ಅವರ ತೆಕ್ಕೆಯಲ್ಲಿ ಕರಗಿದ್ದು ನಮ್ಮ ಮಾನಧನ !
ನಾಗರಿಕರಾಗಿ ನಾವು ಗಮನಿಸಬೇಕಾದ ಮುಖ್ಯ ವಿಚಾರ ಎಂದರೆ, ಯಾರನ್ನೂ ಬಲ ವಂತವಾಗಿ ಈ ಜಾಲದಲ್ಲಿ ಸಿಲುಕಿಸಿಲ್ಲ. ಎಲ್ಲರೂ ಹನಿಯಾಸೆಗೆ ಬಿದ್ದು ಈ ಜಾಲದಲ್ಲಿ ಸಿಲುಕಿದ್ದಾರೆ. ಅಂದರೆ ತಾವು ಬಲಾಢ್ಯರು, ಪ್ರಭಾವಿಗಳು ಎಂಬ ನಶೆಯಲ್ಲಿ ಸಮಾಜದ ನೈತಿಕ ಪರಿಧಿ ಮೀರಿ ಹೆಣ್ಣಿನ ಸಂಗ ಬಯಸಿzರೆ. ಅದು ತಮ್ಮನ್ನು ಕೆಡವಲು ಬೀಸಿದ ಜಾಲ ಎಂದು ತಿಳಿದಾಗ ವಿಲ ವಿಲನೇ ಒದ್ದಾಡಿದ್ದಾರೆ.