Dr N Someshwara Column: ಒಡಲ ಮೇಲಿರುವ ಗಾಯಗಳು, ಹಿಂಸೆಯ ರುಜುವಾತಿನ ಸಹಿಗಳು
ಸೀಸರನ ಆತ್ಮೀಯ ಮಿತ್ರನಾಗಿದ್ದ ಬ್ರೂಟಸ್ ಸಹ ತನ್ನ ಚೂರಿಯಿಂದ ಸೀಸರನ ತೊಂಡೆಸಂದಿಯ ಬಳಿ ಚುಚ್ಚಿದ. ಸೀಸರ್ ಅಲ್ಲೇ ಕುಸಿದುಬಿದ್ದು ಜೀವವನ್ನು ಬಿಟ್ಟ. ಜೂಲಿಯಸ್ ಸೀಸರನ ವೈದ್ಯ ಆಂಟೀಸ್ಟಿ ಯಸ್. ಇವನು ಸೀಸರನ ಮರಣೋತ್ತರ ಶವಪರೀಕ್ಷೆಯನ್ನು ನಡೆಸಿದ. ಸೀಸರನ ದೇಹದ ಮೇಲೆ ಒಟ್ಟು ೨೩ ತಿವಿದ ಗಾಯಗಳಿರುವುದನ್ನು ದಾಖಲಿಸಿದ.

-

ರೋಮ್ ನಗರ. ಕ್ರಿ.ಪೂ.44, ಮಾರ್ಚ್ 15. ಜೂಲಿಯಸ್ ಸೀಸರ್ ರೋಮ್ ಸಾಮ್ರಾಜ್ಯದ ಸರ್ವಾಧಿ ಕಾರಿಯಾಗಿದ್ದ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನಿಟ್ಟು, ಅದರಂತೆ ರಾಜ್ಯಭಾರವನ್ನು ಮಾಡು ತ್ತಿದ್ದ ರೋಮನ್ನರಿಗೆ, ಸೀಸರ್ ನುಂಗಲಾಗದ ತುತ್ತಾಗಿ ಪರಿಣಮಿಸಿದ್ದ. ಅಂದು ರೋಮಿನ ‘ಕ್ಯೂರಿ ಯ ದಿ ಪಾಂಪಿಯೊ’ದಲ್ಲಿ ಸಭೆಯನ್ನು ಆಯೋಜಿಸಿದ್ದರು. ಆ ಸಭೆಯಲ್ಲಿ ಮಾರ್ಕಸ್ ಜೂನಿಯಸ್ ಬ್ರೂಟಸ್, ಗೈಸ್ ಕೇಸಿಯಸ್ ಲಾಂಜಿನಸ್, ಡೆಸಿಮಸ್ ಜೂನಿಯಸ್ ಬ್ರೂಟಸ್ ಆಲ್ಬಿನಸ್ ಮುಂತಾದ ಪ್ರಮುಖರನ್ನೊಳಗೊಂಡ 60-70 ಸೆನೆಟರುಗಳು (ನಮ್ಮ ಸಂಸದರು ಇದ್ದ ಹಾಗೆ) ಸೇರಿದ್ದರು.
ಇವರು ತಮ್ಮನ್ನು ತಾವು ‘ವಿಮೋಚಕರು’ (ಲಿಬರೇಟರ್ಸ್) ಎಂದು ಕರೆದುಕೊಳ್ಳುತ್ತಿದ್ದರು. ಸೀಸರನ ಹೆಂಡತಿ ಕ್ಯಾಲ್ಪೂರ್ನಿಯ. ಹಿಂದಿನ ರಾತ್ರಿ ಅವಳಿಗೆ ವಿಪರೀತ ಕೆಟ್ಟ ಕನಸುಗಳು, ನಿದ್ರೆಯೇ ಬಂದಿರ ಲಿಲ್ಲ. ಬೆಳಗಿನ ಜಾವ ಸೀಸರ್ ಸೆನೆಟ್‌ಗೆ ಹೊರಟಾಗ ಅವನನ್ನು ತಡೆದಳು. ‘ಏನೋ ಅನಾಹುತ ಸಂಭವಿಸುವ ಹಾಗಿದೆ.
ಇಂದು ನೀವು ಹೊರಗೆ ಹೋಗಬೇಡಿ’ ಎಂದು ಪರಿಪರಿಯಾಗಿ ಬೇಡಿಕೊಂಡಳು. ಆದರೆ ವೀರಾಧಿ ವೀರನಾದ ಸೀಸರ್ ಹೆಂಡತಿಯ ಎಚ್ಚರಿಕೆ ಹಾಗೂ ಪ್ರಾರ್ಥನೆಯನ್ನು ಸಾರಾಸಗಟಾಗಿ ತಿರಸ್ಕರಿಸಿ ಪ್ಯಾಂಪಿಯೋ ಕಡೆ ಹೊರಟ.
ಸೀಸರ್ ಪ್ಯಾಂಪಿಯೋಗೆ ಬರುವ ಮೊದಲೇ ಎಲ್ಲ ಸೆನೆಟರ್‌ಗಳು ಸೇರಿದ್ದರು. ಲ್ಯೂಸಿಯಸ್ ಟಿಲ್ಲಿಯಸ್ ಸಿಂಬರ್ ಎಂಬ ಸೆನೆಟರ್, ಒಂದು ಬಿನ್ನವತ್ತಳೆಯನ್ನು ಹಿಡಿದು ಸೀಸರನ ಬಳಿಗೆ ಬಂದ, ಅದನ್ನು ನೀಡುವವನಂತೆ ಸೀಸರನನ್ನು ಸಮೀಪಿಸಿದ. ಹತ್ತಿರಕ್ಕೆ ಬಂದವನೇ ಮನವಿ ಪತ್ರವನ್ನು ಸೀಸರನ ಕೈಗೆ ನೀಡುವ ಬದಲು ನೆಲಕ್ಕೆಸೆದು ಸೀಸರನ ಟೋಗವನ್ನು (ಒಂದು ಬಟ್ಟೆಯಿಂದ ತಯಾರಿಸಿದ ಉದ್ದನೆಯ ನಿಲುವಂಗಿ) ಹಿಡಿದು ಕೆಳಕ್ಕೆ ಎಳೆದ.
ಇದನ್ನೂ ಓದಿ: Dr N Someshwara Column: ಎರಡು ಅಲಗಿನ ಖಡ್ಗ ಆಸ್ಪಿರಿನ್ನಿನ ದಶಾವತಾರಗಳು
ಇದು ಅವರ ಪೂರ್ವನಿರ್ಧಾರಿತ ಸೂಚನೆಯಾಗಿತ್ತು. ಕೂಡಲೆ ಪಬ್ಲಿಯಸ್ ಸರ್ವೀಲಿಯಸ್ ಕ್ಯಾಸ್ಕ ತನ್ನ ಚೂರಿಯನ್ನು ಹೊರ ತೆಗೆದ, ಹಾರಿ ಸೀಸರನ ಕುತ್ತಿಗೆಗೆ ಚುಚ್ಚಿದ. ತಕ್ಷಣವೇ ಅಲ್ಲಿದ್ದ ಎಲ್ಲರೂ ತಮ್ಮ ತಮ್ಮ ಎರಡಲುಗಿನ ಚೂರಿಗಳನ್ನು ಹೊರ ತೆಗೆದು ಸೀಸರನ ಮೇಲೆ ಮುಗಿಬಿದ್ದರು. ಸೀಸರನ ದೇಹದ ಮೇಲೆ ಕಂಡಕಂಡಲ್ಲಿ ಚುಚ್ಚಿದರು.
ಸೀಸರನ ಆತ್ಮೀಯ ಮಿತ್ರನಾಗಿದ್ದ ಬ್ರೂಟಸ್ ಸಹ ತನ್ನ ಚೂರಿಯಿಂದ ಸೀಸರನ ತೊಂಡೆಸಂದಿಯ ಬಳಿ ಚುಚ್ಚಿದ. ಸೀಸರ್ ಅಲ್ಲೇ ಕುಸಿದುಬಿದ್ದು ಜೀವವನ್ನು ಬಿಟ್ಟ. ಜೂಲಿಯಸ್ ಸೀಸರನ ವೈದ್ಯ ಆಂಟೀಸ್ಟಿಯಸ್. ಇವನು ಸೀಸರನ ಮರಣೋತ್ತರ ಶವ ಪರೀಕ್ಷೆಯನ್ನು ನಡೆಸಿದ. ಸೀಸರನ ದೇಹದ ಮೇಲೆ ಒಟ್ಟು ೨೩ ತಿವಿದ ಗಾಯಗಳಿರುವುದನ್ನು ದಾಖಲಿಸಿದ.
ಆ 23 ತಿವಿತಗಳಲ್ಲಿ ಯಾವ ತಿವಿತವು ಸೀಸರನ ಸಾವಿಗೆ ಕಾರಣವಾಗಿರಬಹುದು ಎಂದು ತಾರ್ಕಿಕ ವಾಗಿ ಯೋಚಿಸಿದ. ಪ್ರತಿಯೊಂದು ಗಾಯದ ಆಳ, ವಿಸ್ತಾರ ಹಾಗೂ ಮಾಡಿರುವ ಹಾನಿಯನ್ನು ಗಮನಿಸಿದ. ಅವುಗಳಲ್ಲಿ ಒಂದೇ ಒಂದು ಗಾಯವು ಮಾತ್ರ ಸೀಸರನ ಸಾವಿಗೆ ಕಾರಣವಾಗಿದೆ ಎನ್ನುವ ತೀರ್ಮಾನಕ್ಕೆ ಬಂದ. ಎಡ ಭುಜ-ಲಕಾಸ್ತಿ (ಲೆಫ್ಟ್ ಸ್ಕ್ಯಾಪುಲ) ಕೆಳಗೆ ಹಾದು ಹೋಗಿದ್ದ ಚೂರಿಯ ತಿವಿತವು ನೇರವಾಗಿ ಸೀಸರನ ಹೃದಯದ ಮಹಾಧಮನಿಯನ್ನು (ಅಯೋರ್ಟ) ಛೇದಿಸಿತ್ತು.
ಮಹಾಧಮನಿಯು ಛೇದನವಾದರೆ ನಿಮಿಷದಲ್ಲಿ ಇಡೀ ದೇಹದ ರಕ್ತವು ಸೋರಿ ಹೋಗುತ್ತದೆ. ಹಾಗಾಗಿ ಸೀಸರ್ ಈ ಮಾರಣಾಂತಿಕ ತಿವಿತದ ತಕ್ಷಣವೇ ಕುಸಿದು ಮರಣಿಸಿದ. ಆದರೆ ಯಾರ ಚೂರಿಯು ಸೀಸರನ ಸಾವಿಗೆ ಕಾರಣವಾಯಿತು ಎನ್ನುವುದು ಪತ್ತೆಯಾಗಲಿಲ್ಲ.
ಸೀಸರನ ಆತ್ಮೀಯ ಗೆಳೆಯನಾಗಿದ್ದ ಬ್ರೂಟಸ್ ತಿವಿಯಲು ಬಂದಾಗ ‘ಯೂ ಟು ಬ್ರೂಟಸ್’ ಎಂದು ಉದ್ಗಾರವನ್ನು ತೆಗೆಯುತ್ತಾ ಸೀಸರ್ ಮರಣಿಸಿದ ಎನ್ನುವ ಮಾತಿದೆ. ಈ ಮಾತನ್ನು ಸೀಸರನ ಬಾಯಿಂದ ಆಡಿಸಿದವನು ವಿಲಿಯಂ ಷೇಕ್ಸ್‌ಪಿಯರ್. ಸೀಸರನಿಗೆ ಮಾತನಾಡಲು ಅವಕಾಶವೇ ಇಲ್ಲದಂತೆ ಎಲ್ಲ ಸೆನೆಟರುಗಳು ಮುಗಿಬಿದ್ದಿದ್ದರು. ಈ ಬಗ್ಗೆ ಸ್ಯೂಟೋನಿಯಸ್, ಅಪಿಯಾನ್ ಮತ್ತು ಪ್ಲುಟಾರ್ಕ್ ಎಂಬ ಇತಿಹಾಸಕಾರರು ದಾಖಲಿಸಿದ್ದಾರೆ. ಹಾಗಾಗಿ ‘ಬ್ರೂಟಸ್ ಸೀಸರನನ್ನು ತಿವಿದು ಕೊಂದ’ ಎಂಬ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ.
ಆಂಟೀಸ್ಟಿಯಸ್, ಜಗತ್ತಿನ ಮೊತ್ತ ಮೊದಲ ದಾಖಲಿತ ಮರಣೋತ್ತರ ಶವಪರೀಕ್ಷೆಯನ್ನು ನಡೆಸಿದ. ಒಟ್ಟು ಗಾಯಗಳ ಸಂಖ್ಯೆಯನ್ನು ಲೆಕ್ಕ ಹಾಕಿ, ಯಾವ ಗಾಯವು ಹೇಗೆ ಸೀಸರನ ಸಾವಿಗೆ ಕಾರಣ ವಾಯಿತು ಎಂದು ವಿವರಿಸಿದ. ಜತೆಗೆ ಬ್ರೂಟಸನ ತಿವಿತ ಸೀಸರನ ಸಾವಿಗೆ ಕಾರಣವಲ್ಲ ಎನ್ನುವು ದನ್ನೂ ನಿರೂಪಿಸಿದ.
ಭಾರತ: ಗಾಯಗಳ ಕ್ರಮಬದ್ಧ ಅಧ್ಯಯನವನ್ನು ಮಾಡುವ ಅಗತ್ಯವನ್ನು ಆಯುರ್ವೇದವು ಸ್ಪಷ್ಟವಾಗಿ ವಿವರಿಸಿದೆ. ಸುಮಾರು ಕ್ರಿ.ಪೂ.೬೦೦ರಲ್ಲಿ ರಚನೆಯಾಗಿರಬಹುದಾದ ಸುಶ್ರುತ ಸಂಹಿತೆ ಯು, ಒಂದು ಸಾವಿನ ಪ್ರಕರಣವನ್ನು ವಿಶ್ಲೇಷಿಸಬೇಕಾದ ಅಗತ್ಯವನ್ನು ಎತ್ತಿ ಹೇಳುತ್ತದೆ. ರಾಜನು ಕೇಳಬಹುದಾದ ಈ ಕೆಳಕಂಡ ಪ್ರಶ್ನೆಗಳಿಗೆ ವೈದ್ಯರು ಉತ್ತರವನ್ನು ಕೊಡಬೇಕಾಗುತ್ತದೆ.
೧. ಸಾವು ಸಹಜವಾಗಿ ಆಗಿದೆಯೇ ಅಥವಾ ಅಸಹಜವಾಗಿ ಆಗಿದೆಯೇ?
೨. ಅಸಹಜ ಸಾವಿಗೆ ಕಾರಣವೇನು? ಗಾಯಗಳು? ವಿಷಪ್ರಾಶನ? ವಿಷಪ್ರಾಣಿಗಳು? ಇತರೆ?
೩. ಗಾಯಗಳು ಹೇಗೆ ಆದವು? ಆಯುಧಗಳಿಂದಲೇ? ಪ್ರಾಣಿಗಳಿಂದಲೇ?
೪. ಇದೊಂದು ಕೊಲೆಯೆ? ಆತ್ಮಹತ್ಯೆಯೆ? ಅಪಘಾತವೆ?
ಸುಶ್ರುತ ಸಂಹಿತೆಯ ಶರೀರ ಸ್ಥಾನ 8.12ರಲ್ಲಿ ಪ್ರಾಥಮಿಕವಾಗಿ ಆರು ನಮೂನೆಯ ಗಾಯಗಳಾಗುವ ಸಾಧ್ಯತೆಯನ್ನು ವರ್ಣಿಸುತ್ತದೆ. ‘ಷಟ್ ವಿದ್ಯಂತೆ ಭಗ್ನ-ಛಿನ್ನ -ಪ್ರಚ್ಛನ್ನ-ವಿದ್ಧ-ಕ್ಷತ-ಭಿನ್ನಾಃ|’ ಎನ್ನುವ ಸಾಲು ‘ಮುರಿದ, ಛೇದಿಸಿದ, ಕತ್ತರಿಸಿದ, ಗುಪ್ತವಾಗಿರುವ, ಇರಿದ/ಚುಚ್ಚಿದ, ಬಗೆದ’ ಎಂದು ಆರು ಬಗೆಯ ಗಾಯಗಳನ್ನು ಗುರುತಿಸಿ ವರ್ಗೀಕರಿಸುತ್ತದೆ.
ಯಾವ ಆಯುಧದಿಂದ ಹಲ್ಲೆಯನ್ನು ಮಾಡಲಾಗಿದೆಯೋ, ಆ ಆಯುಧದ ವಿವರಗಳೆಲ್ಲ ಗಾಯ ದಲ್ಲಿ ಪ್ರತಿಬಿಂಬಿತವಾಗಿರುತ್ತವೆ. ಹಾಗಾಗಿ ಗಾಯದ ಅಂಚು, ಉದ್ದ, ಅಗಲ, ಆಳ, ಆಯುಧ ಪ್ರಯೋಗದ ದಿಕ್ಕು ಇತ್ಯಾದಿಗಳನ್ನು ಗಮನಿಸಿ ಯಾವ ಯಾವ ಆಯುಧಗಳನ್ನು ಪ್ರಯೋಗಿಸಿ ಕೊಲೆಯನ್ನು ಮಾಡಲಾಗಿದೆ ಎನ್ನುವುದನ್ನು ಗುರುತಿಸಲು ಕಲಿಸುತ್ತದೆ.
ಇವುಗಳ ಜತೆಗೆ ಸಾವು ಹಠಾತ್ತನೇ ಸಂಭವಿಸಿತ್ತೇ ಅಥವಾ ಸಾಕಷ್ಟು ನರಳಿದ ನಂತರ ಸಾವು ಬಂದಿತೆ ಎನ್ನುವುದನ್ನು ವಿವರಿಸಬೇಕು ಎನ್ನುತ್ತದೆ. ಮೈಮೇಲೆ ಕಾಣುವ ಯಾವುದೇ ಗಾಯಗಳು ಇರದಿದ್ದಲ್ಲಿ, ಉಸಿರು ಕಟ್ಟಿಸುವುದರ ಮೂಲಕ ಸಾವು ಸಂಭವಿಸಿದೆಯೇ ಅಥವಾ ವಿಷಪ್ರಾಶನದಿಂದ ಸಾವುಂಟಾಯಿತೇ ಎನ್ನುವುದನ್ನು ವಿವರಿಸಬೇಕಾಗಿತ್ತು.
ಅದಕ್ಕಾಗಿ ನಾನಾ ವಿಷಪ್ರಾಶನಗಳ ಬಗ್ಗೆ ಬೆಳಕನ್ನು ಚೆಲ್ಲುವ ‘ಅಗದತಂತ್ರ’ ಎಂಬ ಪ್ರತ್ಯೇಕ ವಿಭಾಗ ವನ್ನು ಆಯುರ್ವೇದವು ಬೋಧಿಸುತ್ತಿತ್ತು. ಕೌಟಿಲ್ಯನ ಅರ್ಥಶಾಸ್ತ್ರವು (ಕ್ರಿ.ಪೂ.300) ಶವಾಧ್ಯಯನ, ಮರಣ ಸಂಭವಿಸಿದ ಸ್ಥಳದ ಮಹಜರು, ಸಂಬಂಧಿಸಿದ ವ್ಯಕ್ತಿಗಳ ವಿಚಾರಣೆ ಹಾಗೂ ಅಗತ್ಯ ಬಿದ್ದರೆ ಗೂಢಚಾರರ ಮೂಲಕ ರಹಸ್ಯವಾಗಿ ಮಾಹಿತಿಯನ್ನು ಸಂಗ್ರಹಿಸುವ ಕ್ರಮವನ್ನು ವಿವರಿಸುತ್ತದೆ.
ಮನುಸ್ಮೃತಿ (ಕ್ರಿ.ಪೂ.100) ಹಾಗೂ ನಾರದ ಸ್ಮೃತಿಗಳು (ಕ್ರಿ.ಪೂ.100) ಸಹ ಅಸಹಜ ಸಾವಿನ ಕಾರಣ ವನ್ನು ತಿಳಿಯಲು ಅಧ್ಯಯನವನ್ನು ಮಾಡಬೇಕು ಎಂದು ಹೇಳುತ್ತವೆ. ವಿದೇಶಗಳಲ್ಲಿ ಬೆರಳಚ್ಚಿನ ಮೂಲಕ ವ್ಯಕ್ತಿಯನ್ನು ಗುರುತಿಸುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಹೆಬ್ಬೆಟ್ಟಿನ ಅಚ್ಚನ್ನು ಗುರುತನ್ನಾಗಿ ಭಾರತದಲ್ಲಿ ಬಳಸುತ್ತಿದ್ದರು.
ಅಕ್ಷರಜ್ಞಾನವಿಲ್ಲದವರು ತಮ್ಮ ಒಪ್ಪಿಗೆಯನ್ನು ಸೂಚಿಸಲು ಬೆರಳಚ್ಚನ್ನು ಇಂದಿಗೂ ಬಳಸುತ್ತಾರೆ ಎನ್ನುವುದನ್ನು ನಾವು ಸಾಂದರ್ಭಿಕವಾಗಿ ನೆನಪಿಸಿಕೊಳ್ಳಬಹುದು. ಹಾಗೆಯೇ ಬೆರಳಚ್ಚುಗಳ ವೈಜ್ಞಾನಿಕ ಅಧ್ಯಯನವೂ ಬ್ರಿಟಿಷರ ಕಾಲದ ಬಂಗಾಳದಲ್ಲಿ ನಡೆಯಿತು ಎನ್ನುವ ದಾಖಲೆಯನ್ನು ಸ್ಮರಿಸಿಕೊಳ್ಳಬಹುದು. ಆಂಬ್ರಾಯಿಸ್ ಪ್ಯಾರೆ: ಪಾಶ್ಚಾತ್ಯ ಜಗತ್ತಿನಲ್ಲಿ ಗಾಯಗಳ ಬಗ್ಗೆ ಮೊದಲ ಬಾರಿಗೆ ಕ್ರಮಬದ್ಧವಾದ ಅಧ್ಯಯನವನ್ನು ಮಾಡಿದವನು ಫ್ರಾನ್ಸ್ ದೇಶದ ಕ್ಷೌರಿಕ-ಶಸವೈದ್ಯ ಆಂಬ್ರಾಯಿಸ್ ಪ್ಯಾರೆ (1510-1590). ಇವನು ಗಾಯಗಳ ವರ್ಗೀಕರಣವನ್ನು ಮಾಡಿ ಅದನ್ನು ಕ್ರಮಬದ್ಧವಾಗಿ ದಾಖಲಿಸಿದ.
ಪ್ಯಾರೆ ಕಾಲಕ್ಕೆ ಸಾಂಪ್ರದಾಯಿಕ ಗಾಯಗಳ ಅಧ್ಯಯನದ ಜತೆಯಲ್ಲಿ ಬಂದೂಕಿನ ಗುಂಡಿನಿಂದಾ ಗುವ ಗಾಯಗಳು ಸೇರಿಕೊಂಡಿದ್ದವು. ಪ್ಯಾರೆ ಯುದ್ಧರಂಗದಲ್ಲಿ ಗಾಯಾಳು ಯೋಧರ ಸೇವೆಯಲ್ಲಿ ತೊಡಗಿದ್ದ. ಅಂದಿನ ದಿನಗಳಲ್ಲಿ ಒಂದು ನಂಬಿಕೆಯಿತ್ತು. ಬಂದೂಕಿನ ಗುಂಡುಗಳಲ್ಲಿರುವ ಸಿಡಿಮದ್ದು ವಿಷಮಯವಾಗಿರುತ್ತವೆ.
ಗುಂಡು ಶರೀರಕ್ಕೆ ತಾಗಿದ ಕೂಡಲೇ, ಗುಂಡಿನಲ್ಲಿರುವ ವಿಷವು ದೇಹದಾದ್ಯಂತ ಪಸರಿಸಿ ಯೋಧ ರನ್ನು ಕೊಲ್ಲುತ್ತದೆ ಎನ್ನುವುದು ಆ ನಂಬಿ ಕೆಯ ಸಾರಾಂಶವಾಗಿತ್ತು. ಆಗ ವಿಷ ಪ್ರಭಾವವನ್ನು ಕಡಿಮೆ ಮಾಡಲು ಕುದಿಯುವ ಎಣ್ಣೆಯನ್ನು ಗಾಯದ ಮೇಲೆ ಸುರಿಯುತ್ತಿದ್ದರು. ಒಂದು ಕಡೆ ಗುಂಡಿನಿಂದಾದ ತೂರು ಗಾಯ, ಮತ್ತೊಂದು ಕಡೆ ಕಾದ ಎಣ್ಣೆಯಿಂದಾದ ಸುಟ್ಟ ಗಾಯ-ಎರಡೂ ಸೇರಿಕೊಂಡು ಸೈನಿಕರನ್ನು ತ್ವರಿತವಾಗಿ ಕೊಲ್ಲುತ್ತಿದ್ದವು.
ಇದನ್ನು ಕಂಡ ಪ್ಯಾರೆಗೆ ಬೇಸರವಾಯಿತು. ಒಂದು ದಿನ ಅವನ ಶಿಬಿರದಲ್ಲಿ ಎಣ್ಣೆಯ ಕೊರತೆ ಯುಂಟಾಯಿತು. ಆಗ ಅವನು ಗಾಯಗಳನ್ನು ಸ್ವಚ್ಛಗೊಳಿಸಿದ. ಮೊಟ್ಟೆಯ ಹಳದಿ ಭಾಗಕ್ಕೆ ಗುಲಾಬಿ ತೈಲವನ್ನು ಬೆರೆಸಿದ. ಈ ಮಿಶ್ರಣಕ್ಕೆ ಟರ್ಪೆಂಟೈನ್ ಹಾಕಿ ತನ್ನದೇ ಆದ ಹೊಸ ನಮೂನೆ ಯ ಔಷಧವನ್ನು ಸೃಜಿಸಿ ಗಾಯಕ್ಕೆ ಲೇಪಿಸಿದ.
ಇದರಿಂದ ಗುಂಡಿನ ಗಾಯದ ನೋವು ಕಡಿಮೆಯಾಯಿತು. ಜತೆಗೆ ಆ ಯೋಧನು ಸಾಯದೇ ಬೇಗ ಚೇತರಿಸಿಕೊಂಡ. ಹಾಗಾಗಿ ಅವನು ‘ಗುಂಡಿನ ಗಾಯಗಳು ನಂಜುಕಾರಕವಲ್ಲ; ಅವು ಚಿಮ್ಮುವ ಗುಂಡಿನಿಂದ ಆಗಿರುವ ಭೌತಿಕ ಗಾಯಗಳು ಮಾತ್ರ’ ಎಂದು ಘೋಷಿಸಿದ. ಹೀಗೆ ಪ್ಯಾರೆ, ಗುಂಡಿ ನಿಂದಾದ ಗಾಯಗಳ ಬಗ್ಗೆ ಮಧ್ಯಯುಗದಲ್ಲಿನ ಒಂದು ದೊಡ್ಡ ಮೌಢ್ಯವನ್ನು ನಿವಾರಿಸಿದ.
ಯುದ್ಧಗಳಲ್ಲಿ ಆಗುತ್ತಿದ್ದ ವಿವಿಧ ನಮೂನೆಯ ಗಾಯಗಳನ್ನು ಪ್ಯಾರೆ ವರ್ಗೀಕರಿಸಿದ. ಯುರೋಪಿ ನಲ್ಲಿ ಈ ರೀತಿಯ ವರ್ಗೀಕರಣವನ್ನು ಮೊದಲ ಬಾರಿಗೆ ಪ್ಯಾರೆ ಮಾಡಿದ: ಸೀಳು ಆಯುಧ (ಕಟಿಂಗ್ ವೆಪನ್): ಸೀಳು ಗಾಯವನ್ನು ಉಂಟುಮಾಡುವ ಖಡ್ಗವೇ ಮುಂತಾದ ಆಯುಧಗಳಿಂದ ಗಾಯಗಳ ಅಂಚು ನೇರವಾಗಿ, ನಯವಾಗಿ ಹಾಗೂ ತಿದ್ದಿತೀಡಿದಂತೆ ಇರುತ್ತವೆ.
ಇರಿಯುವ ಆಯುಧ (ಪಿಯರ್ಸಿಂಗ್ ವೆಪನ್): ಇರಿವ ಗಾಯ ಅಥವಾ ಚುಚ್ಚು ಗಾಯಕ್ಕೆ ಭರ್ಜಿ ಯಂಥ ಆಯುಧಗಳು ಕಾರಣವಾಗಿರುತ್ತವೆ. ಗಾಯದ ಹೊರವ್ಯಾಪ್ತಿ ಕಿರಿದಾಗಿರುತ್ತದೆ, ಆದರೆ ಗಾಯದ ಒಳವ್ಯಾಪ್ತಿ ಆಳವಾಗಿರುತ್ತದೆ.
ಮೊಂಡು ಆಯುಧಗಳು (ಬ್ಲಂಟ್ ವೆಪನ್ಸ್): ಅಂದರೆ ದೊಣ್ಣೆ, ಗದೆ, ದಂಡ, ಒನಕೆ, ಕಬ್ಬಿಣದ ಸರಳು ಅಥವಾ ಕಲ್ಲುಗಳನ್ನು ಆಕ್ರಮಣದಲ್ಲಿ ಬಳಸಿದಾಗ ಮೂಗೇಟು ಬೀಳುತ್ತವೆ, ಜಜ್ಜು ಗಾಯ ಗಳಾಗುತ್ತವೆ ಇಲ್ಲವೇ ಛಿದ್ರಗಾಯ ಗಳಾಗುತ್ತವೆ. ಇಂಥ ಗಾಯಗಳ ಅಂಚು ಹರಿದು ಛಿದ್ರವಾಗಿರುತ್ತವೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಯಾವುದೇ ಅಸಹಜ ಮರಣವು ಸಂಭವಿಸಿದರೆ ಪ್ಯಾರೆಗೆ ಹೇಳಿ ಕಳುಹಿಸುತ್ತಿತ್ತು. ಸಂಭವಿಸಿರುವ ಅಸಹಜ ಮರಣಕ್ಕೆ ಕಾರಣವನ್ನು ಪ್ಯಾರೆ ಓರ್ವ ತಜ್ಞನಾಗಿ ನ್ಯಾಯಾಲಯಕ್ಕೆ ಸಮಗ್ರವಾಗಿ ವಿವರಿಸುತ್ತಿದ್ದ. ಆಗ ನ್ಯಾಯಾಲಯವು ನಿಗದಿತ ಅಸಹಜ ಸಾವು ಕೊಲೆಯೋ, ಆತ್ಮಹತ್ಯೆಯೋ ಅಥವಾ ಅಪಘಾತದಿಂದ ಸಂಭವಿಸಿದೆಯೋ ಎನ್ನುವ ನಿರ್ಣಯಕ್ಕೆ ಸುಲಭವಾಗಿ ಬರುತ್ತಿತ್ತು.
ಇಂದಿನ ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಗಾಂiiಗಳಿಗೆ ಸಂಬಂಧಿಸಿದಂತೆ ನಡೆಸುವ ಎಲ್ಲ ರೀತಿಯ ಅಧ್ಯಯನ ಮತ್ತು ಚಿಕಿತ್ಸೆಗಳಿಗೆ ಮೂಲವೇ ಪ್ಯಾರೆಂii ಸಂಶೋಧನೆ ಹಾಗೂ ಅಧ್ಯಂiiನದ ಜ್ಞಾನ. ಗಾಯಗಳು ಕೇವಲ ಗಾಂiiಗಳಲ್ಲ. ಅವು ಹಿಂಸೆ ನಡೆದುದರ ಬಗ್ಗೆ ಸಾಕ್ಷ್ಯವನ್ನು ನುಡಿಯುವ ಜೈವಿಕ ಸಹಿಗಳು (ಬಯಲಾಜಿಕಲ್ ಸಿಗ್ನೇಚರ್ಸ್ ಆಫ್ ವಯಲೆನ್ಸ್) ಎಂದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಯಾವುದೇ ಅಸಹಜ ಮರಣವು ಸಂಭವಿಸಿದರೆ ಪ್ಯಾರೆಗೆ ಹೇಳಿಕಳುಹಿಸುತ್ತಿತ್ತು.
ಸಂಭವಿಸಿರುವ ಅಸಹಜ ಮರಣಕ್ಕೆ ಕಾರಣವನ್ನು ಪ್ಯಾರೆ ಓರ್ವ ತಜ್ಞನಾಗಿ ನ್ಯಾಯಾಲಯಕ್ಕೆ ಸಮಗ್ರವಾಗಿ ವಿವರಿಸುತ್ತಿದ್ದ. ಆಗ ನ್ಯಾಯಾಲಯವು ನಿಗದಿತ ಅಸಹಜ ಸಾವು ಕೊಲೆಯೋ, ಆತ್ಮಹತ್ಯೆಯೋ ಅಥವಾ ಅಪಘಾತದಿಂದ ಸಂಭವಿಸಿದೆಯೋ ಎನ್ನುವ ನಿರ್ಣಯಕ್ಕೆ ಸುಲಭವಾಗಿ ಬರುತ್ತಿತ್ತು. ಇಂದಿನ ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಗಾಯಗಳಿಗೆ ಸಂಬಂಧಿಸಿದಂತೆ ನಡೆಸುವ ಎಲ್ಲ ರೀತಿಯ ಅಧ್ಯಯನ ಮತ್ತು ಚಿಕಿತ್ಸೆಗಳಿಗೆ ಮೂಲವೇ ಪ್ಯಾರೆಯ ಸಂಶೋಧನೆ ಹಾಗೂ ಅಧ್ಯಯನದ ಜ್ಞಾನ. ಗಾಯಗಳು ಕೇವಲ ಗಾಯಗಳಲ್ಲ. ಅವು ಹಿಂಸೆ ನಡೆದುದರ ಬಗ್ಗೆ ಸಾಕ್ಷ್ಯವನ್ನು ನುಡಿಯುವ ಜೈವಿಕ ಸಹಿಗಳು (ಬಯಲಾಜಿಕಲ್ ಸಿಗ್ನೇಚರ್ಸ್ ಆಫ್ ವಯಲೆನ್ಸ್) ಎಂದ.
ತಂದೂರ್ ಮರ್ಡರ್ ಕೇಸ್: ಸುಶೀಲ್ ಶರ್ಮ ಎಂಬಾತ ದಿಲ್ಲಿಯಲ್ಲಿನ ಓರ್ವ ರಾಜಕೀಯ ಯುವನಾಯಕ. ಆತನ ಮಡದಿ ನೈನಾ ಸಾಹ್ನಿ. ಆಕೆ ಅನೈತಿಕ ಸಂಬಂಧದಲ್ಲಿ ನಿರತಳಾಗಿದ್ದಾಳೆ ಎಂದು ಸುಶೀಲ್ ಶರ್ಮನಿಗೆ ಗುಮಾನಿ. ಒಂದು ರಾತ್ರಿ ಇಬ್ಬರಿಗೂ ಮಾತಿಗೆ ಮಾತು ಬೆಳೆಯಿತು. ಕೂಡಲೇ ಶರ್ಮ ತನ್ನ ಬಳಿಯಿದ್ದ ಪರವಾನಗಿಯಳ್ಳ ರಿವಾಲ್ವರಿನಿಂದ ಎರಡು ಸಲ ಗುಂಡನ್ನು ಹಾರಿಸಿದ. ನೈನಾ ಸ್ಥಳದಲ್ಲಿಯೇ ಸತ್ತಳು. ಆಕೆಯ ಶವವನ್ನು ಕಾರಿನಲ್ಲಿ ಹಾಕಿಕೊಂಡು ತನ್ನ ‘ಬಗಿಯಾ ಬಾರ್ಬಿಕ್ಯು’ ರೆಸ್ಟೋರೆಂಟಿಗೆ ಬಂದ. ಅಲ್ಲಿ ತಂದೂರ್ ಒಲೆಯಿತ್ತು.
ರೆಸ್ಟೋರೆಂಟಿನ ಮ್ಯಾನೇಜರ್ ಕೇಶವ ಕುಮಾರ್ ಸಹಾಯದಿಂದ ಆಕೆಯ ದೇಹವನ್ನು ತಂದೂರ್ ಒಲೆಯಲ್ಲಿ ಹಾಕಿ ಸುಟ್ಟ. ಒಲೆಯಿಂದ ಜ್ವಾಲೆಗಳು ಮೇಲೇರಿದವು. ಎಲ್ಲೆಡೆ ದಟ್ಟ ಹೊಗೆ ಆವರಿಸಿತು. ಗಸ್ತಿನಲ್ಲಿದ್ದ ಒಬ್ಬ ಪೊಲೀಸ್ ಪೇದೆಯು ಈ ಹೊಗೆಯನ್ನು ನೋಡಿ ಸ್ಥಳಕ್ಕೆ ಬಂದ. ಅವನಿಗೆ ಮನುಷ್ಯನ ದೇಹವನ್ನು ಸುಡುತ್ತಿರುವುದು ತಿಳಿಯಿತು. ಕೂಡಲೇ ಸಹವರ್ತಿ ಪೊಲೀಸರನ್ನು ಕರೆಯಿಸಿದ. ಸುಶೀಲ್ ಶರ್ಮ ರಾಜಕೀಯವಾಗಿ ಪ್ರಬಲನಾಗಿದ್ದ. ಮರಣೋತ್ತರ ಶವಪರೀಕ್ಷೆಯ ಫಲಿತಾಂಶವನ್ನು ಬದಲಾಯಿಸಿದ. ತನ್ನ ಹೆಂಡತಿಯ ಕೊಲೆಯ ಆರೋಪದಿಂದ ಬಿಡುಗಡೆಯನ್ನು ಪಡೆದ. ಆದರೆ ಓರ್ವ ಹಿರಿಯ ಪೊಲೀಸ್ ಅಧಿಕಾರಿಗೆ ಗುಮಾನಿ ಬಂದಿತು. ಅವರು ಕೂಡಲೇ ನ್ಯಾಯಾಲಯದ ಮೊರೆಹೋದರು. ನ್ಯಾಯಾಲಯವು ಎರಡನೆಯ ಬಾರಿ ಶವಪರೀಕ್ಷೆಯನ್ನು ನಡೆಸಲು ಅನುಮತಿಯನ್ನು ನೀಡಿತು.
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಡಾ.ಟಿ.ಡಿ.ಡೋಗ್ರ ಅವರ ನೇತೃತ್ವದಲ್ಲಿ ಮೂವರು ತಜ್ಞರ ಸಮಿತಿಯನ್ನು ನೇಮಿಸಿತು. ತಜ್ಞರು ನೈನಾಳ ರುಂಡವನ್ನು ಮರು ಅಧ್ಯಯನ ಮಾಡಿದರು. ಒಂದು ಗುಂಡು ತಲೆಯ ಮೂಲಕ ಹಾದುಹೋಗಿದ್ದರೆ, ಮತ್ತೊಂದು ಗುಂಡು ಕುತ್ತಿಗೆಯ ಮೂಲಕ ಒಳಹೊಕ್ಕಿತ್ತು. ಈ ಎರಡು ಗುಂಡುಗಳ ಕಾರಣ ನೈನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು.
ಗುಂಡುಗಳನ್ನು ಹೊರತೆಗೆದರು. ಅವನ್ನು ಶರ್ಮನ 0.32 ಬೋರ್ ರಿವಾಲ್ವರಿನ ಗುಂಡುಗಳ ಜತೆ ಹೋಲಿಸಿದರು. ಅವು ಶರ್ಮನ ರಿವಾಲ್ವರಿನಿಂದ ಬಂದ ಗುಂಡುಗಳೇ ಎಂದು ರುಜುವಾಯಿತು. ದೇಹವನ್ನು ಸುಟ್ಟಿದ್ದರೂ, ತಲೆ ಹಾಗೂ ಕುತ್ತಿಗೆಯಲ್ಲಿ ಆಗಿದ್ದ ಗಾಯಗಳ ಸ್ವರೂಪ ಹಾಗೂ ಗುಂಡು ಗಳ ಆಧಾರದ ಮೇಲೆ ಶರ್ಮನೇ ಕೊಲೆಗಾರ ಎನ್ನುವುದು ರುಜುವಾತಾಯಿತು.
ನೈನಾಳ ಅಪರಾಧಿ ಚಾಪೆ ಕೆಳಗೆ ತೂರಿದರೆ, ವಿಜ್ಞಾನವು ರಂಗೋಲಿ ಕೆಳಗೆ ತೂರಿ ಅಪರಾಧಿಯನ್ನು ಹಿಡಿಯಿತು. ಹೀಗೆ ಅಪರಾಧಿಯನ್ನು ನಿಖರವಾಗಿ ಪತ್ತೆ ಹಚ್ಚುವಷ್ಟು ಸಶಕ್ತವಾಗಿ ಬೆಳೆದಿದೆ ವಿಜ್ಞಾನ...