ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Uma Mahesh Vaidya Column: ಸೌಜನ್ಯ ಪ್ರಕರಣವನ್ನು ಜೀವಂತರಾಗಿಸಿರುವ ಕಸರತ್ತು !

ಇದು ನಮ್ಮ ಗಣತಂತ್ರದಲ್ಲಿ ನಾವೆ ಲ್ಲ ಒಪ್ಪಿಕೊಂಡು ಜಾರಿಗೆ ತಂದಿರುವ ನ್ಯಾಯಾಂಗ ಪದ್ಧತಿ. ತನಿಖೆ ಯಲ್ಲಿ ಆರೋಪಿಯೆಂದು ಕಂಡುಬಂದು, ನಂತರ ನ್ಯಾಯಾಲಯಗಳಿಂದ ಅನೇಕ ಕಾರಣಗಳ ಮೇಲೆ ನಿರಪರಾಧಿಯಾಗಿ ಬಿಡುಗಡೆಯ ಭಾಗ್ಯ ದೊರಕುವುದು ನೂರರಲ್ಲಿ ಸುಮಾರು 80 ವ್ಯಕ್ತಿ ಗಳಿಗೆ.

ಸೌಜನ್ಯ ಪ್ರಕರಣವನ್ನು ಜೀವಂತರಾಗಿಸಿರುವ ಕಸರತ್ತು !

ಅಂಕಣಗಾರ್ತಿ ಉಮಾ ಮಹೇಶ್‌ ವೈದ್ಯ

Profile Ashok Nayak Mar 21, 2025 10:17 AM

ಯಕ್ಷಪ್ರಶ್ನೆ

ಉಮಾ ಮಹೇಶ್‌ ವೈದ್ಯೆ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತ ಹೆಚ್ಚಾಗಿ ಸದ್ದು ಮಾಡುತ್ತಿರುವಂಥದ್ದೆಂದರೆ, ‘ಜಸ್ಟಿಸ್ ಫಾರ್ ಸೌಜನ್ಯ’ ಹೆಸರಿನಲ್ಲಿ ಯುಟ್ಯೂಬರ್ ಗಳು, ಫೇಸ್‌ಬುಕ್ ಪುಟದವರು, ಟ್ರೋಲ್ ಪುಟದವರು ಪ್ರತಿದಿನ ತಮ್ಮದೇ ರೀತಿಯಲ್ಲಿ ಪ್ರಸಾರ ಮಾಡುತ್ತಿರುವ ಸುದ್ದಿ. ನ್ಯಾಯಾಲಯದಲ್ಲಿ ಈ ಪ್ರಕರಣವು ಇತ್ಯರ್ಥವಾದರೂ ಸಂತುಷ್ಟಗೊಳ್ಳದ ಇವರು, ‘ನ್ಯಾಯ ಬೇಕು’ ಎಂಬ ಬೇಡಿಕೆಯೊಂದಿಗೆ ಧರ್ಮ ಸ್ಥಳ ಕ್ಷೇತ್ರ ಹಾಗೂ ಒಂದು ಕುಟುಂಬವನ್ನು ಗುರಿಯಾಗಿಸಿಕೊಂಡು, ಭೌತಿಕವಾಗಿ ಹಾಗೂ ಸಾಮಾ ಜಿಕ ತಾಲತಾಣಗಳಲ್ಲಿ ಅವಿರತವಾಗಿ ವಿಡಿಯೋಗಳ ಪ್ರಸಾರದ ಮೂಲಕ ಪ್ರತಿಭಟನೆಗಳನ್ನು ಮಾಡುತ್ತಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ಕರಾವಳಿಯಲ್ಲದೆ ಕರ್ನಾಟಕದಾದ್ಯಂತ ಅನೇಕ ಅಪರಾಧಿಕ ಪ್ರಕರಣಗಳು ದಾಖಲಾಗುತ್ತವೆ, ತನಿ ಖೆಗೆ ಒಳಪಡುತ್ತವೆ; ನ್ಯಾಯಾಲಯಗಳಲ್ಲಿ ಕಾನೂನುಬದ್ಧವಾಗಿ ವಿಚಾರಣೆಗೊಂಡ ನಂತರ ಆಪಾದಿತ ಬಿಡುಗಡೆಯಾಗುತ್ತಾನೆ ಅಥವಾ ಶಿಕ್ಷೆ ಅನುಭವಿಸುತ್ತಾನೆ.

ಇದು ನಮ್ಮ ಗಣತಂತ್ರದಲ್ಲಿ ನಾವೆ ಲ್ಲ ಒಪ್ಪಿಕೊಂಡು ಜಾರಿಗೆ ತಂದಿರುವ ನ್ಯಾಯಾಂಗ ಪದ್ಧತಿ. ತನಿಖೆಯಲ್ಲಿ ಆರೋಪಿಯೆಂದು ಕಂಡುಬಂದು, ನಂತರ ನ್ಯಾಯಾಲಯಗಳಿಂದ ಅನೇಕ ಕಾರಣಗಳ ಮೇಲೆ ನಿರಪರಾಧಿಯಾಗಿ ಬಿಡುಗಡೆಯ ಭಾಗ್ಯ ದೊರಕುವುದು ನೂರರಲ್ಲಿ ಸುಮಾರು 80 ವ್ಯಕ್ತಿ ಗಳಿಗೆ.

ಇದನ್ನೂ ಓದಿ: Uma Mahesh Vaidya Column: ಸುಳ್ಳು ಸುದ್ದಿ: ಯುಟ್ಯೂಬರ್‌ಗಳ ಮೇಲೆ ಪ್ರಕರಣ ದಾಖಲಿಸಬಹುದೇ ?

ಹಾಗೆಂದ ಮೇಲೆ, ಆರೋಪಿಯನ್ನು ‘ನಿರಪರಾಧಿ’ ಎಂದು ನ್ಯಾಯಾಲಯವೇ ತೀರ್ಪು ನೀಡಿದ ನಂತರವೂ, ಎಲ್ಲ ಪ್ರಕರಣಗಳಲ್ಲಿ ‘ನ್ಯಾಯ ಬೇಕು’ ಎಂಬ ಸಾಮೂಹಿಕ ಕೂಗು ಕೇಳಿಬರುವು ದಿಲ್ಲವೇಕೆ? ಅದು ಸೌಜನ್ಯ ಪ್ರಕರಣದಲ್ಲಿ ಮಾತ್ರವೇ ಗಾಢವಾಗಿ ಕೇಳಿಬರುತ್ತಿರುವುದೇಕೆ? ನ್ಯಾಯಾ ಲಯದಿಂದ ಪ್ರಕರಣ ಇತ್ಯರ್ಥವಾದರೂ, ತನಿಖಾ ಸಂಸ್ಥೆಗೆ ಮತ್ತು ನ್ಯಾಯಾಲಯಕ್ಕೆ ದೊರಕದ ಸಾಕ್ಷ್ಯಗಳನ್ನು ಹೆಸರಿಸಿ, ಅವುಗಳನ್ನು ಜನರೆದುರು ಇಟ್ಟು, ‘ಅನ್ಯಾಯವಾಗಿದೆ’ ಎಂದು ಹೋರಾ ಟಕ್ಕೆ ಇಳಿಯಲು ಕಾರಣಗಳೇನು? ಈ ಎಲ್ಲ ವರ್ತನೆಗಳನ್ನು ನೋಡಿದಾಗ, ‘ಯಾವ ಕಾರಣಗಳಿಗಾಗಿ ಸೌಜನ್ಯ ಪ್ರಕರಣವನ್ನು ಜೀವಂತವಾಗಿಡಲು ಪ್ರಯತ್ನ ಮಾಡಲಾಗುತ್ತಿದೆ?’ ಎಂಬುದು ಸಾರ್ವ ಜನಿಕರನ್ನು ಕಾಡುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಈ ಪ್ರತಿಭಟನೆಗಳ ಹಿಂದೆ ಯಾವುದಾದರೂ ದುರುದ್ದೇಶವಿದೆಯೇ? ಪ್ರತಿಭಟನಾಕಾರರು, ಯುಟ್ಯೂ ಬರ್‌ಗಳು, ಫೇಸ್ ಬುಕ್ ಪುಟಗಳ ನಿರ್ವಾಹಕರು, ಬ್ಲಾಗ್ ಬರಹಗಾರರು ಯಾರದೋ ಸಂಚಿಗೆ, ಆರ್ಥಿಕ ಲಾಭಕ್ಕೆ ಬಳಕೆಯಾಗುತ್ತಿದ್ದಾರೆಯೇ? ಎಂಬಂಥ ಪ್ರಶ್ನೆಗಳು ಹೊಮ್ಮುತ್ತವೆ ಮತ್ತು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಸ್ಪಷ್ಟ ಉತ್ತರಗಳಿಗಾಗಿ ಪ್ರತಿದಿನವೂ ಚರ್ಚೆಗೆ ಒಳಗಾಗುತ್ತಿವೆ.

ಆದರೆ, ‘ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ’ ಎಂದು ಹೇಳುವ ಪ್ರತಿಭಟನಾಕಾರರನ್ನು, ‘ಉಳಿದ ಪ್ರಕರಣಗಳಲ್ಲಿ ನಿಮ್ಮ ಪ್ರತಿಭಟನೆ ಯಾಕಿಲ್ಲ?’ ಎಂದು ಕೇಳಿದರೆ ಉತ್ತರವಿಲ್ಲ. ಮಾತ್ರವಲ್ಲ, ‘ಪ್ರತಿ ಭಟನೆಗೆ ಎಲ್ಲಿಂದ ಹಣ ಹೊಂದಿಸಿಕೊಂಡಿದ್ದೀರಿ?’ ಎಂಬ ಪ್ರಶ್ನೆಗೆ ಉತ್ತರ ದೊರಕುವ ಸಾಧ್ಯತೆ ಕಡಿಮೆ ಎಂದರೆ ತಪ್ಪಾಗಲಿಕ್ಕಿಲ್ಲ.

ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡುವ ಹೋರಾಟದ ಕುರಿತಾದ ಪರ ಹಾಗೂ ವಿರುದ್ಧದ ಚರ್ಚೆ ಗಳ ವಿಷಯಗಳನ್ನು ಆಳವಾಗಿ ಗಮನಿಸುವ ಅನೇಕರಲ್ಲಿ ವಿವಿಧ ಅಭಿಪ್ರಾಯಗಳಿವೆ. ಒಂದು ಅಭಿಪ್ರಾಯದ ಪ್ರಕಾರ, ಸೌಜನ್ಯಳ ಪ್ರಕರಣವನ್ನು ಜೀವಂತವಾಗಿರಿಸುವುದು, ಬುದ್ಧಿಜೀವಿಗಳೆನಿಸಿ ಕೊಂಡವರ ಟೂಲ್‌ಕಿಟ್‌ನ ಒಂದು ಭಾಗ. ಹಾಗಾದರೆ, ‘ಟೂಲ್ ಕಿಟ್ ಎಂದರೇನು?’ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇದಕ್ಕಿರುವ ಸರಳ ಉತ್ತರವೆಂದರೆ, ಮರೆಯಾಗಿ ಕುಳಿತ ಕೆಲವು ಜನರು, ತಮ್ಮ ಸಂಘಟನೆಯ ಅಥವಾ ಕೂಟದ ಉದ್ದೇಶಗಳನ್ನು ಸಮಾಜದ ಮೂಲಕ್ಕೆ ತೆಗೆದುಕೊಂಡು ಹೋಗಿ, ಸದ್ಯ ಸಾರ್ವ ಜನಿಕರು ನಂಬಿರುವ ಹಾಗೂ ಹೊಂದಿರುವ ಅಭಿಪ್ರಾಯಗಳನ್ನು ಬದಲಿಸಲು, ಜತೆಗೆ ತಮ್ಮ ಚಿಂತನೆಯನ್ನು ಪರೋಕ್ಷವಾಗಿ ಜನರ ನಡುವೆ ನುಸುಳುವಂತೆ ಮಾಡಿ, ಕಾಲಾನಂತರದಲ್ಲಿ ತಮ್ಮ ಚಿಂತನೆಗಳು ಸಾರ್ವಜನಿಕ ಅಭಿಪ್ರಾಯವಾಗಿ ರೂಪಾಂತರ ಹೊಂದುವಂತೆ ವ್ಯವಸ್ಥಿತವಾಗಿ ರೂಪಿಸುವ ಯೋಜನೆ. ಈ ಯೋಜನೆಯನ್ನು ಹಂತಹಂತವಾಗಿ ಜಾರಿಗೆ ತರಲು, ಯಾವ್ಯಾವ ವ್ಯಕ್ತಿಗಳನ್ನು ಹೇಗೆ ಸಾಧನವಾಗಿ ಬಳಸಿಕೊಳ್ಳಬೇಕು, ಅವರಿಂದ ಹೇಗೆ ಹೇಳಿಸಬೇಕು ಎಂಬುದನ್ನು ಪೂರ್ವಯೋಜಿತವಾಗಿ ರೂಪಿಸಿ, ಮೊದಲ ಹಂತದಲ್ಲಿ ಒಬ್ಬ ವ್ಯಕ್ತಿಯಿಂದ ತಮ್ಮ ಯೋಜನೆ ಯನ್ನು ಕಾರ್ಯರೂಪಕ್ಕೆ ತಂದಾಗ, ಸಾರ್ವಜನಿಕರು ಹೇಗೆ ಸ್ಪಂದಿಸುತ್ತಾರೆ, ಸರಕಾರ ಹೇಗೆ ಪ್ರತಿ ಕ್ರಿಯಿಸುತ್ತದೆ ಎಂಬುದನ್ನು ಕಂಡುಕೊಂಡು, ನಂತರ ಮುಂದಿನ ಹಂತಗಳನ್ನು ಜಾರಿಗೊಳಿ ಸುವ ಒಂದು ವ್ಯವಸ್ಥಿತ ಕೂಟದ ಚಿಂತನೆ. ಇಂಥ ಯೋಜನೆಗೆ ‘ಟೂಲ್ ಕಿಟ್’ ಎಂದು ಕರೆಯ ಬಹುದು.

ಈ ಹಿನ್ನೆಲೆಯಲ್ಲಿ, ಈ ಪ್ರತಿಭಟನೆಗಳು ನಡೆದುಬಂದ ದಾರಿಯನ್ನು ಗಮನಿಸಿದಾಗ ಕಂಡುಬರುವ ವಿಷಯಗಳೆಂದರೆ, ಕರ್ನಾಟಕ ಉಚ್ಚ ನ್ಯಾಯಾಲಯವು, ಸೌಜನ್ಯ ಪ್ರಕರಣದಲ್ಲಿ ನ್ಯಾಯ ಬೇಕು ಎಂದು ನಿರ್ದಿಷ್ಟ ವ್ಯಕ್ತಿ ಅಥವಾ ಕುಟುಂಬದ ವಿರುದ್ಧ ಹೋರಾಟ, ಪ್ರತಿಭಟನೆ ಮಾಡಬಾರದೆಂದು ನೀಡಿದ ಮಧ್ಯಂತರ ಆದೇಶದ ಪರಿಣಾಮ ರಿಟ್ ಅರ್ಜಿಯ ವಿಲೇವಾರಿ ಕೊನೆಗೊಂಡ ನಂತರ, ರಾತ್ರೋರಾತ್ರಿ ಒಬ್ಬ ಯುಟ್ಯೂಬರ್‌ನಿಂದ ಒಂದು ರೋಚಕ ವಿಡಿಯೋ ಬಿತ್ತರವಾದಾಗ, ಉಳಿದ ಫೇಸ್‌ಬುಕ್ ಪುಟಗಳ ನಿರ್ವಾಹಕರೂ ಅದೇ ಸಮಯಕ್ಕೆ ಆ ಯುಟ್ಯೂಬರ್‌ನ ಬೆಂಬಲಕ್ಕೆ ನಿಲ್ಲುವ ಪರಿ, ಆ ಯುಟ್ಯೂಬರ್‌ನ ಪರವಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಆದೇಶ ಪಡೆದುಕೊಳ್ಳಲು ಒಂದು ತಂಡವೇ ತಯಾರಾಗಿ ನಿಲ್ಲುವ ಪರಿ, ಇವೆಲ್ಲವುಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿದಾಗ, ಸಾರ್ವಜನಿಕರು ಸಂಶಯಪಡುವಂತೆ ಇದು ಯಾವುದೋ ದುರುದ್ದೇಶವನ್ನು ಸಾರ್ವಜನಿಕರಲ್ಲಿ ಬಿತ್ತಲು ರೂಪಿಸಿರುವ ‘ಟೂಲ್ ಕಿಟ್’ ಆಗಿರಬಹುದೇ? ಎಂಬ ಪ್ರಶ್ನೆಗೆ ಪುಷ್ಟಿ ನೀಡುತ್ತದೆ.

ಇಂಥ ಹೋರಾಟಗಳ ಹಿಂದಿರುವ ಯೋಜನೆ ಮತ್ತು ಉದ್ದೇಶಗಳ ಬಗ್ಗೆ ಸಮಯವೇ ಉತ್ತರಿಸ ಬೇಕಾ ಗುತ್ತದೆ. ಸಾರ್ವಜನಿಕರು ಊಹಿಸುವ ಇನ್ನೊಂದು ಸಾಧ್ಯತೆಯೆಂದರೆ, ಮತಾಂತರವನ್ನೇ ಉದ್ದೇಶ ವಾಗಿರಿಸಿಕೊಂಡ ಕೆಲ ಸಂಸ್ಥೆಗಳು, ಕರಾವಳಿ ಭಾಗದಲ್ಲಿ ತಮ್ಮ ಚಟುವಟಿಕೆಗೆ ಅಡ್ಡಿ ಯಾಗಿರುವ ಶಕ್ತಿಗಳನ್ನು ಹೊಸಕಿ ಹಾಕಲು, ಹೋರಾಟದ ಕಿಚ್ಚು ಆರದಂತೆ ತೆರೆಮರೆಯಲ್ಲಿ ನೋಡಿಕೊಳ್ಳು ತ್ತಿರುವ ಕಾರಣಕ್ಕೆ ನ್ಯಾಯಾಲಯದಲ್ಲಿ ಇತ್ಯರ್ಥವಾದ ಸೌಜನ್ಯ ಪ್ರಕರಣವನ್ನು ಉದ್ದೇಶಪೂರ್ವಕ ವಾಗಿ ಜೀವಂತವಾಗಿರಿಸಲು ಯತ್ನಿಸುತ್ತಿದ್ದಾರೆ ಎಂಬುದು.

ಈ ವಿಷಯವು ಸತ್ಯವೇ ಅಥವಾ ಮಿಥ್ಯವೇ ಎಂಬುದನ್ನು ಕಾಲವೇ ನಿರ್ಣಯಿಸಬೇಕು. ಆದರೆ ಈ ಬಗ್ಗೆ ಗಮನಹರಿಸಲು, ಕರಾವಳಿ ಭಾಗ ಮತ್ತು ರಾಜ್ಯದ ಇತರ ಭಾಗಗಳಲ್ಲಿ ನಡೆಯುವ ಮತಾಂತರ ಚಟುವಟಿಕೆಗಳ ವೇಗವನ್ನು ಹೋಲಿಸಿ ನೋಡಬೇಕಾಗುತ್ತದೆ. ಉದಾಹರಣೆಗೆ, ಕಳೆದ 10 ವರ್ಷ ಗಳಲ್ಲಿ ಚಿತ್ರದುರ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಮತಾಂತರ ಪ್ರಕರಣಗಳಾಗಿವೆ ಎಂಬ ಅಂಕಿ-ಅಂಶಗಳ ಹೋಲಿಕೆಯು ನಮಗೆ ಉತ್ತರ ನೀಡಬಹುದು.

ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 1000 ಜನ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ 100 ಜನ ಮತಾಂತರಗೊಂಡಿದ್ದರೆ, ಆಗ ಜನರ ಸಂಶಯ ಮತ್ತಷ್ಟು ಗಾಢವಾಗುತ್ತದೆ. ಒಂದೊಮ್ಮೆ, ಒಂದು ದೇವಸ್ಥಾನ ಮತ್ತು ಕುಟುಂಬದ ಮೇಲಿನ ನಿಷ್ಠೆಯ ಕಾರಣದಿಂದಲೇ ಜನರು ಮತಾಂತರಕ್ಕೆ ಮುಂ ದಾಗುತ್ತಿಲ್ಲ ಎಂಬುದು ಕಂಡುಬಂದರೆ, ಜನರು ಅನೂಚಾನವಾಗಿ ಇರಿಸಿಕೊಂಡು ಬಂದಿರುವ ಆ ನಂಬಿಕೆಯನ್ನು ಬುಡಮೇಲು ಮಾಡಿದರೆ, ಅವರನ್ನು ಮತಾಂತರಗೊಳಿಸುವುದು ಸುಲಭ ವಾಗಬಹುದು ಎಂಬ ಯೋಜನೆಯ ಬಗ್ಗೆ ಅಸ್ಪಷ್ಟ ಚಿತ್ರಣ ದೊರಕಬಹುದು.

ಆದರೆ, ಈ ಸಂಶಯ ಹಾಗೂ ಪ್ರಶ್ನೆಗಳಿಗೆ ಉತ್ತರ ದೊರಕಬೇಕೆಂದರೆ, ತನಿಖಾ ಸಂಸ್ಥೆಗಳು ಮೈದಾನ ಕ್ಕಿಳಿಯಬೇಕಾಗುತ್ತದೆ. ಇನ್ನು, ಈ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು, ಸೌಜನ್ಯ ಪ್ರಕರಣದ ತನಿಖೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸುತ್ತಾ ತಮ್ಮ ಬಳಿಯಿರುವ ಸಾಕ್ಷ್ಯಗಳನ್ನು ಜನರ ಮುಂದಿಡುವುದನ್ನು ಕಾಣುತ್ತಿದ್ದೇವೆ. ಈ ತನಿಖಾ ಲೋಪಗಳ ಬಗ್ಗೆ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದ್ದರೆ, ಅವುಗಳ ಬಗ್ಗೆ ಕ್ರಮ ಕೈಗೊಳ್ಳಲು ಇಲಾಖಾಧಿಕಾರಿಗಳಿದ್ದಾರೆ.

ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಮತ್ತು ಸಿಐಡಿ ಕೈಗೊಂಡ ತನಿಖೆಯನ್ನು ಮುಂದುವರಿಸಿದ ಕೇಂದ್ರ ತನಿಖಾ ಸಂಸ್ಥೆ ಸಿಬಿಐ, ‘ಹಿಂದಿನ ತನಿಖೆ ಲೋಪಗಳಿಂದ ಕೂಡಿತ್ತು’ ಎಂದು ತನ್ನ ವರದಿ ಯಲ್ಲಿ ಉಲ್ಲೇಖಿಸದಿರುವುದು ಗಮನಾರ್ಹ ಸಂಗತಿ. ಜತೆಗೆ ನ್ಯಾಯಾಲಯದಲ್ಲಿನ ವಿಚಾರಣೆಯ ಸಮಯದಲ್ಲಿ, ‘ಇಂಥವರು ನೈಜ ಆಪಾದಿತರು, ಅವರನ್ನೂ ಆರೋಪಿಯನ್ನಾಗಿಸಿ’ ಎಂಬ ದೂರುದಾರರ ಪರ ಅರ್ಜಿಗಳನ್ನು ದಾಖಲಿಸಿ, ತಮ್ಮ ಬಳಿಯಿದ್ದ ಸಾಕ್ಷ್ಯಗಳನ್ನು ಹಾಜರು ಪಡಿಸಿ ದ್ದರೆ, ನ್ಯಾಯಾಲಯವು ಆ ಅರ್ಜಿಗಳನ್ನು ಪುರಸ್ಕರಿಸಿ, ಈಗ ಯಾರ ವಿರುದ್ಧ ಹೋರಾಟ ಮಾಡು ತ್ತಿದ್ದಾರೋ ಅಂಥ ವ್ಯಕ್ತಿಗಳನ್ನು ಆರೋಪಿಯನ್ನಾಗಿಸುವ ಸಾಧ್ಯತೆ ಇತ್ತು.

ದೂರುದಾರರಾಗಲೀ ಹೋರಾಟಗಾರರಾಗಲೀ ಈ ಪ್ರಯತ್ನವನ್ನು ಮಾಡಿದ್ದಾರೆಯೇ? ಮಾಡಿದ್ದರೆ ನ್ಯಾಯಾಲಯದ ನಿರ್ಣಯವೇನಾಗಿತ್ತು? ಎಂಬುದನ್ನು ಅವರು ಜನರೆದುರು ಸ್ಪಷ್ಟಪಡಿಸ ಬೇಕಾ ಗುತ್ತದೆ. ಆದರೆ ಈ ಎಲ್ಲವನ್ನು ತೋರಿಸದೆ ತಮಗೆ ಬೇಕಾದ ಸಂಗತಿಗಳನ್ನಷ್ಟೇ ಆಯ್ಕೆ ಮಾಡಿ ಕೊಂಡು, ರೋಚಕವಾಗಿ ಪ್ರಸ್ತುತಪಡಿಸಿ ಪ್ರಕರಣವನ್ನು ಜೀವಂತವಾಗಿರಿಸಲು ಯತ್ನಿಸಿದರೆ, ಸಾಮಾಜಿಕ ಹೊಣೆಗಾರಿಕೆಯನ್ನು ಪಾರದರ್ಶಕವಾಗಿ ನಿರ್ವಹಿಸಿದಂತೆ ಆಗುತ್ತದೆಯೇ? ಹಾಗಿದ್ದಲ್ಲಿ ಹೋರಾಟದ ಉದ್ದೇಶವೇನು ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ.

ಸೌಜನ್ಯ ಪ್ರಕರಣದಲ್ಲಿ ನ್ಯಾಯಾಲಯದಿಂದಾಗಲೀ, ಇನ್ನಾವುದೋ ಸಂವಿಧಾನಾತ್ಮಕ ವಿಚಾರಣಾ ವ್ಯವಸ್ಥೆಯಿಂದಾಗಲೀ ನಿಜಕ್ಕೂ ನ್ಯಾಯ ದೊರಕಿಲ್ಲವೆಂಬ ಭಾವನೆ ಉಂಟಾದರೆ, ಇನ್ನಾವ ವ್ಯವಸ್ಥೆ ಯಿಂದ ನ್ಯಾಯ ಪಡೆದುಕೊಳ್ಳಲು ಸಾಧ್ಯ? ಬೀದಿಹೋರಾಟದಿಂದ ನ್ಯಾಯಾಲಯದ ತೀರ್ಪುಗಳು ಬದಲಾಗವು ಎಂಬ ಕಠೋರಸತ್ಯ ಹೋರಾಟಗಾರರಿಗೆ ಗೊತ್ತಿರಬಹುದು; ಆದರೂ ಈ ಹೋರಾಟ ವೇಕೆ? ಎಲ್ಲಿಯವರೆಗೆ ಇಂಥ ಪ್ರತಿಭಟನೆ? ಏನಿದರ ಉದ್ದೇಶ? ಎಂಬುದನ್ನು ಪಾರದರ್ಶಕವಾಗಿ ಸಂಗತಿಗಳನ್ನಿಟ್ಟು ಬಹಿರಂಗಪಡಿಸಬೇಕಾಗುತ್ತದೆ.

ಇಲ್ಲವಾದರೆ ಸೌಜನ್ಯಳ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಮನಸ್ಥಿತಿಯ ವ್ಯಕ್ತಿಗಳ ಪೂರ್ವಾಲೋಚನೆಯ ಯೋಜನೆಯಿದು ಎಂಬ ಜನರ ಸಂಶಯ ಬಲವಾಗುವುದರಲ್ಲಿ ಸಂದೇಹ ವಿಲ್ಲ. ಅಲ್ಲಿಯವರೆಗೂ, ‘ಸೌಜನ್ಯ ಪ್ರಕರಣವನ್ನು ಯಾವ ಕಾರಣಗಳಿಂದಾಗಿ ಜೀವಂತವಾಗಿರಿಸಲು ಪ್ರಯತ್ನಪಡುತ್ತಿರಬಹುದು?’ ಎಂಬ ಪ್ರಶ್ನೆಯು ಪ್ರಶ್ನೆಯಾಗಿಯೇ ಉಳಿಯುತ್ತದೆ.

(ಲೇಖಕಿ ಹವ್ಯಾಸಿ ಬರಹಗಾರ್ತಿ)