ರಬಂಧಕನಾಗಿದ್ದೆ. ಅದೇ ಸಮಯದಲ್ಲಿ ನಮ್ಮ ಬ್ಯಾಂಕಿನ ರಾಜ್ಯದ ಮುಖ್ಯ ಕಚೇರಿಯ ಪ್ರಮುಖ ಅಧಿಕಾರಿ (ಚೀಫ್ ಜನರಲ್ ಮ್ಯಾನೇಜರ್) ಎಲ್ಲಾ ಶಾಖೆಗಳಿಗೂ ಒಂದು ಸಂದೇಶ ಕಳುಹಿಸಿದ್ದರು. ಸಾಲ ಕೇಳಿ ಬಂದ ಎಲ್ಲಾ ಅರ್ಜಿಯೂ ಸರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ದೇಶದ ಕಾನೂನು ಹಾಗೂ ಬ್ಯಾಂಕಿನ ನಿಯಮಗಳಿಗೆ‌ ಅನುಗುಣವಾಗಿ ಇದ್ದರೆ ಮಾತ್ರ ಸಾಲ ಕೊಡಬೇಕು.

ಇದನ್ನೂ ಓದಿ: Ravi Hunj Column: ಹಿಂದೂ ಎಂಬ ಪದದ ಹಿಂದು ಮುಂದು !

ಎಲ್ಲಾ ಕಾಗದಪತ್ರಗಳನ್ನು ಸರಿಯಾಗಿ ಪರಿಶೀಲಿಸಿ ನಂತರ ಸಾಲಕ್ಕೆ ಅರ್ಜಿ ಹಾಕಿದ್ದವರ ಸಹಿ ತೆಗೆದು ಕೊಂಡು ಸಾಲದ ಹಣ ಬಿಡುಗಡೆ ಮಾಡಬೇಕೆಂದು ಆದೇಶಿಸಿದ್ದರು. ನನ್ನ ಶಾಖೆಗೆ 500ಕ್ಕೂ ಹೆಚ್ಚು ಅರ್ಜಿಗಳು ಸಾಲಮೇಳದ ಅಡಿಯಲ್ಲಿ ಬಂದಿತ್ತು. ಅರ್ಹತೆ ಇದ್ದರೆ ಮಾತ್ರ ಕೊಡುತ್ತೇನೆ ಎಂದು ಹೇಳಿ ಕಳಿಸಿದೆ. ಅವುಗಳನ್ನು ನಮ್ಮ ಶಾಖೆಗೆ ತಲುಪಿಸಿದವರು ಕಾಂಗ್ರೆಸ್ ಕಾರ್ಯಕರ್ತರು. ಅರ್ಹತೆ ಇದ್ದರೆ ಮಾತ್ರ ಕೊಡುತ್ತೇನೆ ಎಂದು ಹೇಳಿ ಕಳಿಸಿದೆ. ಅದಾದ 2 ದಿನಕ್ಕೆ ಕೋಟೆ ಹೈಸ್ಕೂಲ್ ಆವರಣದಲ್ಲಿ ಆ ಮಂತ್ರಿಗಳು ಸಾಲಮೇಳದ ಸಭೆ ಏರ್ಪಡಿಸಿದ್ದರು. ಆ ಸಭೆಗೆ ಎಲ್ಲಾ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ಕಡ್ಡಾಯವಾಗಿ ಹಾಜರಿರಬೇಕೆಂದು ಆದೇಶಿಸಿದ್ದರು.

ನಾನು ಸಭೆಗೆ ಹೋಗಿರಲಿಲ್ಲ. ಅಲ್ಲಿ ಎಲ್ಲರ ಎದುರಿಗೂ ನನ್ನ ಹೆಸರು ಹೇಳಿ ಅವಮಾನ ಮಾಡಿದ ರೆಂದು ಗೊತ್ತಾಯಿತು. ಅದಾದ 2 ದಿನಕ್ಕೆ ನನ್ನನ್ನು ಬೆಂಗಳೂರಿನಿಂದ ಹೊರಗೆ ಒಂದು ಜಿಲ್ಲೆಯ ಮುಖ್ಯ ಶಾಖೆಗೆ ವರ್ಗ ಮಾಡಲಾಯಿತು. ನಮ್ಮ ಬ್ಯಾಂಕಿನ ರಾಜ್ಯದ ಉಚ್ಚ ಅಧಿಕಾರಿಯನ್ನು ಗುಜರಾತಿನ ಒಂದು ಅನಾಮಧೇಯ ಕಾರ್ಖಾನೆಯ ನಿರ್ದೇಶಕನಾಗಿ ವರ್ಗಾವಣೆ ಮಾಡಲಾಯಿತು.

ನನ್ನ ಮುಂದಿನ ಶಾಖೆಯಲ್ಲೂ ಈ ರಾಜಕೀಯ ಕಿರುಕುಳ ಮುಂದುವರಿಯಿತು. ಯಥಾಪ್ರಕಾರ ಕೇಂದ್ರ ಮಂತ್ರಿಗಳು ಆ ಊರಿಗೂ ಬಂದರು. ಅಲ್ಲೂ ನಾನು ಸಾಲಮೇಳದ ಅಂಗವಾಗಿ ಯಾವುದೇ ಸಾಲ ಕೊಟ್ಟಿರದಿದ್ದರಿಂದ ಆ ಸಭೆಗೆ ಹೋಗಲಿಲ್ಲ. ಮಂತ್ರಿಗಳು ಅಲ್ಲೂ ನನ್ನ ಹೆಸರು ಹಿಡಿದು ಏಕವಚನದಲ್ಲಿ ತೇಜೋವಧೆ ಮಾಡಿದರಂತೆ. ಇದಾದ ಒಂದು ತಿಂಗಳಿಗೆ ಆ ಊರಿನಿಂದ ಸುಮಾರು 500 ಕಿ.ಮೀ. ಆಚೆಗಿನ ಊರಿಗೆ ವರ್ಗ ಮಾಡಲಾಯಿತು. ಇದೆಲ್ಲ ಆಗಿ 5 ವರ್ಷ ಮೇಲೆ ನನ್ನನ್ನು ರಾಜ್ಯದ ಪ್ರಧಾನ ಕಚೇರಿಗೆ ವರ್ಗಮಾಡಿದರು. ಕುತೂಹಲದಿಂದ ಆ ಸಾಲಮೇಳದ ಅಡಿಯಲ್ಲಿ ಕೊಟ್ಟ ಸಾಲಗಳಲ್ಲಿ ಎಷ್ಟು ವಾಪಸ್ ಬಂತು ಎಂದು ತಿಳಿದುಕೊಳ್ಳಲು ಪ್ರಯತ್ನ ಪಟ್ಟೆ. ನಮ್ಮ ಬ್ಯಾಂಕಿನಲ್ಲಿ ಕೇವಲ 8% ಮಾತ್ರ ವಸೂಲಾಗಿತ್ತು. ಬಾಕಿ ಹಣ ವಸೂಲಾಗದ ಸಾಲ ಎಂದು ವರ್ಗಾಯಿಸಲಾಗಿತ್ತು!