ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಮಂಗನ ಹೃದಯವನ್ನು ಮಗುವಿಗೆ ಬದಲಿ ಜೋಡಿಸಿದರು !

ಅಕ್ಟೋಬರ್ ೧೪, 1984. ಸ್ಟಿಫಾನಿ ಫೇ ಬ್ಲ್ಯೂಕ್ಲೈರ್ (ಬೇಬಿ ಫೇ) ಎಂಬ ಹೆಣ್ಣು ಮಗುವು ಹುಟ್ಟಿತು. ಈ ಮಗುವಿಗೆ ಹುಟ್ಟುವಾಗಲೇ, ಹೃದಯದ ಎಡಭಾಗವು ಬೆಳೆದಿರಲಿಲ್ಲ. ಹಾಗಾಗಿ ಹೃದಯವು ಶರೀರಕ್ಕೆ ಅಗತ್ಯವಾಗಿದ್ದ ರಕ್ತವನ್ನು ಪಂಪ್ ಮಾಡಲು ಅಸಮರ್ಥವಾಗಿತ್ತು. ಇದನ್ನು ತಾಂತ್ರಿಕ ವಾಗಿ ‘ಅರೆಬೆಳೆದ ಎಡ ಹೃದಯ ಲಕ್ಷಣಾವಳಿ’ (ಹೈಪೋಪ್ಲಾಸ್ಟಿಕ್ ಲೆಫ್ಟ್ ಹಾರ್ಟ್ ಸಿಂಡ್ರೋಮ್, ಎಚ್‌ಎಲ್‌ಎಚ್‌ಎಸ್) ಎಂದು ಕರೆಯುವ ಪದ್ಧತಿಯಿದೆ.

ಮಂಗನ ಹೃದಯವನ್ನು ಮಗುವಿಗೆ ಬದಲಿ ಜೋಡಿಸಿದರು !

-

ಹಿಂದಿರುಗಿ ನೋಡಿದಾಗ

ಗಣಪತಿಯ ಕಥೆಯು ನಮಗೆಲ್ಲ ತಿಳಿದಿದೆ. ಶಿವನು ಕೋಪದಲ್ಲಿ ಬಾಲಕನ ಶಿರವನ್ನು ತರಿದ. ಪಾರ್ವತಿಯ ಕೋಪವನ್ನು ಭರಿಸಲಾಗದೆ, ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವ ಪ್ರಾಣಿಯ ಶಿರವನ್ನು ಛೇದಿಸಿ ತನ್ನಿರಿ ಎಂದು ಗಣಗಳಿಗೆ ಹೇಳಿದ. ಗಣಗಳು ಆನೆಯ ತಲೆಯನ್ನು ತಂದವು. ಶಿವನು ಆ ಆನೆಯ ತಲೆಯನ್ನು ಬಾಲಕನ ಮುಂಡಕ್ಕೆ ಸೇರಿಸಿ ಜೀವವನ್ನು ತುಂಬಿದ. ಆ ಬಾಲಕನು ಮುಂದೆ ‘ಗಜಾನನ’ ಎಂದು ಪ್ರಖ್ಯಾತನಾದ.

ಗಣಪತಿಯ ಈ ಕಥೆಯು ಆಧುನಿಕ ವೈದ್ಯಕೀಯದ ಹಿನ್ನೆಲೆಯಲ್ಲಿ ಅಸಾಧ್ಯ. ಗಣಪತಿಯ ಕಥೆ ಯಲ್ಲಿ ಅಂಗವನ್ನು ನೀಡಿದ ಆನೆಯು ‘ದಾನಿ’ ಎನಿಸಿಕೊಂಡರೆ, ಅಂಗವನ್ನು ಸ್ವೀಕರಿಸಿದ ಮಾನವ ಜೀವಿಯು ‘ಗ್ರಾಹಿ’ ಎಂದನಿಸಿಕೊಳ್ಳುತ್ತದೆ. ಹೀಗೆ ವಿಭಿನ್ನ ಪ್ರಭೇದದ ಪ್ರಾಣಿಗಳ ಅಂಗ ಗಳನ್ನು ಬದಲಿ ಜೋಡಿಸಿದರೆ, ಅವು ಊರ್ಜಿತವಾಗುವುದಿಲ್ಲ. ಗ್ರಾಹಿಯ ದೇಹದಲ್ಲಿರುವ ಮಿಲಿಟರಿ ಪಡೆ/ರೋಗರಕ್ಷಣಾ ವ್ಯೂಹ/ಇಮ್ಯೂನ್ ಸಿಸ್ಟಮ್, ಬದಲಿ ಜೋಡಿಸಿದ ಅಂಗವನ್ನು ‘ಪರಕೀಯ’ ಎಂದು ಪರಿಗಣಿಸಿ, ಅದನ್ನು ತಿರಸ್ಕರಿಸುತ್ತದೆ.

ನಮ್ಮ ದೇಹದ ರೋಗರಕ್ಷಣಾ ವ್ಯೂಹವು ನಮ್ಮ ದೇಹಕ್ಕೆ ಸೇರಿದ ಅಂಗಗಳು ಯಾವುವು, ದೇಹಕ್ಕೆ ಸೇರದ ಪರಕೀಯ ವಸ್ತುಗಳು ಯಾವುವು ಎನ್ನುವುದನ್ನು ಸುಲಭವಾಗಿ ಪತ್ತೆ ಹಚ್ಚಬಲ್ಲದು. ಪರಕೀಯ ವಸ್ತುಗಳನ್ನು ನಾಶಪಡಿಸುವುದು ಅವುಗಳ ಹುಟ್ಟುಗುಣ.

ಇದನ್ನೂ ಓದಿ: Dr N Someshwara Column: ಮೃತ್ಯುಂಜಯನಾಗಿಬಿಟ್ಟನೇ ಈ ನರಮಾನವ ?

ಅಕ್ಟೋಬರ್ ೧೪, 1984. ಸ್ಟಿಫಾನಿ ಫೇ ಬ್ಲ್ಯೂಕ್ಲೈರ್ (ಬೇಬಿ ಫೇ) ಎಂಬ ಹೆಣ್ಣು ಮಗುವು ಹುಟ್ಟಿತು. ಈ ಮಗುವಿಗೆ ಹುಟ್ಟುವಾಗಲೇ, ಹೃದಯದ ಎಡಭಾಗವು ಬೆಳೆದಿರಲಿಲ್ಲ. ಹಾಗಾಗಿ ಹೃದಯವು ಶರೀರಕ್ಕೆ ಅಗತ್ಯವಾಗಿದ್ದ ರಕ್ತವನ್ನು ಪಂಪ್ ಮಾಡಲು ಅಸಮರ್ಥವಾಗಿತ್ತು. ಇದನ್ನು ತಾಂತ್ರಿಕ ವಾಗಿ ‘ಅರೆಬೆಳೆದ ಎಡ ಹೃದಯ ಲಕ್ಷಣಾವಳಿ’ (ಹೈಪೋಪ್ಲಾಸ್ಟಿಕ್ ಲೆಫ್ಟ್ ಹಾರ್ಟ್ ಸಿಂಡ್ರೋಮ್, ಎಚ್‌ಎಲ್‌ಎಚ್‌ಎಸ್) ಎಂದು ಕರೆಯುವ ಪದ್ಧತಿಯಿದೆ.

ಈ ರೀತಿಯ ಜನ್ಮದತ್ತ ವೈಕಲ್ಯದಿಂದ ಹುಟ್ಟುವ ಮಗುವು ಹುಟ್ಟಿದ ಒಂದೆರಡು ವಾರಗಳಲ್ಲಿ ಸಾಯುವುದು ನೂರಕ್ಕೆ ನೂರರಷ್ಟು ಖಚಿತ. ಬೇಬಿ - ಶಿಶುವಿನ ಯುವ ಪಾಲಕರು (ಅವರ ಹೆಸರನ್ನು ಅಜ್ಞಾತವಾಗಿಡಲಾಗಿದೆ) ಶಿಶುವನ್ನು ಡಾ.ಲಿಯೋನಾರ್ಡ್ ಲೀ ಬೈಲಿ (1942-2019) ಎಂಬ ಶಿಶು ಹೃದಯ ಶಸ್ತ್ರವೈದ್ಯರ ಬಳಿಗೆ ಕರೆ ತಂದರು. ಆಗ ಬೈಲಿಯವರು ಕ್ಯಾಲಿಫೋರ್ನಿಯಾದ ‘ಲೋಮಿಯಾ ಲಿಂಡಾ ವಿಶ್ವವಿದ್ಯಾಲಯ’ದಲ್ಲಿ ಕೆಲಸ ಮಾಡುತ್ತಿದ್ದರು.

ಡಾ.ಬೈಲಿಯವರು ಒಂದು ಪ್ರಾಣಿಯ ಹೃದಯವನ್ನು ಮತ್ತೊಂದು ಪ್ರಾಣಿಗೆ ಬದಲಿಜೋಡಿಸುವ ಪ್ರಯೋಗಗಳಿಗೆ ಹೆಸರುವಾಸಿಯಾಗಿದ್ದರು. ಎಚ್‌ಎಲ್‌ಎಚ್‌ಎಸ್ ಸಮಸ್ಯೆಯಿಂದ ಹುಟ್ಟುವ ಶಿಶು ಗಳಿಗೆ ಒಂದು ಪರಿಣಾಮಕಾರಿ ಪರಿಹಾರವನ್ನು ಹುಡುಕುವ ನಿಟ್ಟಿನಲ್ಲಿ ಅವರು ಅಧ್ಯಯನ ವನ್ನು ಮಾಡುತ್ತಿದ್ದರು.

Monkey

ಒಬ್ಬ ಮನುಷ್ಯನಿಗೆ ಬೈಪಾಸ್ ಸರ್ಜರಿಯನ್ನು ಮಾಡಬೇಕಾದರೆ, ಅವನ ಕೈ ಅಥವಾ ಕಾಲಿನಲ್ಲಿ ರುವ ಸೂಕ್ತ ಧಮನಿಯನ್ನು ಛೇದಿಸಿ, ಅದನ್ನು ರೋಗಗ್ರಸ್ತ ಮಕುಟ ಧಮನಿಯ ಸ್ಥಾನದಲ್ಲಿ ಬದಲಿ ಜೋಡಿಸುವರು. ಇದನ್ನು ‘ಸ್ವಯಂಕಸಿ’ (ಆಟೋಲೋಗಸ್ ಗ್ರಾಫ್ಟಿಂಗ್) ಎನ್ನುವರು. ರೋಗರಕ್ಷಣಾ ವ್ಯೂಹವು ಇದನ್ನು ತಿರಸ್ಕರಿಸುವುದಿಲ್ಲ.

ಒಬ್ಬ ಮನುಷ್ಯನ ಮೂತ್ರಪಿಂಡವನ್ನು ಮತ್ತೊಬ್ಬ ಮನುಷ್ಯನಿಗೆ ಬದಲಿ ಜೋಡಿಸಬಹುದು. ಆಗ ಅಂಗವನ್ನು ಸ್ವೀಕರಿಸಿದ ವ್ಯಕ್ತಿಯ ರೋಗರಕ್ಷಣಾ ವ್ಯೂಹವು ತನ್ನದಲ್ಲದ ಪರಕೀಯ ಅಂಗವನ್ನು ಗುರುತಿಸಿ, ಅದನ್ನು ನಾಶ ಮಾಡುತ್ತದೆ. ಆದರೆ ವೈದ್ಯರು ಕಸಿ-ಊರ್ಜಿತ ಔಷಧಗಳನ್ನು (ಇಮ್ಯುನೋ- ಸಪ್ರೆಸೆಂಟ್) ನೀಡಿ ರೋಗರಕ್ಷಣಾ ವ್ಯೂಹವು ಹೊಸ ಅಂಗವನ್ನು ತಿರಸ್ಕರಿಸದಂತೆ ನಿಯಂತ್ರಿಸುತ್ತಾರೆ. ಈ ನಮೂನೆಯ ಕಸಿಯನ್ನು ‘ಸಮಕಸಿ’ (ಹೋಮೋಲೋಗಸ್ ಗ್ರಾಫ್ಟಿಂಗ್) ಎನ್ನುವರು.

ಆದರೆ ಆನೆಯ ತಲೆಯನ್ನು ಮನುಷ್ಯನಿಗೆ ಬದಲಿಜೋಡಿಸುವ ಪ್ರಯೋಗವನ್ನು ‘ಹೆರಕಸಿ’ (ಹೆಟೆರೋಲೋಗಸ್ ಗ್ರಾಫ್ಟಿಂಗ್) ಅಥವ ‘ಅನ್ಯಜನ್ಯ ಕಸಿ’ (ಜ಼ೆನೋಜೆನಿಕ್ ಗ್ರಾಫ್ಟ್) ಎನ್ನುತ್ತಾರೆ. ಇವು ಸಾಮಾನ್ಯವಾಗಿ ಯಶಸ್ವಿಯಾಗುವುದಿಲ್ಲ. ಬೇಬಿ -, ಮಾರಣಾಂತಿಕ ಜನ್ಮದತ್ತ ವೈಕಲ್ಯದಿಂದ ನರಳುತ್ತಿತ್ತು. ಆ ಮಗುವಿಗೆ ಹೃದಯವನ್ನು ಬದಲಿ ಜೋಡಿಸಬಹುದು. ಆದರೆ ಬದಲಿ ಜೋಡಿಸಲು ಅಗತ್ಯವಾಗಿದ್ದ ಅದೇ ವಯಸ್ಸಿನ ಶಿಶು ಹೃದಯವು ಆಗ ಅಲಭ್ಯವಾಗಿತ್ತು.

ಹಾಗಾಗಿ ಬೈಲಿಯವರು ಅನ್ಯಜನ್ಯ ಕಸಿಯನ್ನು ಮಾಡಲು ಮುಂದಾದರು. ಅದಕ್ಕಾಗಿ ಒಂದು ಬಬೂನ್ ಮಂಗದ ಹೃದಯವನ್ನು ಆಯ್ಕೆ ಮಾಡಿಕೊಂಡರು. ಬಬೂನ್ ಮಂಗಕ್ಕಿಂತ ಚಿಂಪಾಂಜ಼ಿ‌ ಯ ಹೃದಯವನ್ನು ಆಯ್ಕೆ ಮಾಡಿಕೊಂಡಿದ್ದರೆ, ಕಸಿಯು ಯಶಸ್ವಿಯಾಗುವ ಸಾಧ್ಯತೆಯು ಹೆಚ್ಚಿತ್ತು.

ಏಕೆಂದರೆ ಮನುಷ್ಯ ಹಾಗೂ ಚಿಂಪಾಂಜ಼ಿಯ ನಡುವೆ ಶೇ.98.8 ವಂಶವಾಹಿಗಳ ಸಾಮ್ಯತೆಯಿದೆ. ಆದರೆ ಮನುಷ್ಯ ಮತ್ತು ಬಬೂನ್ ವಂಶವಾಹಿಗಳ ಸಾಮ್ಯತೆ ಶೇ ೯೪ ಮಾತ್ರ. ಹಾಗಾಗಿ ಕಸಿಯ ತಿರಸ್ಕಾರ ಸಾಧ್ಯತೆಯೇ ಅಧಿಕವಾಗಿರುತ್ತದೆ. ಆದರೂ ಬೈಲಿಯವರು ಬಬೂನ್ ಮಂಗವನ್ನು ಆಯ್ಕೆ ಮಾಡಿಕೊಂಡರು. ಏಕೆಂದರೆ ಚಿಂಪಾಂಜ಼ಿಗಳು ಅಳಿವಿನಂಚಿಗೆ ಬಂದಿರುವ ಅಪರೂಪದ ಜೀವಿ ಗಳಾಗಿದ್ದವು. ಹಾಗಾಗಿ ಅವುಗಳನ್ನು ಬಳಸಲು ಸಮಾಜದ ಉಗ್ರ ಪ್ರತಿರೋಧವಿತ್ತು.

ಆದರೆ ಬಬೂನ್ ಮಂಗಗಳ ಸಂಖ್ಯೆಗೇನೂ ಮಿತಿಯಿರಲಿಲ್ಲ. ಹಾಗಾಗಿ ಅದನ್ನು ಪ್ರಯೋಗದಲ್ಲಿ ಬಳಸಲು ಯಾರಿಂದಲೂ ಅಂಥ ಪ್ರತಿರೋಧವೇನೂ ಕಂಡುಬರಲಿಲ್ಲ. ಡಾ.ಬೈಲಿಯವರು ಯುವ ಪಾಲಕರನ್ನು ಕರೆದು, ಮಗುವನ್ನು ಉಳಿಸಲು ಏಕೈಕ ಮಾರ್ಗವೆಂದರೆ ಅನ್ಯಜನ್ಯ ಕಸಿ ಮಾತ್ರ; ಅನ್ಯಕಸಿಯು ಊರ್ಜಿತವಾಗುವ ಸಾಧ್ಯತೆಯು ಕಡಿಮೆಯಿದ್ದರೂ, ಅದು ಪೂರ್ಣ ತಿರಸ್ಕೃತ ವಾಗುವುದರೊಳಗೆ, ಯಾವುದಾದರೂ ಶಿಶುವಿನ ಬದಲಿ ಹೃದಯವು ದೊರೆತರೆ, ಅದನ್ನು ಮತ್ತೆ ಕಸಿ ಮಾಡಿ, ಶಿಶುವಿಗೆ ಹೊಸ ಬದುಕನ್ನು ನೀಡಬಹುದು ಎಂದರು.

ಆ ಯುವ ಪಾಲಕರಿಗೆ ಅನ್ಯ ಮಾರ್ಗವಿರಲಿಲ್ಲ. ಹಾಗಾಗಿ ಅವರು ಈ ವಿನೂತನ ಶಸ್ತ್ರಪ್ರಯೋಗಕ್ಕೆ ಅನುಮತಿಯನ್ನು ನೀಡಿದರು. ಅಕ್ಟೋಬರ್ ೨೬, 1984. ಬೇಬಿ ಫೇ, ೧೨ ದಿನಗಳ ಶಿಶು. ಮನುಕುಲದ ಮೊದಲ ಐತಿಹಾಸಿಕ ಆದರೆ ಪ್ರಾಯೋಗಿಕ ಬದಲಿಜೋಡಣೆಯ ಶಸ್ತ್ರಚಿಕಿತ್ಸೆಯು ನಡೆಯಿತು, ತಾಂತ್ರಿಕವಾಗಿ ಯಶಸ್ವಿಯಾಯಿತು. ಒಂದು ಹೆಣ್ಣು ಬಬೂನ್ ಮರಿಯ ಹೃದಯವನ್ನು ಬೇಬಿ --ಳಿಗೆ ಬದಲಿ ಜೋಡಿಸಿದರು. ಬದಲಿ ಜೋಡಿಸುತ್ತಿರುವಂತೆಯೇ ಬಬೂನ್ ಹೃದಯವು ಸಹಜವಾಗಿ ಮಿಡಿಯಲಾರಂಭಿಸಿತು.

ಎಲ್ಲರ ನಿರೀಕ್ಷೆಯಂತೆ ಕಸಿ ಪ್ರಯೋಗವು ಯಶಸ್ವಿಯಾಗಿತ್ತು. ಟೆಲಿವಿಷನ್ ಮಾಧ್ಯಮಗಳು ಬೇಬಿ - ಅಳುವುದು, ನಗುವುದು, ಆಕಳಿಸುವುದು, ನಿದ್ರಿಸುವುದು ಮುಂತಾದ ದೃಶ್ಯಗಳನ್ನು ಮತ್ತೆ ಮತ್ತೆ ಪ್ರಸಾರ ಮಾಡಿದವು. ಈ ಸುದ್ದಿಯು ಹೊರಬರುತ್ತಿರುವಂತೆಯೇ ಅಂದಿನ ಸಮಾಜವು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಯನ್ನು ನೀಡಿತು. ಪತ್ರಿಕೆಗಳು ಈ ಸುದ್ಧಿಯನ್ನು ಮುಖಪುಟದಲ್ಲಿ ಪ್ರಕಟಿಸಿ ದವು.

ಸಾರ್ವಜನಿಕರಲ್ಲಿ ಅತೀವ ಕುತೂಹಲ ಮೂಡಿದರೂ, ಒಂದು ಅವ್ಯಕ್ತ ಭಯವು ಅವರನ್ನು ಕಾಡಿತು. ‘ಇದೊಂದು ಅಸೀಮ ಸಾಹಸ’ ಎಂದರು ಕೆಲವರು. ಅನ್ಯಾಯವಾಗಿ ಆ ಹೆಣ್ಣು ಬಬೂ ನನ್ನು ಕೊಲ್ಲಲು ಇವರಿಗೆ ಯಾರು ‘ಅನುಮತಿ’ಯನ್ನು ನೀಡಿದರು ಎಂದು ಕೆಲವರು ಆಕ್ರೋಶ ವನ್ನು ವ್ಯಕ್ತಪಡಿಸಿದರು. ಧರ್ಮ ಜಿಜ್ಞಾಸುಗಳಂತೂ ಮನುಷ್ಯನ ಎದೆಯಲ್ಲಿ ‘ಪ್ರಾಣಿಯ ಹೃದಯ’ವೆಂತು ಇರಲು ಸಾಧ್ಯ ಎಂದು ಹುಯಿಲಿಟ್ಟರು.

ಪ್ರಯೋಗವು ಯಶಸ್ವಿಯಾಗಿರುವುದು ಸಂತಸದ ವಿಚಾರವಾಗಿದ್ದರೂ, ಇದು ‘ನೈತಿಕವಾಗಿ ಸರಿ ಯಲ್ಲ’ ಎಂದು ವಾದಿಸಿದರು. ‘ಈ ವೈದ್ಯರು, ವಿಜ್ಞಾನಿಗಳು ತಮ್ಮ ಕುತೂಹಲವನ್ನು ತಣಿಸಿ ಕೊಳ್ಳಲು ತಾವು ಏನು ಬೇಕಾದರೂ ಮಾಡಬಹುದು ಎಂದು ಯೋಚಿಸುವುದು ಸರಿಯಲ್ಲ. ಇವರಿಗೆಲ್ಲರಿಗೂ ಒಂದು ನೀತಿಸಂಹಿತೆಯಿರಬೇಕು’ ಎಂದು ಆಗ್ರಹಿಸಿದರು.

ಹೆಣ್ಣು ಬಬೂನಿನ ಹೃದಯವು ೨೧ ದಿನಗಳ ಕಾಲ ಬೇಬಿ ಫೇ-ಳ ಎದೆಗೂಡಿನಲ್ಲಿ ಮಿಡಿಯಿತು. ಆನಂತರ ಬೇಬಿ ಫೇ-ಳ ರೋಗರಕ್ಷಣಾ ವ್ಯೂಹವು ಜಾಗೃತವಾಗಿ ಬಬೂನಿನ ಹೃದಯವನ್ನು ತಿರಸ್ಕರಿ ಸಲು ಆರಂಭಿಸಿತು. ಅದರ -ಲವಾಗಿ ಬಬೂನಿನ ಹೃದಯದ ಸಾಮರ್ಥ್ಯವು ಕ್ರಮೇಣ ಕಡಿಮೆ ಯಾಯಿತು. ಹೃದಯವು ದುರ್ಬಲವಾಗಿ ಮಿಡಿಯುತ್ತಿದ್ದ ಕಾರಣ, ದೇಹಕ್ಕೆ ಅಗತ್ಯವಾದಷ್ಟು ಆಕ್ಸಿಜನ್ ದೊರೆಯುತ್ತಿರಲಿಲ್ಲ.

ನವೆಂಬರ್ ೧೬, 1984. ಬೇಬಿ - ಹುಟ್ಟಿ ೩೨ ದಿನಗಳಾಗಿದ್ದವು. ದುರ್ಬಲವಾಗಿ ಮಿಡಿಯುತ್ತಿದ್ದ ಹೃದಯ ಕೊನೆಗೆ ಮಿಡಿತವನ್ನು ನಿಲ್ಲಿಸಿತು. ಆನಂತರ ವಿಜ್ಞಾನಿಗಳು ಬೇಬಿ ಫೇ-ಳ ರೋಗರಕ್ಷಣಾ ವ್ಯೂಹವು ಬಬೂನಿನ ಹೃದಯವನ್ನು ಏಕೆ ತಿರಸ್ಕರಿಸಿತು ಎಂದು ಲೆಕ್ಕ ಹಾಕಿದರು.

ಮೊದಲ ಕಾರಣ ರಕ್ತದ ವೈಪರೀತ್ಯ. ಬೇಬಿ ಫೇ-ಳ ರಕ್ತದ ಗುಂಪು ‘ಓ’ ಆಗಿತ್ತು. ಹೆಣ್ಣು ಚಿಂಪಾಂಜ಼ಿ ಯ ರಕ್ತದ ಗುಂಪು ‘ಎಬಿ’ ಆಗಿತ್ತು. ಈ ಎರಡು ಗುಂಪಿನ ರಕ್ತದ ನಡುವೆ ಸಾಮರಸ್ಯ ಅಸಾಧ್ಯ. ಹಾಗಾಗಿ ಬೇಬಿ ಫೇ-ಳ ರೋಗರಕ್ಷಣಾ ವ್ಯೂಹವು ಬಬೂನ್ ಹೃದಯವನ್ನು ತಿರಸ್ಕರಿಸಿತು. ಅಂದಿನ ದಿನಗಳಲ್ಲಿ ರಕ್ತಗುಂಪುಗಳ ಸಾಮ್ಯತೆಗೆ ಅಷ್ಟು ಗಮನವನ್ನು ನೀಡುತ್ತಿರಲಿಲ್ಲ.

ಬೇಬಿ ಫೇ-ಳ ರೋಗರಕ್ಷಣಾ ವ್ಯೂಹ ಇನ್ನೂ ಎಳೆಯದ್ದಾಗಿದ್ದ ಕಾರಣ, ಅದು ಕಸಿಯನ್ನು ತಿರಸ್ಕರಿಸುವಷ್ಟು ಉಗ್ರವಾಗಿ ವರ್ತಿಸಲಾರದು ಎಂದು ನಿರೀಕ್ಷಿಸಿದ್ದರು. ಆದರೆ ಅವರ ನಿರೀಕ್ಷೆಯು ಸುಳ್ಳಾಯಿತು.

ಸೈಕ್ಲೋಸ್ಪೋರಿನ್ ಎಂಬ ಕಸಿ ಊರ್ಜಿತ (ಇಮ್ಯುನೋ ಸಪ್ರೆಸೆಂಟ್) ಔಷಧವನ್ನು ನೀಡಿದರೂ, ಅಂಥ ಉಪಯೋಗವೇನೂ ಆಗಲಿಲ್ಲ. ಆದರೆ, ಅನ್ಯಜನ್ಯ ಕಸಿಯು ಮನುಷ್ಯನ ಒಡಲಿನಲ್ಲಿ ನಿರೀಕ್ಷೆಗೆ ಬದುಕಬಲ್ಲದು ಎಂಬ ಅಂಶಕ್ಕೆ ಪುರಾವೆಯು ದೊರೆಯಿತು.

ಬೇಬಿ - ಪ್ರಯೋಗವು ದುರಂತದಲ್ಲಿ ಕೊನೆಗೊಂಡಿತು. ಆದರೆ ಡಾ.ಬೈಲಿ ಎದೆಗುಂದಲಿಲ್ಲ. ಮುಂದಿನ ವರ್ಷವೇ (1985) ಒಂದು ಶಿಶುವಿನ ಹೃದಯವನ್ನು ಮತ್ತೊಂದು ಶಿಶುವಿಗೆ ಯಶಸ್ವಿ ಯಾಗಿ ಬದಲಿ ಜೋಡಿಸಿದರು. ಹೊಸ ಹೃದಯವನ್ನು ಸ್ವೀಕರಿಸಿದ ಮಗು ಚೆನ್ನಾಗಿ ಬೆಳೆದು ದೊಡ್ಡದಾಯಿತು. 1900 ಹಾಗೂ 2000 ದಶಕಗಳಲ್ಲಿ ಎಚ್‌ಎಲ್‌ಎಚ್‌ಎಸ್ ಇರುವ ಮಕ್ಕಳು ಸಾಯಬೇಕಾಗಿರಲಿಲ್ಲ.

ಅವು ಹೃದಯ ಬದಲಿ ಜೋಡಣೆಗೆ ಒಳಗಾಗಿ ಎಲ್ಲ ಶಿಶುಗಳಂತೆ ಸಹಜವಾಗಿ ಬೆಳೆಯಲು ಸಾಧ್ಯ ವಾಯಿತು. ಜಗತ್ತಿನ ದೊಡ್ಡ ಆಸ್ಪತ್ರೆಗಳು ಬದಲಿ ಹೃದಯ ಜೋಡಣೆಗೆ ಬೇಕಾದ ಎಲ್ಲ ರೀತಿಯ ಅನುಕೂಲತೆಗಳನ್ನು ತಮ್ಮ ತಮ್ಮ ಆಸ್ಪತ್ರೆಗಳಲ್ಲಿ ನಿರ್ಮಿಸಿಕೊಂಡರು.

ಬೇಬಿ - ಪ್ರಕರಣವು ಹೊಸ ಹೊಸ ಸಂಶೋಧನೆಗಳಿಗೆ ಇಂಬು ಕೊಟ್ಟಿತು. ವಿಶೇಷವಾಗಿ ರೋಗ ರಕ್ಷಣಾ ವಿಜ್ಞಾನದಲ್ಲಿ (ಇಮ್ಯುನಾಲಜಿ) ಸಂಶೋಧನೆಗಳು ಭರದಿಂದ ನಡೆದವು. ಮೊದಲನೆ ಯದಾಗಿ ಕಸಿ ತಿರಸ್ಕಾರ ಸಂಭವಿಸುವ ಎಲ್ಲ ಘಟ್ಟಗಳನ್ನು ಅಧ್ಯಯನ ಮಾಡಿದರು.

ತಿರಸ್ಕಾರದಲ್ಲಿ ಭಾಗಿಯಾಗುವ ರಾಸಾಯನಿಕಗಳ ವಿವರ ಹಾಗೂ ಅವುಗಳನ್ನು ನಿಗ್ರಹಿಸಲು ಬಳಸ ಬಹುದಾದ ವಿವಿಧ ಕಸಿ ಊರ್ಜಿತ ಔಷಧಗಳ ಬಗ್ಗೆ ಸಂಶೋಧನೆಗಳು ನಡೆದು ವೈದ್ಯರ ಆತ್ಮವಿಶ್ವಾಸ ವನ್ನು ವಧಿಸಿದವು. ಎರಡನೆಯದಾಗಿ, ಪ್ರಾಣಿಗಳಲ್ಲಿರುವ ವೈರಸ್ಸುಗಳು, ಕಸಿಯ ಮೂಲಕ ಮನುಷ್ಯರ ದೇಹವನ್ನು ಪ್ರವೇಶಿಸಿ, ಅನಾಹುತವನ್ನು ಮಾಡದಂತೆ ತಡೆಗಟ್ಟುವ ವಿಧಿ ವಿಧಾನ ಗಳನ್ನು ರೂಪಿಸಿದರು.

ಚಿಂಪಾಂಜ಼ಿಯಂಥ ಅಗ್ರಸ್ತನಿಗಳ (ಪ್ರೈಮೇಟ್ಸ್) ಹಾಗೂ ಹಂದಿಯ ಅಂಗಗಳನ್ನು ಬದಲಿ ಜೋಡಣೆ ಯಲ್ಲಿ ಬಳಸುವ ಬಗ್ಗೆ ಬರಬಹು ದಾದ ಅಡ್ಡಿ ಆತಂಕಗಳನ್ನು ಅಧ್ಯಯನ ಮಾಡಿದರು. ಇವೆಲ್ಲ ಕ್ಕಿಂತಲೂ ಮಿಗಿಲಾಗಿ ವಂಶವಾಹಿ ವಿನ್ಯಾಸಗೊಳಿಸಿದ (ಜೆನೆಟಿಕಲಿ ಎಂಜಿನಿಯರ್ಡ್) ಹಂದಿಗಳನ್ನು ಬೆಳೆಯಿಸಿ, ಅವುಗಳ ಅಂಗಗಳನ್ನು ಬದಲಿ ಜೋಡಣೆಯಲ್ಲಿ ಬಳಸುವ ಹೊಸ ಹೊಸ ಪ್ರಯೋಗ ಗಳು ನಡೆದವು.

ಮಾನವ ದೇಹದ ಮಿಲಿಟರಿ ಪಡೆಗೆ ‘ಮಣ್ಣೆರಚಬಲ್ಲ’ ರೀತಿಯಲ್ಲಿ ಬದಲಿ ಅಂಗವನ್ನು ಸಿದ್ಧಪಡಿಸಿ ದರು. ಹಾಗೆಯೇ ಅರ್ಧ ಹಂದಿ ಹಾಗೂ ಅರ್ಧ ರೋಗಿಯ ಜೀವಕೋಶಗಳನ್ನೇ ಬಳಸಿಕೊಂಡು ಹೈಬ್ರಿಡ್ ಅಂಗವನ್ನು ಬದಲಿಜೋಡಿಸುವ ಕನಸನ್ನು ನನಸಾಗಿಸಲು ಪ್ರಯತ್ನಿಸಿದರು.

ವೈಜ್ಞಾನಿಕ ಸಂಶೋಧನೆಗಳ ಜತೆಯಲ್ಲಿ, ಇಂಥ ನೂತನ ಪ್ರಯೋಗಗಳನ್ನು ನಡೆಸಲು ಅಗತ್ಯವಾದ ನೀತಿ ನಿಯಮಗಳು ಹಾಗೂ ಕಾನೂನಿನ ಬಿಗಿಯನ್ನು ಹೆಚ್ಚಿಸಿದರು. ಹೊಸ ಹೊಸ ನೈತಿಕ ಪ್ರಶ್ನೆ ಗಳಿಗೆ ಉತ್ತರವನ್ನು ರೂಪಿಸಬೇಕಾಯಿತು. ಪ್ರಾಣಿಗಳನ್ನು ಪ್ರಯೋಗದಲ್ಲಿ ಬಳಸುವುದಕ್ಕೆ ಪ್ರಾಣಿಪ್ರಿಯ ಸಂಘದವರು ಬೀದಿ ಗಿಳಿದು ಉಗ್ರವಾಗಿ ಪ್ರತಿಭಟಿಸಿದರು.

‘ನೂರಕ್ಕೆ ನೂರರಷ್ಟು ಆರೋಗ್ಯ ವಾಗಿದ್ದ ಹೆಣ್ಣು ಚಿಂಪಾಂಜ಼ಿಯನ್ನು ಬಲಿಕೊಟ್ಟದ್ದು ಅಮಾನ ವೀಯ’ ಎಂದು ಬೊಬ್ಬೆಯಿಟ್ಟರು. ‘ಆ ಪ್ರಯೋಗವು ಯಶಸ್ವಿಯಾಗುವುದಿಲ್ಲ ಎಂದು ಗೊತ್ತಿದ್ದರೂ, ಬೇಬಿ --ಳಿಗೆ ಬದಲಿ ಹೃದಯವನ್ನು ಜೋಡಿದ್ದು ಅಕ್ಷಮ್ಯ ಅಪರಾಧ’ ಎಂದು ವಾದಿಸಿದರು.

ಬೇಬಿ - ಪ್ರಕರಣವು ಜಗದಾದ್ಯಂತ ಬದಲಿ ಜೋಡಣೆಯ ಕ್ಷೇತ್ರದಲ್ಲಿ ಊಹಿಸಲಾಗದಂಥ ಬದಲಾವಣೆಗಳಿಗೆ ಕಾರಣವಾಯಿತು. ಬೇಬಿ ಫೇ-ಳ ತಾಯಿ, ನನ್ನ ಮಗುವಿನ ಬಲಿದಾನದಿಂದ ಉಳಿದ ಮಕ್ಕಳು ಬದುಕುವಂತಾಯಿತಲ್ಲ ಎಂದು ತೃಪ್ತಿಯ ನಗೆ ಬೀರಿದಳು..