ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಯಮನಿಗೆ ಶಾಪ ಕೊಟ್ಟ ಅಣಿಮಂಡವ್ಯ ಋಷಿ

ಸಣ್ಣ ಪುಟ್ಟ ತಪ್ಪುಗಳಿಗೂ ಉಗ್ರಶಿಕ್ಷೆ ಕೊಡುವ, ಊಹಿಸಿ ಕೊಳ್ಳಲು ಭಯವಾಗುವ ಒಂದು ಕ್ರೂರ ಸ್ಥಳ. ಅಲ್ಲಿ ಕಾದ ಎಣ್ಣೆ ಬಾಂಡಲಿ, ಶೂಲಗಳು, ಕಣ್ಣು ಕೀಳುವ, ಕಿವಿಗೆ ಕಾದ ಎಣ್ಣೆ ಸುರಿಯುವ, ದೇಹದ ಚರ್ಮವನ್ನು ಸುಲಿಯುವ ಯಮಭಟರು ಹೀಗೆ ಹೇಳುತ್ತಾ ಹೋದರೇ ಸಾಲದು. ಇಂಥ ಸ್ವರ್ಗ-ನರಕ ಗಳನ್ನು ನೋಡಿಕೊಳ್ಳಲು ಒಬ್ಬೊಬ್ಬ ಅಧಿಪತಿ ಗಳಿದ್ದಾರೆ.

ಯಮನಿಗೆ ಶಾಪ ಕೊಟ್ಟ ಅಣಿಮಂಡವ್ಯ ಋಷಿ

ಒಂದೊಳ್ಳೆ ಮಾತು

rgururaj628@gmail.com

ಸಕಲ ಜೀವಿಗಳಿಗೆ ಹುಟ್ಟೆಂದ ಮೇಲೆ ಸಾವು ಇದ್ದೇ ಇರುತ್ತದೆ. ನಾವು ಮಾಡಿದ ಪಾಪಕರ್ಮ ಗಳ ಫಲಾನುಸಾರವಾಗಿ ನಮಗೆ ಶಿಕ್ಷೆಗಳು ನಿರ್ಣಯವಾಗಿರುತ್ತವೆ. ಸತ್ತ ನಂತರ ನಮ್ಮ ಪಾಪಗಳಿಗೆ ಅನುಗುಣವಾಗಿ ಸ್ವರ್ಗ-ನರಕಗಳು ಪ್ರಾಪ್ತಿಯಾಗುತ್ತವೆಯಂತೆ. ಅಷ್ಟಕ್ಕೂ ಸ್ವರ್ಗ ಎಂದರೇನೆಂದು ಕೇಳಿದರೆ, ನಮ್ಮ ಹಿರಿಯರು ಹೇಳುವ ಪ್ರಕಾರ ಒಳ್ಳೆಯದನ್ನು ಮಾಡುವ, ಒಳ್ಳೆಯದನ್ನೇ ಬಯ ಸುವ, ಒಳ್ಳೆಯವನಾಗೇ ಇರುವ ಸದ್ಗುಣ ಸಂಪನ್ನನಿಗೆ ಸಕಲ ಸುಖಗಳು ದೊರೆಯುತ್ತವೆ, ಜೊತೆಗೆ ಮನಸ್ಸಿಗೆ ಸದಾ ನೆಮ್ಮದಿ ಇದ್ದು ಸುಖವೇ ಸುತ್ತಲೂ ಇರುತ್ತದೆ, ಇಂತಹ ಸ್ಥಳಕ್ಕೆ ಸ್ವರ್ಗ ಎಂದು ಹೆಸರು. ನರಕ ಎಂದರೇ ವಿಚಿತ್ರ ಕಲ್ಪನೆಗಳಿವೆ. ಸಣ್ಣ ಪುಟ್ಟ ತಪ್ಪುಗಳಿಗೂ ಉಗ್ರಶಿಕ್ಷೆ ಕೊಡುವ, ಊಹಿಸಿ ಕೊಳ್ಳಲು ಭಯವಾಗುವ ಒಂದು ಕ್ರೂರ ಸ್ಥಳ. ಅಲ್ಲಿ ಕಾದ ಎಣ್ಣೆ ಬಾಂಡಲಿ, ಶೂಲಗಳು, ಕಣ್ಣು ಕೀಳುವ, ಕಿವಿಗೆ ಕಾದ ಎಣ್ಣೆ ಸುರಿಯುವ, ದೇಹದ ಚರ್ಮವನ್ನು ಸುಲಿಯುವ ಯಮಭಟರು ಹೀಗೆ ಹೇಳುತ್ತಾ ಹೋದರೇ ಸಾಲದು. ಇಂಥ ಸ್ವರ್ಗ-ನರಕಗಳನ್ನು ನೋಡಿಕೊಳ್ಳಲು ಒಬ್ಬೊಬ್ಬ ಅಧಿಪತಿ ಗಳಿದ್ದಾರೆ.

ಇದನ್ನೂ ಓದಿ: Roopa Gururaj Column: ಬಣ್ಣಗಳ ಹಬ್ಬದ ಹಿಂದಿನ ಉದ್ದೇಶ

ಅದರಂತೆ ಇಂದ್ರನು ಸ್ವರ್ಗಕ್ಕೆ ಅಧಿಪತಿಯಾದರೆ, ಯಮನು ನರಕದ ಅಧಿಪತಿ, ಬ್ರಹ್ಮನಿಂದ ನೇಮಿಸಲ್ಪಟ್ಟವರು. ಎಲ್ಲರ ತಪ್ಪುಗಳಿಗೆ ಶಿಕ್ಷೆ ಕೊಡುವ ಯಮನಿಗೆ ಶಾಪ ಕೊಟ್ಟು ಅವನನ್ನು ಮಾನವ ನನ್ನಾಗಿ ಹುಟ್ಟುವಂತೆ ಮಾಡಿ ಅನೇಕ ಕಷ್ಟಗಳನ್ನು ಅನುಭವಿಸುವಂತೆ ಮಾಡಿದ ಮುನಿಯೇ ಅಣಿಮಾಂಡವ್ಯ. ಮಾಡದ ತಪ್ಪಿಗೆ ರಾಜನಿಂದ ಬಂಧಿಸಲ್ಪಟ್ಟು ಅವನಿಂದ ಶೂಲ ಕ್ಕೇರಿಸಿದ್ದಾಗ ಯಮಭಟರು ಬಂದು ಅವರನ್ನು ಕರೆದೊಯ್ದಿದ್ದರು.

ಆದರೆ ವಿಧಿನಿಯಮದಂತೆ ಅವರಿಗೆ ಇನ್ನೂ ಒಂದು ದಿವಸ ಆಯುಷ್ಯವಿತ್ತು. ಆದರೇ ಒಂದು ದಿನ ಮೊದಲೇ ಅವರನ್ನು ಯಮಲೋಕಕ್ಕೆ ಕರೆದು ಬಂದಿದ್ದರಿಂದ ದೇವರ ಸ್ಮರಣೆ ಮಾಡಲು ಸಾಧ್ಯ ವಾಗದ ಕಾರಣ, ಜೊತೆಗೆ ಅವರು ಚಿಕ್ಕವಯಸ್ಸಿನಲ್ಲಿ ಕೀಟಗಳನ್ನು ಕೊಂದಿದ್ದ ಕಾರಣಕ್ಕಾಗಿ ಅಣಿ ಮಾಂಡವ್ಯನಿಗೆ ಭೂಮಿಯಲ್ಲಿಯೇ ಶೂಲದ ಶಿಕ್ಷೆಯನ್ನು ಯಮನೇ ರಾಜಭಟರ ಮೂಲಕ ಕೊಟ್ಟಿ ದ್ದನ್ನು ತಿಳಿದ ಜ್ಞಾನಿಗಳಾದ ಅಣಿಮಾಂಡವ್ಯ, ‘ನೀನು ಮಾನವನಾಗಿ ಜನಿಸಿ ಕಷ್ಟಗಳನ್ನು ಅನುಭ ವಿಸು’ ಎಂದು ಶಾಪ ಕೊಡುತ್ತಾರೆ.

ಇದರಿಂದ ಕಂಗಾಲಾದ ಯಮನು ವಿಷ್ಣುವಿನ ಬಳಿ ಅಣಿಮಾಂಡವ್ಯನನ್ನು ಕರೆದುಕೊಂಡು ಹೋ ದಾಗ ಅಣಿಮಾಂಡವ್ಯರು ಚಿಕ್ಕ ವಯಸ್ಸಿನಲ್ಲಿ ಬುದ್ಧಿಯಿಲ್ಲದ ಕಾರಣ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯಲು ಅರ್ಹರಾಗಿರುವುದಿಲ್ಲ, ಹಾಗಾಗಿ ಚಿಕ್ಕ ವಯಸ್ಸಿನ ತಪ್ಪುಗಳಿಗೆ ನರಕದಲ್ಲಿ ಶಿಕ್ಷೆ ವಿಧಿಸಬಾರದೆಂದು ಹರಿಯನ್ನು ಬೇಡಿಕೊಂಡಾಗ ಹರಿಯು ನಸುನಕ್ಕು, ತಥಾಸ್ತು ಎಂದಾಗ ಕಣ್ಣಂಚಲಿ ನೀರು ಸುರಿಸುತ್ತಾ ಅಣಿಮಾಂಡವ್ಯ ದೇವರ ಪಾದಕ್ಕೆರಗಿ ಯಮನಿಗೆ ಶಾಪ ನೀಡಿದ್ದಕ್ಕೆ ಮನ್ನಿಸಬೇಕೆಂದು ಕೇಳಿ ಕೊಳ್ಳುತ್ತಾನೆ.

ಆದರೆ ಜ್ಞಾನಿಯಾದ ಅಣಿಮಾಂಡವ್ಯ ಕೊಟ್ಟ ಶಾಪದಿಂದ ಯಮನೇ ಮುಂದೆ ಧರ್ಮರಾಯನಾಗಿ ಹುಟ್ಟಿ ಅನೇಕ ಕಷ್ಟ ಎದುರಿಸಿ, ಕೋಪಗೊಳ್ಳದೆ, ಧಾರ್ಮಿಕನಾಗಿಯೇ ಉಳಿಯುತ್ತಾನೆ. ಅಣಿ ಮಂಡ ವ್ಯರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಯಮರಾಜ ತಪ್ಪು ಮಾಡಿದ್ದರೂ ಕೂಡ ನಂತರ ಅದನ್ನು ತಿದ್ದುಕೊಂಡು ವಿಷ್ಣುವಿನ ಬಳಿ ಅವರ ಪರ ವಾಗಿ ಮಾತನಾಡಿದ್ದರ ಪರಿಣಾಮವಾಗಿ ಧಾರ್ಮಿಕ ನಾಗಿಯೇ ಉಳಿದು ಧರ್ಮರಾಯನಾಗಿ ಜನಿಸುವ ಅವಕಾಶ ಸಿಗುತ್ತದೆ.

ತಪ್ಪು ಮಾಡು ವುದು ದೊಡ್ಡದಲ್ಲ, ಆದರೆ ಅದನ್ನು ತಿದ್ದಿ ನಡೆದಾಗ ಎಂತಹವರಿಗೂ ಕೂಡ ಭಗ ವಂತ ಮತ್ತೊಂದು ಅವಕಾಶವನ್ನು ಕೊಡುತ್ತಾನೆ ಎನ್ನುವುದಕ್ಕೆ ಮೇಲಿನ ಕಥೆಯೇ ಉದಾಹರಣೆ. ಕೆಲವೊಮ್ಮೆ ನಮ್ಮಿಂದಾದ ತಪ್ಪುಗಳಿಗೆ ನಾವು ಎಷ್ಟು ವಿಚಲಿತರಾಗುತ್ತೇವೆ ಎಂದರೆ ಅದನ್ನು ಒಪ್ಪಿ ಕೊಂಡರೆ ಮತ್ತಷ್ಟು ಜನರ ಮುಂದೆ ಕುಗ್ಗಿ ಹೋಗುತ್ತೇವೆ ಎಂದು ಎಣಿಸುತ್ತಾ ವಿತಂಡವಾದ ಮಾಡುತ್ತಲೇ ಸಾಗುತ್ತೇವೆ.

ಆದರೆ ನೆನಪಿರಲಿ, ನಮ್ಮ ತಪ್ಪನ್ನು ನಾವು ಸಮರ್ಥಿಸಿಕೊಂಡಷ್ಟೂ ನಾವು ನೋಡುವವರ ಪಾಲಿಗೆ ಮತ್ತೂ ಚಿಕ್ಕವರಾಗುತ್ತಾ ಹೋಗುತ್ತೇವೆ. ತಪ್ಪು ಮಾಡಿದ್ದಾಗ ಕ್ಷಮೆಯಾಚಿಸುವುದರಲ್ಲಿ ಯಾವ ಅವಮಾನವೂ ಇಲ್ಲ, ಬದಲಾಗಿ ಇದರಿಂದ ನಮಗೆ ಒಳ್ಳೆಯದಾಗುವ ಅವಕಾಶಗಳೇ ಹೆಚ್ಚು. ಪಶ್ಚಾ ತಾಪ ಪಡುವುದು ಕ್ಷಮೆ ಯಾಚಿಸುವುದು ವಿವೇಕಿಗಳ ಲಕ್ಷಣ, ಇನ್ನಾದರೂ ಬದಲಾಗೋಣ.