ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಹೆಸರಿನ ಬಗ್ಗೆ ಮತ್ತಷ್ಟು

ವ್ಯಕ್ತಿಗಳ ಹೆಸರಿನಲ್ಲಿ ಸಂಖ್ಯೆಯಿರುವುದು ತೀರಾ ವಿಚಿತ್ರ, ವಿಲಕ್ಷಣ ಎಂದೆನಿಸಿತು. ಹಾಗಂತ ಈಕೆ ಸಾಮಾನ್ಯಳೇನೂ ಅಲ್ಲ. ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಕೆಲಸ ಮಾಡಿದವಳು. ‘ದಿ ಬೋಸ್ಟನ್ ಗ್ಲೋಬಲ್’ ಪತ್ರಿಕೆಯಲ್ಲೂ ಕೆಲಸ ಮಾಡಿದ್ದಾಳೆ. ನಿಕೋಡ್ ಇಮೊಜಿ ಸಮಿತಿಯಲ್ಲಿ‌ ಕೆಲಸ ಮಾಡಿ ದವಳು. ಅಂದರೆ ಯುನಿಕೋಡ್‌ನಲ್ಲಿ ಬಳಸುವ ಇಮೊಜಿಯನ್ನು ಬಳಕೆಗೆ ಬಿಡುವ ಮುನ್ನ ಪರಿಶೀಲಿ ಸುವ ಸಮಿತಿಯದು.

Vishweshwar Bhat Column: ಹೆಸರಿನ ಬಗ್ಗೆ ಮತ್ತಷ್ಟು

-

ಸಂಪಾದಕರ ಸದ್ಯಶೋಧನೆ

ಅಮೆರಿಕದ ‘ದಿ ಬೋಸ್ಟನ್ ಗ್ಲೋಬಲ್’ ಪತ್ರಿಕೆಯನ್ನು ಓದುತ್ತಿದ್ದಾಗ ಪತ್ರಕರ್ತೆಯೊಬ್ಬಳ ಹೆಸರು ಗಮನ ಸೆಳೆಯಿತು. ಅವಳ ಹೆಸರು ‘ಜೆನ್ನಿಫರ್ 8.ಲೀ’ ಅಂತ. ‘ಜೇಮ್ಸ್ ಬಾಂಡ್ 007’ ಎಂಬ ಹೆಸರನ್ನು ಬಿಟ್ಟರೆ, ನಾನು ವ್ಯಕ್ತಿಗಳ ಹೆಸರಿನಲ್ಲಿ ಸಂಖ್ಯೆಗಳನ್ನು ನೋಡಿದ್ದಿಲ್ಲ. ವ್ಯಕ್ತಿಗಳ ಹೆಸರಿನಲ್ಲಿ ಸಂಖ್ಯೆಯಿರುವುದು ತೀರಾ ವಿಚಿತ್ರ, ವಿಲಕ್ಷಣ ಎಂದೆನಿಸಿತು. ಹಾಗಂತ ಈಕೆ ಸಾಮಾನ್ಯ ಳೇನೂ ಅಲ್ಲ. ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಕೆಲಸ ಮಾಡಿದವಳು. ‘ದಿ ಬೋಸ್ಟನ್ ಗ್ಲೋಬಲ್’ ಪತ್ರಿಕೆಯಲ್ಲೂ ಕೆಲಸ ಮಾಡಿದ್ದಾಳೆ. ನಿಕೋಡ್ ಇಮೊಜಿ ಸಮಿತಿಯಲ್ಲಿ‌ ಕೆಲಸ ಮಾಡಿದವಳು. ಅಂದರೆ ಯುನಿಕೋಡ್‌ನಲ್ಲಿ ಬಳಸುವ ಇಮೊಜಿಯನ್ನು ಬಳಕೆಗೆ ಬಿಡುವ ಮುನ್ನ ಪರಿಶೀಲಿಸುವ ಸಮಿತಿಯದು.

ಮೂಲತಃ ತೈವಾನಿನವಳಾದ ಲೀ, ಬಾಲ್ಯದಲ್ಲಿಯೇ ಅಮೆರಿಕಕ್ಕೆ ಬಂದಳು. ತನ್ನ ಹೆಸರು ಬಹಳ ಸಾಮಾನ್ಯ ಎಂಬುದು ಅವಳಿಗೆ ತಿಳಿಯಿತು. ಅವಳು ವಾಸಿಸುತ್ತಿದ್ದ ನಗರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜೆನ್ನಿಫರ್ ಲೀಗಳು ಇದ್ದಾರೆಂದು ತಿಳಿಯಿತು. ಅಂದರೆ ತಾನು ತನ್ನ ಹೆಸರಿನಿಂದ ಗುರುತಿಸಿ ಕೊಳ್ಳುವುದು ಸಾಧ್ಯವೇ ಇಲ್ಲ ಮತ್ತು ಅದಕ್ಕಿಂತ ಹೆಚ್ಚಾಗಿ ಈ ರೀತಿ ಒಂದೇ ಹೆಸರಿನ ಅನೇಕ ವ್ಯಕ್ತಿ ಗಳು ಒಂದೇ ನಗರದಲ್ಲಿ ಇರುವುದರಿಂದ ಗೊಂದಲಕ್ಕೆ ಕಾರಣವಾಗುತ್ತದೆ ಎಂಬುದು ಅವಳಿಗೆ ಬಲವಾಗಿ ಅನಿಸಿತು.

ಇದನ್ನೂ ಓದಿ: Vishweshwar Bhat Column: ಸುರಕ್ಷತೆಗೆ ಮೊದಲ ಆದ್ಯತೆ

ಹಾಗೆಂದು ತನ್ನ ಪಾಲಕರು ಇಟ್ಟ ಹೆಸರನ್ನು ಬದಲಿಸಿಕೊಳ್ಳಲು ಆಕೆಗೆ ಇಷ್ಟವಿರಲಿಲ್ಲ. ತನ್ನ ಹೆಸರಿನಲ್ಲಿ ಸಂಖ್ಯೆಯನ್ನು ಸೇರಿಸಿದರೆ ಹೇಗೆ ಎಂಬ ಆಲೋಚನೆ ಬಂತು. ‘ಜೆನ್ನಿಫರ್ 8.ಲೀ’ ಅಂತ ಬದಲಿಸಿಕೊಂಡಳು. ಜಗತ್ತಿನಾದ್ಯಂತ ಜೆನ್ನಿಫರ್ ಲೀ ಎನ್ನುವವರು ಲಕ್ಷಾಂತರ ಮಂದಿ ಇರಬಹುದು. ಆದರೆ, ‘ಜೆನ್ನಿಫರ್ 8.ಲೀ’ ಎನ್ನುವವಳು ಅವಳೊಬ್ಬಳೇ. ನೀವು ಕಾಮಿಡಿಯನ್ ಜಾರ್ಜ್ ಎಲ್.ಗೊಬೆಲ್ ಹೆಸರನ್ನು ಕೇಳಿರಬಹುದು. ಆತನ ಹೆಸರಿನಲ್ಲಿ ‘ಎಲ’ ಎಂಬುದಕ್ಕೆ ಅರ್ಥವಿಲ್ಲ.

ಎಲ್‌ ಇಲ್ಲದಿದ್ದರೆ, ಆತನ ಇನಿಶಿಯಲ್ ‘ಜಿಜಿ’ ಎಂದಾಗುತ್ತಿತ್ತು. ಆದರೆ, ಅವನ ಮನೆ ಇರುವ ಪ್ರದೇಶದ ಹಾಲಿವುಡ್‌ನ ಖ್ಯಾತ ನಟಿ ಗ್ರೇಟಾ ಗಾರ್ಬೋ ಮನೆ ಸಹ ಇತ್ತು. ಅವಳ ಇನಿಶಿಯಲ್ ಸಹ ‘ಜಿಜಿ’ ಲಾಂಡ್ರಿಗೆ ಬಟ್ಟೆಯನ್ನು ಕೊಟ್ಟಾಗ ಇವರಿಬ್ಬರ ಉಡುಪುಗಳು ಅದಲು ಬದಲಾಗುತ್ತಿದ್ದವು. ಈ ಗೊಂದಲವನ್ನು ನಿವಾರಿಸಲು ಆತ ‘ಜಿಎಲ್‌ಜಿ’ ಎಂಬ ಇನಿಶಿಯಲ್ಲನ್ನು ಇಟ್ಟುಕೊಂಡಿದ್ದ.

ಹೆಸರನ್ನು ವಿಸ್ತರಿಸಿ ಬರೆಯುವಾಗ ಮಾತ್ರ ಜಾರ್ಜ್ ಎಲ್. ಗೊಬೆಲ್ ಎಂದು ಬರೆಯುತ್ತಿದ್ದ. ಆದರೆ, ‘ಎಲ್’ ಅಂದರೆ ಲೆಸ್ಲಿ ಎಂದು ಆತ ಕೇಳಿದವರಿಗೆ ಮಾತ್ರ ಸಮಜಾಯಿಷಿ ಕೊಡುತ್ತಿದ್ದ. ಆದರೆ, ಲೆಸ್ಲಿ ಎಂಬುದು ಅವನ ತಂದೆ, ತಾಯಿ ಅಥವಾ ಕುಟುಂಬದ ಹೆಸರೂ ಆಗಿರಲಿಲ್ಲ. ಅಸಲಿಗೆ ಅದು ಸುಮ್ಮನೆ ಇಟ್ಟುಕೊಂಡ ಹೆಸರಾಗಿತ್ತು.