#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

L P Kulkarni Column: ಏನಿದು ಬೇಬಿ ಯಿಂಗ್ಲಿಯಾನ್‌ ಭ್ರೂಣ ?

ದೈತ್ಯಜೀವಿಗಳಾದ ಡೈನಾಸಾರಸ್ ಗಳ ಬಗ್ಗೆ ಬಹಳ ಕ್ರೇಜ್ ಹುಟ್ಟಿತು. ಅದರ ಫಲವಾಗಿ ಜುರಾಸಿಕ್ ಪಾರ್ಕ್ ಸರಣಿ ಚಲನಚಿತ್ರಗಳು, ಜುರಾಸಿಕ್ ವರ್ಲ್ಡ್, ದಿ ಲಾಸ್ಟ್ ವರ್ಲ್ಡ್, ದಿ ವ್ಯಾಲಿ ಆಫ್ ಗ್ಯಾಂಗಿ, ಒನ್ ಮಿಲಿಯನ್ ಈಯರ್ಸ್ ಬಿ.ಸಿ ಹೀಗೆ ಸಾಲು ಸಾಲು ಚಿತ್ರಗಳು ತೆರೆಕಂಡು ಜನಮೆಚ್ಚುಗೆಗೆ ಪಾತ್ರವಾದವು

L P Kulkarni Column: ಏನಿದು ಬೇಬಿ ಯಿಂಗ್ಲಿಯಾನ್‌ ಭ್ರೂಣ ?

Profile Ashok Nayak Jan 27, 2025 1:09 PM

1993ರಲ್ಲಿ ಖ್ಯಾತ ಹಾಲಿವುಡ್ ನಿರ್ದೇಶಕ ಸ್ಟಿವನ್ ಸ್ಪಿಲ್ಬರ್ಗ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಜುರಾಸಿಕ್ ಪಾರ್ಕ್’ ಸಿನಿಮಾ ಅತ್ಯಂತ ಜನಪ್ರಿಯ. ಆ ಚಿತ್ರವು ಅವರಿಗೆ ಸಾಕಷ್ಟು ಯಶಸ್ಸು ತಂದುಕೊಟ್ಟಿದ್ದಲ್ಲದೆ, ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯೂ ಒಳಗೊಂಡಂತೆ ಬರೋಬ್ಬರಿ 20 ಪ್ರಶಸ್ತಿ ಗೌರವಗಳು ಸಂದವು.

ಅದಾದ ನಂತರ ಜನರ ಮನದಲ್ಲಿ ದೈತ್ಯಜೀವಿಗಳಾದ ಡೈನಾಸಾರಸ್ ಗಳ ಬಗ್ಗೆ ಬಹಳ ಕ್ರೇಜ್ ಹುಟ್ಟಿತು. ಅದರ ಫಲವಾಗಿ ಜುರಾಸಿಕ್ ಪಾರ್ಕ್ ಸರಣಿ ಚಲನಚಿತ್ರಗಳು, ಜುರಾಸಿಕ್ ವರ್ಲ್ಡ್, ದಿ ಲಾಸ್ಟ್ ವರ್ಲ್ಡ್, ದಿ ವ್ಯಾಲಿ ಆಫ್ ಗ್ಯಾಂಗಿ, ಒನ್ ಮಿಲಿಯನ್ ಈಯರ್ಸ್ ಬಿ.ಸಿ ಹೀಗೆ ಸಾಲು ಸಾಲು ಚಿತ್ರಗಳು ತೆರೆಕಂಡು ಜನಮೆಚ್ಚುಗೆಗೆ ಪಾತ್ರವಾದವು.

ಇದನ್ನೂ ಓದಿ: L P Kulkarni Column: ನಮ್ಮ ಜ್ಞಾಪಕ ಶಕ್ತಿ ಹೆಚ್ಚಿಸುವ ಐದು ವಿಶಿಷ್ಟ ಗಿಡಮೂಲಿಕೆಗಳು

ಇಂದಿಗೂ ಸಹ ಭೂಮಿಯ ವಿವಿಧ ಭಾಗಗಳಲ್ಲಿ ಈ ದೈತ್ಯಜೀವಿಗಳ ಪಳಿಯುಳಿಕೆಗಳು ಸಿಗುತ್ತಾ ಇವೆ. ಅವುಗಳ ಕುರಿತು ಪ್ರಾಕ್ತನಶಾಸಜ್ಞರು ಅಧ್ಯಯನ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಬೇಬಿ ಯಿಂಗ್ಲಿಯಾಂಗ್ ಎಂಬ ಅಡ್ಡ ಹೆಸರಿನ 66 ರಿಂದ 72 ಮಿಲಿಯನ್ ವರ್ಷ ವಯಸ್ಸಿನ ದೈತ್ಯ ಡೈನೋಸಾರ್ ಭ್ರೂಣವು ಚೀನಾದಲ್ಲಿ ಪಳೆಯುಳಿಕೆಯಾಗಿದ್ದ ಮೊಟ್ಟೆಯೊಳಗೆ ಪತ್ತೆಯಾಗಿದೆ.

ಇಲ್ಲಿರುವ ಚಿತ್ರವು ಆವಿಷ್ಕಾರಕ್ಕೆ ಸಂಬಂಧಿಸಿದ ಮತ್ತು ಮಾದರಿಯನ್ನು ಆಧರಿಸಿ ವಿಜ್ಞಾನಿಗಳು ರಚಿಸಿದ ಹತ್ತಿರದಿಂದ ಹೊರಬರುವ ಓವಿರಾಪ್ಟೊರೊಸಾರ್ ಡೈನೋಸಾರ್ ಭ್ರೂಣದ ಪುನರ್ನಿ ರ್ಮಾಣವಾಗಿದೆ. ಪಕ್ಷಿಗಳಿಗೆ ನಿಕಟ ಸಂಬಂಧ ಹೊಂದಿರುವ ಓವಿರಾ ಪ್ಟೊರೊಸಾರ್ ಗುಂಪಿಗೆ ಸೇರಿದ ಈ ಜೀವಿಯು, ಗರಿಗಳು ಮತ್ತು ಹಲ್ಲುರಹಿತ ಥೆರೋಪಾಡ್‌ಗಳು ಇವಾಗಿವೆ.

ಈ ಸಂಶೋಧನೆಯು ಡೈನೋಸಾರ್ ಅಭಿವೃದ್ಧಿಯ ಬಗ್ಗೆ ಅಭೂತಪೂರ್ವ ನೋಟವನ್ನು ಒದಗಿಸು ತ್ತದೆ. 27 ಸೆಂಟಿ ಮೀಟರ್‌ಗಳ (10.6 ಇಂಚುಗಳು) ಉದ್ದಳತೆಯಿಂದ ಕೂಡಿರುವ ಈ ಭ್ರೂಣವು ಟಕಿಂಗ್ ಭಂಗಿಯನ್ನು ಪ್ರದರ್ಶಿಸುತ್ತದೆ- ಅದರ ದೇಹವನ್ನು ಬಾಗಿಸಿ ಮತ್ತು ತಲೆಯನ್ನು ಅದರ ರೆಕ್ಕೆಯ ಕೆಳಗೆ ಇರಿಸಿದರೆ ಸಾಮಾನ್ಯ ವಾಗಿ ಕೊನೆಯ ಹಂತದ ಪಕ್ಷಿ ಭ್ರೂಣಗಳಂತೆ ಕಂಡು ಬರು‌ ತ್ತದೆ.

ಆಧುನಿಕ ಪಕ್ಷಿಗಳಲ್ಲಿ ಮೊಟ್ಟೆಯೊಡೆಯುವ ಯಶಸ್ಸಿಗೆ ನಿರ್ಣಾಯಕವಾದ ಈ ನಡವಳಿಕೆಯು ಡೈನೋಸಾರ್ ಗಳಲ್ಲಿ ಹುಟ್ಟಿಕೊಂಡಿರಬಹುದು, ಈ ಪ್ರಾಚೀನ ಜೀವಿಗಳು ಮತ್ತು ಅವುಗಳ ಪಕ್ಷಿ ವಂಶಸ್ಥರ ನಡುವಿನ ಆಳವಾದ ವಿಕಸನೀಯ ಸಂಪರ್ಕವನ್ನು ಸೂಚಿಸುತ್ತದೆ. ಯಿಂಗ್ಲಿಯಾಂಗ್ ಸ್ಟೋನ್ ನೇಚರ್ ಹಿಸ್ಟರಿ ಮ್ಯೂಸಿಯಂನಲ್ಲಿ ಇರಿಸಲಾಗಿರುವ ಬೇಬಿ ಯಿಂಗ್ಲಿ ಯಾಂಗ್ ಇದುವರೆಗೆ ಪತ್ತೆಯಾದ ಅತ್ಯಂತ ಸಂಪೂರ್ಣ ಡೈನೋಸಾರ್ ಭ್ರೂಣಗಳಲ್ಲಿ ಒಂದಾಗಿದೆ.

ಡೈನೋಸಾರ್ ಭ್ರೂಣಶಾಸದ ಬಗ್ಗೆ ವಿಶಾಲವಾದ ಅಧ್ಯಯನದ ತೀರ್ಮಾನಗಳನ್ನು ದೃಢೀ ಕರಿಸಲು ಹೆಚ್ಚಿನ ಮಾದರಿಗಳು ಬೇಕಾಗಿದ್ದರೂ, ಈ ಪಳೆಯುಳಿಕೆಯು ಪಕ್ಷಿ-ತರಹದ ನಡವಳಿಕೆಗಳ ವಿಕಸನೀಯ ಬೇರುಗಳ ಅಪರೂಪದ ನೋಟವನ್ನು ನೀಡುತ್ತದೆ ಎಂಬುದು ಸಂಶೋಧಕರ ಅಧ್ಯ ಯನದ ತಿರುಳು. ಪ್ರೊಫೆಸರ್ ಸ್ಟೀವ್ ಬ್ರೂಸಟ್ಟೆಯವರ ಪ್ರಕಾರ, ಪಕ್ಷಿಗಳ ವಿಶಿಷ್ಟ ಲಕ್ಷಣಗಳು ಮೊದಲು ಅವುಗಳ ಡೈನೋಸಾರ್ ಪೂರ್ವಜರಲ್ಲಿ ಕಾಣಿಸಿಕೊಂಡವು ಎಂದು ಸಂಶೋಧನೆಯು ಬಲಪಡಿಸುತ್ತದೆ ಎಂದಿದ್ದಾರೆ.

ಒಟ್ಟಿನಲ್ಲಿ ಈ ದೈತ್ಯಜೀವಿಗಳಲ್ಲಿ ಅತ್ಯಂತ ಪುರಾತನವಾದವುಗಳು ಯಾವವು? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಈ ಪಳಿಯುಳಿಕೆ ಅಧ್ಯಯನಗಳು ಸಾಗಿವೆ.