Dr Sadhanashree Column: ಆಯುರ್ವೇದದ ಕುರಿತಾದ ಆತ್ಮಪರಿಶೀಲನೆ
ಪ್ರತಿಯೊಬ್ಬರೂ ತಾವು ಅನುಭವಿಸಿದ ಭಾಗವನ್ನು ಆಧರಿಸಿ ತಮ್ಮ ಮಾತೇ ಸತ್ಯವೆಂದು ನಂಬುತ್ತಾರೆ. ಆದರೆ ವಾಸ್ತವದಲ್ಲಿ ಆನೆ ಎಂದರೆ ಅವರ ಅನುಭವಕ್ಕಿಂತ ಬಹಳ ದೊಡ್ಡದು, ಸಮಗ್ರವಾದದ್ದು. ಭಾಗಶಃ ಸತ್ಯವನ್ನು ಸಂಪೂರ್ಣ ಸತ್ಯವೆಂದು ಭಾವಿಸಿದಾಗ ಉಂಟಾಗುವ ಗೊಂದಲಕ್ಕೆ ಈ ಕಥೆ ಅತ್ಯು ತ್ತಮ ಉದಾಹರಣೆ.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಆಯುರ್ವೇದಕ್ಕೆ ಯಾವುದೇ ಅಪ್‌ಡೇಟ್ ಅಗತ್ಯವಿಲ್ಲ, ಅದರ ಅಗತ್ಯವಿರುವುದು ನಮ್ಮ ಮನೋ ಭಾವಕ್ಕೆ. ಅದನ್ನು ಬೇಕಿದ್ದರೆ ಒಂಥರಾ ಸಾಫ್ಟ್ʼವೇರ್ ಅಪ್‌ಡೇಟ್ ಅಂದುಕೊಳ್ಳಿ. ಪೂರ್ವಗ್ರಹಗಳನ್ನು ಬಿಟ್ಟು ಆಯುರ್ವೇದವನ್ನು ಜೀವನದ ಭಾಗವಾಗಿ ಸ್ವೀಕರಿಸಿದಾಗ ಮಾತ್ರ, ‘ಅದು ಕೇವಲ ಚಿಕಿತ್ಸೆಯಲ್ಲ, ಸಮತೋಲಿತ ಬದುಕಿನ ಮಾರ್ಗದರ್ಶಿ’ ಎಂಬ ಸತ್ಯ ನಮ್ಮ ಮುಂದೆ ತೆರೆದುಕೊಳ್ಳುತ್ತದೆ.
ಅಂಧರು ಮತ್ತು ಆನೆಯ ಕಥೆಯು ಆಯುರ್ವೇದಕ್ಕೆ ಅನ್ವಯಿಸುವ ಒಂದು ಪಾಠ. ಒಮ್ಮೆ ನಾಲ್ವರು ಅಂಧರು ಆನೆಯನ್ನು ಅನುಭವಕ್ಕೆ ತಂದುಕೊಳ್ಳಲು ಹೋಗುತ್ತಾರೆ. ಪ್ರತಿಯೊಬ್ಬರೂ ಆನೆಯ ವಿಭಿನ್ನ ಭಾಗವನ್ನು ಮುಟ್ಟುತ್ತಾರೆ. ಒಬ್ಬನು ಕಾಲನ್ನು ಮುಟ್ಟಿ, “ಆನೆ ಅಂದರೆ ಕಂಬದಂತೆ ಇದೆ" ಎನ್ನುತ್ತಾನೆ. ಮತ್ತೊಬ್ಬನು ಬಾಲವನ್ನು ಹಿಡಿದು, “ಇಲ್ಲ, ಆನೆ ಹಗ್ಗದಂತೆ ಇದೆ" ಎಂದು ಹೇಳುತ್ತಾನೆ.
ಮೂರನೆಯವನು ಕಿವಿಯನ್ನು ಮುಟ್ಟಿ, “ನೀವು ಹೇಳುವುದೆಲ್ಲ ತಪ್ಪು, ಆನೆ ಚಪ್ಪಟೆಯಾದ ಎಲೆ ಯಂತಿದೆ" ಎಂದು ವಾದಿಸುತ್ತಾನೆ. ನಾಲ್ಕನೆಯವನು ಸೊಂಡಿಲನ್ನು ಮುಟ್ಟಿ, “ಆನೆ ದೊಡ್ಡ ಕೊಳವೆಯಂತಿದೆ" ಎಂದು ತನ್ನದೇ ಸತ್ಯವನ್ನು ಪ್ರತಿಪಾದಿಸುತ್ತಾನೆ.
ಪ್ರತಿಯೊಬ್ಬರೂ ತಾವು ಅನುಭವಿಸಿದ ಭಾಗವನ್ನು ಆಧರಿಸಿ ತಮ್ಮ ಮಾತೇ ಸತ್ಯವೆಂದು ನಂಬು ತ್ತಾರೆ. ಆದರೆ ವಾಸ್ತವದಲ್ಲಿ ಆನೆ ಎಂದರೆ ಅವರ ಅನುಭವಕ್ಕಿಂತ ಬಹಳ ದೊಡ್ಡದು, ಸಮಗ್ರ ವಾದದ್ದು. ಭಾಗಶಃ ಸತ್ಯವನ್ನು ಸಂಪೂರ್ಣ ಸತ್ಯವೆಂದು ಭಾವಿಸಿದಾಗ ಉಂಟಾಗುವ ಗೊಂದಲಕ್ಕೆ ಈ ಕಥೆ ಅತ್ಯುತ್ತಮ ಉದಾಹರಣೆ.
ಸ್ನೇಹಿತರೇ, ಇದೇ ಸ್ಥಿತಿಯು ಇಂದು ಆಯುರ್ವೇದದ ವಿಷಯದಲ್ಲೂ ಕಂಡುಬರುತ್ತಿದೆ. ಆಯು ರ್ವೇದದ ಒಂದು ಅಂಶವನ್ನು ನೋಡಿ, ಒಂದು ಅನುಭವವನ್ನು ಹಿಡಿದುಕೊಂಡು, ಅಥವಾ ಒಂದು ತಪ್ಪು ಕಲ್ಪನೆಯನ್ನು ನಂಬಿಕೊಂಡು, ಅದೇ ಆಯುರ್ವೇದದ ಸಂಪೂರ್ಣ ಸಾರಾಂಶ ಎಂದು ಭಾವಿಸಿಕೊಂಡು ನಾವು ಬದುಕುತ್ತಿದ್ದೇವೆ. ಹೀಗೆ ಬೇರೆಬೇರೆ ಮಿಥ್ಯೆಗಳನ್ನೇ ಸತ್ಯವೆಂದು ನಂಬಿಕೊಂಡಾಗ, ಆಯುರ್ವೇದದ ಪೂರ್ಣತೆ, ಆಳ ಮತ್ತು ವೈಶಾಲ್ಯ ನಮ್ಮ ದೃಷ್ಟಿಗೆ ಬೀಳುವುದೇ ಇಲ್ಲ.
ಇದನ್ನೂ ಓದಿ: Dr Sadhanashree Column: ಆಯರ್ವೇದದ ಹತ್ತು ಆರೋಗ್ಯ ಸೂತ್ರಗಳು
ಒಂದು ಮಿಥ್ಯೆ, ಒಂದು ಅನುಭವ, ಒಂದು ಅಪೂರ್ಣ ತಿಳಿವಳಿಕೆ- ಇವನ್ನೇ ಆಯುರ್ವೇದ ಎಂದು ನಿರ್ಣಯಿಸಿದರೆ, ನಾವು ಎಂದಿಗೂ ಆಯುರ್ವೇದದ ಒಳಗೆ ಪ್ರವೇಶಿಸಲಾಗದು. ಆದ್ದರಿಂದ ಆಯು ರ್ವೇದವನ್ನು ಅದರ ಸಂಪೂರ್ಣತೆಯಲ್ಲಿ ಅರಿಯುವ ಮೊದಲು, ನಮ್ಮಲ್ಲಿ ಗಟ್ಟಿಯಾಗಿ ನೆಲೆಸಿರುವ ಕೆಲವು ಸಾಮಾನ್ಯ ತಪ್ಪು ಕಲ್ಪನೆಗಳನ್ನು ಪರಿಶೀಲಿಸುವುದು ಅಗತ್ಯ.
ಈ ಹಿನ್ನೆಲೆಯಲ್ಲಿ, ಆಯುರ್ವೇದದ ಕುರಿತು ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಕೆಲವು ಸಾಮಾನ್ಯ ಮಿಥ್ಯೆಗಳನ್ನು ಇಲ್ಲಿ ನಿಮ್ಮ ಮುಂದಿಡಲು ಇಷ್ಟಪಡುತ್ತೇನೆ.
ಆಯುರ್ವೇದದ ಕುರಿತು ಇರುವ ಸಾಮಾನ್ಯ ತಪ್ಪು ಕಲ್ಪನೆಗಳು: ಸತ್ಯವನ್ನು ಅರಿಯುವ ಅವಶ್ಯಕತೆ ಇಂದಿನ ವೇಗದ ಬದುಕಿನಲ್ಲಿ ಆರೋಗ್ಯವು ದೊಡ್ಡ ಸವಾಲಾಗಿ ಪರಿಣಮಿಸಿದೆ. ಆಧುನಿಕ ಜೀವನ ಶೈಲಿ ತಂದ ಅನೇಕ ಹೊಸ ಸಮಸ್ಯೆಗಳ ನಡುವೆ ಜನರು ಮತ್ತೆ ಆಯುರ್ವೇದದ ಕಡೆ ಮುಖ ಮಾಡುತ್ತಿರುವುದು ಗಮನಾರ್ಹ. ಆದರೆ ಆಯುರ್ವೇದವನ್ನು ಕುರಿತು ಜನಸಾಮಾನ್ಯರಲ್ಲಿ ಅನೇಕ ತಪ್ಪು ಕಲ್ಪನೆಗಳು ವ್ಯಾಪಕವಾಗಿ ಹರಡಿರುವುದು ದುರಂತಕರ ಸಂಗತಿ. ಈ ತಪ್ಪು ನಂಬಿಕೆಗಳೇ ಆಯುರ್ವೇದದ ನಿಜವಾದ ತತ್ವ, ವೈಜ್ಞಾನಿಕತೆ ಮತ್ತು ಸಮಗ್ರತೆಯನ್ನು ಜನರಿಂದ ದೂರ ಮಾಡುತ್ತಿವೆ.
ಆಯುರ್ವೇದವು ಕೇವಲ ಔಷಧ ಪದ್ಧತಿ ಅಲ್ಲ; ಅದು ಜೀವನವನ್ನು ತಿಳಿಸುವ ಶಾಸ್ತ್ರ. “ಆಯುಷೋ ವೇದಃ ಆಯುರ್ವೇದಃ" ಎಂಬ ಉಕ್ತಿಯು ಸೂಚಿಸುವಂತೆ ಆಯುರ್ವೇದವು ಜೀವನದ ಸಂಪೂರ್ಣ ಅರಿವನ್ನು ಅರುಹುತ್ತದೆ. ಆದರೂ ಅಪೂರ್ಣ ಮಾಹಿತಿ, ಅನುಭವವಿಲ್ಲದ ಮಾತುಗಳು ಹಾಗೂ ಸಾಮಾಜಿಕ ಜಾಲತಾಣಗಳ ಅತಿರೇಕದಿಂದಾಗಿ ಆಯುರ್ವೇದದ ಕುರಿತು ಹಲವಾರು ತಪ್ಪು ಧಾರಣೆಗಳು ನಿರ್ಮಾಣವಾಗಿವೆ. ಅಂಥ ಕೆಲವು ಸಾಮಾನ್ಯ ಮಿಥ್ಯೆಗಳು ಮತ್ತು ಅವುಗಳ ಹಿಂದಿರುವ ಸತ್ಯವನ್ನು ಇಲ್ಲಿ ಪರಿಶೀಲಿಸೋಣ.
1 .ಮೊದಲನೆಯದಾಗಿ ಕೇಳಿಬರುವ ತಪ್ಪು ಕಲ್ಪನೆ ಎಂದರೆ ಆಯುರ್ವೇದ ಔಷಧಿಗಳು ನಿಧಾನವಾಗಿ ಕೆಲಸ ಮಾಡುತ್ತವೆ ಎಂಬುದು. ವಾಸ್ತವದಲ್ಲಿ ಆಯುರ್ವೇದ ಚಿಕಿತ್ಸೆ ರೋಗದ ಸ್ವಭಾವ, ತೀವ್ರತೆ, ರೋಗಿಯ ದೇಹಪ್ರಕೃತಿ, ಅಗ್ನಿ ಹಾಗೂ ದೋಷಗಳ ಸ್ಥಿತಿಯನ್ನು ಆಧರಿಸಿದೆ. ತೀವ್ರ ಜ್ವರ, ಅಜೀರ್ಣ, ಅತಿಸಾರ, ವಾಂತಿ, ತಲೆನೋವಿನಂಥ ತ್ವರಿತ ಸ್ಥಿತಿಗಳಲ್ಲಿಯೂ ಆಯುರ್ವೇದವು ತಕ್ಷಣ ಫಲ ನೀಡುತ್ತದೆ. ನಿಧಾನವೆನಿಸುವುದು ಔಷಧಿಯಲ್ಲ, ರೋಗಿಯ ಜೀವನಶೈಲಿಯನ್ನು ಬದಲಾಯಿ ಸದ ಮನಸ್ಥಿತಿ. ಅಯುರ್ವೇದ ನಿಧಾನವಲ್ಲ, ಆಯುರ್ವೇದಕ್ಕೆ ಜನ ಬರುವುದು ನಿಧಾನ!
2.ಇನ್ನೊಂದು ಸಾಮಾನ್ಯ ಭ್ರಮೆ ಎಂದರೆ ಆಯುರ್ವೇದವು ದೀರ್ಘಕಾಲದ ಕಾಯಿಲೆಗಳಿಗೆ ಮಾತ್ರ ಎಂಬುದು. ವಾಸ್ತವದಲ್ಲಿ ಆಯುರ್ವೇದವು ರೋಗ ಬಂದ ಮೇಲಿನ ಚಿಕಿತ್ಸೆಗೆ ಮಾತ್ರ ಸೀಮಿತ ವಾಗಿಲ್ಲ. ‘ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ’ ಎಂಬ ತತ್ವದಂತೆ, ಆರೋಗ್ಯವಂತರ ಆರೋಗ್ಯವನ್ನು ಕಾಪಾ ಡುವುದೇ ಆಯುರ್ವೇದದ ಮೊದಲ ಗುರಿ. ದಿನಚರ್ಯೆ, ಋತುಚರ್ಯೆ, ಆಹಾರ ನಿಯಮ ಗಳು ಮತ್ತು ಜೀವನಶೈಲಿ ಮಾರ್ಗದರ್ಶನ- ಇವುಗಳು ಆಯುರ್ವೇದದ ಅವಿಭಾಜ್ಯ ಭಾಗಗಳು. ಹೀಗಾಗಿ ಆಯುರ್ವೇದ ಕೇವಲ ವೈದ್ಯಕೀಯ ಶಾಸ್ತ್ರವಲ್ಲದೆ ಜೀವನಶಾಸ್ತ್ರವಾಗಿದೆ.
3.ಬಹುತೇಕ ಜನರಲ್ಲಿ ಇರುವ ಅಪಾಯಕಾರಿ ನಂಬಿಕೆ ಎಂದರೆ ಆಯುರ್ವೇದದ ಔಷಧಿಗಳಿಗೆ ಯಾವುದೇ ಸೈಡ್ ಎಫೆಕ್ಟ್ ಇಲ್ಲ , ಯಾರು ಬೇಕಾದರೂ ಹೇಗೆ ಬೇಕಾದರೂ ಬಳಸಬಹುದು ಎಂಬುದು. ಔಷಧಿ ಯಾವ ಪದ್ಧತಿಯದ್ದೇ ಆಗಿರಲಿ, ತಪ್ಪಾದ ಪ್ರಮಾಣ, ತಪ್ಪು ಕಾಲ ಅಥವಾ ವೈದ್ಯರ ಮಾರ್ಗದರ್ಶನವಿಲ್ಲದ ಸೇವನೆಯು ಹಾನಿಕಾರಕವೇ. ಆಯುರ್ವೇದದಲ್ಲೂ ಮಾತ್ರ, ಅನುಪಾನ, ಕಾಲ ಮತ್ತು ವ್ಯಕ್ತಿಯ ಸ್ಥಿತಿ ಅತ್ಯಂತ ಮುಖ್ಯ. ಆದ್ದರಿಂದ ಸ್ವಯಂ ಔಷಧ ಸೇವನೆ ಯಾವತ್ತೂ ತಪ್ಪು.
4.ಜನರಿಗೆ ಆಯುರ್ವೇದ ಎಂದರೆ ಕಹಿ ಕಷಾಯ ಮಾತ್ರ ಎಂಬ ಮತ್ತೊಂದು ಮಿಥ್ಯೆ ಇದೆ. ವಾಸ್ತವ ದಲ್ಲಿ ಆಯುರ್ವೇದದಲ್ಲಿ ಘೃತ (ತುಪ್ಪ), ಅಲೇಹ, ಅರಿಷ್ಟ, ಚೂರ್ಣ ಹಾಗೂ ಆಹಾರ ರೂಪದ ಚಿಕಿತ್ಸೆಗಳು ಸಹ ಸೇರಿವೆ. ಕಹಿತನವು ಚಿಕಿತ್ಸೆಯ ಒಂದು ಭಾಗ ಮಾತ್ರ; ಅದು ಸಂಪೂರ್ಣ ಆಯುರ್ವೇದವಲ್ಲ. ಅಷ್ಟೇ ಅಲ್ಲದೆ ಪಾಯಸ, ಹಲ್ವಾ, ತಂಬುಳಿ, ಪೊಂಗಲ್, ರಸಂ, ಶ್ರೀಖಂಡ ದಂಥ ರುಚಿಕರವಾದ ತಿನಿಸುಗಳೂ ಔಷಧಿಯೇ.
5.ಅದೇ ರೀತಿ ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆ ಇಲ್ಲ ಎಂಬ ಕಲ್ಪನೆಯೂ ತಪ್ಪು. ಸುಶ್ರುತಾಚಾ ರ್ಯರು ಶಸ್ತ್ರಚಿಕಿತ್ಸೆಗೆ ತಳಹದಿ ಹಾಕಿದ ಮಹಾನ್ ವೈದ್ಯರು. ಮೂಳೆ ಮುರಿತ, ವ್ರಣ ಚಿಕಿತ್ಸೆ, ಕ್ಷಾರಸೂತ್ರ ಹಾಗೂ ನಾಸಿಕ ಮತ್ತು ನೇತ್ರ ಚಿಕಿತ್ಸೆಗಳು ಆಯುರ್ವೇದದ ವಿವರವಾಗಿವೆ. ಇಂದಿನ ಶಸ್ತ್ರಚಿಕಿತ್ಸೆಯ ಅನೇಕ ತತ್ವಗಳು ಆಯುರ್ವೇದದ ಕೊಡುಗೆಯೇ ಆಗಿವೆ.
- ‘ಆಯುರ್ವೇದ ವೈಜ್ಞಾನಿಕವಲ್ಲ’ ಎಂಬ ಮಾತು ಅತ್ಯಂತ ದೊಡ್ಡ ತಪ್ಪು ಕಲ್ಪನೆ. ಆಯು ರ್ವೇದವು ಅನುಭವ, ತರ್ಕ ಮತ್ತು ಕಾರಣ-ಕಾರ್ಯ ಸಿದ್ಧಾಂತಗಳ ಮೇಲೆ ನಿರ್ಮಿತವಾದ ಶಾಸ್ತ್ರ. ಇಂದಿನ ‘ಪರ್ಸನಲೈಜ್ಡ್ ಮೆಡಿಸಿನ್’ ತತ್ವವನ್ನು ಆಯುರ್ವೇದವು ಸಾವಿರಾರು ವರ್ಷಗಳ ಹಿಂದೆಯೇ ಪ್ರಕೃತಿ ಸಿದ್ಧಾಂತದ ಮೂಲಕ ವಿವರಿಸಿದೆ. ವ್ಯಕ್ತಿಯ ಪ್ರತಿ ಸೂಕ್ಷ್ಮ ವಿಷಯವನ್ನೂ ಗಮನಿಸಿ ಅದರ ಅನುಗುಣವಾಗಿ ಔಷಧಿ ನೀಡುವ ಆಯುರ್ವೇದಕ್ಕಿಂತ ಹೆಚ್ಚು ವೈಜ್ಞಾನಿಕ ವಾದ ಶಾಸ್ತ್ರ ಮತ್ತೊಂದಿಲ್ಲ.
- ಇನ್ನೊಂದು ಮುಖ್ಯ ಮಿಥ್ಯೆ ಎಂದರೆ ಆಯುರ್ವೇದ ಎಲ್ಲರಿಗೂ ಒಂದೇ ರೀತಿಯದು ಎಂಬುದು. ವಾಸ್ತವದಲ್ಲಿ ಆಯುರ್ವೇದದ ವಿಶೇಷತೆಯೇ ವ್ಯಕ್ತಿಗತ ಚಿಕಿತ್ಸೆ. ಒಬ್ಬರಿಗೆ ಉಪಯುಕ್ತವಾದ ಔಷಧಿ ಮತ್ತೊಬ್ಬರಿಗೆ ಸೂಕ್ತವಾಗದೇ ಇರಬಹುದು. ವಯಸ್ಸು, ಪ್ರಕೃತಿ, ಆಹಾರ, ಮನಸ್ಥಿತಿ, ದೇಶ ಮತ್ತು ಕಾಲ- ಇವುಗಳನ್ನು ಪರಿಗಣಿಸಿ ಚಿಕಿತ್ಸೆ ನೀಡುವುದು ಆಯುರ್ವೇದದ ಶಕ್ತಿ.
- ಕೆಲವರು ಆಯುರ್ವೇದ ಔಷಧಿಗಳನ್ನು ಜೀವನಪೂರ್ತಿ ತೆಗೆದುಕೊಳ್ಳಬೇಕು ಎಂದು ಭಯಪಡು ತ್ತಾರೆ. ಆದರೆ ಆಯುರ್ವೇದದ ಗುರಿ ದೇಹವನ್ನು ಸ್ವಾವಲಂಬಿ ಮಾಡುವುದು, ಔಷಧಿಗೆ ಅವಲಂಬಿತ ಗೊಳಿಸುವುದಲ್ಲ. ದೇಹವು ಸಮತೋಲನ ಸಾಧಿಸಿದಂತೆ ಔಷಧಿಯ ಅವಶ್ಯಕತೆ ಹಂತ ಹಂತವಾಗಿ ಕಡಿಮೆಯಾಗುತ್ತದೆ.
- ಅದೇ ರೀತಿ ಆಯುರ್ವೇದದಲ್ಲಿ ಆಹಾರಕ್ಕೆ ಅತಿಯಾದ ನಿರ್ಬಂಧಗಳಿವೆ ಎಂಬ ಅಭಿಪ್ರಾಯವೂ ತಪ್ಪು. ಆಯುರ್ವೇದದಲ್ಲಿ ಆಹಾರ ನಿಯಮಗಳು ಶಾಶ್ವತವಲ್ಲ; ಅವು ರೋಗಾವಸ್ಥೆಗೆ ಅನುಗುಣವಾಗಿ ತಾತ್ಕಾಲಿಕ. ಆಯುರ್ವೇದವು ತ್ಯಾಗವನ್ನು ಅಲ್ಲ, ದೇಹಕ್ಕೆ ಹೊಂದುವ ಆಹಾರದ ಆಯ್ಕೆ ಯನ್ನು ಕಲಿಸುತ್ತದೆ.
- ಕೊನೆಯದಾಗಿ ಕೇಳಿಬರುವ ಮಾತು ಎಂದರೆ ಆಯುರ್ವೇದವು ಆಧುನಿಕ ಜೀವನಕ್ಕೆ ಹೊಂದು ವುದಿಲ್ಲ ಎಂಬುದು. ವಾಸ್ತವದಲ್ಲಿ ನಿದ್ರೆಯ ಕೊರತೆ, ಮಾನಸಿಕ ಒತ್ತಡ, ಅನಿಯಮಿತ ಆಹಾರ, ಅತಿಯಾದ ಪರದೆ ಬಳಕೆ- ಇಂದಿನ ಈ ಎಲ್ಲಾ ಸಮಸ್ಯೆಗಳ ಮೂಲವನ್ನು ಆಯುರ್ವೇದ ಸ್ಪಷ್ಟವಾಗಿ ವಿವರಿಸುತ್ತದೆ ಮತ್ತು ಸರಳ ಪರಿಹಾರಗಳನ್ನು ನೀಡುತ್ತದೆ. ಆಯುರ್ವೇದ ಹಳೆಯ ದಲ್ಲ; ಅದು ಎಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ.
ಸ್ನೇಹಿತರೇ, ಇಂದು ಆಯುರ್ವೇದದ ಕುರಿತು ಕಂಡುಬರುವ ಪ್ರಮುಖ ಸಮಸ್ಯೆ ಅದರೊಳಗಲ್ಲ, ನಮ್ಮ ಮನೋಭಾವ ದಲ್ಲಿದೆ. ಭಾರತೀಯ ಮೂಲದಿಂದ ಬಂದದ್ದೆಂಬ ಕಾರಣಕ್ಕೆ, ವೇದಗಳಲ್ಲಿ ಬೇರುಬಿಟ್ಟದ್ದೆಂಬ ಕಾರಣಕ್ಕೆ, ಅದನ್ನು ಹಳೆಯದು, ಕಾಲಹರಣಗೊಂಡದ್ದು ಎಂಬಂತೆ ಕಾಣುವ ಪ್ರವೃತ್ತಿ ನಮ್ಮಲ್ಲಿ ಅಜ್ಞಾತವಾಗಿ ಬೆಳೆದಿದೆ.
ಪಶ್ಚಿಮದಿಂದ ಬಂದದ್ದಾದರೆ ಮಾತ್ರ ಅದು ಆಧುನಿಕ, ವೈಜ್ಞಾನಿಕ ಮತ್ತು ಸಮಾಜದಲ್ಲಿ ಅಂಗೀಕಾ ರಾರ್ಹ ಎನ್ನುವ ಭಾವನೆಗೆ ನಾವು ಒಳಗಾಗಿರುವುದು ಆತಂಕಕಾರಿ. ಇದು ಆಯ್ಕೆಯಲ್ಲ, ತಿಳಿಯ ದೆಯೇ ಬೆಳೆಸಿಕೊಂಡ ಮನಸ್ಸಿನ ದಾಸ್ಯ. ನಮ್ಮದೇ ಸಂಸ್ಕೃತಿಯಿಂದ ಬಂದ ಜ್ಞಾನವನ್ನು ತಿರಸ್ಕರಿಸಿ, ಹೊರಗಿಂದ ಬಂದದ್ದನ್ನು ಅಂಧವಿಶ್ವಾಸದೊಂದಿಗೆ ಅಂಗೀಕರಿಸುವ ಈ ಮನಸ್ಥಿತಿಯೇ ಆಯುರ್ವೇದದ ಮೌಲ್ಯವನ್ನು ಕುಗ್ಗಿಸುತ್ತಿದೆ.
‘ಹಿತ್ತಲ ಗಿಡ ಮದ್ದಲ್ಲ’ ಎಂಬ ನುಡಿಗಟ್ಟು ಇಂದು ಆಯುರ್ವೇದಕ್ಕೆ ಅಂಟಿಕೊಂಡಂತಾಗಿದೆ. “ಅದು ಆಯುರ್ವೇದ, ಅಲ್ಲವೇ? ಹಾಗಾದರೆ ನಿಧಾನ", “ಆಯುರ್ವೇದ ಎಂದರೆ ಕಹಿ ಮಾತ್ರ", “ತುರ್ತು ರೋಗಗಳಿಗೆ ಅದು ಸಾಲದು", ಇನ್ ಫೆಕ್ಷನ್‌ಗಳಿಗೆ ಆಯುರ್ವೇದ ಕೆಲಸ ಮಾಡದು"- ಇಂಥ ಸೀಮಿತ ಮತ್ತು ಏಕಮುಖ ದೃಷ್ಟಿಕೋನವೇ ಆಯುರ್ವೇದವನ್ನು ನಮ್ಮ ದಿನನಿತ್ಯದ ಜೀವನದಿಂದ ದೂರ ಸರಿಸುತ್ತಿದೆ.
ಸಮಸ್ಯೆ ಆಯುರ್ವೇದದ ಸಾಮರ್ಥ್ಯದಲ್ಲಿಲ್ಲ; ಅದನ್ನು ನಾವು ನೋಡುವ ದೃಷ್ಟಿಕೋನದಲ್ಲಿದೆ. ಆಯುರ್ವೇದವು ವಿದೇಶದಿಂದ ಬಂದಾಗ ಮಾತ್ರ ಸತ್ಯವಾಗುವ ಜ್ಞಾನವಲ್ಲ. ಸಾವಿರಾರು ವರ್ಷಗಳ ಅನುಭವ, ಪರಿಶೀಲನೆ ಮತ್ತು ತರ್ಕದ ಮೇಲೆ ನಿಂತಿರುವ ಜೀವ ವಿeನ ಅದು. ಆದರೆ ಅದನ್ನು ಅರಿಯಲು ಮತ್ತು ಅನುಭವಿಸಲು, ಮೊದಲು ನಮ್ಮ ಮನಸ್ಸನ್ನು ತೆರೆಯಬೇಕಾಗಿದೆ.
ಆಯುರ್ವೇದಕ್ಕೆ ಯಾವುದೇ ಅಪ್‌ಡೇಟ್ ಅಗತ್ಯವಿಲ್ಲ, ಅದರ ಅಗತ್ಯವಿರುವುದು ನಮ್ಮ ಮನೋ ಭಾವಕ್ಕೆ. ಅದನ್ನು ಬೇಕಿದ್ದರೆ ಒಂಥರಾ ಸಾಫ್ಟ್ ವೇರ್ ಅಪ್‌ಡೇಟ್ ಅಂದುಕೊಳ್ಳಿ. ಪೂರ್ವಗ್ರಹ ಗಳನ್ನು ಬಿಟ್ಟು ಆಯುರ್ವೇದವನ್ನು ಜೀವನದ ಭಾಗವಾಗಿ ಸ್ವೀಕರಿಸಿದಾಗ ಮಾತ್ರ, ‘ಅದು ಕೇವಲ ಚಿಕಿತ್ಸೆಯಲ್ಲ, ಸಮತೋಲಿತ ಬದುಕಿನ ಮಾರ್ಗದರ್ಶಿ’ ಎಂಬ ಸತ್ಯ ನಮ್ಮ ಮುಂದೆ ತೆರೆದು ಕೊಳ್ಳುತ್ತದೆ.