Tamanna as Ambassador: ನಮ್ಮವ್ರನ್ನಾ ಬಿಟ್ಟು ತಮನ್ನಾ ಆಯ್ಕೆ ಮಾಡಿದ್ದೇಕೆ ?
ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ. ಜನಪ್ರಿಯತೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಹೊಂದಿರುವ ಅಭಿಮಾನಿಗಳ ಸಂಖ್ಯೆ, ನಂಬಿಕೆ, ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವು ದರೊಂದಿಗೆ ಬ್ರಾಂಡ್‌ನ ಜತೆ ಸಹಜವಾಗಿ ಹೊಂದಾಣಿಕೆಯಾಗುವ ಗುಣಗಳನ್ನು ಆಧರಿಸಿ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವುದು ಕೆಎಸ್‌ಡಿಎಲ್ ನಿಲುವಾಗಿದೆ.
-
ಅನ್ಯ ಪ್ರಸಾಧನ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿರುವ ಕನ್ನಡದ ಸ್ಟಾರ್ ನಟಿಯರು
‘ಮಿಲ್ಕಿ ಬ್ಯೂಟಿ’ ತಮನ್ನಾ ಭಾಟಿಯಾ ನೇಮಕಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಆರೂವರೆ ಕೋಟಿ ಕೊಟ್ಟು ತಮನ್ನಾರನ್ನು ಎರಡು ವರ್ಷದ ಮಟ್ಟಿಗೆ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲು ಜನಪ್ರಿಯತೆ ಮಾತ್ರವಲ್ಲದೇ, ತಾಂತ್ರಿಕ ಕಾರಣವೂ ಇದೆ ಎನ್ನಲಾಗುತ್ತಿದೆ.
ಬಾಲಿವುಡ್ ಮಟ್ಟದಲ್ಲಿ ತಮನ್ನಾ ರೀತಿಯಲ್ಲಿಯೇ ಕನ್ನಡಿಗರಾದ ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ, ಶ್ರೀಲೀಲಾ ಮುಂತಾದ ಜನಪ್ರಿಯ ನಟಿಯರು ಇರುವಾಗ ಅವರನ್ನು ಬಿಟ್ಟು ತಮನ್ನಾ ಆಯ್ಕೆಯ ಅಗತ್ಯವೇನಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಮೂವರು ನಟಿಯರು ಸ್ಕಿನ್ ಕೇರ್, ಸಾಬೂನು ಉತ್ಪನ್ನಗಳ ಇತರೆ ಬ್ರ್ಯಾಂಡ್‌ಗಳ ರಾಯಭಾರಿಯಾಗಿ ಕಾರ್ಯನಿರ್ವ ಹಿಸುತ್ತಿರುವುದರಿಂದ, ಅವರನ್ನು ಪುನಃ ಮೈಸೂರು ಸ್ಯಾಂಡಲ್‌ಗೆ ನೇಮಿಸಿಕೊಳ್ಳಲು ಸಾಧ್ಯವಿಲ್ಲ.
ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ. ಜನಪ್ರಿಯತೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಹೊಂದಿರುವ ಅಭಿಮಾನಿಗಳ ಸಂಖ್ಯೆ, ನಂಬಿಕೆ, ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವುದರೊಂದಿಗೆ ಬ್ರಾಂಡ್‌ನ ಜತೆ ಸಹಜವಾಗಿ ಹೊಂದಾಣಿಕೆಯಾಗುವ ಗುಣಗಳನ್ನು ಆಧರಿಸಿ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವುದು ಕೆಎಸ್‌ಡಿಎಲ್ ನಿಲುವಾಗಿದೆ.
ಇದನ್ನೂ ಓದಿ: Actress Tamanna as Ambassador: ಮೈಸೂರು ಸ್ಯಾಂಡಲ್ʼಗೆ ತಮನ್ನಾ ರಾಯಭಾರಿ: ತಪ್ಪೇನು ?
ಒಬ್ಬರು ಒಂದು ಬ್ರ್ಯಾಂಡ್ ಮಾತ್ರ ಸೀಮಿತ ಯಾವುದೇ ವ್ಯಕ್ತಿ ಒಂದೇ ಉದ್ಯಮದ ಎರಡೆರೆಡು ಬ್ರ್ಯಾಂಡ್‌ನ ರಾಯಭಾರಿಯಾ ಗುವಂತಿಲ್ಲ ಎನ್ನುವ ಷರತ್ತನ್ನು ಒಪ್ಪಂದ ಮಾಡಿಕೊಳ್ಳುವ ಸಮಯ ದಲ್ಲಿಯೇ ಮಾಡಲಾಗಿರುತ್ತದೆ. ಆದ್ದರಿಂದ ಕೆಎಸ್‌ಡಿಎಲ್ ಉತ್ತರ ಭಾರತ ಹಾಗೂ ವಿಶ್ವಾದ್ಯಂತ ತನ್ನ ಉತ್ಪನ್ನಗಳಿಗೆ ರಾಯಭಾರಿಯನ್ನು ನೇಮಿಸಿಕೊಳ್ಳುವಾಗ ಕೆಲವರನ್ನು ಆಯ್ಕೆ ಮಾಡಿಕೊಳ್ಳ ಬೇಕೆಂಬ ಪ್ರಯತ್ನವಿದ್ದರೂ ಸಾಧ್ಯವಾಗಲಿಲ್ಲ.
ಕನ್ನಡತಿಯರಾದ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಕನ್ನಡಿಗರು ಈಗಾಗಲೇ ಬೇರೆ ಬೇರೆ ಬ್ರ್ಯಾಂಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಸ್ಕಿನ್ ಕೇರ್ ಹಾಗೂ ಸಾಬೂನು ಉತ್ಪನ್ನಕ್ಕೆ ಸಂಬಂಧಿಸಿದ ಯಾವ ಬ್ರ್ಯಾಂಡ್‌ನೊಂದಿಗೂ ತಮನ್ನಾ ಭಾಟಿಯಾ ಒಪ್ಪಂದ ಮಾಡಿಕೊಳ್ಳದೇ ಇದ್ದ ಕಾರಣ ಅವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡೇತರರ ಆಯ್ಕೆ ಇದೇ ಮೊದಲಲ್ಲ: ಪ್ರತಿಪಕ್ಷಗಳು ಸೇರಿದಂತೆ ಅನೇಕರು ಅನ್ಯಭಾಷಿಕ ರನ್ನು ಮೈಸೂರು ಸ್ಯಾಂಡಲ್ ರಾಯಭಾರಿಯನ್ನಾಗಿ ನೇಮಿಸಿಕೊಳ್ಳುವ ಮೂಲಕ ಕನ್ನಡ ಅಸ್ಮಿತೆಗೆ ಧಕ್ಕೆ ತಂದಿದ್ದಾರೆ ಎನ್ನುವ ಆರೋಪವನ್ನು ಮಾಡಿದ್ದಾರೆ. ಆದರೆ ಕನ್ನಡೇತರರನ್ನು ರಾಯಭಾರಿ ಯನ್ನಾಗಿ ಮೈಸೂರು ಸ್ಯಾಂಡಲ್ ನೇಮಿಸಿರುವುದು ಇದೇ ಮೊದಲಲ್ಲ. ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಗುಜರಾತ್ ಮೂಲಕ ದೀಪಿಕಾ ಚಿಖ್ಲಿಯಾ, ಮಹಾ ರಾಷ್ಟ್ರದ ಮುಗ್ದಾ ವೀರಾ ಗೋದ್ಸೆ ಅವರನ್ನು ಈ ಹಿಂದೆ ರಾಯಭಾರಿಯನ್ನಾಗಿ ನೇಮಿಸಿಕೊಳ್ಳ ಲಾಗಿತ್ತು.
ಇನ್ನು ಕರ್ನಾಟಕದ ಮೂಲದ ದೊಡ್ಡ ಗಣೇಶ್ ಅವರನ್ನು 2003ರ ಅವಧಿಯಲ್ಲಿ ನೇಮಿಸಿಕೊಳ್ಳ ಲಾಗಿತ್ತು. ಸದ್ಯ ಕರ್ನಾಟಕದ ಐಶಾನಿ ಶೆಟ್ಟಿ ಸೇರಿದಂತೆ ನಿಮಿಕಾ ರತ್ನಾಕರ್, ಸಾನ್ಯ ಅಯ್ಯರ್, ಆರಾಧನಾ, ಶ್ರೀನಿವಾಸ್ ಮೂರ್ತಿ ಸೇರಿದಂತೆ ಹಲವು ಕನ್ನಡಿಗರನ್ನು ಸ್ಥಳೀಯ ಮಟ್ಟದಲ್ಲಿ ರಾಯಭಾರಿಗಳನ್ನಾಗಿ ನೇಮಿಸಿಕೊಂಡು, ಪ್ರಚಾರ ಮಾಡಲಾಗುತ್ತಿದೆ.
ಮೈಸೂರ್ ಸ್ಯಾಂಡಲ್ ಸೋಪ್‌ಗೆ ರಾಜ್ಯದಲ್ಲಿ ಜನಪ್ರಿಯತೆ ಮತ್ತು ಖ್ಯಾತಿ ಈಗಾಗಲೇ ಹೆಚ್ಚಿನ ಮಟ್ಟದಲ್ಲಿದ್ದು, ಹೊಸ ಮಾರುಕಟ್ಟೆಯನ್ನು ಸೃಷ್ಟಿಸುವ ಉದ್ದೇಶದಿಂದ ರಾಯಭಾರಿಯನ್ನು ನೇಮಿಸಲಾಗುತ್ತಿದೆ.
ಆದ್ದರಿಂದ ಪ್ಯಾನ್-ಇಂಡಿಯಾ ರಾಯಭಾರಿಯನ್ನಾಗಿ, ವಿದೇಶಕ್ಕೆ ಉತ್ಪನ್ನಗಳ ಮಾರಾಟ ವ್ಯಾಪ್ತಿ ಯನ್ನು ವಿಸ್ತರಿಸಲು ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವುದು ಅಧಿಕಾರಿ ಗಳ ಮಾತಾಗಿದೆ.
ತಮನ್ನಾಗೆ ನೀಡಿದ ಪೈಸಾ ವಸೂಲಿ
ರಾಜ್ಯ ಸರಕಾರ ಕಳೆದ ವರ್ಷ ತಮನ್ನಾ ಭಾಟಿಯಾ ಅವರನ್ನು ಆರು ಕೋಟಿ ರು. ಕೊಟ್ಟು ಮೈಸೂರು ಸ್ಯಾಂಡಲ್‌ಗೆ ರಾಯಭಾರಿಯನ್ನಾಗಿ ನೇಮಿಸಿದಾಗಲೂ ದುಂದುವೆಚ್ಚ ಎಂದು ಅನೇಕರು ಮೂಗು ಮುರಿದಿದ್ದರು. ಆದರೆ ಕೆಎಸ್‌ಡಿಎಲ್ ಅಂಕಿ-ಅಂಶದ ಪ್ರಕಾರ, 2025-26ನೇ ಸಾಲಿನಲ್ಲಿ ಒಟ್ಟು 1913.90 ಕೋಟಿ ರು. ವ್ಯವಹಾರವಾಗಿದೆ. ಇದರಲ್ಲಿ ಉತ್ತರ ಭಾರತದಲ್ಲಿರುವ ಕೆಎಸ್‌ಡಿಎಲ್ ಶಾಖೆಗಳಾಗಿರುವ ಮುಂಬೈನಲ್ಲಿ 122 ಕೋಟಿ ರು, ಕೋಲ್ಕತ್ತ ವಲಯದಲ್ಲಿ 175.20 ಕೋಟಿ ರು., ದೆಹಲಿ ಭಾಗದಲ್ಲಿ 47 ಕೋಟಿ ರು ವ್ಯವಹಾರವಾಗಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ.6 ರಿಂದ 9ರಷ್ಟು ವ್ಯವಹಾರ ಹೆಚ್ಚಾಗಿದೆ. ಇನ್ನು ಹೈದರಾ ಬಾದ್‌ನಲ್ಲಿ ಶೇ.45ರಷ್ಟು, ಚೆನ್ನೈನಲ್ಲಿ ಶೇ.19.75ರಷ್ಟು ವ್ಯಾಪಾರ ಹೆಚ್ಚಾಗಿದೆ. ಈ ಮೂಲಕ ತಮನ್ನಾಗೆ ನೀಡಿರುವ ಪೈಸಾ ವಸೂಲಾಗಿದೆ ಎಂದು ಕಾರ್ಖಾನೆ ಮೂಲಗಳು ತಿಳಿಸಿವೆ.