Roopa Gururaj Column: ಪಂಚತಂತ್ರ ಕಥೆಗಳು: ಟಿಟ್ಟಿಭ ಪಕ್ಷಿ ಮತ್ತು ಸಮುದ್ರ
ವಿಶಾಲವಾದ ಸಮುದ್ರ ತೀರದಂದು ಗಂಡು ಮತ್ತು ಹೆಣ್ಣು ಟಿಟ್ಟಿಭ ಪಕ್ಷಿಗಳು ವಾಸವಾಗಿದ್ದವು. ಹೆಣ್ಣು ಟಿಟ್ಟಿಭವು ಮೊಟ್ಟೆಗಳನ್ನಿಡುವ ಸಮಯ ಬಂದಾಗ, ಸಮುದ್ರದ ದಡದ ಮರಳಿನ ಗೂಡು ಕಟ್ಟಲು ಸಿದ್ಧವಾಯಿತು. ಆಗ ಗಂಡು ಪಕ್ಷಿಯು, ಪ್ರಿಯೇ, ಇಲ್ಲಿ ಬೇಡ; ಹುಣ್ಣಿಮೆಯ ದಿನ ಸಮುದ್ರದ ಅಲೆಗಳು ರಭಸವಾಗಿ ಬಂದು ನಮ್ಮ ಮೊಟ್ಟೆಗಳನ್ನು ಕೊಚ್ಚಿ ಕೊಂಡು ಹೋಗಬಹುದು.
-
ಒಂದೊಳ್ಳೆ ಮಾತು
ಸೋಮದೇವನ ‘ಕಥಾಸರಿತ್ಸಾ ಗರ’ದ ‘ವಿಷಮಶೀಲ ಲಂಬಕ’ದಲ್ಲಿ ಬರುವ ಪಂಚತಂತ್ರದ ಮೊದಲ ತಂತ್ರವಾದ ‘ಮಿತ್ರಭೇದ’ದ ಅತ್ಯಂತ ಸ್ಪೂರ್ತಿದಾಯಕ ನೀತಿಕಥೆಯಿದು. ಎದುರಾಳಿ ಎಷ್ಟೇ ಬೃಹತ್ತಾಗಿ ದ್ದರೂ, ನಮ್ಮಲ್ಲಿ ದೃಢವಾದ ಛಲ, ಒಗ್ಗಟ್ಟು ಮತ್ತು ಸರಿಯಾದ ಮಾರ್ಗದರ್ಶನ ವಿದ್ದರೆ ಅಸಾಧ್ಯ ವಾದುದನ್ನೂ ಸಾಧಿಸಬಹುದು ಎಂಬುದನ್ನು ಪುಟ್ಟ ಟಿಟ್ಟಿಭ ಪಕ್ಷಿ ಮತ್ತು ವಿಶಾಲ ಸಮುದ್ರದ ಕಥೆ ಮನೋಜ್ಞವಾಗಿ ನಿರೂಪಿಸುತ್ತದೆ.
ವಿಶಾಲವಾದ ಸಮುದ್ರ ತೀರದಂದು ಗಂಡು ಮತ್ತು ಹೆಣ್ಣು ಟಿಟ್ಟಿಭ ಪಕ್ಷಿಗಳು ವಾಸವಾಗಿದ್ದವು. ಹೆಣ್ಣು ಟಿಟ್ಟಿಭವು ಮೊಟ್ಟೆಗಳನ್ನಿಡುವ ಸಮಯ ಬಂದಾಗ, ಸಮುದ್ರದ ದಡದ ಮರಳಿನ ಗೂಡು ಕಟ್ಟಲು ಸಿದ್ಧವಾಯಿತು. ಆಗ ಗಂಡು ಪಕ್ಷಿಯು, ಪ್ರಿಯೇ, ಇಲ್ಲಿ ಬೇಡ; ಹುಣ್ಣಿಮೆಯ ದಿನ ಸಮುದ್ರದ ಅಲೆಗಳು ರಭಸವಾಗಿ ಬಂದು ನಮ್ಮ ಮೊಟ್ಟೆಗಳನ್ನು ಕೊಚ್ಚಿ ಕೊಂಡು ಹೋಗಬಹುದು.
ದೂರದ ಮರದ ಮೇಲೆ ಗೂಡು ಕಟ್ಟೋಣ ಎಂದು ಎಚ್ಚರಿಸಿತು. ಆದರೆ ಹೆಣ್ಣು ಪಕ್ಷಿಯು ಹಠ ಹಿಡಿದು, ನನ್ನ ಮಕ್ಕಳನ್ನು ಕಬಳಿಸುವಷ್ಟು ಧೈರ್ಯ ಈ ಸಮುದ್ರ ಕ್ಕಿಲ್ಲ, ನಾನು ಇಲ್ಲೇ ಮೊಟ್ಟೆಯಿ ಡುತ್ತೇನೆ ಎಂದು ದಡದ ಮೊಟ್ಟೆಗಳನ್ನಿಟ್ಟಿತು. ಇದನ್ನು ಕೇಳಿಸಿ ಕೊಂಡ ಅಹಂಕಾರಿ ಸಮುದ್ರಕ್ಕೆ ಈ ಪುಟ್ಟ ಹಕ್ಕಿಗೆ ಇಷ್ಟೊಂದು ಗರ್ವವೇ? ಎಂದು ಕೋಪ ಬಂತು.
ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ಬ್ರಾಹ್ಮಣ ಮತ್ತು ಮೂವರು ವಂಚಕರು
ಹುಣ್ಣಿಮೆಯ ರಾತ್ರಿ ಸಮುದ್ರವು ತನ್ನ ಬೃಹತ್ ಅಲೆಗಳನ್ನು ಬೀಸಿ ಆ ಮೊಟ್ಟೆಗಳನ್ನು ತನ್ನೊಳಗೆ ಸೆಳೆದುಕೊಂಡಿತು. ಮರುದಿನ ಬರಿದಾದ ಗೂಡನ್ನು ಕಂಡ ಹೆಣ್ಣು ಟಿಟ್ಟಿಭವು ದುಃಖದಿಂದ ರೋದಿಸ ತೊಡಗಿತು. ಗಂಡು ಟಿಟ್ಟಿಭವು ಪತ್ನಿಗೆ ಸಾಂತ್ವನ ಹೇಳಿ, ಚಿಂತಿಸಬೇಡ, ನನ್ನ ಬುದ್ಧಿ ಮತ್ತು ಒಗ್ಗಟ್ಟಿನ ಬಲದಿಂದ ಈ ಅಹಂಕಾರಿ ಸಮುದ್ರವನ್ನು ಬತ್ತಿಸಿ ನಮ್ಮ ಮೊಟ್ಟೆಗಳನ್ನು ಮರಳಿ ಪಡೆಯುತ್ತೇನೆ ಎಂದು ಪ್ರತಿಜ್ಞೆ ಮಾಡಿತು.
ತಕ್ಷಣವೇ ಅದು ಕಾಡಿನಲ್ಲಿದ್ದ ತನ್ನೆ ಪಕ್ಷಿ ಮಿತ್ರರನ್ನು-ಕೊಕ್ಕರೆ, ನವಿಲು, ಹಂಸ, ಕಾಗೆ, ಗಿಳಿ ಮುಂತಾದ ಸಾವಿರಾರು ಹಕ್ಕಿಗಳನ್ನು- ಒಟ್ಟು ಗೂಡಿಸಿ ತನ್ನ ದುಃಖವನ್ನು ಹೇಳಿಕೊಂಡಿತು. ಎಲ್ಲ ಪಕ್ಷಿಗಳೂ ಒಟ್ಟಾಗಿ ಸಮುದ್ರದ ದಡಕ್ಕೆ ಬಂದು, ತಮ್ಮ ಪುಟ್ಟ ಕೊಕ್ಕುಗಳಿಂದ ಸಮುದ್ರದ ನೀರನ್ನು ಎತ್ತಿ ಹೊರಕ್ಕೆ ಚೆಲ್ಲಲು ಪ್ರಾರಂಭಿಸಿದವು!
ದಿನಗಟ್ಟಲೆ ಈ ಪ್ರಯತ್ನ ನಡೆದರೂ ವಿಶಾಲ ಸಾಗರದ ಒಂದು ಹನಿಯೂ ಕಡಿಮೆಯಾಗಲಿಲ್ಲ. ಆಗ ಎಲ್ಲ ಪಕ್ಷಿಗಳೂ ಸೇರಿ ತಮ್ಮ ರಾಜನಾದ ಮಹಾಬಲಿಷ್ಠ ಗರುಡನ ಬಳಿಗೆ ಹೋಗಿ ಮೊರೆಯಿಟ್ಟವು: ಪಕ್ಷಿರಾಜ, ನಮ್ಮ ಜಾತಿಯ ಪುಟ್ಟ ಪಕ್ಷಿಗೆ ಸಮುದ್ರವು ಅನ್ಯಾಯ ಮಾಡಿದೆ. ನೀನು ಸಹಾಯ ಮಾಡದಿದ್ದರೆ ನಮ್ಮ ಪಕ್ಷಿಕುಲಕ್ಕೇ ಅವಮಾನ ಎಂದವು. ತನ್ನ ಪ್ರಜೆಗಳ ಮೇಲಾದ ದೌರ್ಜನ್ಯವನ್ನು ಕೇಳಿ ಗರುಡನಿಗೆ ತೀವ್ರ ಕೋಪ ಬಂತು. ಅವನು ಸಮುದ್ರದ ಮೇಲೆ ಯುದ್ಧಕ್ಕೆ ಹೊರಡಲು ಸಿದ್ಧನಾದಾಗ, ಭಗವಾನ್ ಮಹಾ ವಿಷ್ಣುವಿನ ಕರೆಯೂ ಬಂತು.
ವಿಷ್ಣುವು ಗರುಡನ ಬಳಿ ವಿಷಯ ತಿಳಿದು, ತನ್ನ ಭಕ್ತನಾದ ಗರುಡನ ಗೌರವ ಉಳಿಸಲು ಸ್ವತಃ ಸಮುದ್ರ ತೀರಕ್ಕೆ ಬಂದು, ತನ್ನ ಅಗ್ನಿಬಾಣವನ್ನು ಹೂಡಿ, ಎಲೈ ಸಮುದ್ರವೇ, ಈ ಕ್ಷಣವೇ ಟಿಟ್ಟಿಭ ಪಕ್ಷಿಯ ಮೊಟ್ಟೆಗಳನ್ನು ಮರಳಿಸು, ಇಲ್ಲದಿದ್ದರೆ ನಿನ್ನನ್ನು ಬತ್ತಿಸಿ ಮರು ಭೂಮಿಯನ್ನಾಗಿ ಮಾಡುತ್ತೇನೆ ಎಂದು ಗರ್ಜಿಸಿದನು. ವಿಷ್ಣುವಿನ ಪ್ರತಾಪಕ್ಕೆ ಬೆಚ್ಚಿಬಿದ್ದ ಸಮುದ್ರವು ತಕ್ಷಣವೇ ನಡುಗುತ್ತಾ ಕೈಜೋಡಿಸಿ ಬಂದು, ಸುರಕ್ಷಿತವಾಗಿದ್ದ ಟಿಟ್ಟಿಭ ಪಕ್ಷಿಯ ಮೊಟ್ಟೆಗಳನ್ನು ಮರಳಿಸಿ ಕ್ಷಮೆಯಾಚಿಸಿತು.
ಪುಟ್ಟ ಟಿಟ್ಟಿಭ ದಂಪತಿಗಳು ತಮ್ಮ ಮರಿಗಳನ್ನು ಪಡೆದು ಸಂತಸದಿಂದ ಬಾಳಿದವು. ಸಮಸ್ಯೆ ಅಥವಾ ಎದುರಾಳಿ ದೊಡ್ಡದಾಗಿದ್ದಾಗ ನಾವು ಚಿಕ್ಕವರು, ನಮ್ಮಿಂದೇನು ಸಾಧ್ಯ? ಎಂದು ಕೈಚೆಲ್ಲಿ ಕೂರುವುದು ಸೋಲಿನ ಮೊದಲ ಹೆಜ್ಜೆ. ನಮ್ಮ ಪ್ರಯತ್ನ ಚಿಕ್ಕದಿರಬಹುದು, ಆದರೆ ನಮ್ಮ ಉದ್ದೇಶ ನ್ಯಾಯಯುತ ವಾಗಿದ್ದರೆ ಮತ್ತು ನಾವು ಛಲ ಬಿಡದೆ ಪ್ರಯತ್ನಿಸಿದರೆ ಇಡೀ ಪ್ರಕೃತಿಯೇ ನಮ್ಮ ಸಹಾಯಕ್ಕೆ ನಿಲ್ಲುತ್ತದೆ.
ಸಂಸ್ಕೃತದ ಸುಭಾಷಿತ ಹೇಳುವಂತೆ ‘ಉದ್ಯಮೇನ ಹಿ ಸಿಧ್ಯಂತಿ ಕಾರ್ಯಾಣಿ ನ ಮನೋರಥೈಃ’ (ಕೆಲಸಗಳು ಕೇವಲ ಮನಸ್ಸಿನಲ್ಲಿ ಆಸೆ ಪಡುವುದರಿಂದ ಸಿದ್ಧಿಸುವುದಿಲ್ಲ, ನಿರಂತರ ಪ್ರಯತ್ನ ಮತ್ತು ಛಲದಿಂದ ಮಾತ್ರ ಸಿದ್ಧಿಸುತ್ತವೆ). ಇದರ ಜೊತೆ ಈ ಕಥೆಯಲ್ಲಿ ಮತ್ತೊಂದು ಪಾಠವೂ ಸಿಗುತ್ತದೆ, ಸಮುದ್ರದ ಅಲೆಗಳು ಕೊಚ್ಚಿ ಕೊಂಡು ಹೋಗುತ್ತವೆ ಎಂದು ತಿಳಿದಿದ್ದರೂ ಅ ಮೊಟ್ಟೆ ಇಡುವುದು ಜಾಣತನದ ವಿಷಯವಲ್ಲ. ಅಂತೆಯೇ ತಲೆಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳಬಾರದು.
ಬದುಕನ್ನ ವಾಸ್ತವ ಪ್ರಜ್ಞೆಯೊಂದಿಗೆ ಏನು ಮಾಡಿದರೆ ಅದರ ಪರಿಣಾಮ ಏನಾಗಬಹುದು ಎನ್ನುವ ಆಲೋಚನೆಯೊಂದಿಗೆ ಬದುಕಬೇಕು. ಗೊತ್ತಿದ್ದು ಮಾಡಿಕೊಂಡ ಅನಾಹುತಗಳಿಗೆ ಪ್ರತಿಬಾರಿಯೂ ನಮಗೆ ಸಹಾಯ ದೊರಕುವುದಿಲ್ಲ.