ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಮ್ಮೆಲ್ಲರ ಕನ್ನಡ ಅನ್ನದ ಭಾಷೆ ಆಗುವುದು ಹೇಗೆ ?

ವಾಸ್ತವವಾಗಿ ಉದ್ಯೋಗಕ್ಕೆ ಬೇಕಿರುವುದು ಕೌಶಲವೇ ಹೊರತು ಭಾಷೆಯ ಪರಿಣತಿಯಲ್ಲ. ತಿಳಿದಿರುವು ದನ್ನು ಹೇಳಲು ಭಾಷೆ ಬೇಕಾಗುತ್ತದೆ. ಆದರೆ, ಭಾಷೆಯನ್ನು ಮಾತ್ರ ತಿಳಿದಿದ್ದು ವೃತ್ತಿ ಪರಿಣತಿ ಇಲ್ಲದಿದ್ದರೆ ಕೆಲಸ ಸಿಗುವುದಿಲ್ಲ. ಇತ್ತೀಚೆಗೆ ಪ್ರತಿಷ್ಠಿತ ಕಂಪನಿಯ ಉನ್ನತ ಅಧಿಕಾರಿ ಯೊಬ್ಬರು, ‘ಭಾಷೆಯ ಪರಿಣತಿಗಿಂತ ವೃತ್ತಿ ಕೌಶಲ ಅಗತ್ಯ’ ಎಂದು ಹೇಳಿದ್ದು ವರದಿಯಾಗಿತ್ತು.

ನಮ್ಮೆಲ್ಲರ ಕನ್ನಡ ಅನ್ನದ ಭಾಷೆ ಆಗುವುದು ಹೇಗೆ ?

-

Profile
Ashok Nayak Nov 16, 2026 12:19 PM

ನೆಲದ ನುಡಿ

ರಾ.ನಂ.ಚಂದ್ರಶೇಖರ

ಕನ್ನಡ ಅಭಿಮಾನದ ಭಾಷೆಯ ಜೊತೆಗೆ ಅನ್ನದ ಭಾಷೆಯೂ ಆಗಬೇಕೆಂಬ ಮಾತು ಆಗಾಗ ಕೇಳಿಬರುತ್ತದೆ. ಸರ್ವಜ್ಞನ ‘ಅಕ್ಕರವು ಲೆಕ್ಕಕ್ಕೆ; ತರ್ಕ ತಾ ಓದಿಗೆ; ಮಿಕ್ಕ ಓದುಗಳು ತಿರುಪೆಗೆ’, ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು’ ಅನ್ನುವ ಮಾತುಗಳಲ್ಲಿಯೇ ಅನಾದಿ ಕಾಲದಿಂದ ವಿದ್ಯೆ ಜನರಿಗೆ ಏನು ನೀಡಬೇಕು ಎಂಬುದು ಸ್ಪಷ್ಟವಾಗಿದೆ. ವಿದ್ಯೆ ಬದುಕನ್ನು ಕಟ್ಟಿಕೊಳ್ಳಲು ನೆರವಾಗ ಬೇಕು.

ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಕನ್ನಡದಲ್ಲಿ ಕಲಿತರೆ ಕೆಲಸ ಸಿಗುತ್ತದೆ ಅನ್ನುವ ಭರವಸೆ ಜನಸಾಮಾನ್ಯರಲ್ಲಿ ಮೂಡಬೇಕು. ಆ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ, ಕನ್ನಡಪರ ಚಿಂತಕರು, ಸಂಘಟನೆಗಳು ರಚನಾತ್ಮಕವಾಗಿ ಕ್ರಿಯಾಶೀಲರಾಗಬೇಕಿದೆ. ಭಾಷೆಗೂ ಉದ್ಯೋಗಕ್ಕೂ ಸಂಬಂಧ ಇದೆಯೇ?: ಭಾಷೆಗೂ ಉದ್ಯೋಗಕ್ಕೂ ಸಂಬಂಧವಿಲ್ಲ.

ವಾಸ್ತವವಾಗಿ ಉದ್ಯೋಗಕ್ಕೆ ಬೇಕಿರುವುದು ಕೌಶಲವೇ ಹೊರತು ಭಾಷೆಯ ಪರಿಣತಿಯಲ್ಲ. ತಿಳಿದಿರುವು ದನ್ನು ಹೇಳಲು ಭಾಷೆ ಬೇಕಾಗುತ್ತದೆ. ಆದರೆ, ಭಾಷೆಯನ್ನು ಮಾತ್ರ ತಿಳಿದಿದ್ದು ವೃತ್ತಿ ಪರಿಣತಿ ಇಲ್ಲದಿದ್ದರೆ ಕೆಲಸ ಸಿಗುವುದಿಲ್ಲ. ಇತ್ತೀಚೆಗೆ ಪ್ರತಿಷ್ಠಿತ ಕಂಪನಿಯ ಉನ್ನತ ಅಧಿಕಾರಿ ಯೊಬ್ಬರು, ‘ಭಾಷೆಯ ಪರಿಣತಿಗಿಂತ ವೃತ್ತಿ ಕೌಶಲ ಅಗತ್ಯ’ ಎಂದು ಹೇಳಿದ್ದು ವರದಿಯಾಗಿತ್ತು.

2025ರ ತಾಂತ್ರಿಕ ವರದಿಯಂತೆ ಕಾಲೇಜುಗಳಲ್ಲಿ ಕಲಿಸುವ ಪಠ್ಯಕ್ರಮ ಮತ್ತು ಕಂಪನಿಗಳ ನೇಮ ಕಾತಿ ಅಗತ್ಯಗಳ ನಡುವೆ ಭಾರಿ ಅಂತರ ಇದೆ. ಇದರಿಂದಾಗಿ, ಕೌಶಲ್ಯದ ಕೊರತೆ ಹೊಂದಿರುವ ಸ್ನಾತಕೋತ್ತರ ಪದವೀಧರರು ಉದ್ಯೋಗ ಮಾರುಕಟ್ಟೆಯಲ್ಲಿ ಹಿಂದೆ ಬೀಳುತ್ತಿದ್ದಾರೆ.

ಇದನ್ನೂ ಓದಿ: Kiran Upadhyay Column: ಶೌಚಾಲಯಕ್ಕೂ ಬೇಕು ತಂತ್ರಜ್ಞಾನ

‘ಅನ್‌ಸ್ಟಾಪ್ ಟ್ಯಾಲೆಂಟ್ ರಿಪೋರ್ಟ್ 2025’ ಪ್ರಕಾರ, ನೇಮಕಾತಿ ವಿಧಾನದಲ್ಲಿನ ಹಲವು ಬದಲಾವಣೆಗಳ ಕಾರಣಕ್ಕೆ ಬೆಂಗಳೂರಿನ ಯುವ ಇಂಜಿನಿಯರಿಂಗ್ ಪದವೀಧರರಿಗೆ ಕೆಲಸ ಸಿಗುತ್ತಿಲ್ಲ. ಶೇ.51ರಷ್ಟು ‘ಜೆನ್-ಝಿ’ಗಳು ಸರಿಯಾದ ಅವಕಾಶಗಳು ಸಿಗದೆ ಹೊರಗುತ್ತಿಗೆ ಮತ್ತು ಇತರ ಉದ್ಯೋಗಗಳತ್ತ ವಾಲುತ್ತಿದ್ದಾರೆ.

ಬಿ-ಸ್ಕೂಲ್‌ನ ಶೇ. 59ರಷ್ಟು ಪದವೀಧರರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ಪ್ರತಿ ವರ್ಷ ತಾಂತ್ರಿಕ ಶಿಕ್ಷಣ (ಎಂಜಿನಿಯರಿಂಗ್) ಕೋರ್ಸುಗಳನ್ನು ಮುಗಿಸಿ ಹೊರಬರುವ 8 ಲಕ್ಷ ಎಂಜಿನಿಯರಿಂಗ್ ಪದವೀಧರರಲ್ಲಿ ಶೇ.60ರಷ್ಟು ಜನ ನಿರುದ್ಯೋಗಿಗಳಾಗಿಯೇ ಉಳಿಯುತ್ತಾರೆ. ಹೀಗೆಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ನೀಡಿದ ಅಂಕಿ ಅಂಶಗಳೇ ಹೇಳಿವೆ.

ಪ್ರತಿ ಮೂರು ನಿರುದ್ಯೋಗಿ ಯುವಕರಲ್ಲಿ ಇಬ್ಬರು ಪದವೀಧರರು: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾ ಲಯದ ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2026’ರ ವರದಿಯ ಪ್ರಕಾರ, ದೇಶದಲ್ಲಿ 1.1 ಕೋಟಿ ನಿರುದ್ಯೋಗಿ ಪದವೀಧರರಿದ್ದಾರೆ. ಕಳೆದ 43 ವರ್ಷಗಳಲ್ಲಿ 13 ಪಟ್ಟು ಪದವೀಧರರ ಸಂಖ್ಯೆ ಹೆಚ್ಚಾಗಿದ್ದರೂ, ಶೇಕಡಾ 22.7ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ.

ಪ್ರತಿ 8 ನಿರುದ್ಯೋಗಿ ಯುವಕರಲ್ಲಿ ಒಬ್ಬರು 1983ರಲ್ಲಿ ಪದವಿ ಧರರಾಗಿದ್ದರು. ಆದರೆ, 2026ರಲ್ಲಿ ಒಟ್ಟು ನಿರುದ್ಯೋಗಿ ಯುವಕರಲ್ಲಿ ಪ್ರತಿ ಮೂವರಲ್ಲಿ ಇಬ್ಬರು ಪದವೀಧರರು ಎಂಬುದು ಗಮನಾರ್ಹ. 25 ವರ್ಷದೊಳಗಿನ ಪದವೀಧರರಲ್ಲಿ ನಿರುದ್ಯೋಗ ದರ 1983ರಲ್ಲಿ ಶೇ. 35ರಷ್ಟಿತ್ತು. ಅದು 2023ರ ಹೊತ್ತಿಗೆ ಶೇ. 39.3ಕ್ಕೆ ಏರಿತ್ತು. ಜೊತೆಗೆ 25ರಿಂದ 29 ವರ್ಷ ವಯಸ್ಸಿನ ಪದವೀಧರರ ಸ್ಥಿತಿಗತಿ ಮತ್ತಷ್ಟು ಹದಗೆಟ್ಟಿದೆ.

ಈ ವರ್ಗದಲ್ಲಿ ನಿರುದ್ಯೋಗ ದರವು ಶೇ. 12.2ರಿಂದ ಶೇ. 20ಕ್ಕೆ ಏರಿಕೆಯಾಗಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ‘ಯುವನಿಧಿ’ ಯೋಜನೆ ಅಡಿಯಲ್ಲಿ 18.8.2026ರ ಹೊತ್ತಿಗೆ 4,46,779 ಪದವೀಧರ ಅಭ್ಯರ್ಥಿಗಳು ನೋಂದಾಯಿಸಿದ್ದು, ಅವರಲ್ಲಿ ಒಟ್ಟು 3,91,354 ಅರ್ಹ ಪದವೀಧರ ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ. ಮೇಲಿನ ಅಂಕಿ-ಅಂಶಗಳು ಇಂಗ್ಲಿಷ್ ಭಾಷೆಯ ಜ್ಞಾನವೊಂದೇ ಉದ್ಯೋಗ ದೊರಕಿಸಿಕೊಡುವುದಿಲ್ಲ ಎಂಬುದನ್ನು ತೋರಿಸುತ್ತವೆ.

ಆದರೆ, ತಾಂತ್ರಿಕ, ವೃತ್ತಿ ಕೌಶಲಕ್ಕೆ ಅಗತ್ಯವಾದ ಮಾಹಿತಿ/ ಜ್ಞಾನವನ್ನು ಕನ್ನಡದಲ್ಲಿ ಸಿದ್ಧಗೊಳಿ ಸುವ ಕೆಲಸ ಹೆಚ್ಚು ಆಗದಿರುವುದರಿಂದ ಇಂಗ್ಲಿಷ್‌ಗೆ ಜನ ಜೋತು ಬೀಳುವುದು ಅನಿವಾರ್ಯ ವಾಗಿದೆ. ಕನ್ನಡವನ್ನು ಇಂದಿನ ಅಗತ್ಯಗಳಿಗೆ ಸಜ್ಜುಗೊಳಿಸಲು ಉನ್ನತ ಮಟ್ಟದ ಸಲಹಾ ಸಮಿತಿ ಯನ್ನು ರಚಿಸಿ ಅದರ ಶಿಫಾರಸುಗಳನ್ನು ಶಿಕ್ಷಣದಲ್ಲಿ ಅಳವಡಿಸಿದರೆ ಕನ್ನಡದ ನಾಳೆಗಳು ಸುಭದ್ರವಾಗುತ್ತದೆ.

ಚೀನಾ, ಜಪಾನ್ ದೇಶಗಳು ದೊಡ್ಡ ಸಾಧನೆ ಮಾಡಲು ಅವರು ಮಾತೃಭಾಷೆಯ ಶಿಕ್ಷಣ ನೀಡುತ್ತಿರು ವುದೇ ಆಗಿದೆ ಎಂಬುದನ್ನು ಆಳುವವರು ಗಮನಿಸಬೇಕು. ಕನ್ನಡ ಕಲಿತರೆ ಕೆಲಸ ಸಿಗುತ್ತದೆ ಅನ್ನುವ ವಾತಾವರಣ ನಿರ್ಮಾಣವಾದರೆ ಜನ ಯಾವುದೇ ಒತ್ತಾಯವಿಲ್ಲದೆ ಕನ್ನಡವನ್ನು ಖಂಡಿತವಾಗಿ ಕಲಿಯುತ್ತಾರೆ.

ಕರ್ನಾಟಕ ಸರ್ಕಾರದ ನೌಕರರ ನೇಮಕಾತಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳನ್ನು ಇಂಗ್ಲಿಷ್ ಅಥವ ಕನ್ನಡ ಯಾವುದರದರೂ ಬರೆಯಲು ಅವಕಾಶವಿದೆ ಎಂದರೆ ಏನರ್ಥ? ಕನ್ನಡವನ್ನು ಆಡಳಿತ ಭಾಷೆಯಾಗಿ ಒಪ್ಪಿರುವ ಸರ್ಕಾರದ ಕೆಲಸಗಳೇ ಕನ್ನಡ ಕಲಿತವರಿಗೆ ಮಾತ್ರ ಅಂತಾಗದಿದ್ದರೆ ಕನ್ನಡ ಅನ್ನದ ಭಾಷೆಯಾಗುವುದಾದರೂ ಹೇಗೆ? ಕಾನೂನಿನ ಮೂಲಕ ಕನ್ನಡ ಮಾಧ್ಯಮ ಕಡ್ಡಾಯ ಮಾಡಬೇಕು ಎಂಬ ಒತ್ತಾಯದ ಹಿಂದಿರುವ ಕನ್ನಡ ಕಾಳಜಿ, ಮಕ್ಕಳ ಮನೋವಿಕಾಸಕ್ಕೆ ಪೂರಕ, ವಿಷಯ ಗ್ರಹಿಕೆ ಸುಲಭವಾಗುತ್ತದೆ ಎಂಬಂತಹ ಸಂಗತಿಗಳು ಸರಿಯಾಗಿರ ಬಹುದು. ಆದರೆ, ಕನ್ನಡದಲ್ಲಿ ಕಲಿತರೆ ಕೆಲಸ ಗ್ಯಾರಂಟಿಯೇ? ಎಂದು ಯುವ ಜನತೆ ಕೇಳುವ ಪ್ರಶ್ನೆಗೆ ಭರವಸೆ ನೀಡಲಾಗದು.

ಕರ್ನಾಟಕ ಸರ್ಕಾರ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಾನೂನು ಮಾಡುವುದರ ಜೊತೆಗೆ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಕನ್ನಡ ಜ್ಞಾನವನ್ನು ಕಡ್ಡಾಯ ಮಾಡಬೇಕು. ಕನ್ನಡಪರ ಸಭೆಯೊಂದರಲ್ಲಿ ಸಭಿಕರೊಬ್ಬರು ಮಾತೃಭಾಷಾ ಮಾಧ್ಯಮಕ್ಕಾಗಿ ಹೋರಾಟ ಮಾಡುವವರೇ ತಮ್ಮ ಮಕ್ಕಳನ್ನು ಏಕೆ ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಾರೆ ಎಂದು ಪ್ರಶ್ನೆ ಕೇಳಿದರು.

ವೇದಿಕೆಯಲ್ಲಿದ್ದವರೊಬ್ಬರು, ಇಂತಹ ಪ್ರಶ್ನೆ ಅಪ್ರಸ್ತುತ, ಎಡೆ ಕನ್ನಡ ಮಾಧ್ಯಮ ಬಂದರೆ ಇಂತಹ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು. ಪ್ರಶ್ನೆ ಕೇಳಿದವರು ತಾರ್ಕಿಕವಾಗಿ ಕನ್ನಡ ನಾಯಕರ ಇಬ್ಬಂದಿ ತನವನ್ನು ಅನಾವರಣಗೊಳಿಸ ಹೊರಟಾಗ ಉದ್ವೇಗದ ವಾತಾವರಣ ಸೃಷ್ಟಿಯಾಗಿ, ಅವರು ಸಭೆಯಿಂದ ಹೊರನಡೆದರು. ಇಂದಿನ ಸನ್ನಿವೇಶದಲ್ಲಿ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ದಲ್ಲಿ ಕಲಿಸುವುದು ತಪ್ಪಲ್ಲ. ಮಕ್ಕಳನ್ನು ಯಾವ ಶಾಲೆ, ಮಾಧ್ಯಮದಲ್ಲಿ ಓದಿಸಬೇಕು ಎಂಬುದನ್ನು ತಂದೆ ತಾಯಿ ಮಾತ್ರ ತೀರ್ಮಾನಿಸುವ ಪರಿಸ್ಥಿತಿ ಕುಟುಂಬಗಳಲ್ಲಿಲ್ಲ. ಅವರ ಮಕ್ಕಳ ಭವಿಷ್ಯ ಮುಖ್ಯ ಅನ್ನುವ ಮಾತನ್ನು ಯಾರೂ ತಳ್ಳಿ ಹಾಕುವಂತಿಲ್ಲ.

ಆದರೆ, ಸಭೆಯಲ್ಲಿ ಎತ್ತಿದ ಪ್ರಶ್ನೆ ಸರಿ ಇತ್ತು. ಆ ವಿಚಾರ ಚಿಂತನಾರ್ಹವಾದದ್ದು. ಇಂದು ಇಂಗ್ಲಿಷ್ ಕಲಿಯಲು ಜನ ಮುಗಿಬೀಳುತ್ತಿರುವುದು ಇಂಗ್ಲಿಷ್‌ನಲ್ಲಿ ಷೇಕ್ಸ್‌ಪಿಯರ್, ಮಿಲ್ಟನ್, ವರ್ಡ್ಸ್‌ವರ್ತ್ ಅವರಂಥವರು ರಚಿಸಿರುವ ಶ್ರೇಷ್ಠರ ಸಾಹಿತ್ಯವನ್ನು ಓದಬೇಕು ಎಂಬ ಉದ್ದೇಶದಿಂದಲ್ಲ. ಯಂತ್ರವನ್ನು ತಯಾರಿಸುವುದು ಮತ್ತು ಅದನ್ನು ಬಳಸುವ ವಿಧಾನವನ್ನು ತಿಳಿಸುತ್ತದೆ.

ಕೆಟ್ಟ ಯಂತ್ರವನ್ನು ಸರಿ ಪಡಿಸುವುದನ್ನು ಕಲಿಸುತ್ತದೆ ಎಂಬ ಕಾರಣಕ್ಕೆ ಇಂಗ್ಲಿಷ್ ಕಲಿಯುತ್ತಾರೆ. ಅಂದರೆ, ಇಂದಿನ ಬದುಕಿಗೆ ಅಗತ್ಯವಾದ ಜ್ಞಾನವನ್ನು ನೀಡುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಲು ಇಂಗ್ಲಿಷ್ ನೆರವಾಗುತ್ತದೆ ಅನ್ನುವ ಭರವಸೆ ಜನ ಮಾನಸದಲ್ಲಿ ಮೂಡಿದೆ. ಇನ್ನೂ ಸರಳವಾಗಿ ಹೇಳುವುದಾದರೆ ಇಂಗ್ಲಿಷ್ ಕಲಿತರೆ ಕೆಲಸ ಸಿಗುತ್ತದೆ ಎಂಬುದೇ ಆಗಿದೆ.

ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿರುವ, ಮಾತೃಭಾಷಾ ಶಿಕ್ಷಣ ಪ್ರತಿಪಾದಕರೂ ಆಗಿರುವ ಕನ್ನಡಪರ ಚಿಂತಕರು ಇಂಗ್ಲಿಷ್‌ನಲ್ಲಿ ಕಲಿತವರಿಗೆಲ್ಲ ಕೆಲಸ ಸಿಕ್ಕಿದೆಯೇ? ಎಷ್ಟು ಜನಕ್ಕೆ ಕೆಲಸದಲ್ಲಿ ಕಲಿತ ಇಂಗ್ಲಿಷ್ ಉಪಯೋಗವಾಗುತ್ತಿದೆ ಅನ್ನುವಂತಹ ಪ್ರಶ್ನೆಗಳನ್ನು ಎಸೆಯುತ್ತಾರೆ. ಇಂತಹ ವಿತಂಡ ವಾದವನ್ನು ಬಿಟ್ಟು ಕನ್ನಡವನ್ನು ಕಲಿತರೆ ಕೆಲಸ ಸಿಗುತ್ತದೆ, ಕರ್ನಾಟಕದಲ್ಲಿ ಕೆಲಸ ಮಾಡಬೇಕಾದರೆ ಕನ್ನಡ ಜ್ಞಾನ ಅನಿವಾರ್ಯ ಅನ್ನುವ ಪರಿಸ್ಥಿತಿ ನಿರ್ಮಾಣ ಮಾಡುವತ್ತ ಚಿಂತನೆ ನಡೆಯಬೇಕು.

ಕನ್ನಡ ಇಂಗ್ಲಿಷ್‌ಗಿಂತ ಪ್ರಾಚೀನವಾದ ಭಾಷೆ, ಪ್ರಪಂಚದಲ್ಲಿ ವಿರಾಮವಿಲ್ಲದೆ ನಿರಂತರ 1000 ವರ್ಷಗಳು ಸಾಹಿತ್ಯ ಸೃಷ್ಟಿಯಾಗಿರುವುದು ಕನ್ನಡದಲ್ಲಿ ಮಾತ್ರ ಅನ್ನುವ ಕಾರಣಕ್ಕೆ ಜನ ಕನ್ನಡ ಕಲಿಯುವುದಿಲ್ಲ ಎಂಬ ವಾಸ್ತವದ ಅರಿವು ಇರಬೇಕು. ಇತ್ತೀಚೆಗೆ ನಮ್ಮ ರಾಜ್ಯದಲ್ಲಿರುವ ಬ್ಯಾಂಕ್‌ಗಳಿಗೆ ನೌಕರರ ಮಟ್ಟದಲ್ಲೂ ಕನ್ನಡ ಬಾರದ ಪರ ಪ್ರಾಂತೀಯರು ಬರುತ್ತಿದ್ದಾರೆ.

ಕನ್ನಡ ಮಾತ್ರ ಬಲ್ಲ ಗ್ರಾಮೀಣ ಭಾಗದ ಗ್ರಾಹಕರೊಡನೆ ಇವರಿಗೆ ವ್ಯವಹರಿಸಲಾಗದು. ಇದು ಕೇವಲ ಬ್ಯಾಂಕಿಗೆ ಸೀಮಿತವಾಗಿಲ್ಲ. ಅಂಚೆ ಕಚೇರಿ, ಜೀವ ವಿಮೆ, ಆದಾಯ ತೆರಿಗೆಯಂತಹ ಸಾರ್ವಜನಿಕ ಸಂಪರ್ಕವಿರುವ ಹುದ್ದೆಗಳಿಗೂ ಕನ್ನಡ ಬಾರದವರೇ ಬರುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಆಗುತ್ತಿರುವ ಅಪಚಾರ. ಭಾಷಾನ್ವಯ ರಾಜ್ಯಗಳ ರಚನೆಯಾದ ನಂತರವೂ, ಆ ರಾಜ್ಯದ ಅಧಿಕೃತ ಭಾಷೆಗೆ ಕೇಂದ್ರ ಸರ್ಕಾರ ಮಾನ್ಯತೆ ನೀಡುತ್ತಿಲ್ಲ ಎಂದಾದರೆ, ಕನ್ನಡವನ್ನು ಕಲಿತವರಿಗೆ ಇನ್ನೆಲ್ಲಿ ಕೆಲಸ ಸಿಗುತ್ತದೆ? ಭಾಷಾನ್ವಯ ರಾಜ್ಯಗಳ ರಚನೆಯಾದ ತಕ್ಷಣ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಲಿಲ್ಲ.

ಜತೆಗೆ ಕನ್ನಡವನ್ನು ತಾಂತ್ರಿಕವಾಗಿ ಬೆಳೆಸುವ ಕೆಲಸವನ್ನೂ ಮಾಡಲಿಲ್ಲ. ಆ ಸಂದರ್ಭದಲ್ಲಿಯೇ ಕನ್ನಡ ವನ್ನು ಸಾರ್ವತ್ರಿಕ ಶಿಕ್ಷಣ ಮಾಧ್ಯಮ ಮಾಡಿದ್ದರೆ ಯಾರೂ ಇಷ್ಟು ತೀವ್ರವಾಗಿ ಪ್ರಶ್ನಿಸುತ್ತಿರಲಿಲ್ಲ. ಈಗ ಸಣ್ಣಪುಟ್ಟ ತಾಂತ್ರಿಕ ವಿಷಯಗಳಿಗೂ ಇಂಗ್ಲಿಷನ್ನು ಅವಲಂಬಿಸಬೇಕಿದೆ. ಅಗಲೇ ಕನ್ನಡ ಭಾಷೆಯನ್ನು ಎಲ್ಲ ಜ್ಞಾನ ಶಾಖೆಗಳಲ್ಲೂ ಬೆಳೆಸುವ ನಿಟ್ಟಿನಲ್ಲಿ ಭದ್ರ ಬುನಾದಿ ಹಾಕಿದ್ದರೆ ಈ ಹೊತ್ತಿಗೆ ಕನ್ನಡ ಅನ್ನದ ಭಾಷೆಯಾಗಿರುತ್ತಿತ್ತು. ಈಗ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯ ಮಾಡುವುದು ಸುಲಭದ ಸಂಗತಿಯಾಗಿ ಉಳಿದಿಲ್ಲ. ನಾವು ಕನ್ನಡವನ್ನು ಉದ್ಯೋಗದ ಭಾಷೆಯಾಗಿ ಮಾಡಲು ಏನು ಮಾಡಬಹುದು ಎಂಬುದನ್ನು ಎಲ್ಲರೂ ಯೋಚಿಸಬೇಕಿದೆ.

ಸವಲತ್ತುಗಳಿಗೆ ಪ್ರಾದೇಶಿಕ ಭಾಷಾ ಜ್ಞಾನ ಕಡ್ಡಾಯವಾಗಲಿ: ಕರ್ನಾಟಕ ಸರ್ಕಾರ ಲೋಕಸೇವಾ ಆಯೋಗವು ನಡೆಸುವ ಎಲ್ಲ ಪರೀಕ್ಷೆಗಳು ಕನ್ನಡದಲ್ಲಿ ಮಾತ್ರ ನಡೆಸಬೇಕು. ಬೇಕಾದರೆ ಅಗತ್ಯ ವೆನಿಸುವ ಹುzಗಳಿಗೆ ಒಂದು ಇಂಗ್ಲಿಷ್ ಪತ್ರಿಕೆಯಿರಲಿ. ಸರ್ಕಾರ ತನ್ನ ಅಧೀನದಲ್ಲಿರುವ ಎಲ್ಲಾ ಇಲಾಖೆ, ಕಾರ್ಖಾನೆ, ನಿಗಮ, ಮಂಡಳಿ ಮತ್ತು ಅನುದಾನ ನೀಡುವ ಸಂಸ್ಥೆಗಳ ಉದ್ಯೋಗಕ್ಕೆ ನೇಮಕ ಮಾಡುವಾಗಲೇ ಎಸ್‌ಎಸ್‌ಎಲ್ಸಿ ಮಟ್ಟದ ಕನ್ನಡ eನವನ್ನು ಕಡ್ಡಾಯ ಮಾಡಬೇಕು. ‌

ಖಾಸಗಿ ಉದ್ಯಮಗಳಲ್ಲಿ ನೇಮಕಾತಿ ನಡೆಯುವ ಸಂದರ್ಭದ ಕನ್ನಡ ಲಿಖಿತ ಜ್ಞಾನ ಪರೀಕ್ಷಿಸುವ ವ್ಯವಸ್ಥೆಯಿರಬೇಕು. ಎಸ್‌ಎಸ್‌ಎಲ್‌ʼಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರಿ ಉದ್ಯೋಗ, ಎಲ್ಲ ತಾಂತ್ರಿಕ, ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಬೇಕು. ಹೀಗೆ ಮಾಡಿದರೆ ಕನಿಷ್ಠ ಸರ್ಕಾರದ ಅಧೀನ ಹುದ್ದೆಗಳು ಕನ್ನಡ ಕಲಿತವರಿಗೆ ಸಿಗುತ್ತದೆ ಎಂಬ ಭರವಸೆ ಮೂಡುತ್ತದೆ.

ಭಾಷಾವಾರು ಪ್ರಾಂತ್ಯಗಳ ರಚನೆಯನ್ನು ಸಂವಿಧಾನ ಅಂಗೀಕರಿಸಿದೆ ಮಾತ್ರವಲ್ಲ ಅನುಚ್ಛೇದ 8ರಲ್ಲಿ ದೇಶದ 23 ಭಾಷೆಗಳನ್ನು ಅಧಿಕೃತ ಭಾಷೆಗಳು ಎಂದು ಅಂಗೀಕರಿಸಿದೆ. ಹಾಗೆ ದೇಶದ ಪ್ರಜೆಗಳು, ಭಾರತದ ಯಾವ ರಾಜ್ಯಕ್ಕಾದರೂ ಹೋಗಿ ವಾಸಿಸುವ, ಕೆಲಸ ಮಾಡುವ ಹಕ್ಕನ್ನು ಭಾರತೀಯರಿಗೆ ಸಂವಿಧಾನ ನೀಡಿದೆ. ಇದಕ್ಕೆ ಒಂದು ತಿದ್ದುಪಡಿ ತರಬೇಕಿದೆ. ವಲಸೆ ಹೋದ ಜನ ತಾವು ಯಾವ ರಾಜ್ಯಕ್ಕೆ ಹೋಗುತ್ತಾರೋ ಅಲ್ಲಿಯ ಭಾಷೆಯನ್ನು ಕಲಿಯುವುದು ಕಡ್ಡಾಯ ವಾಗಬೇಕು.

ಅಮೆರಿಕಾದಲ್ಲಿ ಬಾಡಿಗೆಗೆ ಮನೆ, ದೂರವಾಣಿ, ಗ್ಯಾಸ್ ಸಂಪರ್ಕ ಮುಂತಾದ ನಾಗರಿಕ ಸೌಲಭ್ಯಗಳು ಸಿಗಬೇಕಾದರೆ ಸೋಶಿಯಲ್ ಸೆಕ್ಯುರಿಟಿ ನಂಬರ್ (ಎಸ್‌ಎಸ್‌ಎನ್) ಅತ್ಯಗತ್ಯ. ಪ್ರದೇಶದ ಭಾಷೆಗಳ ಅರಿವು ಕಡ್ಡಾಯವಾಗಿ ಇರಲೇಬೇಕು ಎಂದು ಕಾಯಿದೆ ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಕರ್ನಾಟಕ ಸರ್ಕಾರ ಒತ್ತಾಯಿಸಬೇಕು.

ಕರ್ನಾಟಕ ಸರ್ಕಾರವು ನೀಡುವ ಸವಲತ್ತಗಳನ್ನು ಪಡೆಯಬೇಕಾದರೆ, ಸ್ಥಿರಾಸ್ತಿಯನ್ನು (ನಿವೇಶನ, ಮನೆ, ಜಮೀನು) ಮಾಡಬೇಕಾದರೆ ಕನ್ನಡ ಜ್ಞಾನ ಕಡ್ಡಾಯ ಎಂಬ ಕಾನೂನು ಮಾಡಬೇಕು. ಇಂತಹ ಕನ್ನಡ ಭಾಷಾ ಜ್ಞಾನವನ್ನು ಪರೀಕ್ಷಿಸಲು ಒಂದು ಪ್ರತ್ಯೇಕ ಇಲಾಖೆ ಅಸ್ತಿತ್ವಕ್ಕೆ ಬರಬೇಕು. ಈ ಪರೀಕ್ಷೆ ತಗೆದುಕೊಳ್ಳುವವರಿಗೆ ಸೂಕ್ತ ಶುಲ್ಕ ವಿಧಿಸಬೇಕು. ಇವೆಲ್ಲ ಸಮಯ ಹಿಡಿಯುತ್ತದೆ. ಇಂತಹ ಪ್ರಕ್ರಿಯೆ ಆರಂಭವಾದರೆ ಇಂದಲ್ಲ ನಾಳೆ ಕನ್ನಡ ಭಾಷೆ ಬದುಕು ಕಟ್ಟಿ ಕೊಡಬಲ್ಲ ಭಾಷೆಯಾಗಲು ಸಾಧ್ಯ. ಬ್ರಿಟನ್‌ನಲ್ಲಿ ಪೌರತ್ವ ಸಿಗಬೇಕಾದರೆ ಅಲ್ಲಿನ ಸಂಸ್ಕೃತಿ, ಇತಿಹಾಸದ ಅರಿವಿರಬೇಕು. ಆ ಬಗ್ಗೆ ಪರೀಕ್ಷೆ ನಡೆಸುತ್ತಾರೆ. ನಮ್ಮಲ್ಲೂ ಅಂತಹ ಕಾನೂನು ತರುವ ಬಗ್ಗೆ ಚಿಂತನೆ ನಡೆಯಬೇಕು.