ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Uma Mahesh Vaidya Column: ಸುಳ್ಳು ಸುದ್ದಿ: ಯುಟ್ಯೂಬರ್‌ಗಳ ಮೇಲೆ ಪ್ರಕರಣ ದಾಖಲಿಸಬಹುದೇ ?

ನಾಯಿಕೊಡೆಗಳಂತೆ ಹುಟ್ಟಿಕೊಂಡ ಚಾನೆಲ್‌ಗಳ ಮೂಲಕ ಬಿತ್ತರವಾಗುವ ಸುದ್ದಿ ಗಳಲ್ಲಿ ಯಾವುದು ಸರಿಯಾಗಿದೆ, ನಂಬಿಕೆಗೆ ಅರ್ಹವಾಗಿದೆ ಎಂಬುದನ್ನು ಕಂಡು ಕೊಳ್ಳಲೂ ಸಮಯ ಕೊಡದೆ, ಸುದ್ದಿಗಳ ಸುರಿಮಳೆಯಾಗುತ್ತಿದೆ. ಅವುಗಳ ಪ್ರವಾಹ ದಲ್ಲಿ ಸಿಕ್ಕ ವೀಕ್ಷಕ ವಿವೇಚನೆ ಕಳೆದುಕೊಂಡು ಆ ಸುದ್ದಿಗಳೇ ನಿಜವಾದದ್ದು ಎಂದು ನಂಬುವಂಥ ವಾತಾ ವರಣವನ್ನು ರೂಪಿಸಲಾಗುತ್ತಿದೆ. ಇದಕ್ಕೆ ಕಾರಣ, ತಮ್ಮ ವಿಡಿಯೋ ಹೆಚ್ಚು ವೀಕ್ಷಣೆ ಯಾದಷ್ಟೂ, ಮೆಚ್ಚುಗೆ ಯಾದಷ್ಟೂ ‘ಕಂಟೆಂಟ್ ಕ್ರಿಯೇ ಟರ್’ ಹೆಸರಿನಲ್ಲಿ ಒಂದಿಷ್ಟು ಪ್ರಭಾವಿ ಎನಿಸಿಕೊಂಡು, ಪ್ರಚಾ ರ ಮತ್ತು ಹಣವನ್ನು ಗಳಿಸಬಹುದೆಂಬ ನಂಬಿಕೆ.

ಸುಳ್ಳು ಸುದ್ದಿ: ಯುಟ್ಯೂಬರ್‌ಗಳ ಮೇಲೆ ಪ್ರಕರಣ ದಾಖಲಿಸಬಹುದೇ ?

ಅಂಕಣಗಾರ್ತಿ ಉಮಾ ಮಹೇಶ್‌ ವೈದ್ಯ

Profile Ashok Nayak Mar 14, 2025 9:29 AM

ಯಕ್ಷಪ್ರಶ್ನೆ

ಉಮಾ ಮಹೇಶ್‌ ವೈದ್ಯ

ಸುದ್ದಿ ಮಾಧ್ಯಮ.... ಈ ಹಿಂದೆ ಅಡಿಗಳ ಗಾತ್ರದ ಪತ್ರಿಕೆಗಳಲ್ಲಿ ಅಚ್ಚಾಗುತ್ತಿದ್ದ ಸುದ್ದಿಯು ಈಗ ಅಂಗೈಯಲ್ಲಿ ಹಿಡಿಯುವ ಮೊಬೈಲ್‌ನಲ್ಲಿ ಕಿರಿದಾದ ರೂಪದಲ್ಲಿ ಬಂದಿದ್ದು ಒಂದು ಕ್ರಾಂತಿಕಾರಿ ಬದಲಾವಣೆ. ಮತ್ತೊಂದೆಡೆ, ಸುದ್ದಿ ವಾಹಿನಿಗಳಲ್ಲಿನ ರೋಚಕ ಸುದ್ದಿಗಾಗಿ ಕಾಯುತ್ತಿದ್ದ ಜನರಿಗೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಅವೆಲ್ಲವನ್ನೂ ತಕ್ಷಣವೇ ವೀಕ್ಷಿಸುವಂಥ ಅವಕಾಶ ಸಿಕ್ಕಿದ್ದು ಮತ್ತೊಂದು ಸುದ್ದಿಕ್ರಾಂತಿಗೆ ದಾರಿಯಾಯಿತು. ಮುಖ್ಯ ವಾಹಿನಿಯಲ್ಲಿರುವ ಮುದ್ರಣ ಮಾಧ್ಯಮಗಳು ಭಾರತೀಯ ಪ್ರೆಸ್ ಕೌನ್ಸಿಲ್ ಸಂಸ್ಥೆಯ ಅಡಿಯಲ್ಲಿ ನೋಂದಣಿಗೊಂಡು ನಿಗರಾಣಿಯಲ್ಲಿದ್ದರೆ, ಯುಟ್ಯೂಬ್‌ಗಳು, ಸಾಮಾಜಿಕ ಜಾಲತಾಣಗಳು ಈ ಸಂಸ್ಥೆಯ ವ್ಯಾಪ್ತಿಯಲ್ಲಿ ಬರದಿರುವ ಮಾಧ್ಯಮಗಳಾಗಿವೆ. ಈ ಕಾರಣ ದಿಂದಾಗಿಯೇ ಈಗ ಯಾವುದೇ ವ್ಯಕ್ತಿಯು ಯುಟ್ಯೂಬ್ ಚಾನೆಲ್ ಮೂಲಕ ತನ್ನದೇ ಸುದ್ದಿ ಚಾವಡಿಯನ್ನು ತೆರೆಯಬಹುದು, ತನ್ಮೂಲಕ ಜನರನ್ನು ತನ್ನತ್ತ ಸೆಳೆಯಬಹುದು.

ಈ ಮಾಧ್ಯಮವನ್ನು ಉಪಯೋಗಿಸಿಕೊಂಡು ರೋಚಕವಾಗಿ ವಿಷಯಗಳನ್ನು ಬಿತ್ತರಿಸಲು ಇಂದು ನಮ್ಮ ನಡುವೆ ಸಾವಿರಾರು ಯುಟ್ಯೂಬ್ ಚಾನೆಲ್‌ಗಳು, ಲಕ್ಷಾಂತರ ಫೇಸ್‌ಬುಕ್ ಖಾತೆಗಳು ಹಾಗೂ ಪುಟಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಈ ರೀತಿಯಾಗಿ ನಾಯಿಕೊಡೆಗಳಂತೆ ಹುಟ್ಟಿಕೊಂಡ ಚಾನೆಲ್‌ಗಳ ಮೂಲಕ ಬಿತ್ತರವಾಗುವ ಸುದ್ದಿಗಳಲ್ಲಿ ಯಾವುದು ಸರಿಯಾಗಿದೆ, ನಂಬಿಕೆಗೆ ಅರ್ಹವಾಗಿದೆ ಎಂಬುದನ್ನು ಕಂಡುಕೊಳ್ಳಲೂ ಸಮಯ ಕೊಡದೆ, ಸುದ್ದಿಗಳ ಸುರಿಮಳೆಯಾಗುತ್ತಿದೆ.

ಇದನ್ನೂ ಓದಿ: Gururaj Gantihole Column: ಅಮೆರಿಕದಲ್ಲಿ ಅರಳಿದ ಸನಾತನ ಪ್ರಭೆ ಕೃಷ್ಣ ತುಳಸಿ

ಅವುಗಳ ಪ್ರವಾಹದಲ್ಲಿ ಸಿಕ್ಕ ವೀಕ್ಷಕ ತನ್ನ ವಿವೇಚನೆಯನ್ನು ಕಳೆದುಕೊಂಡು ಆ ಸುದ್ದಿ ಗಳೇ ನಿಜವಾದದ್ದು ಎಂಬ ಭಾವನೆ ತಳೆಯುವಂಥ ಹಾಗೂ ನಂಬುವಂಥ ವಾತಾವರಣ ವನ್ನು ರೂಪಿಸಲಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಕಾರಣ, ತಮ್ಮ ವಿಡಿಯೋ ಹೆಚ್ಚು ವೀಕ್ಷಣೆಯಾದಷ್ಟೂ, ಮೆಚ್ಚುಗೆಯಾದಷ್ಟೂ ‘ಕಂಟೆಂಟ್ ಕ್ರಿಯೇಟರ್’ ಹೆಸರಿನಲ್ಲಿ ಒಂದಿಷ್ಟು ಪ್ರಭಾವ ಬೀರುವ ವ್ಯಕ್ತಿಯೆನಿಸಿಕೊಂಡು, ಪ್ರಚಾರ ಮತ್ತು ಹಣವನ್ನು ಗಳಿಸ ಬಹುದೆಂಬ ನಂಬಿಕೆ.

ಆದರೆ, ತಮ್ಮ ವಿಡಿಯೋ ಹೆಚ್ಚಿನ ಮೆಚ್ಚುಗೆ ಪಡೆಯಲಿಲ್ಲ, ಪ್ರತಿಸ್ಪರ್ಧಿಗಳು ತಮಗಿಂತ ಹೆಚ್ಚು ಸಂಖ್ಯೆಯ ಹಿಂಬಾಲಕರನ್ನು ಹೊಂದಿದ್ದಾರೆ ಎಂದು ಕಂಡುಬಂದರೆ, ಆ ಯುಟ್ಯೂ ಬರ್ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಯನ್ನೂ ನಾವು ನೋಡಿದ್ದೇವೆ. ಆದ್ದರಿಂದ, ತಮ್ಮ ಹಿಂಬಾಲಕರ ಸಂಖ್ಯೆ ಕಡಿಮೆಯಾಗಬಾರದೆಂಬ ಉದ್ದೇಶದಿಂದ ಈ ಯುಟ್ಯೂಬರ್‌ ಗಳು, ಸಮಾಜದಲ್ಲಿ ಹೆಸರು ಮಾಡಿರುವ ವ್ಯಕ್ತಿಗಳ ಖಾಸಗಿ ಬದುಕಿನ ವಿಷಯಗಳನ್ನು ‘ಸುದ್ದಿ’ಗಾಗಿ ಆಯ್ಕೆಮಾಡಿಕೊಳ್ಳುತ್ತಾರೆ.

ತಮ್ಮ ವಿಡಿಯೋ ಅಥವಾ ಸುದ್ದಿಯನ್ನು ನೋಡಿ ಓದುವಂತೆ ವೀಕ್ಷಕರನ್ನು ಪ್ರಚೋ ದಿಸಲು ಇವರು ರೋಚಕವಾದ ‘ಥಂಬ್‌ನೇಲ್’ ಹಾಕಬೇಕಾಗುತ್ತದೆ. ಉದಾಹರಣೆಗೆ, ಇತ್ತೀ ಚೆಗೆ ಮದುವೆಯಾದ ಖ್ಯಾತ ತಾರೆಯರ ದಾಂಪತ್ಯ ಜೀವನವನ್ನು ಗುರಿಯಾಗಿಸಿಕೊಂಡು, ‘ಬಂಗಾರದ ಬಾಳಿನಲ್ಲಿ ಇನ್ನೊಬ್ಬಳ ಪ್ರವೇಶ: ದಾಂಪತ್ಯ ಡೈವೋರ್ಸ್ ಕಡೆಗೆ’ ಎಂಬ ಥಂಬ್‌ನೇಲ್ ಹಾಕಲಾಗುತ್ತದೆ; ಅದರಿಂದ ಪ್ರಚೋದನೆಗೊಂಡು ಆ ವಿಡಿಯೋ ಅಥವಾ ಸುದ್ದಿಪುಟವನ್ನು ನೋಡಿದಾಗ, ಆ ದಂಪತಿ ತಮ್ಮ ಮನೆಗೆ ತಂದಿದ್ದು ಒಂದು ಹೆಣ್ಣು ನಾಯಿಯನ್ನು ಎಂಬುದನ್ನು ಬಿಟ್ಟರೆ, ಆ ಥಂಬ್ ನೇಲ್‌ನಲ್ಲಿ ನೀಡಿರುವ ವಿಷಯ ಕ್ಕೂ ವಿಡಿಯೋಕ್ಕೂ ಯಾವುದೇ ಸಂಬಂಧವಿರದಿರುವುದು ಅರಿವಾಗುತ್ತದೆ.

ಇದೇ ರೀತಿಯಲ್ಲಿ ದಿಕ್ಕುತಪ್ಪಿಸುವ ಸುದ್ದಿಗಳು/ವಿಡಿಯೋಗಳನ್ನು ನಮ್ಮ ಮುಂದೆ ರಾಶಿ ರಾಶಿಯಾಗಿ ಸುರಿಯಲಾಗುತ್ತಿದೆ; ಆದರೆ ನಾವು ಈ ಸೆಲೆಬ್ರಿಟಿಗಳ ಖಾಸಗಿ ಬದುಕಿನ ರೋಚ ಕತೆ ಅರಿಯಲು, ಕುತೂಹಲ ತಣಿಸಿಕೊಳ್ಳಲು ಪ್ರತಿದಿನವೂ ಬೆಪ್ಪರಾಗುತ್ತಿದ್ದೇವೆ ಎಂದರೆ ತಪ್ಪಾಗಲಿಕ್ಕಿಲ್ಲ.

ಇತ್ತೀಚೆಗೆ, ಕರಾವಳಿ ಭಾಗದ ಪ್ರಕರಣವೊಂದರ ಬಗ್ಗೆ ಸುದ್ದಿಗಳನ್ನು ಹೇರುವ ಮತ್ತು ತಮ್ಮ ಭಾವನೆಗಳನ್ನು ಸಾರ್ವಜನಿಕರೂ ತಳೆಯುವಂತೆ ಮಾಡುವ ಪ್ರಯತ್ನ ನಡೆಯುತ್ತಿರುವು ದನ್ನು ಕಾಣುತ್ತಿದ್ದೇವೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೊಂಡು ಇತ್ಯರ್ಥ ವಾದರೂ, ಸಾಮಾಜಿಕ ಮಾಧ್ಯಮ ವಿಚಾರಣೆಯಲ್ಲಿ ಅದನ್ನು ಇನ್ನೂ ಜೀವಂತವಾಗಿ ರಿಸಿಕೊಳ್ಳುವ ಧೋರಣೆಯನ್ನು ಈ ಯುಟ್ಯೂಬರ್‌ಗಳು, ಬ್ಲಾಗರ್‌ಗಳು ತೋರುತ್ತಿದ್ದಾ ರೆಂದರೆ ತಪ್ಪಾಗಲಿಕ್ಕಿಲ್ಲ.

ಜನರು ಈ ಪ್ರಕರಣವನ್ನು ಮರೆಯಬಾರದೆಂದು ಒಬ್ಬ ಯುಟ್ಯೂಬರ್ ಬಿತ್ತರಿಸಿದ ವಿಷಯ ಗಳು, ನ್ಯಾಯಾಲಯದ ತೀರ್ಪನ್ನೂ ಮೀರಿ ಕಾಲ್ಪನಿಕವಾಗಿದ್ದು ರೋಚಕವಾಗಿದ್ದರೆ ಆಗ ಅಂಥ ಕೆಲಸವು ನ್ಯಾಯಾಂಗ ನಿಂದನೆಗೆ ಒಳಗಾಗಬಹುದೇ? ಎಂಬ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಪೂರಕವಾಗಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಇನ್ನೊಬ್ಬರ ಬಾಳಿನಲ್ಲಿ ಬಿರುಗಾಳಿ ಎಬ್ಬಿಸಲು ಯತ್ನಿಸುವ ಈ ಸಾಮಾಜಿಕ ಜಾಲತಾಣದ ಸುದ್ದಿವಾಹಕರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲು ಬರುವುದಿಲ್ಲವೇ ಎಂಬ ಪ್ರಶ್ನೆಯೂ ಹುಟ್ಟುತ್ತದೆ.

ಖಂಡಿತ, ಇಂಥ ಕಿಡಿಗೇಡಿ ಸುದ್ದಿ ಪ್ರಸಾರಕರಿಗೆ 3 ವರ್ಷಗಳ ಜೈಲುಶಿಕ್ಷೆ ವಿಧಿಸಲು ಅನುವು ಮಾಡಿಕೊಡುವಂಥ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವ ಅವಕಾಶವಿದೆ. ಈ ಸುದ್ದಿ ಗಳಿಂದ ಬಾಧಿತನಾದ ವ್ಯಕ್ತಿಯಾಗಲೀ ಅಥವಾ ಆತನ ಪರವಾಗಿಯಾಗಲೀ ದೂರು ದಾಖ ಲಿಸಿ ಕಾನೂನು ಕ್ರಮವನ್ನು ಕೈಗೊಳ್ಳಬಹುದಾಗಿದೆ.

ಅದು ಹೇಗೆಂದರೆ, ‘ದಾಂಪತ್ಯದಲ್ಲಿ ಬಿರುಕು: ಡೈವೋರ್ಸ್‌ನೆಡೆಗೆ ಮುಖಮಾಡಿದ ಜೋಡಿ’ ಎಂಬುದಾಗಿ ಯಾವುದೇ ಸುದ್ದಿ ಪ್ರಸಾರಕ ತನ್ನ ಯುಟ್ಯೂಬ್ ಅಥವಾ ಫೇಸ್‌ಬುಕ್ ಪುಟ ದಲ್ಲಿ ಪ್ರಕಟಿಸಿ, ಆ ಸುದ್ದಿಯನ್ನು ಖಚಿತಪಡಿಸುವ ಯಾವುದೇ ಸಾಕ್ಷ್ಯಗಳನ್ನು ತನ್ನ ವಿಡಿಯೋ ಅಥವಾ ಪುಟದಲ್ಲಿ ತೋರಿಸದೇ ಹೋದರೆ ಅಥವಾ ‘ಮನರಂಜನೆಗಾಗಿ ಆ ರೀತಿಯಾಗಿ ಮಾಡಿದೆ’ ಎಂಬ ರೀತಿಯಲ್ಲಿ ಬಿಂಬಿಸಿದ್ದೇ ಆದರೆ, ಅಂಥ ಸುದ್ದಿ ಪ್ರಸಾರಕರು “ಒಬ್ಬ ವ್ಯಕ್ತಿಯ ತೇಜೋವಧೆ ಮಾಡಬೇಕೆನ್ನುವ ದುರುದ್ದೇಶದಿಂದ ಖೊಟ್ಟಿ ದಾಖಲೆ ರೂಪಿಸಿದ ಅಪರಾಧಕ್ಕೆ ಶಿಕ್ಷೆಗೆ ಒಳಗಾಗಬಹುದಾಗುತ್ತದೆ".

ಫೋರ್ಜರಿಗೆ ಸಂಬಂಧಿಸಿದಂತೆ, ಭಾರತೀಯ ನ್ಯಾಯ ಸಂಹಿತೆಯ ಕಲಂ 336ರ ಸಹ ಕಲಂ (4)ರಲ್ಲಿ ಹೀಗೆ ಉಲ್ಲೇಖಿಸಲಾಗಿದೆ: Whoever commits forgery, intending that the docu ment or electronic record forged shall harm the reputation of any party, or kno wing that it is likely to be used for that purpose, shall be punished with impri sonment of either description for a term which may extend to three years, and shall also be liable to fine.

ಇಲ್ಲಿ ಫೋರ್ಜರಿ ಎಂದರೆ ಕೇವಲ ‘ಖೊಟ್ಟಿ ಸಹಿ’ ಎಂದು ವ್ಯಾಖ್ಯಾನಿಸಲು ಬರುವುದಿಲ್ಲ. ಯಾವ ವಿಷಯವು ನೈಜ ಸಂಗತಿಗಳಿಂದ ಕೂಡಿಲ್ಲ ಎಂದು ತಿಳಿದು ಸಹ ಅವನ್ನು ಒಳ ಗೊಂಡ ದಾಖಲೆಯನ್ನು ಕಾನೂನಿನಡಿಯಲ್ಲಿ ಫೋರ್ಜರಿ ಹಾಗೂ ಖೊಟ್ಟಿ ದಾಖಲೆ ಯೆಂದು ಪರಿಗಣಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ತೋರಿಸುವ ದಾಖಲೆ ಗಳನ್ನು ‘ವಿದ್ಯುನ್ಮಾನ ದಾಖಲೆಗಳು’ (electronic record) ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಯಾವುದೇ ಸಾಮಾಜಿಕ ಜಾಲತಾಣದ ಸುದ್ದಿ ಪ್ರಸಾರಕರು ರೋಚಕ ಸುದ್ದಿಗಳನ್ನು ನೀಡುವ ಭರದಲ್ಲಿ ತಪ್ಪಭಿಪ್ರಾಯ ಮೂಡಿಸುವಂಥ ಥಂಬ್‌ನೇಲ್ ಅಥವಾ ‘ತಲೆಬರಹ’ ನೀಡಿದರೆ, ಅವರ ಮುಂದಿನ ‘ಹಣೆಬರಹ’ವನ್ನೇ ಬದಲಿಸಿ ಜೈಲು ವಾಸಕ್ಕೆ ಎಣೆಮಾಡಿಕೊಡಬಹುದು.

ಅದರಲ್ಲೂ, ಖಾಸಗಿ ಬದುಕಿನ ವಿಡಿಯೋಗಳನ್ನು ಮುಖ ಮರೆಮಾಚಿ ಬಿತ್ತರಿಸಿದರಂತೂ ಮತ್ತಷ್ಟು ಗಂಭೀರ ಸ್ವರೂಪದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಂಥದ್ದರಲ್ಲಿ, ನ್ಯಾಯಾಲ ಯದಲ್ಲಿ ಕಾನೂನುಬದ್ಧವಾಗಿ ವಿಚಾರಣೆಗೊಂಡು ಇತ್ಯರ್ಥವಾಗಿದ್ದರೂ ಆ ಪ್ರಕರಣದ ಬಗ್ಗೆ ದಾರಿ ತಪ್ಪಿಸುವಂಥ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಸಮಾಜದ ಒಂದು ಸಮುದಾಯದ ಜನರನ್ನು ಎತ್ತಿಕಟ್ಟುವ ಅಥವಾ ಇನ್ನೊಂದು ಕುಟುಂಬ ಹಾಗೂ ಅವ ರನ್ನು ಬೆಂಬಲಿಸುವ ಜನವರ್ಗದ ವಿರುದ್ಧ ದ್ವೇಷಭಾವನೆ ಉಂಟುಮಾಡುವ ಯಾರೇ ಯುಟ್ಯೂಬರ್ ಅಥವಾ ಫೇಸ್‌ಬುಕ್ ಪುಟಗಳಂಥ ಸಾಮಾಜಿಕ ಜಾಲತಾಣದ ಸುದ್ದಿ ಪ್ರಸಾರಕರು ಭಾರತೀಯ ನ್ಯಾಯಸಂಹಿತೆ 352ರ ಅಡಿಯಲ್ಲಿ ಅಪರಾಧ ಎಸಗಿದ್ದಾರೆಂದು ಪೊಲೀಸ್ ಇಲಾಖೆಯ ಗಮನಕ್ಕೆ ತರಬಹುದು. Statements conducing to public mischief ಎಂಬ ವಿಷಯಕ್ಕೆ ಸಂಬಂಧಿಸಿ ಇದರ ಸಹ ಕಲಂ (೨) ಹೀಗೆನ್ನುತ್ತದೆ: Whoever makes, publishes or circulates any statement or report containing false informa tion, rumour or alarming news, including through electronic means, with intent to create or promote, or which is likely to create or promote, on grounds of religion, race, place of birth, residence, language, caste or community or any other ground whatsoever, feelings of enmity, hatred or ill will between different religious, racial, language or regional groups or castes or communities, shall be punished with imprisonment which may extend to three years, or with fine, or with both.

ಆದ್ದರಿಂದ, ಯುಟ್ಯೂಬರ್‌ಗಳಾಗಲೀ ಅಥವಾ ಸಾಮಾಜಿಕ ಜಾಲತಾಣದ ಸುದ್ದಿ ಪ್ರಸಾರಕ ರಾಗಲೀ ಜವಾಬ್ದಾರಿಯುತವಾಗಿ ನಡೆದುಕೊಂಡು, ತಾವು ಬಿತ್ತರಿಸಲು ಬಯಸುವ ಸುದ್ದಿ ಗಳ ಸತ್ಯಾಸತ್ಯತೆ ಹಾಗೂ ಅವು ಸಾರ್ವಜನಿಕ ವಲಯದಲ್ಲಿ ಮೂಡಿಸಬಹುದಾದ ಅಭಿ ಪ್ರಾಯಗಳನ್ನು ಗಮನದಲ್ಲಿರಿಸಿಕೊಂಡು ಸಾರ್ವಜನಿಕಗೊಳಿಸುವುದು ಸೂಕ್ತ.

ಪ್ರಚಾರ ಪಡೆಯುವ ಹುಚ್ಚಿಗೆ ಸಿಲುಕಿ ಅಥವಾ ಇನ್ನಾವುದಾದರೂ ಸಂಚಿನ ಭಾಗವಾಗಿ, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪ್ರಚೋದನಾತ್ಮಕ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದರೆ, ಆ ಸುದ್ದಿ ಪ್ರಸಾರಕ ಮತ್ತು ಬೆಂಬಲಿಸುವ ವ್ಯಕ್ತಿಗಳೂ ಕಾನೂನಿನ ಕುಣಿಕೆಗೆ ಕೊರಳೊಡ್ಡಬೇಕಾಗುತ್ತದೆ.

ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವಾಕ್ ಸ್ವಾತಂತ್ರ್ಯಗಳು, ಕಾನೂನಿನ ಪರಿಣಾಮದಿಂದ ಸಂಪೂರ್ಣ ವಿನಾಯಿತಿ ಹೊಂದಿದ ಹಕ್ಕುಗಳಲ್ಲ. ಅಭಿವ್ಯಕ್ತಿ ಮತ್ತು ಆಡುವ ಮಾತು, ಅಪರಾಧದ ವ್ಯಾಪ್ತಿಯಲ್ಲಿ ಬಂದರೆ ಸಂವಿಧಾನದ ರಕ್ಷಣೆಯೂ ಸಿಗುವುದಿಲ್ಲ ಎಂಬ ಕಾನೂನಿನ ಪ್ರಾಥಮಿಕ ಅರಿವನ್ನು ಇಂಥ ಸುದ್ದಿ ಪ್ರಸಾರಕರು ಹೊಂದಬೇಕಿದೆ. ಸಾಮಾಜಿಕ ತಾಲತಾಣವು ‘ಜೈಲುತಾಣ’ಕ್ಕೆ ತಮ್ಮನ್ನು ಸೇರಿಸದಂತೆ ಇವರು ಎಚ್ಚರಿಕೆ ವಹಿಸಬೇಕಿದೆ.

(ಲೇಖಕಿ ಹವ್ಯಾಸಿ ಬರಹಗಾರ್ತಿ)