Vishweshwar Bhat Column: ಪೈಲಟ್ʼಗೆ ನಿದ್ದೆ ಬಂದರೆ...
ನಿರಂತರವಾಗಿ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಬಹುದು ಮತ್ತು ವಿಮಾನ ಹಾರಾಟದ ಮೊದಲು ಎಷ್ಟು ಗಂಟೆಗಳ ಕಾಲ ವಿಶ್ರಾಂತಿ ಪಡೆಯಬೇಕು ಎಂಬ ಬಗ್ಗೆ ನಿರ್ದಿಷ್ಟ ನಿಯಮಗಳಿವೆ. ಕೆಲವೊಮ್ಮೆ, ಪೈಲಟ್‌ಗಳು ನಿರಂತರವಾಗಿ 12-16 ಗಂಟೆಗಳ ಕಾಲ ಕೆಲಸ ಮಾಡಬೇಕಾಗಬಹುದು. ಅದರಲ್ಲೂ ವಿಶೇಷವಾಗಿ ದೂರದ ಪ್ರಯಾಣದ ವಿಮಾನಗಳಲ್ಲಿ. ಇಷ್ಟು ದೀರ್ಘ ಅವಧಿಯ ಕೆಲಸ ಆಯಾಸವನ್ನು ಉಂಟುಮಾಡುತ್ತದೆ.


ಸಂಪಾದಕರ ಸದ್ಯಶೋಧನೆ
ವಿಮಾನ ಹಾರಿಸುವಾಗ ಪೈಲಟ್‌ಗಳಿಗೆ ನಿದ್ರೆ ಬಂದರೆ ಏನಾಗುತ್ತದೆ? ಅಥವಾ ನಿದ್ದೆ ಬಂದರೆ ಅವರು ಏನು ಮಾಡುತ್ತಾರೆ? ಈ ಪ್ರಶ್ನೆ ವಿಮಾನ ಪ್ರಯಾಣಿಕರಿಗೆ ಸುಳಿಯದೇ ಹೋಗುವುದಿಲ್ಲ. ವಿಮಾನ ಹಾರಾಟದ ಸಮಯದಲ್ಲಿ ಪೈಲಟ್‌ಗಳಿಗೆ ನಿದ್ರೆ ಬರುವುದು ಅಪರೂಪದ ಸಂಗತಿ. ಹಾಗಂತ ಅವರೂ ಮನುಷ್ಯರೇ. ಅವರಿಗೂ ನಿದ್ದೆ ಬಂದರೆ ಆಶ್ಚರ್ಯವೇನಿಲ್ಲ.
ಯಾಕೆಂದರೆ, ವಿಮಾನಯಾನ ಸಂಸ್ಥೆಗಳು ಮತ್ತು ನಿಯಂತ್ರಣ ಸಂಸ್ಥೆಗಳು ಪೈಲಟ್‌ಗಳ ನಿದ್ರೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸುತ್ತವೆ. ಆದರೂ ಕೆಲವು ಸಂದರ್ಭ ಗಳಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುವುದರಿಂದ ಅಥವಾ ನಿದ್ರಾಹೀನತೆಯಿಂದಾಗಿ ಪೈಲಟ್ ಗಳಿಗೆ ನಿದ್ರೆ ಬರುವ ಸಾಧ್ಯತೆ ಇರುತ್ತದೆ. ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ಕೆಲವು ಪ್ರೋಟೋಕಾಲ್ ಗಳು ಮತ್ತು ನಿಯಮಗಳಿವೆ. ವಿಮಾನಯಾನ ಸಂಸ್ಥೆಗಳು ಪೈಲಟ್‌ಗಳ ಕೆಲಸದ ಸಮಯವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತವೆ.
ನಿರಂತರವಾಗಿ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಬಹುದು ಮತ್ತು ವಿಮಾನ ಹಾರಾಟದ ಮೊದಲು ಎಷ್ಟು ಗಂಟೆಗಳ ಕಾಲ ವಿಶ್ರಾಂತಿ ಪಡೆಯಬೇಕು ಎಂಬ ಬಗ್ಗೆ ನಿರ್ದಿಷ್ಟ ನಿಯಮಗಳಿವೆ. ಕೆಲವೊಮ್ಮೆ, ಪೈಲಟ್‌ಗಳು ನಿರಂತರವಾಗಿ 12-16 ಗಂಟೆಗಳ ಕಾಲ ಕೆಲಸ ಮಾಡಬೇಕಾಗಬಹುದು. ಅದರಲ್ಲೂ ವಿಶೇಷವಾಗಿ ದೂರದ ಪ್ರಯಾಣದ ವಿಮಾನಗಳಲ್ಲಿ. ಇಷ್ಟು ದೀರ್ಘ ಅವಧಿಯ ಕೆಲಸ ಆಯಾಸವನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: Vishweshwar Bhat Column: ಪೈಲಟ್ ಮತ್ತು ಪ್ರಯಾಣಿಕರು
ಪೈಲಟ್‌ಗಳು ವಿವಿಧ ಸಮಯ ವಲಯಗಳಲ್ಲಿ ಹಾರಾಟ ನಡೆಸಬೇಕಾಗುತ್ತದೆ. ಆಗ ದೇಹದ ಜೈವಿಕ ಗಡಿಯಾರದಲ್ಲಿ ವ್ಯತ್ಯಾಸವಾಗುತ್ತದೆ, ಇದು ನಿದ್ರಾಹೀನತೆಗೆ ಕಾರಣವಾಗಬಹುದು. ಇದನ್ನು ಜೆಟ್‌ಲ್ಯಾಗ್ ( Jet lag ) ಎಂದು ಕರೆಯುತ್ತಾರೆ. ಕಾಕ್‌ಪಿಟ್‌ನಲ್ಲಿನ ಸ್ಥಿರ ತಾಪಮಾನ, ಕಡಿಮೆ ಆರ್ದ್ರತೆ ಮತ್ತು ನಿರಂತರ ಕಂಪನಗಳು ( Vibrations ) ಕೆಲವೊಮ್ಮೆ ಆಯಾಸವನ್ನು ಉಂಟು ಮಾಡ ಬಹುದು. ಒಂದು ವಿಮಾನದಲ್ಲಿ ಸಾಮಾನ್ಯವಾಗಿ ಕನಿಷ್ಠ ಇಬ್ಬರು ಪೈಲಟ್ ಗಳಿರುತ್ತಾರೆ - ಕ್ಯಾಪ್ಟನ್ ಮತ್ತು ಫಸ್ಟ್ ಆಫೀಸರ್.
ಇದು ಒಬ್ಬ ಪೈಲಟ್‌ಗೆ ಆಯಾಸವಾದರೆ, ಇನ್ನೊಬ್ಬರು ನಿಯಂತ್ರಣವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಪೈಲಟ್‌ಗಳು ತಮ್ಮ ಆರೋಗ್ಯ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸ ಬೇಕು. ಯಾವುದೇ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಅದನ್ನು ಮೊದಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಪೈಲಟ್‌ಗೆ ನಿದ್ರೆ ಬಂದರೆ ಏನು ಮಾಡುತ್ತಾರೆ? ಪೈಲಟ್‌ಗಳಿಗೆ ವಿಮಾನದ ಮಧ್ಯದಲ್ಲಿ ನಿದ್ರೆ ಬರುವ ಅಪಾಯವನ್ನು ಕಡಿಮೆ ಮಾಡಲು, ‘ಕಂಟ್ರೋಲ್ಡ್ ರೆಸ್ಟ್’ ( Controlled Rest ) ಎಂಬ ವಿಧಾನವನ್ನು ಅನುಸರಿಸಲಾಗುತ್ತದೆ.
ಇದನ್ನು ಪವರ್ ನ್ಯಾಪ್’ ಎಂದೂ ಕರೆಯುತ್ತಾರೆ. ಇದರ ಅಡಿಯಲ್ಲಿ, ಒಬ್ಬ ಪೈಲಟ್ ನಿರ್ದಿಷ್ಟ ಅವಧಿಗೆ ನಿದ್ರಿಸಲು ಅವಕಾಶವಿರುತ್ತದೆ. ಸಾಮಾನ್ಯವಾಗಿ ಇದು 40 ನಿಮಿಷಗಳಿಗಿಂತ ಕಡಿಮೆ ಇರುತ್ತದೆ ಮತ್ತು ಈ ಅವಧಿಯಲ್ಲಿ ಇನ್ನೊಬ್ಬ ಪೈಲಟ್ ವಿಮಾನದ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ. ಕಂಟ್ರೋಲ್ಡ್ ರೆಸ್ಟ್ ಸಮಯದಲ್ಲಿ, ಇನ್ನೊಬ್ಬ ಪೈಲಟ್ ಸಂಪೂರ್ಣವಾಗಿ ಎಚ್ಚರ ದಿಂದ ಇರುತ್ತಾನೆ ಮತ್ತು ವಿಮಾನದ ನಿಯಂತ್ರಣವನ್ನು ನೋಡಿಕೊಳ್ಳುತ್ತಾನೆ.
ನಿದ್ರಿಸುತ್ತಿರುವ ಪೈಲಟ್ ಅನ್ನು ಎಚ್ಚರಿಸಲು ಅವನು ನಿರ್ದಿಷ್ಟ ಪ್ರೋಟೋಕಾಲ್ ಅನ್ನು ಅನುಸರಿಸುತ್ತಾನೆ. ವಿಮಾನದಲ್ಲಿರುವ ಎಚ್ಚರಿಕೆ ವ್ಯವಸ್ಥೆಗಳು ಕೂಡಾ ಸಹಾಯ ಮಾಡುತ್ತವೆ. ಯಾವುದೇ ಅಸಾಮಾನ್ಯ ಘಟನೆ ನಡೆದರೆ, ಈ ವ್ಯವಸ್ಥೆಗಳು ತಕ್ಷಣವೇ ಎಚ್ಚರಿಕೆ ನೀಡುತ್ತವೆ. ಪೈಲಟ್‌ಗಳು ನಿದ್ರೆಗೆ ಜಾರಿದರೂ ಸಹ, ಇಬ್ಬರು ಪೈಲಟ್‌ಗಳಿರುವುದರಿಂದ ಮತ್ತು ನಿಯಮಿತವಾದ ನಿಯಂತ್ರಣ ಮತ್ತು ಸುರಕ್ಷತಾ ತಪಾಸಣೆಗಳಿಂದಾಗಿ ವಿಮಾನ ಹಾರಾಟದ ಸುರಕ್ಷತೆಗೆ ಯಾವುದೇ ಧಕ್ಕೆಯಾಗುವುದಿಲ್ಲ.
ವಿಮಾನದ ಹಾರಾಟ ಸಂಪೂರ್ಣವಾಗಿ ಸ್ವಯಂಚಾಲಿತವಾಗಿ ನಡೆಯುವ ಕಾರಣಕ್ಕೆ ನಿದ್ರಿಸುವ ಪೈಲಟ್‌ಗಳಿಂದ ಅಪಾಯವಾಗುವ ಸಾಧ್ಯತೆ ಕಡಿಮೆ. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಪೈಲಟ್‌ಗಳ ಕೆಲಸದ ಅವಧಿ, ವಿಶ್ರಾಂತಿ ಮತ್ತು ಫ್ಲೈಟ್ ಡ್ಯೂಟಿ ಕುರಿತು ಕಟ್ಟುನಿಟ್ಟಾದ ನಿಯಮಗಳನ್ನು ನಿಗದಿಪಡಿಸಿದೆ.
ಪ್ರತಿಯೊಂದು ದೇಶವೂ ಈ ನಿಯಮಗಳನ್ನು ತಮ್ಮ ಕಾನೂನುಗಳಲ್ಲಿ ಸೇರಿಸಿಕೊಳ್ಳುತ್ತವೆ. ಪ್ರತಿ ಏರ್‌ಲೈನ್ ಕೂಡ ತನ್ನದೇ ಆದ ಆಂತರಿಕ ನಿಯಮಗಳನ್ನು ರೂಪಿಸಿರುತ್ತದೆ. ಪೈಲಟ್‌ಗಳು ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಫ್ಲೈಟ್ ಮಾಡುವ ಮೊದಲು, ಪೈಲಟ್‌ಗಳು ಸಾಕಷ್ಟು ವಿಶ್ರಾಂತಿ ಪಡೆದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಏರ್ ಲೈನ್‌ನ ಜವಾಬ್ದಾರಿಯಾಗಿರುತ್ತದೆ.
ವಿಮಾನಯಾನ ಸಂಸ್ಥೆಗಳು ಮತ್ತು ನಿಯಂತ್ರಣ ಪ್ರಾಽಕಾರಗಳು ಪೈಲಟ್‌ಗಳ ನಿದ್ರೆಗೆ ಸಂಬಂಧಿಸಿ ದಂತೆ ತುಂಬಾ ಜಾಗರೂಕತೆಯಿಂದ ಇರುತ್ತವೆ. ವಿಮಾನ ಹಾರಾಟದ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳಲು ಪ್ರತಿಯೊಂದು ಹಂತದಲ್ಲೂ ನಿಖರವಾದ ಪ್ರೋಟೋ ಕಾಲ್‌ಗಳು ಮತ್ತು ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ.