Lokesh Kaayarga Column: ಅವರ ತೆಕ್ಕೆಯಲ್ಲಿ ಕರಗಿದ್ದು ನಮ್ಮ ಮಾನಧನ !
ನಾಗರಿಕರಾಗಿ ನಾವು ಗಮನಿಸಬೇಕಾದ ಮುಖ್ಯ ವಿಚಾರ ಎಂದರೆ, ಯಾರನ್ನೂ ಬಲ ವಂತವಾಗಿ ಈ ಜಾಲದಲ್ಲಿ ಸಿಲುಕಿಸಿಲ್ಲ. ಎಲ್ಲರೂ ಹನಿಯಾಸೆಗೆ ಬಿದ್ದು ಈ ಜಾಲದಲ್ಲಿ ಸಿಲುಕಿದ್ದಾರೆ. ಅಂದರೆ ತಾವು ಬಲಾಢ್ಯರು, ಪ್ರಭಾವಿಗಳು ಎಂಬ ನಶೆಯಲ್ಲಿ ಸಮಾಜದ ನೈತಿಕ ಪರಿಧಿ ಮೀರಿ ಹೆಣ್ಣಿನ ಸಂಗ ಬಯಸಿzರೆ. ಅದು ತಮ್ಮನ್ನು ಕೆಡವಲು ಬೀಸಿದ ಜಾಲ ಎಂದು ತಿಳಿದಾಗ ವಿಲ ವಿಲನೇ ಒದ್ದಾಡಿದ್ದಾರೆ.

ಕಾರ್ಯನಿರ್ವಾಹಕ ಸಂಪಾದಕ ಹಾಗೂ ಅಂಕಣಕಾರ ಲೋಕೇಶ್ ಕಾಯರ್ಗ

ಲೋಕಮತ
kaayarga@gmail.com
ರಾಜ್ಯಾದ್ಯಂತ ಹನಿಟ್ರ್ಯಾಪ್ ಸದ್ದು ಮಾಡುತ್ತಿದೆ. ಇದರೊಂದಿಗೆ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶರ ಮನೆಗೆ ಬೆಂಕಿ ಬಿದ್ದಾಗ ಸುಟ್ಟು ಹೋದ ಕಂತೆ ಕಂತೆ ನೋಟುಗಳ ಬಗ್ಗೆ ಯೂ ಜನರು ಮಾತನಾಡುತ್ತಿದ್ದಾರೆ. ಈ ಎರಡೂ ಪ್ರಕರಣಗಳು ಬೇರೆ ಬೇರೆ. ಆದರೆ ಹನಿ ಜಾಲ ನ್ಯಾಯಾಂಗವನ್ನೂ ಬಿಟ್ಟಿಲ್ಲ ಎಂಬ ಮಾತುಗಳು ಸದನದಲ್ಲಿಯೇ ಕೇಳಿ ಬಂದಿವೆ. ಬೆಂಗಳೂರು ಬಾರ್ ಕೌನ್ಸಿಲ್ ಈ ಎರಡು ವಿಷಯಗಳ ಮೇಲಿನ ಚರ್ಚೆಗಾಗಿ ಸೋಮವಾರ ವಿಶೇಷ ಸಭೆ ಕರೆದಿತ್ತು. ಇವೆರಡೂ ನಮ್ಮ ಸಮಾಜದ ನೈತಿಕ ಪತನದ ಕುರುಹುಗಳು. ಹೆಣ್ಣು, ಹೊನ್ನು ಮತ್ತು ಮಣ್ಣಿನ ಮೋಹಪಾಶಕ್ಕೆ ಸಿಲುಕದವರು ಕಡಿಮೆ. ನಮ್ಮ ಪುರಾಣ, ಇತಿಹಾಸದುದ್ದಕ್ಕೂ ನಡೆದ ಸಂಘರ್ಷಗಳು ಮತ್ತು ಸಾಮ್ರಾಜ್ಯಗಳ ಅವನತಿಗೆ ಈ ಮೂರು ಬಂಧಗಳು ಪ್ರಧಾನ ಕಾರಣವಾಗಿರುವುದು ಸುಳ್ಳಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ಬಳಿಕ ರಾಜರ ಬದಲು ಅಧಿಕಾರದ ಚುಕ್ಕಾಣಿ ಹಿಡಿದವರೂ ಈ ಮೋಹಪಾಶದಿಂದ ಹೊರತಾಗಿಲ್ಲ. ಮೊನ್ನೆ ಸದನದಲ್ಲಿ ನಡೆದ ಚರ್ಚೆಯ ಪ್ರಕಾರ ಜನಪ್ರತಿನಿಧಿಗಳು, ಅಧಿಕಾರಿಗಳು, ನ್ಯಾಯಪೀಠದಲ್ಲಿ ಕುಳಿತವರೂ ಸೇರಿದಂತೆ ನೂರಾರು ಅಧಿಕಾರಸ್ಥರು, ಪ್ರಭಾವಿಗಳು ಹನಿ ಜಾಲದಲ್ಲಿ ಸಿಲುಕಿದ್ದಾರೆ.
ಇದನ್ನೂ ಓದಿ: Lokesh Kaayarga Column: ಹೆತ್ತವರನ್ನು ಹೊರಗಟ್ಟಿ ಗಂಗೆಯಲ್ಲಿ ಮಿಂದರೇನು ಫಲ ?
ಇದೀಗ ಸಚಿವರು, ಶಾಸಕರೆಲ್ಲರೂ ಬೆದರಿ ಈ ಬಲೆಯಿಂದ ರಕ್ಷಣೆ ಕೋರಿದ್ದಾರೆ. ಬಜೆಟ್ ಅಧಿವೇಶನದ ಉದ್ದಕ್ಕೂ ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದವರು ಈ ವಿಷಯದಲ್ಲಿ ಪಕ್ಷ ಭೇದ ಮರೆತು, ಕಳವಳ, ಕಾಳಜಿ ತೋರಿಸಿದ್ದು ವಿಶೇಷ. ಹಿಂದೆ ಇದೇ ಸದನದಲ್ಲಿ, ಛೀ, ಥೂ ಎನಿಸಿಕೊಂಡವರು ಈ ಚರ್ಚೆಯಲ್ಲಿ ಭಾಗವಹಿಸಿ ಅನುಕಂಪ ಗಿಟ್ಟಿಸಿಕೊಂಡಿದ್ದಾರೆ.
ಸಚಿವ ರಾಜಣ್ಣ ಅವರ ಪ್ರಕಾರ ರಾಜ್ಯದ ಸುಮಾರು 48 ಮಂದಿ ಜನಪ್ರತಿನಿಧಿಗಳ ಹನಿ ಸಿ.ಡಿ. ಸಿದ್ಧವಾಗಿದೆ. ಇದನ್ನೇ ವಿಸ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು ಜನಪ್ರತಿನಿಧಿ ಗಳು, ಅಧಿಕಾರಿಗಳು ಸೇರಿ 400ಕ್ಕೂ ಹೆಚ್ಚು ಸಿ.ಡಿ.ಗಳಿರಬಹುದೆಂದು ಹೇಳಿದ್ದಾರೆ. ಅಂದರೆ ಹನಿಟ್ರ್ಯಾಪ್ ಜಾಲ ರಾಜ್ಯವ್ಯಾಪಿ ವಿಸ್ತರಿಸಿದೆ ಎಂದಾಯಿತು. ಇಲ್ಲಿ ನಾಗರಿಕರಾಗಿ ನಾವು ಗಮನಿಸಬೇಕಾದ ಮುಖ್ಯ ವಿಚಾರ ಎಂದರೆ, ಯಾರನ್ನೂ ಬಲವಂತ ವಾಗಿ ಈ ಜಾಲದಲ್ಲಿ ಸಿಲುಕಿಸಿಲ್ಲ. ಎಲ್ಲರೂ ಹನಿಯಾಸೆಗೆ ಬಿದ್ದು ಈ ಜಾಲದಲ್ಲಿ ಸಿಲುಕಿದ್ದಾರೆ.
ಅಂದರೆ ತಾವು ಬಲಾಢ್ಯರು, ಪ್ರಭಾವಿಗಳು ಎಂಬ ನಶೆಯಲ್ಲಿ ಸಮಾಜದ ನೈತಿಕ ಪರಿಧಿ ಮೀರಿ ಈ ಹೆಣ್ಣಿನ ಸಂಗ ಬಯಸಿದ್ದಾರೆ. ಅದು ತಮ್ಮನ್ನು ಕೆಡವಲು ಬೀಸಿದ ಜಾಲ ಎಂದು ತಿಳಿದಾಗ ವಿಲವಿಲನೇ ಒದ್ದಾಡಿದ್ದಾರೆ. ಈ ವಿಚಾರದಲ್ಲಿ ತಮಗೆ ರಕ್ಷಣೆ ಬೇಕೆಂಬ ಇವರ ಕೋರಿಕೆಯೇ ಹಾಸ್ಯಾಸ್ಪದ. ಸಚಿವ ರಾಜಣ್ಣ ಮತ್ತು ವಿಧಾನ ಪರಿಷತ್ ಶಾಸಕರಾಗಿರುವ ಅವರ ಪುತ್ರ ರಾಜೇಂದ್ರ ಅವರು ಹೇಳಿದಂತೆ ಹನಿಟ್ರ್ಯಾಪ್‌ನಲ್ಲಿ ಅವರನ್ನು ಸಿಲುಕಿಸುವ ಪ್ರಯತ್ನ ನಡೆದಿದ್ದರೆ ತಕ್ಷಣವೇ ದೂರು ನೀಡಿ, ಮಧುಜಾಲದ ಸದಸ್ಯರನ್ನು ಬಂಧಿಸಲು ಸೂಚಿಸಬಹುದಿತ್ತು.
ರಾಜ್ಯದ ಪ್ರಭಾವಿ ಸಚಿವರಾಗಿರುವ ಅವರ ದೂರನ್ನು ಪೊಲೀಸರು ನಿರ್ಲಕ್ಷಿಸುವ ಸಾಧ್ಯ ತೆಯೂ ಇರಲಿಲ್ಲ. ಆದರೆ ಹಲವು ದಿನಗಳ ತನಕವೂ ಈ ವಿಷಯವನ್ನು ಮುಚ್ಚಿಟ್ಟು, ಮಾಧ್ಯಮಗಳಲ್ಲಿ ವಿಷಯ ಸೋರಿಕೆಯಾಗುತ್ತಿದ್ದಂತೆ, ಸದನದಲ್ಲಿ ಅಳಲು ತೋಡಿ ಕೊಳ್ಳುವ ಅಗತ್ಯ ಏನಿತ್ತು ಎನ್ನುವುದು ಕೇಳಿ ಬರುತ್ತಿರುವ ಪ್ರಶ್ನೆ. ಈ ಸಂಬಂಧ ಸಚಿವರು ಇನ್ನೂ ದೂರು ನೀಡಿಲ್ಲ.
ದೂರು ನೀಡದ ಹೊರತು ತನಿಖೆ ಸಾಧ್ಯತೆಯೂ ವಿರಳ. ಹಣ ಮತ್ತು ಅಧಿಕಾರದಾಸೆಗೆ ಯಾರಾದರೂ ಹೆಣ್ಣನ್ನು ಬಳಸಿಕೊಂಡು ಟ್ರ್ಯಾಪ್ ಕಾರ್ಯಾಚರಣೆ ನಡೆಸಿದರೆ ಇದಕ್ಕಿಂತ ಹೀನ ಕೃತ್ಯ ಮತ್ತೊಂದಿಲ್ಲ. ಆದರೆ ಮೋಹನಾಂಗಿಯರ ಕರೆಗೆ ಓಗೊಡುವ ಮುನ್ನ, ಇವರು ತಮ್ಮ ಸ್ಥಾನ, ಮಾನ, ಗೌರವವನ್ನು ಮಡಚಿ ಮಂಚದಡಿಯಲ್ಲಿಟ್ಟಿದ್ದು ಸಣ್ಣ ವಿಷ ಯವೇನೂ ಅಲ್ಲ.
ನಿಜ ಹೇಳಬೇಕೆಂದರೆ ಇಲ್ಲಿ ಮೋಹನಾಂಗಿಯರ ತೆಕ್ಕೆಯಲ್ಲಿ ಕರಗಿಹೋಗಿದ್ದು ಅಧಿಕಾರ ಸ್ಥರ ಮಾನವಲ್ಲ, ನಮ್ಮದೇ ಮಾನಧನ. ನಾವೇ ಕೊಟ್ಟ ಅಧಿಕಾರದ ದಂಡವೂ ಇಲ್ಲಿ ತಲೆಬಾಗಿದೆ. ನಾವು ಕಟ್ಟಿದ ತೆರಿಗೆ ಹಣ ಇವರ ತೆವಲಿಗೆ ಬಳಕೆಯಾಗಿದೆ. ನಮ್ಮನ್ನು ಸಾಕ್ಷಿ ಯಾಗಿರಿಸಿಕೊಂಡು ಇವರು ಮಾಡಿದ ಗೌಪ್ಯತೆಯ ಪ್ರಮಾಣವೂ ಸುಳ್ಳಾಗಿದೆ. ತಮ್ಮದೇ ಕುಟುಂಬದ ಮೇಲೆ ನಿಷ್ಠೆ ಇಲ್ಲದವರಿಂದ ರಾಷ್ಟ್ರ ನಿಷ್ಠೆಯನ್ನು ಅಪೇಕ್ಷಿಸಲು ಸಾಧ್ಯ ವಿದೆಯೇ ? ನ್ಯಾಯವೇತ್ತರೂ ಸಿಲುಕಿದರೇ? ಹನಿಟ್ರ್ಯಾಪ್ ಪ್ರಕರಣಗಳಲ್ಲಿ ಜನಪ್ರತಿನಿಧಿ ಗಳು, ಅಧಿಕಾರಿಗಳು ಸಿಕ್ಕಿಬಿದ್ದಾಗ ಒಂದಷ್ಟು ಚರ್ಚೆಯಾಗುತ್ತದೆ.
ಶಿಕ್ಷೆ ಅಲ್ಲದಿದ್ದರೂ ಸಮಾಜದ ಎದುರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಅನಿವಾ ರ್ಯತೆ ಎದುರಾಗುತ್ತದೆ. ಆದರೆ ಆರಂಭದಲ್ಲಿ ಹೇಳಿದಂತೆ ನ್ಯಾಯಾಂಗದ ಗಣ್ಯರು ಸಿಲುಕಿ ದರೆ ಸುದ್ದಿಯಾಗುವುದು ಕಡಿಮೆ. ನ್ಯಾಯಾಂಗದ ಕಾರಿಡಾರ್‌ಗಳಲ್ಲಿ ಇವು ಗಾಸಿಪ್ ರೂಪ ದಲ್ಲಿ ಚರ್ಚೆಯಾದರೂ ಅದಕ್ಕಿಂತ ಮುಂದೆ ಸಾಗಿದ ಉದಾಹರಣೆಗಳಿಲ್ಲ ಒಂದು ವೇಳೆ ನ್ಯಾಯಸ್ಥಾನಗಳಲ್ಲಿ ಕುಳಿತವರು ಇಂಥ ಪ್ರಕರಣಗಳಲ್ಲಿ ಸಿಲುಕಿ, ಪಕ್ಷಪಾತಿ ತೀರ್ಪು
ಕೊಡುವ ಸಂದರ್ಭ ಬಂದರೆ ನೊಂದವರ ಪಾಲಿಗೆ ನ್ಯಾಯವೂ ಮರೀಚಿಕೆಯಾಗಬಹುದು. ಈ ಕಾರಣದಿಂದಲೇ ‘ಹನಿ’ ಹಾವಳಿಯಿಂದ ನ್ಯಾಯಾಂಗವೂ ಹೊರತಾಗಿಲ್ಲ ಎಂಬ ಮಾತು ಹೆಚ್ಚು ಆಘಾತಕಾರಿಯಾಗಿ ಕಾಣುತ್ತದೆ. ಬೆಂಗಳೂರು ಬಾರ್ ಕೌನ್ಸಿಲ್ ನ್ಯಾಯಾಂಗ ಭ್ರಷ್ಟಾಚಾರ ಮತ್ತು ಹನಿಟ್ರ್ಯಾಪ್ ವಿಷಯಗಳೆರಡನ್ನೂ ಎತ್ತಿಕೊಂಡು ಸರ್ವಸದಸ್ಯರ ಸಭೆಯಲ್ಲಿ ಚರ್ಚಿಸಿದ್ದನ್ನು ಗಮನಿಸಿದರೆ, ವಕೀಲರ ವಲಯದಲ್ಲೂ ಈ ಸುದ್ದಿ ಹೆಚ್ಚು ಕಳವಳಕ್ಕೆ ಕಾರಣವಾಗಿದೆ ಎನಿಸುತ್ತದೆ. ನ್ಯಾಯಾಂಗದ ಭ್ರಷ್ಟಾಚಾರ ಹೊಸ ವಿಷಯ ವೇನೂ ಅಲ್ಲ.
ಹಿರಿಯ ವಕೀಲರು, ಮಾಜಿ ನ್ಯಾಯಮೂರ್ತಿಗಳು, ರಾಜಕೀಯ ನಾಯಕರು ಈ ಬಗ್ಗೆ ಹಲವು ಬಾರಿ ಧ್ವನಿ ಎತ್ತಿದ್ದಾರೆ. ಆದರೆ ನ್ಯಾಯಪೀಠಕ್ಕೆ ಕಳಂಕ ತರುವವರನ್ನು ಶಿಕ್ಷಿಸುವ ಯಾವುದೇ ಸೂಕ್ತ ವ್ಯವಸ್ಥೆ, ಪ್ರಾಧಿಕಾರ ಇನ್ನೂ ಜಾರಿಯಲ್ಲಿಲ್ಲ. ಈ ಹಿಂದೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, “ವಕೀಲರು ಮೊದಲೇ ಬರೆದು ಕೊಂಡು ಬಂದ ತೀರ್ಪನ್ನು ನ್ಯಾಯಾಧೀಶರು ಓದುವಂತಾಗಿದೆ" ಎಂದು ದೂರಿದ್ದರು. ಈ ಬಗ್ಗೆ ಪರಿಶೀಲನೆ ನಡೆಸುವ ಬದಲು ರಾಜಸ್ಥಾನ ಹೈಕೋರ್ಟ್ ಗೆಹ್ಲೋಟ್ ಅವರಿಗೆ ನೋಟಿ ಸ್ ನೀಡಿತ್ತು.
ಯಶವಂತ್ ಶರ್ಮಾ ಪ್ರಕರಣದಲ್ಲೂ ನ್ಯಾಯಾಂಗದ ಕಳಂಕವನ್ನು ತೊಡೆದು ಹಾಕುವ ಬದಲು ಶರ್ಮಾ ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಹೆಚ್ಚು ಪ್ರಯತ್ನಗಳು ನಡೆದಂತೆ ಕಾಣು ತ್ತವೆ. ಶರ್ಮಾ ಅವರ ಮನೆಯಲ್ಲಿ ಬೆಂಕಿ ಶಮನಕ್ಕೆ ಹೋದ ಅಗ್ನಿಶಾಮಕ ದಳದ ಅಧಿಕಾರಿಗಳೂ ಮೊದಲು ಅಲ್ಲಿ ಕಂಡ ನೋಟಿನ ಕಂತೆಯ ಸಂಬಂಧ ಯಾವುದೇ ಮಾಹಿತಿ ನೀಡಿರಲಿಲ್ಲ.
ಸುಪ್ರೀಂಕೋರ್ಟ್ ಕೊಲೀಜಿಯಂ ಕೂಡ ಸೂಕ್ತ ವಿವರಣೆ ಕೊಡುವ ತನಕ ಈ ನ್ಯಾಯಾ ಧೀಶರನ್ನು ನ್ಯಾಯದಾನದಿಂದ ಹೊರಗಿಡುವ ಬದಲು ಅಲಹಾಬಾದ್ ಹೈಕೋ ರ್ಟಿಗೆ ವರ್ಗಾಯಿಸಿತ್ತು. ಬಾರ್ ಕೌನ್ಸಿಲ್‌ನಿಂದ ವಿರೋಧ ವ್ಯಕ್ತವಾದ ಬಳಿಕವಷ್ಟೇ ಇವರನ್ನು ಪೀಠದಿಂದ ದೂರ ಇರಿಸಲಾಗಿದೆ.
ಹಾಲಿ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧದ ಭ್ರಷ್ಟಾಚಾರದ ದೂರನ್ನು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಪರಿಶೀಲಿಸಬಹುದಾಗಿದೆ ಎಂದು ಲೋಕಪಾಲ್ ಕಳೆದ ಜನವರಿ ತಿಂಗಳಲ್ಲಿ ಮಹತ್ವದ ಆದೇಶ ನೀಡಿತ್ತು. ಆದರೆ ಈ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿನ ಮಾನ್ಯತೆಯನ್ನು ಪರಿಶೀಲಿಸಲು ನಿರ್ಧರಿಸಿದೆ. ನ್ಯಾಯಪೀಠದಲ್ಲಿ ಕುಳಿತವರು ಕಳಂಕಿತರಾಗಿರಬಾರದೆನ್ನುವುದು ನ್ಯಾಯ ಬಯಸುವವರ ಕನಿಷ್ಠ ಅಪೇಕ್ಷೆ. ಆದರೆ ಇಂಥ ಸಂದೇಹಗಳನ್ನು ನಿವಾರಿಸಲು ನಮ್ಮಲ್ಲಿ ಸದ್ಯಕ್ಕೆ ಯಾವುದೇ ವ್ಯವಸ್ಥೆ ಇಲ್ಲ.
ನ್ಯಾಯಾಂಗದ ಹೊಣೆಗಾರಿಕೆಯನ್ನು ಆಂತರಿಕ ಕಾರ್ಯವಿಧಾನದ ಮೂಲಕ ನಿರ್ವ ಹಿಸಲು ಸುಪ್ರೀಂಕೋರ್ಟ್ ಪೂರ್ಣ ನ್ಯಾಯಪೀಠ 1997ರಲ್ಲಿ ನಿರ್ಣಯ ಅಂಗೀ ಕರಿಸಿದೆ. ನ್ಯಾಯಾಧೀಶರು ಪಾಲಿಸಬೇಕಾದ ಮೌಲ್ಯಗಳ ಬಗ್ಗೆಯೂ ಇಲ್ಲಿ ನಿರ್ಣಯ ಅಂಗೀಕರಿಸ ಲಾಗಿತ್ತು. ಆದರೆ ಸದ್ಯ ಬರುತ್ತಿರುವ ದೂರುಗಳ ಪ್ರಮಾಣವನ್ನು ಗಮನಿಸಿದರೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಲಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂರ್ತಿಯಾಗಲಿ ಇವುಗಳ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.
ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳು ಏರುಪೇರಾಗುವುದು ಸ್ವಾಭಾವಿಕ. ಇಂಥ ಸಂದರ್ಭ ಗಳಲ್ಲಿ ಉನ್ನತ ಮಟ್ಟದ ಆದರ್ಶ ಮತ್ತು ಮೌಲ್ಯಗಳನ್ನು ಪಾಲಿಸುವವರು ಸಮಾಜಕ್ಕೆ ಬೆಳಕಾಗಿ ಕಾಣುತ್ತಾರೆ. ಆದರೆ ಹನಿಟ್ರ್ಯಾಪ್ ಪ್ರಕರಣದ ವ್ಯಾಪ್ತಿ ಮತ್ತು ನ್ಯಾಯಾಂಗದ ಮೇಲಿನ ಅಪನಂಬಿಕೆಯನ್ನು ಗಮನಿಸಿದರೆ ಬೆಳಕು ಹರಿಸುವವರ ಸಂಖ್ಯೆ ಕಡಿಮೆ ಇದೆ. ಕತ್ತಲಲ್ಲಿ ಕರಗಿಹೋಗುವವರ ಸಂಖ್ಯೆಯೇ ಹೆಚ್ಚಿದೆ.