Mohan Vishwa Column: ಅಂಬೇಡ್ಜರ್ ಮತ್ತು ಆರೆಸ್ಸೆಸ್: ಸಮಾನ ಚಿಂತನೆಗಳು
ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಷಯದಲ್ಲಿ ಸದಾ ಟ್ರೋಲ್ ಆಗುವ ಪ್ರಿಯಾಂಕ್ ಖರ್ಗೆಯವರು ಈ ವಿಷಯದಲ್ಲೂ ಹಿಂದೆ ಬೀಳಲಿಲ್ಲ. ಬಿಜೆಪಿಯ ಶಾಸಕರು ಇಂದಿಗೂ ಸಂಘದ ಶಾಖೆಗೆ ಶಿಸ್ತಾಗಿ ಹೋಗುವ ವಿಷಯವನ್ನು ಪ್ರಿಯಾಂಕ್ ಖರ್ಗೆಯವರು ತಿಳಿದುಕೊಳ್ಳಬೇಕು. ಕೆಲವ ರಂತೂ, ‘ಸಂಘವು ಬ್ರಾಹ್ಮಣರ ಪರ, ಅವರು ಮನುವಾದಿಗಳು’ ಎಂಬ ಹಸಿಸುಳ್ಳನ್ನು ಆಗಾಗ ಹೇಳುತ್ತಲೇ ಇರು ತ್ತಾರೆ; ‘ಸಂಘದವರು ದಲಿತ ವಿರೋಧಿಗಳು’ ಎಂಬುದು ಇವರು ದಶಕಗಳಿಂದ ಹೇಳಿಕೊಂಡೇ ಬಂದಿರುವ ಮತ್ತೊಂದು ಸುಳ್ಳು.

ಅಂಕಣಕಾರ ಮೋಹನ್ ವಿಶ್ವ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಹೆಸರನ್ನು ಮುನ್ನೆಲೆಗೆ ತಂದು ತನ್ನ ಹುಳುಕನ್ನು ಮುಚ್ಚಿಕೊಳ್ಳುವ ಕಾಂಗ್ರೆಸ್ಸಿನ ತಂತ್ರಗಾರಿಕೆ ಇಂದು ನಿನ್ನೆಯದಲ್ಲ. ದಲಿತರ ಮತಬ್ಯಾಂಕನ್ನು ಗಟ್ಟಿಮಾಡಿಕೊಳ್ಳಲು ‘ಸಂಘಜೀವಿ’ಗಳ ಮೇಲೆ ಮನಿವಾದಿಗಳೆಂಬ ಆರೋಪ ಹೊರಿಸಿ ನಿರೂಪಣೆ ಮಾಡುವುದು ಕಾಂಗ್ರೆಸ್ಸಿನ ನಿತ್ಯದ ಕೆಲಸ. ದಲಿತರಿಗೆ ಮೀಸಲಿಟ್ಟಿದ್ದ ಹಣವನ್ನು ಬೇರೆ ಯೋಜನೆ ಗಳಿಗೆ ಬಳಸಿಕೊಂಡ ವಿಷಯಕ್ಕೆ ಉತ್ತರಿಸಲು ಸಾಧ್ಯವಾಗದಿದ್ದಾಗ, ಆರೆಸ್ಸೆಸ್‌ನ ಹೆಸರನ್ನು ಅಡ್ಡ ತಂದು ಚರ್ಚೆಯನ್ನು ಬೇರೆಡೆಗೆ ತಿರುಗಿಸಿದ ಘಟನೆ ಕರ್ನಾಟಕ ವಿಧಾನಸಭೆಯಲ್ಲಿ ನಡೆಯಿತು. ಇನ್ನು ರಾಷ್ಟ್ರೀಯ ಮಟ್ಟಕ್ಕೆ ಬರುವುದಾದರೆ, ಸಂಸತ್ತಿನಲ್ಲೂ ಅನೇಕ ಬಾರಿ ಉತ್ತರಿಸಲಾಗದಂಥ ಪರಿಸ್ಥಿತಿ ಎದುರಾದಾಗ ‘ಇಂಡಿಯ’ ಒಕ್ಕೂಟದ ಸದಸ್ಯರು ಸಂಘವನ್ನು ಎಳೆತರುವುದು ಸಾಮಾನ್ಯ ವಾಗಿಬಿಟ್ಟಿದೆ. ತಮ್ಮನ್ನು ‘ದಲಿತ ನಾಯಕ’ ಎಂದು ಬಿಂಬಿಸಿಕೊಳ್ಳುವ ಪ್ರಿಯಾಂಕ್ ಖರ್ಗೆಯವರು, “ಬಿಜೆಪಿ ಶಾಸಕರ ಮಕ್ಕಳು ಸಂಘದ ಶಾಖೆಗೆ ಹೋಗುತ್ತಿದ್ದಾರಾ?" ಎಂದು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದರು.
ಇದನ್ನೂ ಓದಿ: Mohan Vishwa Column: ಆರ್‌ಎಸ್‌ಎಸ್ ಒಂದು ಆನೆಯಿದ್ದಂತೆ
ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಷಯದಲ್ಲಿ ಸದಾ ಟ್ರೋಲ್ ಆಗುವ ಪ್ರಿಯಾಂಕ್ ಖರ್ಗೆಯವರು ಈ ವಿಷಯದಲ್ಲೂ ಹಿಂದೆ ಬೀಳಲಿಲ್ಲ. ಬಿಜೆಪಿಯ ಶಾಸಕರು ಇಂದಿಗೂ ಸಂಘದ ಶಾಖೆಗೆ ಶಿಸ್ತಾಗಿ ಹೋಗುವ ವಿಷಯವನ್ನು ಪ್ರಿಯಾಂಕ್ ಖರ್ಗೆಯವರು ತಿಳಿದುಕೊಳ್ಳಬೇಕು. ಕೆಲವ ರಂತೂ, ‘ಸಂಘವು ಬ್ರಾಹ್ಮಣರ ಪರ, ಅವರು ಮನುವಾದಿಗಳು’ ಎಂಬ ಹಸಿಸುಳ್ಳನ್ನು ಆಗಾಗ ಹೇಳುತ್ತಲೇ ಇರುತ್ತಾರೆ; ‘ಸಂಘದವರು ದಲಿತ ವಿರೋಧಿಗಳು’ ಎಂಬುದು ಇವರು ದಶಕಗಳಿಂದ ಹೇಳಿಕೊಂಡೇ ಬಂದಿರುವ ಮತ್ತೊಂದು ಸುಳ್ಳು.
ದಲಿತ ನಾಯಕ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಪ್ರೀತಿ ಇದ್ದಿದ್ದರೆ, 1952ರ ಚುನಾವಣೆಯಲ್ಲಿ ಅವರ ವಿರುದ್ಧ ತಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಹಾಕಬಾರದಿತ್ತು. ಆದರೆ ಅವರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಚುನಾವಣೆಯಲ್ಲಿ ಅವರನ್ನು ಸೋಲಿಸಿ, ದಲಿತರ ಪರವಿದ್ದ ಗಟ್ಟಿದನಿಯನ್ನು ಕಾಂಗ್ರೆಸ್ ಅಡಗಿಸಿಬಿಟ್ಟಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ದಲಿತಪರ ಕಾರ್ಯಕ್ರಮಗಳು ಹಾಗೂ ಯೋಜನೆಗಳು ಕಾಂಗ್ರೆಸ್ಸಿನ ಸುಳ್ಳು ನಿರೂಪಣೆಗಳನ್ನು ಬೆತ್ತಲೆ ಮಾಡು ತ್ತವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್‌ರವರ ವಿಚಾರ ಧಾರೆಗಳು ಸಮಾಜದ ಏಳಿಗೆಯಲ್ಲಿ ಸಮಾನವಾಗಿ ಪ್ರಮುಖ ಪಾತ್ರವನ್ನು ವಹಿಸಿವೆ.
ಸಂಘವನ್ನು ಸ್ಥಾಪಿಸಿದ ‘ಡಾಕ್ಟರ್‌ಜೀ’ ಅವರ ಮೂಲಧ್ಯೇಯವು, ರಾಷ್ಟ್ರ ನಿರ್ಮಾಣದಲ್ಲಿ ಹಿಂದೂ ಗಳನ್ನು ಒಂದುಗೂಡಿಸುವುದಾಗಿತ್ತು. ಸಮಾಜದಲ್ಲಿ ಸಾಮರಸ್ಯವಿಲ್ಲದೆ ಸಮಾನತೆಯನ್ನು ರೂಪಿಸುವುದು ಸಾಧ್ಯವಿಲ್ಲವೆಂಬುದು ಡಾಕ್ಟರ್ ಜೀ ಮತ್ತು ಅಂಬೇಡ್ಕರ್ ಇಬ್ಬರ ನಿಲುವೂ ಆಗಿತ್ತು. 1947ರ ನವೆಂಬರ್ ೧೫ರಂದು ದೆಹಲಿಯಲ್ಲಿ ಮಾಡಿದ ಭಾಷಣದಲ್ಲಿ ಅಂಬೇಡ್ಕರ್ ಹೇಳಿದ್ದು ಹೀಗೆ: “ಭಾರತದಲ್ಲಿ ಅಸಂಖ್ಯ ಜಾತಿಗಳಿದ್ದು, ಇದರಿಂದಲೇ ಸಮಾಜದಲ್ಲಿ ಪ್ರತ್ಯೇಕತೆಯ ಭಾವನೆ ಬೆಳೆಯು ತ್ತದೆ, ಪರಸ್ಪರ ದ್ವೇಷ, ತಿರಸ್ಕಾರ ತಳವೂರುತ್ತದೆ. ನಾವು ಒಂದು ರಾಷ್ಟ್ರವಾಗಿ ಎದ್ದುನಿಲ್ಲುವುದೇ ಆದಲ್ಲಿ, ನಮ್ಮ ಮಾರ್ಗದಲ್ಲಿರುವ ಅಡೆತಡೆಗಳನ್ನು ಮೊದಲು ನಿವಾರಿಸಬೇಕು. ಒಂದು ರಾಷ್ಟ್ರ ವಾಗಿ ನಿಂತುಕೊಂಡಲ್ಲಿ ಮಾತ್ರ ಬಂಧುತ್ವದ ಭಾವನೆ ಅರಳುತ್ತದೆ".
ಅಂಬೇಡ್ಕರ್ ಹಾಗೂ ಡಾಕ್ಟರ್‌ಜೀಯವರ ಕಾರ್ಯಶೈಲಿಗಳು ಭಿನ್ನವಾಗಿ ಕಂಡರೂ, ಇಬ್ಬರ ದಿಕ್ಕೂ ಒಂದೇ ಆಗಿತ್ತೆಂದು ಇದರಿಂದ ಸ್ಪಷ್ಟವಾಗುತ್ತದೆ. ಇಬ್ಬರೂ ಸಮಾಜದಲ್ಲಿ ಸಮಾನತೆಯ ಪರವಾಗಿ ದ್ದವರು. 1934ರಲ್ಲಿ, ಮಹಾತ್ಮ ಗಾಂಧಿಯವರು ಸಂಘದ ಶಿಬಿರವನ್ನು ಸಂದರ್ಶಿಸಲು ಬಂದಿದ್ದರು.
ಶಿಬಿರದಲ್ಲಿ ಪಾಲ್ಗೊಂಡಿದ್ದಂಥ ಕಾರ್ಯಕರ್ತರಿಗೆ ಇತರರ ಜಾತಿಯ ಅರಿವೇ ಇರಲಿಲ್ಲ. ಅಲ್ಲಿ ಬಂದಿದ್ದ ಕಾರ್ಯಕರ್ತರಲ್ಲಿ ಯಾರು ಕೂಡ ಮತ್ತೊಬ್ಬನ ಜಾತಿಯನ್ನು ಕೇಳಿ ತಿಳಿದುಕೊಳ್ಳುವ ಯತ್ನವನ್ನೇ ಮಾಡಲಿಲ್ಲ. ಎಲ್ಲರ ಮನದಲ್ಲೂ ತಾವು ಕೇವಲ ಹಿಂದೂಗಳಷ್ಟೇ ಎಂಬ ಭಾವನೆ ಯಿತ್ತು. ಶಿಬಿರದಲ್ಲಿ ಎಲ್ಲರೂ ಒಟ್ಟಾಗಿ ಕೂರುವುದು, ಏಳುವುದು, ಊಟ ಮಾಡುವುದು, ಕೆಲಸ ಮಾಡುವುದು ಸಾಗುತ್ತಿತ್ತು. ಇದನ್ನು ಕಂಡು ಗಾಂಧೀಜಿ ಆಶ್ಚರ್ಯಚಕಿತರಾಗಿದ್ದರು.
ಹೆಡ್ಗೆವಾರ್‌ರವರು ಅತ್ಯಂತ ಯಶಸ್ವಿಯಾಗಿ ಅಸ್ಪೃಶ್ಯತೆಯ ನಿವಾರಣೆ ಮಾಡಿರುವುದನ್ನು ಮಹಾ ತ್ಮ ಗಾಂಧಿ ಕೊಂಡಾಡಿದ್ದರು. ನಾಗಪುರದಲ್ಲಿ ಒಮ್ಮೆ ನಡೆಯಬೇಕಿದ್ದ, ಸಂಘದ ಶಿಕ್ಷವರ್ಗದ ತೃತೀಯ ವರ್ಷದ ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸಬೇಕೆಂದು ಸಂಘದ ಹಿರಿಯ ಕಾರ್ಯ ಕರ್ತರೊಬ್ಬರು ಕೇಳಿದಾಗ, ಹಲವು ಗಣ್ಯವ್ಯಕ್ತಿಗಳ ಹೆಸರುಗಳು ಸೂಚಿಸಲ್ಪಟ್ಟವು.
ಆದರೆ ಗುರೂಜಿ, ‘ರೇವರಾಮಜಿ ಕವಾಡೆ’ಯವರನ್ನು ಆಹ್ವಾನಿಸುವಂತೆ ಹೇಳಿದರು. ಈ ಹೆಸರು ಕೇಳುತ್ತಿದ್ದಂತೆ ಅಲ್ಲಿ ನೆರೆದಿದ್ದ ಎಲ್ಲರಿಗೂ ಆಶ್ಚರ್ಯವಾಯಿತು, ಕಾರಣ ಅವರ‍್ಯಾರಿಗೂ ‘ಕವಾಡೆ’ ಯಾರೆಂದು ಗೊತ್ತಿರಲಿಲ್ಲ. ಬಾಬಾ ಸಾಹೇಬರು ಮತಾಂತರಗೊಂಡ ನಂತರ ಹಲವು ಅನುಯಾಯಿ ಗಳು ರಾಜಕೀಯಕ್ಕೆ ಹೋದರು; ಆದರೆ ಇಬ್ಬರು ಮಾತ್ರ ಧರ್ಮದ ಬಗ್ಗೆ ಒಲವು ಮೂಡಿಸಿ ಕೊಂಡಿದ್ದರು.
ಆ ಇಬ್ಬರಲ್ಲಿ ಕವಾಡೆ ಸಹ ಒಬ್ಬರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಬಾಬಾ ಸಾಹೇಬರ ನಡುವೆ ಬಿರುಕು ಮೂಡಿಸಲು ಕಾಂಗ್ರೆಸ್ಸಿಗರು ದಶಕಗಳಿಂದ ಕುತಂತ್ರ ಮಾಡುತ್ತಲೇ ಬಂದಿದ್ದಾರೆ. ಅಂಬೇಡ್ಕರ್‌ರವರು ಕೆಲವು ಶಾಸೀಯ ಕಾರಣಗಳಿಂದಾಗಿ ತಮ್ಮ ದೀಕ್ಷಾ ಸಮಾರಂಭಕ್ಕೆ ನಾಗಪುರ ವನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಕೆಲವು ಪ್ರಗತಿಪರರು, “ಸಂಘದ ಕೇಂದ್ರವು ನಾಗಪುರ ದಲ್ಲಿರುವುದರಿಂದ ಅಲ್ಲಿನವರಿಗೆ ಸಂದೇಶ ರವಾನಿಸಲೆಂದು ಅಂಬೇಡ್ಕರ್ ನಾಗಪುರವನ್ನು ಆಯ್ಕೆಮಾಡಿಕೊಂಡಿದ್ದಾರೆ" ಎಂದು ಸುಳ್ಳು ಸುದ್ದಿ ಹಬ್ಬಿಸಿದರು.
ಈ ವಿಷಯ ತಿಳಿದ ಬಾಬಾ ಸಾಹೇಬರು ತಮ್ಮ ಭಾಷಣದ ಆರಂಭದಲ್ಲಿಯೇ, ತಾವು ನಾಗಪುರವನ್ನು ಆಯ್ಕೆಮಾಡಿರುವುದೇಕೆ ಎಂಬುದನ್ನು ಹೇಳಿಬಿಟ್ಟರು. ಮಾತ್ರವಲ್ಲದೆ, ಬೌದ್ಧಮತದ ಹರಡುವಿಕೆ ಯಲ್ಲಿ ನಾಗಪುರದ ಜನರ ಪ್ರಮುಖ ಪಾತ್ರವಿರುವುದನ್ನು ಉಲ್ಲೇಖ ಮಾಡಿ, ಅದಕ್ಕಾಗಿಯೇ ತಾವು ನಾಗಪುರವನ್ನು ಆಯ್ಕೆಮಾಡಿಕೊಂಡಿದ್ದಾಗಿ ಹೇಳಿದರು. “ಕೆಲವರು ಇದರ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ನನ್ನ ಕಿವಿಗೆ ಬಿದ್ದಿದೆ, ಅದೆಲ್ಲವೂ ಸುಳ್ಳು" ಎಂದು ಹೇಳುವ ಮೂಲಕ ಕಾಂಗ್ರೆಸ್ಸಿಗರಿಗೆ ಮತ್ತು ಎಡಚರರಿಗೆ ಸ್ಪಷ್ಟ ಸಂದೇಶವನ್ನು ತಲುಪಿಸಿದ್ದರು.
ಅಂದು ಜಾತಿ ವ್ಯವಸ್ಥೆಯೆಂಬುದು ಕೇವಲ ನಗರ ಅಥವಾ ಹಳ್ಳಿಗೆ ಸೀಮಿತವಾಗಿರಲಿಲ್ಲ, ಕಾಡು ಗಳಲ್ಲಿ ವಾಸವಾಗಿದ್ದಂಥ ಆದಿವಾಸಿಗಳಲ್ಲಿಯೂ ಇತ್ತು. ಬಾಬಾ ಸಾಹೇಬರಿಗೆ ವನವಾಸಿಗಳ ಬಗ್ಗೆ ಅಪಾರ ಕಾಳಜಿಯಿತ್ತು. ಅವರನ್ನು ಮುಖ್ಯವಾಹಿನಿಗೆ ತಂದು ಒಳ್ಳೆಯ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಕೊಡಿಸಬೇಕೆಂಬ ಹಂಬಲವಿತ್ತು.
“ಸಾವಿರಾರು ವರ್ಷಗಳಿಂದ ತಮ್ಮದೇ ಆದ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಬಂದಿ ರುವ ಆದಿವಾಸಿಗಳು ಹಲವು ರೋಗಗಳಿಂದ ಬಳಲುತ್ತಿದ್ದಾರೆ. ಅವರಿಗೆ ಸರಿಯಾದ ಆಶ್ರಯವಿಲ್ಲ. ಅವರನ್ನು ಸಮೀಪಿಸಿ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡರೆ ಅವರನ್ನು ರಕ್ಷಿಸಲು ಸಾಧ್ಯ" ಎಂದು ಬಾಬಾ ಸಾಹೇಬರು ಹೇಳಿದ್ದರು. ವನವಾಸಿಗಳು ಮತ್ತು ಗಿರಿಜನರ ಬಗ್ಗೆ ಬಾಬಾ ಸಾಹೇಬ ರಂತೆ ಗುರೂಜಿಯವರೂ ಆಲೋಚಿಸುತ್ತಿದ್ದರು. ಸಂಘದ ಪ್ರಮುಖ ಕಾರ್ಯಕರ್ತರಾಗಿದ್ದ ಬಾಳಾಸಾಹೇಬ ದೇಶಪಾಂಡೆಯವರನ್ನು ವನವಾಸಿಗಳ ನಡುವೆ ಕೆಲಸಕ್ಕಾಗಿ ನಿಯುಕ್ತಿಗೊಳಿಸಿದರು. ಬಾಳಾಸಾಹೇಬರು ದೊಡ್ಡದೊಂದು ಯುವಪಡೆಯನ್ನು ಕಟ್ಟಿಕೊಂಡು ಛತ್ತೀಸ್‌ಗಢದಲ್ಲಿ ತಮ್ಮ ಕೆಲಸವನ್ನು ಪ್ರಾರಂಭಿಸಿದ್ದರು.
ಈ ತಂಡವು ವನವಾಸಿಗಳ ಶಿಕ್ಷಣದ ರಚನಾತ್ಮಕ ಕೆಲಸವನ್ನು ಕೈಗೆತ್ತಿಕೊಂಡಿತು. ಮತ್ತೊಂದೆಡೆ ವನವಾಸಿಗಳ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸಲಾಯಿತು. ವನವಾಸಿಗಳಿಂದ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ ಪೇಟೆಯಲ್ಲಿ ದುಬಾರಿ ಬೆಲೆಗೆ ಮಾರಿ ಹಣವನ್ನು ಮಾಡಿಕೊಳ್ಳುತ್ತಿದ್ದ ವರ್ತಕರ ಬಗ್ಗೆ ಅರಿವು ಮೂಡಿಸಿ ದೊಡ್ಡ ಮಟ್ಟದ ಚಳವಳಿಯನ್ನು ಮಾಡಿಸ ಲಾಯಿತು. ಈ ಎಲ್ಲಾ ಕೆಲಸಗಳನ್ನು 1977ರಲ್ಲಿ ‘ವನವಾಸಿ ಕಲ್ಯಾಣ ಆಶ್ರಮ’ ಎಂಬ ಅಖಿಲ ಭಾರ ತೀಯ ವ್ಯವಸ್ಥೆಗೆ ಒಳಪಡಿಸಲಾಯಿತು.
19ನೇ ಶತಮಾನದಲ್ಲಿ, ಕೇರಳದಲ್ಲಿ ನಡೆಯುತ್ತಿದ್ದಂಥ ಅಸ್ಪೃಶ್ಯತೆಯ ಆಚರಣೆಯು ತುಂಬಾ ದಯನೀಯವಾಗಿತ್ತು. ದಲಿತರು ಉಚ್ಚವರ್ಣೀಯರಿಂದ ಸುಮಾರು 64 ಗಜದಷ್ಟು ದೂರದಲ್ಲಿ ನಿಂತು ಮಾತನಾಡಬೇಕಿತ್ತು. ಇದನ್ನು ಕಂಡ ಸ್ವಾಮಿ ವಿವೇಕಾನಂದರು ಕೇರಳವನ್ನು ಹುಚ್ಚಾಸ್ಪತ್ರೆ’ ಎಂದು ಕರೆದಿದ್ದರು.
ನಂತರ ಕೇರಳದಲ್ಲಿ ಬದಲಾವಣೆಯ ಗಾಳಿ ಬೀಸಿ ಗುರುವಾಯೂರು ದೇಗುಲ ಪ್ರವೇಶಕ್ಕೆ, ತಿರುವಾಂ ಕೂರು ಮಹಾರಾಜರಿಂದ ಅವಕಾಶ ಸಿಕ್ಕ ಐತಿಹಾಸಿಕ ಘಟನೆ ನಡೆಯಿತು. ಕಳೆದ ದಶಕದಲ್ಲಿ ಕಂಚಿ ಕಾಮಕೋಟಿ ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿಯವರ ಸಮ್ಮುಖದಲ್ಲಿ ಅನ್ಯಜಾತಿಯ 29 ಮಂದಿಗೆ ಪೌರೋಹಿತ್ಯದಲ್ಲಿ ತರಬೇತಿ ನೀಡಿ, ಕೊನೆಯಲ್ಲಿ ಸುಮಾರು 4000 ಜನರ ಸಮ್ಮುಖದಲ್ಲಿ ರುದ್ರಾಕ್ಷಿ ಮಾಲೆ ಸಮೇತ ಕಂಚಿ ಕಾಮಕೋಟಿ ಪೀಠದ ಅಧಿಕೃತ ಮೊಹರು ಒತ್ತಿದ ಪ್ರಮಾಣ ಪತ್ರವನ್ನೂ ಪ್ರದಾನ ಮಾಡಲಾಯಿತು.
ಕೇರಳದಲ್ಲಿ ನಡೆದ ಈ ದೊಡ್ಡ ಪ್ರಯತ್ನದ ಹಿಂದೆ ಇದ್ದುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಪಿ.ಮಾಧವನ್. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಇತರರಂತೆ ಪ್ರಚಾರ ಗಿಟ್ಟಿಸದೆ, ತಮ್ಮ ಪಾಡಿಗೆ ತಾವು ಕೆಲಸವನ್ನು ಮಾಡುತ್ತಿರುತ್ತಾರೆ. ಪ್ರಚಾರ ಮಾಡದ ಕಾರಣ, ಸಂಘದ ಹಲವು ಸಾಮಾಜಿಕ ಕಾರ್ಯಗಳು ಜನರಿಗೆ ತಿಳಿಯುವುದಿಲ್ಲ. ಸಮಾಜ ದಲ್ಲಿದ್ದ ಅಸ್ಪೃಶ್ಯತೆಯ ವಿರುದ್ಧ ಗಟ್ಟಿಯಾಗಿ ನಿಂತಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಬಾಬಾ ಸಾಹೇಬರು. ಇಬ್ಬರ ಗುರಿ ಒಂದೇ ಆಗಿತ್ತು,
ಆದರೆ ಗುರಿಯನ್ನು ಸಾಧಿಸಲು ಬಳಸಿಕೊಂಡಂಥ ಮಾರ್ಗ ಮಾತ್ರ ಭಿನ್ನವಾಗಿತ್ತು. ಇಬ್ಬರಿಗೂ ರಾಜಕೀಯದ ಅರಿವಿಲ್ಲದ ಕಾರಣ ಚುನಾವಣೆಗಳನ್ನು ಎದುರಿಸುವುದು ಕಷ್ಟವಾಗಿತ್ತು. ಬಾಬಾ ಸಾಹೇಬರು ನಂತರ ಷೆಡ್ಯೂಲ್ ಕ್ಯಾಸ್ಟ್ ಪಕ್ಷವನ್ನು ವಿಸರ್ಜಿಸಿ ಎಲ್ಲಾ ಜಾತಿಯವರ ವಿಶ್ವಾಸ ಗಳಿಸಲು ‘ರಿಪಬ್ಲಿಕನ್’ ಪಕ್ಷವನ್ನು ಕಟ್ಟುವತ್ತ ಯೋಚಿಸಿದ್ದರು.
ಬಾಬಾ ಸಾಹೇಬರ ಅನುಯಾಯಿಗಳು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಧ್ಯೆ ದೊಡ್ಡ ಕಂದಕವನ್ನು ಸೃಷ್ಟಿಸಲು ಕಾಂಗ್ರೆಸ್ಸಿಗರು ಸಂಘದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಇಂದಿಗೂ ಮಾಡುತ್ತಿದ್ದಾರೆ. ಸಂಘವೆಂದರೆ ಕೇವಲ ಬ್ರಾಹ್ಮಣರಿಗೆ ಸೇರಿದ್ದೆಂದು ಸುಳ್ಳು ಸುದ್ದಿ ಹರಡಿಸಿ ದಲಿತರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಆರಂಭವಾದ ದಿನದಿಂದಲೂ ಸಮಾಜದ ಎಲ್ಲಾ ವರ್ಗದ ಜನರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ.