ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಕ್ಷುದ್ರ ಶಕ್ತಿಗಳನ್ನು ನಾಶಮಾಡುವ ರುದ್ರಾಂಶಸಂಭೂತ ಹನುಮಂತ

ಕತ್ತಲು ಆವರಿಸಿದಾಗ ಬೆಳಕಾಗಿ, ಕರಾಳತೆ ಮುತ್ತಿ ಕೊಂಡಾಗ ರಕ್ಷಕನಾಗಿ ನಿಲ್ಲುವ ಹನುಮಂತನ ಅತ್ಯಂತ ಪ್ರಭಾವಶಾಲಿ ಕಥೆ ತೆರೆದುಕೊಳ್ಳುವುದು ರಾಮಾಯಣದ ಯುದ್ಧದ ಕೊನೆಯ ಘಟ್ಟದಲ್ಲಿ. ಲಂಕೆಯ ಯುದ್ಧಭೂಮಿಯಲ್ಲಿ ರಾವಣನಿಗೆ ಸೋಲಿನ ಸುಳಿವು ಸಿಕ್ಕಿಯಾಗಿತ್ತು. ತನ್ನೆ ಶಕ್ತಿ ಕುಂದಿದಾಗ ಆತ ಕತ್ತಲ ಲೋಕದ ಮೊರೆ ಹೋಗುತ್ತಾನೆ.

ಕ್ಷುದ್ರ ಶಕ್ತಿಗಳನ್ನು ನಾಶಮಾಡುವ ರುದ್ರಾಂಶಸಂಭೂತ ಹನುಮಂತ

-

ಒಂದೊಳ್ಳೆ ಮಾತು

ಪುರಾಣದ ಪುಟಗಳಲ್ಲಿ ಹನುಮಂತನ ಹೆಸರು ಕೇವಲ ಭಕ್ತಿಗೆ ಮಾತ್ರ ಸೀಮಿತವಾಗಿಲ್ಲ; ಆತ ಅಜ್ಞಾನ, ಭಯ ಮತ್ತು ಋಣಾತ್ಮಕ ಶಕ್ತಿಗಳನ್ನು ಬೇರುಸಹಿತ ಕಿತ್ತು ಹಾಕುವ ‘ರುದ್ರ’ನ ಪ್ರತೀಕ. ಶಿವಪುರಾಣದ ಶಾತ-ರುದ್ರ ಸಂಹಿತೆಯ ಪ್ರಕಾರ, ಹನುಮಂತ ಸಾಕ್ಷಾತ್ ಪರಮಶಿವನ ಹನ್ನೊಂದ ನೇ ರುದ್ರಾವತಾರ. ರುದ್ರ ಎಂದರೆ ದುಷ್ಟರನ್ನು ಸಂಹರಿಸುವ ಉಗ್ರ ಶಕ್ತಿ.

ಕತ್ತಲು ಆವರಿಸಿದಾಗ ಬೆಳಕಾಗಿ, ಕರಾಳತೆ ಮುತ್ತಿ ಕೊಂಡಾಗ ರಕ್ಷಕನಾಗಿ ನಿಲ್ಲುವ ಹನುಮಂತನ ಅತ್ಯಂತ ಪ್ರಭಾವಶಾಲಿ ಕಥೆ ತೆರೆದುಕೊಳ್ಳುವುದು ರಾಮಾಯಣದ ಯುದ್ಧದ ಕೊನೆಯ ಘಟ್ಟದಲ್ಲಿ. ಲಂಕೆಯ ಯುದ್ಧಭೂಮಿಯಲ್ಲಿ ರಾವಣನಿಗೆ ಸೋಲಿನ ಸುಳಿವು ಸಿಕ್ಕಿಯಾಗಿತ್ತು. ತನ್ನೆ ಶಕ್ತಿ ಕುಂದಿದಾಗ ಆತ ಕತ್ತಲ ಲೋಕದ ಮೊರೆ ಹೋಗುತ್ತಾನೆ.

ಪಾತಾಳ ಲೋಕದ ಅಧಿಪತಿ, ಮಾಟ-ಮಂತ್ರ ಹಾಗೂ ಕ್ಷುದ್ರ ಶಕ್ತಿಗಳ ಒಡೆಯ ನಾದ ತನ್ನ ಸಹೋದರ ಅಹಿರಾವಣನನ್ನು (ಮಹಿರಾವಣ) ರಾವಣ ಸಂಪರ್ಕಿಸುತ್ತಾನೆ. ಅಹಿರಾವಣನು ಎಂಥವನೆಂದರೆ, ಕಣ್ಣಿಗೆ ಕಾಣದ ಮಾಯಾವಿದ್ಯೆಯಿಂದ ಎದುರಾಳಿಯನ್ನು ಬುಡ ಮೇಲು ಮಾಡುವ ಋಣಾತ್ಮಕ ಶಕ್ತಿಯ ಅಧಿಪತಿ. ಆತ ತನ್ನ ಕಪಟ ವಿದ್ಯೆಯಿಂದ, ರಾತ್ರಿ ವೇಳೆ ಸುಗ್ರೀವನ ಕೋಟೆಯೊಳಗೆ ನುಸುಳಿ, ಗಾಢ ನಿದ್ರೆ ಯಲ್ಲಿದ್ದ ಶ್ರೀರಾಮ-ಲಕ್ಷ್ಮಣರನ್ನು ಅಪಹರಿಸಿ ಪಾತಾಳಕ್ಕೆ ಕೊಂಡೊಯ್ಯುತ್ತಾನೆ.

ಇದನ್ನೂ ಓದಿ: Roopa Gururaj Column: ನಂದಿ: ಜ್ಞಾನ, ವಿನಯ, ಸಮರ್ಪಣೆಗಳ ಜೀವಂತ ಸಂಕೇತ

ಬೆಳಗಾಗುವಷ್ಟರಲ್ಲಿ ಇಬ್ಬರನ್ನೂ ಕಾಳಿಗೆ ಬಲಿಕೊಡುವ ಸಂಚು ಆತನದಾಗಿತ್ತು. ತನ್ನ ಪ್ರಾಣ ಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಸ್ವಾಮಿಯೇ ಅಪಾಯದಲ್ಲಿರುವಾಗ ವಾಯು ಪುತ್ರ ಸುಮ್ಮನಿದ್ದಾ ನೆಯೇ? ರಾಮ- ಲಕ್ಷ್ಮಣರನ್ನು ಹುಡುಕಿಕೊಂಡು ಹನುಮಂತನು ಪಾತಾಳ ಲೋಕವನ್ನು ಪ್ರವೇಶಿಸುತ್ತಾನೆ. ಅಲ್ಲಿ ಆತನಿಗೆ ಅಹಿರಾವಣನ ಕರಾಳ ಮಾಯಾಶಕ್ತಿಯ ಅರಿವಾಗುತ್ತದೆ. ಆ ರಾಕ್ಷಸನನ್ನು ಕೊಲ್ಲುವುದು ಸಾಮಾ ನ್ಯದ ಮಾತಾಗಿರಲಿಲ್ಲ. ಏಕೆಂದರೆ, ಅಹಿರಾವಣನ ಪ್ರಾಣ ಆತನ ದೇಹದಲ್ಲಿರಲಿಲ್ಲ!

ಆತನ ಪ್ರಾಣವನ್ನು ಐದು ಬೇರೆ ಬೇರೆ ದಿಕ್ಕುಗಳಲ್ಲಿ ಉರಿಯುತ್ತಿದ್ದ ಐದು ಮಾಯಿಕ ದೀಪಗಳಲ್ಲಿ ಬಚ್ಚಿಡಲಾ ಗಿತ್ತು. ಆ ಐದೂ ದೀಪಗಳನ್ನು ಒಂದೇ ಬಾರಿಗೆ, ಏಕಕಾಲದಲ್ಲಿ ಒಂದೇ ವ್ಯಕ್ತಿ ಒಂದೇ ಉಸಿರಿನಿಂದ ಆರಿಸಿದರೆ ಮಾತ್ರ ಆ ಮಾಂತ್ರಿಕನ ಅಂತ್ಯ ಸಾಧ್ಯವಿತ್ತು.

ಇದು ಋಣಾತ್ಮಕ ಶಕ್ತಿಯು ಒಡ್ಡುವ ಅತಿ ದೊಡ್ಡ ಸವಾಲು. ಒಬ್ಬನೇ ವ್ಯಕ್ತಿ ಐದು ದಿಕ್ಕುಗಳ ದೀಪಗಳನ್ನು ಒಮ್ಮೆಲೇ ಆರಿಸುವುದು ಹೇಗೆ? ಆಗ ಹನುಮಂತನೊಳಗಿನ ಶಿವನ ರುದ್ರ ಶಕ್ತಿ ಜಾಗೃತವಾಯಿತು. ಆತ ತನ್ನ ಸಾಮಾನ್ಯ ರೂಪ ವನ್ನು ಬಿಟ್ಟು, ಅಖಿಲಾಂಡಕೋಟಿ ಬ್ರಹ್ಮಾಂಡವೇ ಬೆರಗಾಗುವಂತಹ ದಿವ್ಯ, ಭಯಂಕರ ಹಾಗೂ ಅದ್ಭುತವಾದ ‘ಪಂಚಮುಖಿ’ (ಐದು ಮುಖ ಗಳ) ವಿಶ್ವರೂಪವನ್ನು ತಾಳಿದನು.

ಪೂರ್ವಕ್ಕೆ ತನ್ನ ಮೂಲ ವಾನರ ಮುಖ (ಶುದ್ಧ ಭಕ್ತಿ ಮತ್ತು ಕಾರ್ಯಸಿದ್ದಿ). ದಕ್ಷಿಣಕ್ಕೆ ಉಗ್ರ ನರಸಿಂಹ ಮುಖ (ಶತ್ರುಭಯ ಹಾಗೂ ಆತಂಕ ಗಳ ನಾಶ). ಪಶ್ಚಿಮಕ್ಕೆ ಗರುಡ ಮುಖ (ಮಾಟ-ಮಂತ್ರ ಹಾಗೂ ವಿಷಮಯ ಶಕ್ತಿಗಳ ನಿರ್ಮೂಲನೆ). ಉತ್ತರಕ್ಕೆ ವರಾಹ ಮುಖ (ಗ್ರಹ ದೋಷ ನಿವಾರಣೆ ಮತ್ತು ಸಮೃದ್ಧಿ). ಹಾಗೂ ಮೇಲ್ಮುಖವಾಗಿ ಹಯಗ್ರೀವ ಮುಖ (ಅಜ್ಞಾನದ ನಾಶ ಮತ್ತು ಜ್ಞಾನದ ವಿಕಾಸ). ಈ ಐದೂ ದೈವಿಕ ಶಕ್ತಿಗಳು ಒಂದೇ ದೇಹದಲ್ಲಿ ಮೈದಳೆದು ನಿಂತಾಗ ಪಾತಾಳ ಲೋಕವೇ ಕಂಪಿಸಿತು.

ಪಂಚಮುಖಿ ಹನುಮ ತನ್ನ ಅದ್ಭುತ ಶಕ್ತಿ ಯಿಂದ ಐದೂ ದಿಕ್ಕುಗಳಲ್ಲಿದ್ದ ದೀಪಗಳನ್ನು ನಂದಿಸಿ ದನು. ದೀಪಗಳು ಆರಿದ ಮರುಕ್ಷಣವೇ ಅಹಿರಾವಣನ ಕರಾಳ ಸಾಮ್ರಾಜ್ಯ ಉರುಳಿ ಬಿದ್ದಿತು. ಕ್ಷುದ್ರಶಕ್ತಿ, ಅಹಂಕಾರ ಹಾಗೂ ಮಾಟ ಮಂತ್ರಗಳ ಪ್ರತೀಕವಾಗಿದ್ದ ರಾಕ್ಷಸನು ಭಸ್ಮವಾದನು. ಶ್ರೀರಾಮ- ಲಕ್ಷ ಣರು ಬಂಧಮುಕ್ತ ರಾದರು. ಪುರಾಣಗಳ ಈ ರಾಕ್ಷಸರು ಬೇರಾರೂ ಅಲ್ಲ; ನಮ್ಮೊಳಗಿನ ಹಾಗೂ ನಮ್ಮ ಸುತ್ತಲಿನ ಋಣಾತ್ಮಕ ಶಕ್ತಿಗಳೇ ಈ ಅಸುರರು. ನಮ್ಮೊಳಗಿನ ಭಯ, ನಿರಾಶೆ, ಕೀಳರಿಮೆ ಹಾಗೂ ದ್ವೇಷಗಳೇ ಅಹಿರಾವಣನ ದೀಪಗಳು.

ವಾಯುದೇವನ ಪುತ್ರನಾದ ಹನುಮಂತನು ‘ಪ್ರಾಣಶಕ್ತಿ’ಯ ದ್ಯೋತಕ. ಎಲ್ಲಿ ದೃಢವಾದ ಪ್ರಾಣ ಶಕ್ತಿ, ದೈಹಿಕ ಶಿಸ್ತು ಮತ್ತು ಸಕಾರಾತ್ಮಕ ಚಿಂತನೆ ಇರುತ್ತದೆಯೋ, ಅಲ್ಲಿ ಎಂಥದ್ದೇ ಋಣಾತ್ಮಕ ಶಕ್ತಿಗೂ ಉಳಿಗಾಲವಿಲ್ಲ. ಗಾಢವಾದ ಕತ್ತಲೆಯನ್ನು ಓಡಿಸಲು ಕೇವಲ ಒಂದು ಸಣ್ಣ ಜ್ಯೋತಿ ಸಾಕು.

ಅದೇ ರೀತಿ, ನಮ್ಮ ಬದುಕನ್ನು ಆವರಿಸುವ ನಕಾರಾತ್ಮಕ ಚಿಂತನೆಗಳು, ಆತಂಕ ಮತ್ತು ದೋಷಗಳನ್ನು ಬೇರುಸಹಿತ ಕೀಳಲು ಪಂಚಮುಖಿ ಹನುಮನಂತಹ ಅಗಾಧ ವಾದ ಸಕಾರಾತ್ಮಕ ಶಕ್ತಿಯೊಂದೇ ಅಸ. ಅದಕ್ಕೇ ಆತನ ಹೆಸರು ಕೇಳಿದರೇನೇ ದುಷ್ಟ ಶಕ್ತಿಗಳು ನಡುಗುತ್ತವೆ ಎಂಬ ನಂಬಿಕೆ ಇಂದಿಗೂ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ