MLA K.H.Puttaswamy Gowda: ನಾಟಕಗಳು ಗ್ರಾಮೀಣ ಜನರ ಮತ್ತು ಸಂಸ್ಕೃತಿಯ ಜೀವನಾಡಿ: ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ
ಬಸವಣ್ಣನವರ ಸಮಕಾಲೀನ ರಾದ ಶ್ರೇಷ್ಠ ಶಿವಶರಣ ಹರಳಯ್ಯ ಅವರು ಚಮ್ಮಾರಿಕೆ ಕಾಯಕದ ಮೂಲಕ ಗುರುಲಿಂಗ ಜಂಗಮ ಸೇವೆ ಮಾಡಿದವರು, ಅನುಭವ ಮಂಟಪದ ಮೂಲಕ ಕಾಯಕವೇ ಕೈಲಾಸ ತತ್ವ ಪಾಲಿಸಿದವರು. ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿ ಯ ಭಕ್ತಿನಿಷ್ಠೆ ಮತ್ತು ಕಾಯಕ ನಿಷ್ಠೆಯನ್ನು ನಾಟಕದ ಮೂಲಕ ಅನಾವರಣ ಮಾಡಿರುವುದು ನಿಜಕ್ಕೂ ಶ್ಲಾಘನೀಯ
-
ಗೌರಿಬಿದನೂರು: ನಾಟಕಗಳು ಗ್ರಾಮೀಣ ಜನರು ಮತ್ತು ಸಂಸ್ಕೃತಿಯ ಜೀವನಾಡಿ, ಅದರಿಂದ ನಮ್ಮ ಭಾರತೀಯ ಪರಂಪರೆ ಮೆಲುಕು ಹಾಕಲು ಸಾಧ್ಯ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ(MLA K.H.Puttaswamy Gowda) ಹೇಳಿದರು.
ತಾಲೂಕಿನ ಇಡಗೂರಿನ ರುದ್ರಕವಿ ರಂಗಮಂದಿರದಲ್ಲಿ ಗೌತಮ ಬುದ್ದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘವು ಕದು ಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಶಿವಶರಣ ಹರಳಯ್ಯ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಸಮ ಸಮಾಜದ ಆಶೋತ್ತರಗಳನ್ನು ಎಲ್ಲ ಜನರಿಗೂ ತಲುಪಿಸಲು ಅನುಭವ ಮಂಟಪ ಮಾಡಿದ ಬಸವಣ್ಣನವರು ಇತಿಹಾಸದ ಪುಟ ದಲ್ಲಿ ಸಾಂಸ್ಕೃತಿಕ ನಾಯಕರಾಗಿ ನಿಲ್ಲುತ್ತಾರೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಮಾತ ನಾಡಿ, ಬಸವಣ್ಣನವರ ಸಮಕಾಲೀನ ರಾದ ಶ್ರೇಷ್ಠ ಶಿವಶರಣ ಹರಳಯ್ಯ ಅವರು ಚಮ್ಮಾರಿಕೆ ಕಾಯಕದ ಮೂಲಕ ಗುರುಲಿಂಗ ಜಂಗಮ ಸೇವೆ ಮಾಡಿದವರು, ಅನುಭವ ಮಂಟಪದ ಮೂಲಕ ಕಾಯಕವೇ ಕೈಲಾಸ ತತ್ವ ಪಾಲಿಸಿದವರು. ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿಯ ಭಕ್ತಿನಿಷ್ಠೆ ಮತ್ತು ಕಾಯಕ ನಿಷ್ಠೆಯನ್ನು ನಾಟಕದ ಮೂಲಕ ಅನಾವರಣ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಇದನ್ನೂ ಓದಿ: T20 World Cup: 89 ರನ್ ಗಳಿಸಿ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ ಸಂಜು ಸ್ಯಾಮ್ಸನ್!
ಹರಳಯ್ಯ ಅಂದಿನ ಕಾಲಘಟ್ಟದಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಮೇಲು ಜಾತಿಯ ಮಗಳೊಂದಿಗೆ ಹರಳಯ್ಯ ಅವರು ಮಗ ಶೀಲವಂತನ ವಿವಾಹ ಮಾಡುವ ಮೂಲಕ ಸಮಸಮಾಜದ ಪರಿ ಕಲ್ಪನೆಯನ್ನು ಮೊಟ್ಟಮೊದಲು ಬಸವಣ್ಣನವರ ಮೂಲಕ ಸಾರಿ ತಿಳಿಸಿದರು. ನಾಟಕವು ಜಾತಿ ತಾರತಮ್ಯದ ಬೇರುಗಳನ್ನು ಸಡಿಲಗೊಳಿಸಿ, ಇವನಾರವ ಇವನಾರವ ಎಂದೆಣಿಸದೆ ಎಲ್ಲರನ್ನು ನಮ್ಮವರೇ ಎಂಬ ಕಲ್ಪನೆಗೆ ಚಾರಿತ್ರಿಕ ಮೈಲಿಗಲ್ಲನ್ನು 12ನೇ ಶತಮಾನ ಕಲ್ಪಿಸಿದೆ ಎಂದು ತಿಳಿಸಿದರು.
ಇಡಗೂರಿನ ಮುಖಂಡ ಎಲ್. ನಾಗ ರಾಜು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಸವಣ್ಣ ನವರ ದೂರದೃಷ್ಟಿಯ ಸಂವೇದನೆಯನ್ನು ಪ್ರಸ್ತುತ ದಿನಮಾನಗಳಲ್ಲಿ ಎಲ್ಲರೂ ತಮ್ಮ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾನತೆಯ ರಥ ಎಳೆಯಬೇಕು ಎಂದು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಜಿ.ಸೋಮಯ್ಯ ಮಾತನಾಡಿ, ಭಾರತೀಯ ಅಸಮಾನತೆಯ ವ್ಯವಸ್ಥೆಗಳಲ್ಲಿ 12ನೇ ಶತಮಾನ ನಿಜಕ್ಕೂ ಶ್ರೇಷ್ಠ ಸಮಾಜದ ಕಲ್ಪನೆಯ ದಾರಿ ದೀಪ, ಅವತ್ತು ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಸೇರಿ ದಂತೆ ಅನೇಕ ಶರಣರನ್ನು ಕಾಯಕ ತತ್ವದ ಮೂಲಕ ಸಮಾಜಕ್ಕೆ ಪರಿಚಯಿಸಿದ ಶ್ರೇಷ್ಠ ಸಮಾಜ ಸುಧಾರಕ ಬಸವಣ್ಣನವರ ಕ್ರಾಂತಿಕಾರಕ ಹೆಜ್ಜೆ ಗುರುತು ಗಳು ಕಾರಣ ಎಂದರು.
ವೈ.ಕೆ. ಶ್ರೀಧರ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಹೋಳಿ ಹುಣ್ಣಿಮೆ ಪ್ರಯುಕ್ತ ಸಾಂಸ್ಕೃತಿಕ ಚಟುವಟಿಕೆಗಳನ್ನುಜನರ ಆಶೋ ತ್ತರಗಳಿಗೆ ತಕ್ಕಂತೆ ಆಗಿಂದಾಗ್ಗೆ ನಡೆಸುತ್ತಿರು ವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಿರಿಗೆರೆಯ ಧಾತ್ರಿ ರಂಗ ತಂಡದ ಕಲಾವಿದರು ಶಿವಶರಣ ಹರ ಳಯ್ಯ ನಾಟಕವನ್ನು ಮನೋಜ್ಞವಾಗಿ ಅಭಿ ನಯಿಸಿದರು. ಮಹೇಶ್ ಕುಮಾರ್ ಮತ್ತು ನಟರಾಜ್ ತಂಡದವರಿಂದ ಗೀತ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿಎನ್. ಉಮಾಶಂಕರ್, ಕೃಷ್ಣಪ್ಪ, ಅಶ್ವಥನಾರಾಯಣ್, ನರಸಿಂಹ ಮೂರ್ತಿ, ರಾಜಶೇಖರ್, ರಾಮಕೃಷ್ಣಪ್ಪ, ಗೌತಮ್, ಶ್ರೀಧರ್, ಗೌತಮ ಬುದ್ಧಸಂಸ್ಥೆಯ ಕಲಾವಿದ ವೈ.ಟಿ. ಪ್ರಸನ್ನಕುಮಾರ್ ಮತ್ತಿತ ರರು ಭಾಗವಹಿಸಿದ್ದರು.