Roopa Gururaj Column: ಪಂಚತಂತ್ರ ಕಥೆಗಳು: ಹಂಸಗಳು ಮತ್ತು ದುಡುಕು ಸ್ವಭಾವದ ಆಮೆ
ಮಳೆಯಿಲ್ಲದೆ ಸರೋವರದ ನೀರು ದಿನದಿಂದ ದಿನಕ್ಕೆ ಬತ್ತಲಾ ರಂಭಿಸಿತು. ಹಂಸಗಳಿಗೆ ರೆಕ್ಕೆಗಳಿದ್ದು ದರಿಂದ ಅವು ನೀರಿರುವ ಬೇರೆ ಸರೋವರಕ್ಕೆ ಹಾರಿಹೋಗ ಬಹು ದಿತ್ತು. ಆದರೆ ನೆಲದ ಮೇಲೆ ತೆವಳುತ್ತಾ ಸಾಗುವ ಆಮೆಯ ಗತಿಯೇನು? ಮಿತ್ರನನ್ನು ಬಿಟ್ಟು ಹೋಗಲು ಮನಸ್ಸಿಲ್ಲದ ಹಂಸಗಳು, ಗೆಳೆಯ, ಇಲ್ಲಿಂದ ಹಲವು ಯೋಜನ ದೂರದಲ್ಲಿ ನೀರಿನಿಂದ ತುಂಬಿರುವ ದೊಡ್ಡ ಸರೋವರ ವೊಂದಿದೆ. ನಾವೆಲ್ಲರೂ ಅಲ್ಲಿಗೆ ಹೋಗೋಣ ಎಂದವು.
-
ಒಂದೊಳ್ಳೆ ಮಾತು
ಒಂದಾನೊಂದು ಕಾಲದಲ್ಲಿ ಒಂದು ಸುಂದರ ಸರೋವರದಲ್ಲಿ ‘ಕಂಬು ಗ್ರೀವ’ ಎಂಬ ಹೆಸರಿನ ಆಮೆಯೊಂದು ವಾಸವಾಗಿತ್ತು. ಅದೇ ಸರೋವರಕ್ಕೆ ನಿತ್ಯ ಬರುತ್ತಿದ್ದ ‘ಸಂಕಟ’ ಮತ್ತು ‘ವಿಕಟ’ ಎಂಬ ಎರಡು ಹಂಸಗಳು ಆಮೆಗೆ ಆಪ್ತ ಮಿತ್ರರಾಗಿದ್ದವು. ಪ್ರತಿದಿನ ಸಂಜೆ ಈ ಮೂವರು ದಡದಲ್ಲಿ ಸೇರಿ ದೇಶ- ವಿದೇಶಗಳ, ಪುರಾಣ-ಇತಿಹಾಸಗಳ ಸ್ವಾರಸ್ಯಕರ ಕಥೆಗಳನ್ನು ಮಾತನಾಡುತ್ತಾ ಸಂತೋಷದಿಂದ ಕಾಲ ಕಳೆಯುತ್ತಿದ್ದರು. ಆದರೆ ಕಾಲಚಕ್ರ ತಿರುಗಿ, ಆ ಪ್ರದೇಶದಲ್ಲಿ ಭೀಕರ ಬರಗಾಲ ಎದುರಾಯಿತು.
ಮಳೆಯಿಲ್ಲದೆ ಸರೋವರದ ನೀರು ದಿನದಿಂದ ದಿನಕ್ಕೆ ಬತ್ತಲಾ ರಂಭಿಸಿತು. ಹಂಸಗಳಿಗೆ ರೆಕ್ಕೆಗಳಿದ್ದು ದರಿಂದ ಅವು ನೀರಿರುವ ಬೇರೆ ಸರೋವರಕ್ಕೆ ಹಾರಿಹೋಗ ಬಹು ದಿತ್ತು. ಆದರೆ ನೆಲದ ಮೇಲೆ ತೆವಳುತ್ತಾ ಸಾಗುವ ಆಮೆಯ ಗತಿಯೇನು? ಮಿತ್ರನನ್ನು ಬಿಟ್ಟು ಹೋಗಲು ಮನಸ್ಸಿಲ್ಲದ ಹಂಸಗಳು, ಗೆಳೆಯ, ಇಲ್ಲಿಂದ ಹಲವು ಯೋಜನ ದೂರದಲ್ಲಿ ನೀರಿನಿಂದ ತುಂಬಿರುವ ದೊಡ್ಡ ಸರೋವರ ವೊಂದಿದೆ. ನಾವೆಲ್ಲರೂ ಅಲ್ಲಿಗೆ ಹೋಗೋಣ ಎಂದವು.
ಆಮೆ ನಿಟ್ಟುಸಿರಿಟ್ಟು, ಮಿತ್ರರೇ, ನನಗೆ ನಿಮ್ಮಂತೆ ಆಕಾಶದಲ್ಲಿ ಹಾರಲು ರೆಕ್ಕೆಗಳಿಲ್ಲವಲ್ಲ, ನಾನು ಹೇಗೆ ಬರಲಿ? ಎಂದು ಕೇಳಿತು. ಆಗ ಹಂಸಗಳು ಒಂದು ಉಪಾಯ ಹೂಡಿ, ನಾವು ಒಂದು ಗಟ್ಟಿಯಾದ ಮರದ ಕೋಲನ್ನು ತರು ತ್ತೇವೆ. ಅದರ ಎರಡು ತುದಿಗಳನ್ನು ನಮ್ಮ ಕೊಕ್ಕಿ ನಲ್ಲಿ ಹಿಡಿದು ಹಾರುತ್ತೇವೆ. ನೀನು ಆ ಕೋಲಿನ ಮಧ್ಯಭಾಗವನ್ನು ನಿನ್ನ ಬಾಯಿಯಿಂದ ಗಟ್ಟಿಯಾಗಿ ಕಚ್ಚಿ ಹಿಡಿದುಕೊಳ್ಳಬೇಕು. ಆದರೆ ಒಂದು ಕಟ್ಟುನಿಟ್ಟಿನ ಎಚ್ಚರಿಕೆ-ನಾವು ಆಕಾಶದಲ್ಲಿ ಹಾರುತ್ತಿರು ವಾಗ ನೀನು ಅಪ್ಪಿತಪ್ಪಿಯೂ ಬಾಯಿ ತೆರೆಯ ಬಾರದು. ಮಾತನಾಡಲು ಬಾಯಿ ಬಿಟ್ಟರೆ ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತೀಯಾ ಎಂದು ಎಚ್ಚರಿಸಿದವು.
ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ಆಪತ್ತಿನಲ್ಲಿ ಒಂದಾಗಿ ಬದುಕಿದ ನಾಲ್ವರು ಮಿತ್ರರು
ಆಮೆ ಇದಕ್ಕೆ ಒಪ್ಪಿ, ಕೋಲನ್ನು ಬಾಯಿಯಿಂದ ಗಟ್ಟಿಯಾಗಿ ಕಚ್ಚಿಕೊಂಡಿತು. ಎರಡು ಹಂಸಗಳು ಕೋಲಿನ ಎರಡೂ ಬದಿ ಗಳನ್ನು ಹಿಡಿದು ಆಕಾಶಕ್ಕೆ ಹಾರಿದವು. ಅವು ಹೀಗೆ ಹಾರುತ್ತಾ ಒಂದು ನಗರದ ಮೇಲಿಂದ ಸಾಗುತ್ತಿzಗ, ಕೆಳಗಿದ್ದ ಜನರು ಆಕಾಶದಲ್ಲಿ ಕಾಣುತ್ತಿದ್ದ ಈ ವಿಚಿತ್ರ ದೃಶ್ಯವನ್ನು ನೋಡಿ ಬೆರಗಾದರು. ಜನರು ಚಪ್ಪಾಳೆ ತಟ್ಟುತ್ತಾ, ಅರೆ, ನೋಡಿ! ಎರಡು ಹಕ್ಕಿಗಳು ಚಕ್ರದಂತಹ ಆಮೆಯನ್ನು ಕೋಲಿನಲ್ಲಿ ಹೊತ್ತೊಯ್ಯುತ್ತಿವೆ!
ಈ ಆಮೆ ಕೆಳಗೆ ಬಿದ್ದರೆ ಇಲ್ಲೇ ಸುಟ್ಟು ತಿಂದು ಬಿಡೋಣ! ಎಂದು ಗದ್ದಲ ಮಾಡುತ್ತಾ ಜೋರಾಗಿ ನಗಲಾರಂಭಿಸಿದರು. ಕೆಳಗಿನ ಜನರ ಈ ಅಪಹಾಸ್ಯ ಮತ್ತು ಗದ್ದಲ ಆಮೆಯ ಕಿವಿಗೆ ಬಿತ್ತು. ಅತಿಯಾದ ಮಾತು ಗಾರಿಕೆ ಮತ್ತು ಆವೇಶದ ಸ್ವಭಾವ ಹೊಂದಿದ್ದ ಆಮೆಗೆ ತಡೆಯಲಾಗಲಿಲ್ಲ. ಹಂಸಗಳು ನೀಡಿದ್ದ ಜೀವನ್ಮರಣದ ಎಚ್ಚರಿಕೆಯನ್ನು ಕ್ಷಣಾರ್ಧದಲ್ಲಿ ಮರೆತ ಆಮೆ, ಈ ಮೂರ್ಖರು ಏನು ಕೂಗುತ್ತಿ zರೆ? ಎಂದು ಕೇಳಲು ಬಾಯಿ ತೆರೆಯಿತು! ಬಾಯಿ ತೆರೆದ ಮರುಕ್ಷಣವೇ ಕೋಲಿನ ಹಿಡಿತ ತಪ್ಪಿ, ಆಮೆ ಆಕಾಶದಿಂದ ನೇರವಾಗಿ ನೆಲಕ್ಕೆ ಅಪ್ಪಳಿಸಿ ಪ್ರಾಣ ಕಳೆದುಕೊಂಡಿತು.
ಹಿತೈಷಿಗಳ ಮಾತು ಕೇಳದೆ, ತನ್ನ ನಾಲಿಗೆಯ ಮೇಲೆ ನಿಯಂತ್ರಣವಿಲ್ಲದ ಮಿತ್ರನ ದುರಂತ ಅಂತ್ಯ ವನ್ನು ಕಂಡು ಹಂಸಗಳು ದುಃಖದಿಂದ ಮರಳಿದವು. ನಮ್ಮ ಬದುಕಿನ ಬಹುತೇಕ ಅನಾಹುತಗಳಿಗೆ ಕಾರಣ ಹೊರಗಿನ ಶತ್ರುಗಳಲ್ಲ, ಬದಲಾಗಿ ನಮ್ಮದೇ ನಾಲಿಗೆಗೆ ಮೇಲಿನ ಹಿಡಿತ ಇಲ್ಲದಿರು ವುದೇ ಕಾರಣ. ಜಗತ್ತಿನಲ್ಲಿ ನಮ್ಮ ಬಗ್ಗೆ ಟೀಕೆ ಮಾಡುವವರು, ಅಪಹಾಸ್ಯ ಮಾಡುವವರು ಇದ್ದೇ ಇರುತ್ತಾರೆ. ಅಂತಹ ಪ್ರತಿಯೊಂದು ಮಾತಿಗೂ ಪ್ರತಿಕ್ರಿಯಿಸಲು ಹೋದರೆ ನಾಮ್ಮ ಬದುಕಿನ ಗುರಿಯ ಹಿಡಿತವೇ ತಪ್ಪಿಹೋಗುತ್ತದೆ.
ಸಂಸ್ಕೃತದ ಸುಭಾಷಿತ ಹೇಳುವಂತೆ ‘ಸುಹೃದಾಂ ಹಿತಕಾಮಾನಾಂ ಯಃ ಶೃಣೋತಿ ನ ಭಾಷಿತಮ್ | ವಿಪತ್ ಸನ್ನಿಹಿತಾ ತಸ್ಯ ಸ ನರಃ ಶತ್ರುನಂದನಃ’ (ತಮ್ಮ ಹಿತವನ್ನೇ ಬಯಸುವ ಮಿತ್ರರ ಹಿತವಚನ ವನ್ನು ಯಾರು ಕೇಳುವು ದಿಲ್ಲವೋ, ಅವರಿಗೆ ವಿಪತ್ತು ಕಟ್ಟಿಟ್ಟ ಬುತ್ತಿ). ಇಂದಿನ ದಿನಗಳಲ್ಲಿ ಸಣ್ಣಪುಟ್ಟ ಟೀಕೆಗಳಿಗೆ ತಕ್ಷಣವೇ ಕೋಪಗೊಂಡು, ಆವೇಶದಿಂದ ಮಾತ ನಾಡಿ ಸಂಬಂಧಗಳನ್ನೂ ಭವಿಷ್ಯವನ್ನೂ ಹಾಳು ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಮಕ್ಕಳಿಗೆ ಬಾಲ್ಯದಿಂದಲೇ ‘ಎಲ್ಲಿ ಮಾತನಾಡಬೇಕು ಮತ್ತು ಎಲ್ಲಿ ಮೌನವಾಗಿರಬೇಕು’ ಎಂಬ ವಿವೇಕವನ್ನು, ತಾಳ್ಮೆಯನ್ನು ಕಲಿಸಲು ಈ ಕಥೆ ಅತ್ಯುತ್ತಮ ಪಾಠ. ಮಕ್ಕಳಿಗಷ್ಟೇ ಅಲ್ಲ ಇದು ನಮಗೂ ಕೂಡ ಪಾಠವೇ ಅಲ್ಲವೇ?